ಬಂಟ್ಸ್ ಅಸೋಸಿಯೇಷನ್ ಪುಣೆ ವತಿಯಿಂದ ನವರಾತ್ರಿಯ ಪ್ರಯುಕ್ತ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಅಕ್ಟೋಬರ್ 22 ರಂದು ರವಿವಾರ ಸಂಜೆ 5 ಗಂಟೆಗೆ ಪುಣೆಯ ಕ್ಯಾಂಪ್ ನಲ್ಲಿಯ ಪುಣೆ ಕ್ಲಬ್ ಸಿನೆಮಾ ಹಾಲ್ ನಲ್ಲಿ ವಿವಿಧ ಧಾರ್ಮಿಕ, ಮನೋರಂಜನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ದಸರಾ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಹಾಗೂ ಗೌರವ ಅತಿಥಿಯಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವೀಜೆತೆ, ಕಾರ್ಕಳದ ಹೆಸರಾಂತ ನೃತ್ಯ ಶಿಕ್ಷಕಿ, ಕಲಾ ಸಂಕುಲ ರಾಜ್ಯ ಮಟ್ಟದ ಶಿಕ್ಷಕಿ ರತ್ನ ಪ್ರಶಸ್ತಿ -23 ವಿಜೇತೆ ವಂದನಾ ಜಿ. ರೈ ಆಗಮಿಸಲಿದ್ದಾರೆ.
ದಸರಾ ನಿಮಿತ್ತ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀದೇವಿ ದುರ್ಗಾ ಪೂಜೆ, ತೆನೆ ಪೂಜೆ, ಮಹಾ ಮಂಗಳಾರತಿ ಹಾಗೂ ವೈವಿಧ್ಯಮಯ ದಾಂಡಿಯಾ ರಾಸ್ ನಡೆಯಲಿದೆ. ನಂತರ ಸ್ನೇಹ ಭೋಜನ ಜರಗಲಿರುವುದು. ಮಹಿಳಾ ವಿಭಾಗ ಸದಸ್ಯೆಯರಿಂದ ಮತ್ತು ಯುವ ವಿಭಾಗ ಸದಸ್ಯರಿಂದ ವಿಶೇಷ ದಾಂಡಿಯಾ ನೃತ್ಯ ಹಾಗೂ ದಸರಾ ಪೂಜೆಯ ಶುಭ ಸಂಧರ್ಭದಲ್ಲಿ ಸಮಾಜ ಬಾಂಧವ ಮಹಿಳೆಯರಿಗಾಗಿ ನಾರಿಗೊಂದು ಸೀರೆ ಪ್ರದರ್ಶನಗೊಳ್ಳಲಿದೆ.
ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಡೆಯಲಿರುವ ದಸರಾ ಹಬ್ಬದ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು, ಶ್ರೀ ದುರ್ಗಾ ದೇವಿಯ ಪೂಜೆ ಮತ್ತು ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ರೋಹನ್ ಶೆಟ್ಟಿ ಮತ್ತು ಸಮಿತಿ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.