ನವೆಂಬರ್ 1 ಎಲ್ಲೆಡೆ ಕನ್ನಡಗೀತೆಗಳ ಮಾರ್ದನಿ, ಹಳದಿ ಕೆಂಪು ಬಣ್ಣಗಳಿಂದ ಅಲಂಕೃತಗೊಂಡ ಜಿ ಎಮ್ ಛತ್ರ ಛಾಯದಲ್ಲಿ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಮತ್ತು ಜಿ ಎಮ್ ಗ್ಲೋಬಲ್ ಸ್ಕೂಲ್ ಜಂಟಿಯಾಗಿ ಸುವರ್ಣ ಕರ್ನಾಟಕದ 68ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿತು.
ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಕನ್ನಡ ಧ್ವಜವನ್ನು ಅರಳಿಸಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭವನ್ನು ಹಾರೈಸಿ ಮಾತನಾಡಿ, ನಮ್ಮ ಮಾಧ್ಯಮ ಯಾವುದಾದರೇನು ನಮ್ಮೆಲ್ಲರ ಮಾತೃಭಾಷೆ ಕನ್ನಡವಾಗಿದೆ. ಸ್ಪಷ್ಟ ಓದು, ಶುದ್ಧ ಬರಹದ ಮೂಲಕ ಕನ್ನಡ ಭಾಷೆಯನ್ನು ಅಭಿವೃದ್ಧಿ ಪಡಿಸುವ. ಕನ್ನಡ ನಮ್ಮೆಲ್ಲರ ಉಸಿರಾಗಲಿ, ಕನ್ನಡದ ಕಂಪು ಎಲ್ಲ ಕಡೆ ಪಸರಿಸಲಿ ಎಂದರು. ಕಾರ್ಯಕ್ರಮದಲ್ಲಿ ಜಿ ಎಮ್ ಗ್ಲೋಬಲ್ ಸ್ಕೂಲ್ನ ಉಪ ಪ್ರಾಂಶುಪಾಲೆ ದೀಪ್ತಿ ನವೀನ್ ಶೆಟ್ಟಿ, ಜಿ ಎಮ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿರಿದ್ದರು. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಸಮೂಹ ಗಾಯನ, ನೃತ್ಯಗಳು ಎಲ್ಲರಲ್ಲಿಯೂ ಕನ್ನಡಾಭಿಮಾನವನ್ನು ಮೂಡಿಸಿತು.