ಸದ್ಯ ದೇಶದಲ್ಲಿರುವ ಅಮೆಜಾನ್ ಮತ್ತು ಪ್ಲಿಪ್ಕಾರ್ಟ್ನಂಥ ಇ ಕಾಮರ್ಸ್ ವೇದಿಕೆಗಳಿಗೆ ಪ್ರತಿಯಾಗಿ ಕೇಂದ್ರ ಸರ್ಕಾರವೇ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್(ಓಎನ್ಡಿಸಿ) ಎಂಬ ಪ್ರತಿ ವೇದಿಕೆಯೊಂದನ್ನು ಸೃಷ್ಟಿಸಿದ್ದು, ಈಗ ಅದರಡಿಯಲ್ಲಿ ನಾನಾ ಇ ಕಾಮರ್ಸ್ ವೇದಿಕೆಗಳು ಆರಂಭವಾಗುತ್ತಿವೆ. 2022ರ ಏಪ್ರಿಲ್ನಲ್ಲೇ ಇದರ ಐಡಿಯಾ ಮೊಳಕೆಯೊಡೆದಿದ್ದು, ಈಗ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿದೆ. ಹಾಗಾದರೆ, ಏನಿದು ಓಎನ್ಡಿಸಿ? ಏಕೆ ಇದಕ್ಕಿಷ್ಟು ಮಹತ್ವ? ಇಲ್ಲಿದೆ ಮಾಹಿತಿ..
ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಮಾರ್ಕೆಟ್ ಎಂಬುದು ಓಎನ್ಡಿಸಿಯ ವಿಸೃತ ರೂಪ. ಸರಕು ಮತ್ತು ಸೇವೆಗಳನ್ನು ವರ್ತಕರಿಗೆ ಮಾರಾಟಕ್ಕೆ ಮತ್ತು ಗ್ರಾಹಕರಿಗೆ ಖರೀದಿಗೆ ಅವಕಾಶ ಮಾಡಿಕೊಡುವುದೇ ಈ ಓಎನ್ಡಿಸಿಯ ಧ್ಯೇಯ. ಕೇಂದ್ರ ಸರ್ಕಾರದ ಅಧೀನದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಒಎನ್ಡಿಸಿ ತನ್ನದೇ ವಿಶೇಷ ಇ- ವ್ಯವಸ್ಥೆ, ತಂತ್ರಗಳನ್ನು ಒಳಗೊಂಡಿದೆ. ಅಲ್ಲದೇ ನಿರ್ದಿಷ್ಟ ವಸ್ತುವಿಗೆ ಬೇಡಿಕೆ ಹೆಚ್ಚಾದಾಗ ಈ ನೆಟ್ವರ್ಕ್ ಜಾಲ ಖರೀದಿದಾರ ಮತ್ತು ಮಾರಾಟಗಾರನ ನಡುವಿನ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತದೆ. ಇದು ಒಂದು ಜಾಲವಾಗಿದ್ದು, ಮುಕ್ತವಾದ, ಎಲ್ಲವನ್ನೂ ಒಳಗೊಂಡ, ಉತ್ತಮ ಬೆಲೆಯ ಹಾಗೂ ಸ್ಪರ್ಧಾತ್ಮಕ ತೆರೆದ ಮಾರುಕಟ್ಟೆಯನ್ನು ನಿರ್ಮಿಸುವ ಗುರಿ ಹೊಂದಿದೆ.
ಓಎನ್ಡಿಸಿ ಜಾಗತಿಕ ಮಾರುಕಟ್ಟೆ?
ದೇಶದ ಇ- ಕಾಮರ್ಸ್ ಮಾರುಕಟ್ಟೆ ದೊಡ್ಡದಿದೆ. ಓಎನ್ಡಿಸಿ ವ್ಯವಸ್ಥೆ ಮೂಲಕ ಸಣ್ಣ ವ್ಯಾಪಾರಿಗಳನ್ನು ಉತ್ತೇಜಿಸಿ ಅವರು ಮಾರಬೇಕಿರುವ ಉತ್ಪನ್ನವನ್ನು ಜಾಗತಿಕವಾಗಿ ಕೊಳ್ಳಬೇಕಿರುವ ಗ್ರಾಹಕರಿಗೆ ತಲುಪಿಸಲು ವೇದಿಕೆ ಕಲ್ಪಿಸುತ್ತದೆ. ಓಎನ್ಡಿಸಿ ನೆಟ್ವರ್ಕ್ ಮೂಲಕ ಅಗತ್ಯವಾದ ವಸ್ತುಗಳ ಲಭ್ಯತೆ ಹಾಗೂ ಅವುಗಳ ಖರೀದಿಯನ್ನು ಮಾಡಬಹುದು. ಓಎನ್ಡಿಸಿ ವ್ಯಾಪಾರಿ ಹಾಗೂ ಗ್ರಾಹಕರ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಗ್ರಾಹಕ ಅನ್ಲೈನ್ನಲ್ಲಿ ಓಎನ್ಡಿಸಿ ನೆಟ್ವರ್ಕ್ ಬಳಸಿ ವಸ್ತುವಿಗಾಗಿ ಹುಡುಕಿದರೆ, ಓಎನ್ಡಿಸಿ ಜತೆ ಸಂಯೋಜನೆಗೊಂಡ ಎಲ್ಲ ಮಾರಾಟಗಾರರ ಪಟ್ಟಿ ದೊರೆಯುತ್ತದೆ. ಗ್ರಾಹಕ ಆಯ್ಕೆ ಮೂಲಕ ಅಗತ್ಯವಸ್ತು ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಬಹುದು. ಈ ಪ್ರಕ್ರಿಯೆಯ ಪೂರ್ಣ ನಿಯಂತ್ರಣ ಓಎನ್ಡಿಸಿ ಹೊಂದಿದ್ದು, ಖರೀದಿ, ಹಣ ಜಮೆ, ಆರ್ಡರ್ ತಲುಪುವವರೆಗೂ ಮೇಲ್ವಿಚಾರಣೆ ಮಾಡುತ್ತದೆ.
ಓಎನ್ಡಿಸಿ ವ್ಯಾಪ್ತಿಯಲ್ಲಿ ಯಾರಿದ್ದಾರೆ?
ಓಎನ್ಡಿಸಿ ಇ- ಕಾಮರ್ಸ್ ವ್ಯಾಪಾರಿ ಸಂಸ್ಥೆಗಳು, ಗ್ರಾಹಕರ ಆ್ಯಪ್ ಹಾಗೂ ಬ್ಯಾಂಕ್ಗಳ ಮೂಲಕವೇ ಗ್ರಾಹಕರನ್ನು ತಲುಪುತ್ತದೆ. ಗ್ರಾಹಕರ ಆ್ಯಪ್ಗ್ಳಾದ ಮೈಸ್ಟೋರ್, ಫೋನ್ಪೇ ಪಿನ್ಕೋಡ್, ಪೇಟಿಎಂ, ಸ್ಪೈಸ್ ಮನಿ ಆ್ಯಪ್ ಗಳ ಮೂಲಕ. ಇನ್ನು ವ್ಯಾಪಾರಿ ಸಂಸ್ಥೆಗಳಾದ ಮೀಶೋ, ಸ್ನಾಪ್ ಡೀಲ್, ಡಿಜಿಟ್, ಈ ಸಮುದಾಯ್, ಗೋಫ್ರುಲ್ ಗಲ್, ಗ್ರೋಥ್ ಫ್ಯಾಲ್ಕನ್, ಇನೊಬಿಟ್ಸ…, ಬಿಜಾಮ್, ಇವಿಟಾರ್ಲ್ಸ್, ಸೆಲ್ಲರ್ ಆಪ್, ಯುಶಾಪ್, ಯುಎಂಗೈಜ್, ರಿಲೈನ್ಸ್ ರಿಟೇಲ್, ಎಕಾರ್ಟ್, ಡನೊlà, ಲೋಡ್ ಶೇರ್, ಶಿಪ್ ರಾಕೇಟ್ ಸಂಸ್ಥೆಗಳಲ್ಲಿ ಗ್ರಾಹಕರು ದಿನಸಿ, ರೆಸ್ಟೋರೆಂಟ್ ಆಹಾರ ಸೇವೆಗಳನ್ನು ಪಡೆಯಬಹುದಾಗಿದೆ.
ರಾಷ್ಟ್ರೀಕೃತ ಮಾನ್ಯತೆ ಪಡೆದ 20 ಸಂಸ್ಥೆಗಳು ಓಎನ್ಡಿಸಿಗೆ 255 ಕೋಟಿಗೂ ಹೆಚ್ಚು ಬಂಡವಾಳ ಹೂಡಿವೆ. ಎಸ್ಬಿಐ, ಯುಕೋ ಬ್ಯಾಂಕ್, ಎಚ್ ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಹಾಗೂ ಬ್ಯಾಂಕ್ ಆಫ್ ಬರೋಡಾ ಬಂಡವಾಳ ಹೂಡಲು ಸಿದ್ಧತೆ ನಡೆಸಿವೆ. ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಕೂಡ ಈ ವ್ಯವಸ್ಥೆಯಡಿ ಬರಬಹುದು ಎಂದು ಅಂದಾಜಿಸಲಾಗಿದೆ.
ಓಎನ್ಡಿಸಿ ಹೇಗೆ ಕೆಲಸ ಮಾಡುತ್ತದೆ?
ಖರೀದಿದಾರರು ಪೇಟಿಯಂ, ರಿಲಾಯನ್ಸ್ ರೀಟೇಲ್ನಂಥ ಆ್ಯಪ್ನಲ್ಲಿ ಉತ್ಪನ್ನವನ್ನು ಹುಡುಕಿದಾಗ ಅಪ್ಲಿಕೇಶನ್ ಓಎನ್ಡಿಸಿ ಪ್ಲಾಟ್ಫಾರ್ಮ್ಗೆ ಸಂಪರ್ಕಗೊಳ್ಳುತ್ತದೆ. ಇಲ್ಲಿ ವ್ಯಾಪರಸ್ಥರ ಕಂಪನಿಗಳ ಪಟ್ಟಿ ಗೋಚರವಾಗುತ್ತದೆ. ಕಂಪನಿಯ ಉತ್ಪನ್ನವನ್ನು ಆಯ್ಕೆ ಮಾಡಿ ಖರೀದಿ ಮಾಡಬಹುದಾಗಿದೆ. ಓಎನ್ಡಿಸಿ ನಿರ್ದಿಷ್ಟ ಪ್ಲಾಟ್ಫಾರ್ಮ್ ಅನ್ನು ಅವಲಂಬಿಸಿರುವುದಿಲ್ಲ. ಸಣ್ಣ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಶಾಪಿಂಗ್ ಅಪ್ಲಿಕೇಶನ್ನಲ್ಲಿ ಮಾರಾಟ ಮಾಡಲು ಇದು ಅವಕಾಶ ಕಲ್ಪಿಸುತ್ತದೆ. ಇದು ಒಂದು ವೆಬ್ಸೈಟ್ ಅಲ್ಲದ ಕಾರಣ ಮಾರಾಟಗಾರರನ್ನು ಆನ್ಬೋರ್ಡ್ ಮಾಡುವ ಅಧಿಕಾರವನ್ನು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಿಂದ ಓಎನ್ಡಿಸಿ ತೆಗೆದುಕೊಳ್ಳುತ್ತದೆ.
ದಿನಕ್ಕೆ 10 ಸಾವಿರ ಆರ್ಡರ್
ಓಎನ್ಡಿಸಿಯನ್ನು ಅಧಿಕೃತವಾಗಿ 2022ರ ಏಪ್ರಿಲ್ನಲ್ಲಿ ಪ್ರಾರಂಭಿಸಲಾಯಿತು. ಓಎನ್ಡಿಸಿಯನ್ನು ಪ್ರಥಮ ಹಂತದಲ್ಲಿ ದೆಹಲಿ, ಬೆಂಗಳೂರು, ಭೋಪಾಲ್, ಶಿಲ್ಲಾಂಗ್, ಹಾಗೂ ಕೊಯಂಬತ್ತೂರಿನಲ್ಲಿ ಆರಂಭಿಸಲಾಗಿತ್ತು. ಪ್ರಸ್ತುತ ಈ ನೆಟ್ವರ್ಕ್ನಲ್ಲಿ ಪ್ರತಿದಿನ 10,000ಕ್ಕೂ ಹೆಚ್ಚು ಆರ್ಡರ್ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಓಎನ್ಡಿಸಿಯ ಸೇವೆ ಪ್ರಸ್ತುತ ದೇಶದ 240 ನಗರಗಳಲ್ಲಿ ಲಭ್ಯವಿದೆ. ವ್ಯಾಪಾರಿಗಳು, ಪೂರೈಕೆದಾರರು ಅಥವಾ ಪಾವತಿ ಆ್ಯಪ್ಗ್ಳು ಓಎನ್ಡಿಸಿಯನ್ನು ಸ್ವಯಂಪ್ರೇರಿತವಾಗಿ ತಮ್ಮದಾಗಿಸಿಕೊಳ್ಳಬಹುದು.
ಓಎನ್ಡಿಸಿ ಅನುಕೂಲಗಳೇನು?
– ಓಎನ್ಡಿಸಿ ಒಂದು ಅಪ್ಲಿಕೇಷನ್, ಮಧ್ಯವರ್ತಿ ಅಥವಾ ವೆಬ್ಸೈಟ್ ಅಲ್ಲ. ಆದರೆ ಇದು ಇ- ಮಾರಾಟಗಾರರು, ಶಾಪರ್, ಇ-ವೈಬ್ಸೈಟ್ ಮತ್ತು ಚಿಲ್ಲರೆ ವ್ಯಾಪಾರಸ್ಥರ ನಡುವಿನ ಮುಕ್ತ ಡಿಜಿಟಲ್ ವ್ಯವಸ್ಥೆ. ಹೀಗಾಗಿ ಎಲ್ಲರಿಗೂ ನೇರ ಸಂಪರ್ಕಕ್ಕೆ ಅನುವು ಮಾಡಿಕೊಡುತ್ತದೆ.
– ಚಿಲ್ಲರೆ, ಸಗಟು, ರಿಟೇಲ್ ವ್ಯಾಪಾರಸ್ಥರಿಗೆ ನೇರವಾಗಿ ಗ್ರಾಹಕರನ್ನು ತಲುಪುವ ಅವಕಾಶ ಸಿಗುತ್ತದೆ. ಗ್ರಾಹಕರಿಗೂ ಹಸ್ತಕ್ಷೇಪವಿಲ್ಲದ ನೇರ ವಹಿವಾಟಿಗೆ ಒಂದು ಸೂಕ್ತ ವ್ಯವಸ್ಥೆಯಾಗಿರಲಿದೆ.
– ಓಎನ್ಡಿಸಿ ವ್ಯವಸ್ಥೆ ವಿಶಾಲವಾಗಿ, ಸರಳ ನಿಯಮಗಳ ಮೂಲಕ ಎಲ್ಲ ಇ- ಕಾಮರ್ಸ್ ವ್ಯಾಪಾರಸ್ಥರು ಒಂದೆಡೆ ಸೇರಲು ಸುಲಭ ವಾಗುತ್ತದೆ. ಒಂದು ವ್ಯವಸ್ಥೆಯಡಿ ಏರಿಳಿತಕ್ಕೆ ಕಡಿವಾಣ ಸುಲಭ.
– ಇ-ಕಾಮರ್ಸ್ಅನ್ನು ಜನರಿಗೆ ಸುಲಭ ವ್ಯವಸ್ಥೆಯಾಗಿಸುವ ಮತ್ತು ಇ- ಕಾಮರ್ಸ್ ಜಾಲ ತಾಣಗಳಿಗೆ ಪರ್ಯಾಯ ವ್ಯವಸ್ಥೆ ಸೃಷ್ಟಿಸುವ ಉದ್ದೇಶ ಓಎನ್ಡಿಸಿಯದ್ದಾಗಿದೆ.
– ಒಎನ್ಡಿಸಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಲ್ಲದೆ ಸ್ವಾತಂತ್ರವನ್ನು ದ್ವಿಗುಣಗೊಳಿಸುತ್ತದೆ. ಕಾರ್ಯಾಚರಣೆಯ ವೆಚ್ಚವನ್ನು ಕಡಿತಗೊಳಿಸುತ್ತದೆ.
ಅನಾನುಕೂಲತೆಗಳೇನು ?
– ಓಎನ್ಡಿಸಿಗೆ ಇ- ಸಂಸ್ಥೆಗಳು ಒಳಪಟ್ಟರೆ ಸರ್ಕಾರದ ನಿಯಂತ್ರಣಕ್ಕೆ ಬರುತ್ತದೆ. ಕಾಲಕ್ರಮದಲ್ಲಿ ಬದಲಾಗುವ ಆರ್ಥಿಕ ನೀತಿ ಮತ್ತು ಓಎನ್ಡಿಸಿ ಷರತ್ತುಗಳು ತೊಡಕನ್ನುಂಟು ಮಾಡುತ್ತದೆ. ಹೀಗಾಗಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಂಥ ದೈತ್ಯ ಕಂಪನಿಗಳು ಈ ಜಾಲಕ್ಕೆ ಸೇರ್ಪಡಲು ಹಿಂದೇಟು ಹಾಕುತ್ತಿವೆ.
– ಓಎನ್ಡಿಸಿ ಎಂಬುದು ವೆಬ್ಸೈಟ್ ಅಲ್ಲ ಆದರೆ ಇದು ಇ- ಮಾರಾಟಗಾರರು, ಶಾಪರ್, ಇ-ವೈಬ್ಸೈಟ್ ಮತ್ತು ಚಿಲ್ಲರೆ ವ್ಯಾಪಾರಸ್ಥರ ನಡುವಿನ ಮುಕ್ತ ಡಿಜಿಟಲ್ ವ್ಯವಸ್ಥೆ. ಹೀಗಾಗಿ ಎಲ್ಲರಿಗೂ ನೇರ ಸಂಪರ್ಕಕ್ಕೆ ಅನುವು ಮಾಡಿಕೊಡುತ್ತದೆ.
– ಚಿಲ್ಲರೆ, ಸಗಟು, ರಿಟೇಲ್ ವ್ಯಾಪಾರಸ್ಥರಿಗೆ ನೇರವಾಗಿ ಗ್ರಾಹಕರನ್ನು ತಲುಪುವ ಅವಕಾಶ ಸಿಗುತ್ತದೆ. ಗ್ರಾಹಕರಿಗೂ ಹಸ್ತಕ್ಷೇಪವಿಲ್ಲದ ನೇರ ವಹಿವಾಟಿಗೆ ಒಂದು ಸೂಕ್ತ ವ್ಯವಸ್ಥೆಯಾಗಿರಲಿದೆ.
– ಓಎನ್ಡಿಸಿ ವ್ಯವಸ್ಥೆ ವಿಶಾಲವಾಗಿ, ಸರಳ ನಿಯಮಗಳ ಮೂಲಕ ಎಲ್ಲ ಇ- ಕಾಮರ್ಸ್ ವ್ಯಾಪಾರಸ್ಥರು ಒಂದೆಡೆ ಸೇರಲು ಸುಲಭ ವಾಗುತ್ತದೆ. ಒಂದು ವ್ಯವಸ್ಥೆಯಡಿ ಏರಿಳಿತಕ್ಕೆ ಕಡಿವಾಣ ಸುಲಭ.
– ಇ-ಕಾಮರ್ಸ್ಅನ್ನು ಜನರಿಗೆ ಸುಲಭ ವ್ಯವಸ್ಥೆಯಾಗಿಸುವ ಮತ್ತು ಇ- ಕಾಮರ್ಸ್ ಜಾಲ ತಾಣಗಳಿಗೆ ಪರ್ಯಾಯ ವ್ಯವಸ್ಥೆ ಸೃಷ್ಟಿಸುವ ಉದ್ದೇಶ ಓಎನ್ಡಿಸಿಯದ್ದಾಗಿದೆ.
– ಒಎನ್ಡಿಸಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಲ್ಲದೆ ಸ್ವಾತಂತ್ರವನ್ನು ದ್ವಿಗುಣಗೊಳಿಸುತ್ತದೆ. ಕಾರ್ಯಾಚರಣೆಯ ವೆಚ್ಚವನ್ನು ಕಡಿತಗೊಳಿಸುತ್ತದೆ.