ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.)
ಸುರತ್ಕಲ್ ಘಟಕ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಹಿಸಿದ್ದರು. ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಸುಧಾಕರ ಎಸ್ ಪೂಂಜ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಹಾಬಲ ಪೂಜಾರಿ ಕಡಂಬೋಡಿ ಪುನರಾಯ್ಕೆಗೊಂಡರು. ಸಂಚಾಲಕರಾಗಿ ವಿನಯ ಆಚಾರ್ಯ ಹೊಸಬೆಟ್ಟು ಉಪಾಧ್ಯಕ್ಷರಾಗಿ ಎಮ್ ಜಿ ರಾಮಚಂದ್ರ ರಾವ್, ಲೀಲಾಧರ ಶೆಟ್ಟಿ ಕಟ್ಲ, ರವಿ ಶೆಟ್ಟಿ, ಪಿ. ಕೃಷ್ಣಮೂರ್ತಿ ಸುರತ್ಕಲ್, ನಾರಾಯಣ ಶೆಟ್ಟಿ ಕಟ್ಲ, ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ ಚೇಳ್ಯಾರು, ಜೊತೆ ಕಾರ್ಯದರ್ಶಿಗಳಾಗಿ ಗುಣಶೇಖರ್ ಶೆಟ್ಟಿ, ಜಯ ದೇವಾಡಿಗ, ಸುಧಾಕರ ಶೆಟ್ಟಿ ಕಟ್ಲ, ಸತೀಶ್ ಶೆಟ್ಟಿ ಬಾಳಿಕೆ, ಅನಂತ್ ರಾಜ್ ಶೆಟ್ಟಿಗಾರ್, ಮಹಾಬಲ ಭಂಡಾರಿ, ರಾಮಚಂದ್ರ ಕುಳಾಯಿ, ಪ್ರದೀಪ್ ಶೆಟ್ಟಿ ಬಾಳಿಕೆ, ಅಶ್ವಿತ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ನಾಗರಾಜ್ ಕಡಂಬೋಡಿ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಶಿಶೀರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುದ್ದರ ಮನೆ, ದೇವೇಂದ್ರ ಶೆಟ್ಟಿ, ದಿವಾಕರ ಶೆಟ್ಟಿ ಚೇಳ್ಯಾರು, ಪಂಡಲೀಕ ಹೊಸಬೆಟ್ಟು, ಕೋಶಾಧಿಕಾರಿಯಾಗಿ ಟಿ ಎನ್ ರಮೇಶ್ ಆಯ್ಕೆಗೊಂಡರು.
ಎಪ್ರಿಲ್ 29 ಕ್ಕೆ ವಾರ್ಷಿಕೋತ್ಸವ
ಎಪ್ರಿಲ್ 29 ರಂದು ಶನಿವಾರ ಸುರತ್ಕಲ್ ಬಂಟರ ಭವನದ ಆವರಣದಲ್ಲಿ ಪಟ್ಲ ಫೌಂಡೇಶನ್ ಘಟಕದ ವಾರ್ಷಿಕೋತ್ಸವ ನಡೆಸಲು ತೀರ್ಮಾನಿಸಲಾಯಿತು. ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಘಟಕದ ಸಭೆಯಲ್ಲಿ ವಾರ್ಷಿಕೋತ್ಸವದಂದು ಹಿರಿಯ ಕಲಾವಿದರಿಗೆ ಸನ್ಮಾನ ಮತ್ತು ಪಾವಂಜೆ ಮೇಳದ ಯಕ್ಷಗಾನವನ್ನು ನಡೆಸಲು ತೀರ್ಮಾನಿಸಲಾಯಿತು. ಸುಧಾಕರ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಲೀಲಾಧರ ಶೆಟ್ಟಿ ಕಟ್ಲ ಮತ್ತು ನಾರಾಯಣ ಶೆಟ್ಟಿ ಕಟ್ಲ ಪಟ್ಲ ಫೌಂಡೇಶನ್ ಟ್ರಸ್ಟಿ ಸದಸ್ಯತನವನ್ನು ಪಡೆಯುವುದಾಗಿ ಸಭೆಯಲ್ಲಿ ತಿಳಿಸಿದರು. ಮಾಧವ ಶೆಟ್ಟಿ ಬಾಳ, ರವಿ ಶೆಟ್ಟಿ, ಪುಂಡಲೀಕ ಹೊಸಬೆಟ್ಟು, ನಾಗರಾಜ ಕಡಂಬೋಡಿ, ಸಂತೋಷ್ ಕುಮಾರ್ ಶೆಟ್ಟಿ, ರಾಮಚಂದ್ರ ರಾವ್, ಪಿ ಕೃಷ್ಣ ಮೂರ್ತಿ, ವಿನಯ ಆಚಾರ್ಯ, ಟಿ ಎನ್ ರಮೇಶ್, ಅಶ್ವಿತ್ ಶೆಟ್ಟಿ, ಸತೀಶ್ ಶೆಟ್ಟಿ ಬಾಳಿಕೆ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.