

ಅಲಯನ್ಸ್ ಕ್ಲಬ್ ಮಂಗಳೂರಿನ ಸಭೆಯು ಇತ್ತೀಚೆಗೆ ಹೋಟೆಲ್ ಶಂಕರ್ ಭವನ ಹೋಟೆಲಿನಲ್ಲಿ ಅಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ಅಲೈ ಸನ್ಮತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. 2026 -27ರ ಸಾಲಿನ ನೂತನ ಅಧ್ಯಕ್ಷರಾಗಿ ಅಲೈ ಜಿ.ಕೆ ಹರಿಪ್ರಸಾದ ರೈ ಕಾರಮೊಗರು ಗುತ್ತುರವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು. ನೂತನ ಕಾರ್ಯದರ್ಶಿಯಾಗಿ ಅಲೈ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರಾಗಿ ಅಲೈ ಪ್ರಶಾಂತ್ ಆಳ್ವ, ಕೋಶಾಧಿಕಾರಿಯಾಗಿ ಅಲೈ ಮಾಧವ ಉಲ್ಲಾಳ, ಜೊತೆ ಕಾರ್ಯದರ್ಶಿಯಾಗಿ ಅಲೈ ಸುಧಾಕರ್ ಬಿ, ಸಾರ್ವಜನಿಕ ಮಾರ್ಕೆಟಿಂಗ್ ಸಂಪರ್ಕ ಅಧಿಕಾರಿಯಾಗಿ ಅಲೈ ಸಂತೋಷ ಆಳ್ವ, ಸದಸ್ಯತ್ವ ಅಧಿಕಾರಿಯಾಗಿ ಅಲೈ ರಂಜಿತ್ ಶೆಟ್ಟಿ, ಲೀಡರ್ ಶಿಪ್ ಅಧಿಕಾರಿಯಾಗಿ ಅಲೈ ಡಾ| ರಾಜೇಶ್ ಆಳ್ವ, ಸಾಮಾಜಿಕ ಅಧಿಕಾರಿಯಾಗಿ ಅಲೈ ಡಾ. ಶರತ್ ಶೆಟ್ಟಿ, ಬೋರ್ಡ್ ಆಫ್ ನಿರ್ದೇಶಕರಾಗಿ ಅಲೈ ಅಲಿಸ್ಟನ್, ಅಲೈ ಅಭಿಷೇಕ್, ಅಲೈ ಆಶೀಶ್, ಅಲೈ ವಿಜಯಕುಮಾರ್ ಶೆಟ್ಟಿ, ಅಲೈ ಸತೀಶ್ ಭಂಡಾರಿ, ಅಲೈ ರೂಪೇಶ, ಅಲೈ ಪ್ರವೀಣ್ ಮುಂತಾದವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡರು ಎಂದು ಅಲಯನ್ಸ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.































































































































