ಬಂಟರ ಸಂಘ ಮೈಸೂರು ವತಿಯಿಂದ ಸಹಾಯಧನವಾಗಿ ಸಂಗ್ರಹವಾದ ರೂ. 2,75,507 (ರೂಪಾಯಿ ಎರಡು ಲಕ್ಷ ಎಪ್ಪತ್ತೈದು ಸಾವಿರ ಐನೂರ ಏಳು ಮಾತ್ರ) ಮೊತ್ತವನ್ನು ಮಂಡ್ಯದಲ್ಲಿರುವ ಅನಾರೋಗ್ಯ ಪೀಡಿತ ದಿನಕರ ಶೆಟ್ಟಿಯವರಿಗೆ ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಮೈಸೂರು ಬಂಟರ ಸಂಘ ಮತ್ತು ಟ್ರಸ್ಟ್ ವತಿಯಿಂದ ಅಧ್ಯಕ್ಷರಾದ ಕೆ. ಗಣೇಶ್ ನಾರಾಯಣ ಹೆಗ್ಡೆ, ವ್ಯವಸ್ಥಾಪಕ ಟ್ರಸ್ಟಿ ಪಿ. ಸುರೇಶ್ ಆಳ್ವ, ಗೌರವ ಕಾರ್ಯದರ್ಶಿ ಸಿಎ ಸುರೇಂದ್ರ ಹೆಗ್ಡೆ ಹಾಗೂ ಉಪ ವ್ಯವಸ್ಥಾಪಕ ಟ್ರಸ್ಟಿ ಡಾ| ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ ಅವರು ದಿನಕರ ಶೆಟ್ಟಿ ಅವರಿಗೆ ಚೆಕ್ಕನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಶ್ರೀಮತಿ ಸುಲೋಚನಾ ಶೆಟ್ಟಿ, ಪುತ್ರಿ ಕುಮಾರಿ ದೀಕ್ಷಾ ಶೆಟ್ಟಿ ಹಾಗೂ ಸಂಘದ ಸದಸ್ಯರೂ ಆಗಿರುವ ಅವರ ಹಿರಿಯ ಸಹೋದರ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.






















































































































