

ಉತ್ತಮ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಲಭ್ಯವಾಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು. ಆರೋಗ್ಯ, ಶಿಕ್ಷಣ, ಪರಿಸರ ಮೂಲ ಸೌಕರ್ಯ ಒದಗಿಸಲು ಎಂ.ಆರ್.ಪಿ.ಎಲ್ ಆದ್ಯತೆ ನೀಡುತ್ತಿದೆ ಎಂದು ಎಮ್.ಆರ್.ಪಿ.ಎಲ್ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ಕಾಳೆ ಹೇಳಿದರು. ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ಅನುದಾನದಲ್ಲಿ ಸುರತ್ಕಲ್ ರೋಟರಿ ಕ್ಲಬ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮತ್ತು ಸುರತ್ಕಲ್ ರೋಟರಿ ಕ್ಲಬ್ ರೂಪಿಸಿರುವ ನವೀಕೃತ ಮೆಡಿಸಿನ್ ಸ್ಟೋರೇಜ್ ಕೊಠಡಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.


ರೋಟರಿ ಕ್ಲಬ್ 3181 ವಲಯ 2ರ ಅಸಿಸ್ಟೆಂಟ್ ಗವರ್ನರ್ ಸಿಎ ಶಾಂತರಾಮ ಶೆಟ್ಟಿ ಮಾತನಾಡಿ, ಬಾಲ್ಯ ಮತ್ತು ವೃದ್ಧಾಪ್ಯದಲ್ಲಿ ಕಾಳಜಿ ಅಗತ್ಯ. ಹಿರಿಯ ನಾಗರಿಕರಿಗೆ ಆರೋಗ್ಯ ಸೇವಾ ಕೇಂದ್ರಗಳ ಅವಶ್ಯಕತೆ ಇದೆ. ಸುಸಜ್ಜಿತ ಔಷಧ ಶೇಖರಣ ಕೊಠಡಿಯಿಂದ ಉತ್ತಮ ಸೇವೆ ಸಾಧ್ಯ ಎಂದರು. ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಭಾಸ್ಕರ ಕೋಟ್ಯಾನ್ ಮಾತನಾಡಿ, ಉದ್ಯಮ ಹಾಗೂ ಸಾಮಾಜಿಕ ಸಂಸ್ಥೆಗಳ ಸಹಯೋಗದಿಂದ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.
ಫಾರ್ಮಸಿಸ್ಟ್ ಲಾವಣ್ಯ, ರೋಟರಿ ಕ್ಲಬ್ ಝೋನಲ್ ಲೆಫ್ಟಿನೆಂಟ್ ಸಂದೀಪ್ ರಾವ್ ಇಡ್ಯಾ, ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ವಿಭಾಗದ ಮುಖ್ಯ ಪ್ರಬಂಧಕ ಎಂ.ಕೆ ರಾವ್, ಅಧಿಕಾರಿ ಪ್ರದೀಪ್, ಹಿಂದೂ ವಿದ್ಯಾದಾಯಿನಿ ಸಂಘದ ಜೊತೆ ಕಾರ್ಯದರ್ಶಿ ಎಂ.ಜಿ ರಾಮಚಂದ್ರ, ರೋಟರಿ ಕಾರ್ಯದರ್ಶಿ ರಾಮ್ ಮೋಹನ್ ವೈ, ಕೋಶಾಧಿಕಾರಿ ಮೋಹನ್ ಎಚ್, ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ.ಎನ್, ಸದಸ್ಯರಾದ ಎಂ.ಬಿ ಶೆಟ್ಟಿ, ಶ್ರೀನಿವಾಸ ರಾವ್ ಪಾದೆಬೆಟ್ಟು, ಸತೀಶ್ ಸದಾನಂದ, ಪೂರ್ಣಿಮಾ ಎಸ್ ರಾವ್ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಸ್ವಾಗತಿಸಿ, ರೋಟರಿ ಕ್ಲಬ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ್ ಮರಾಟೆ ವಂದಿಸಿ, ಕೃಷ್ಣಮೂರ್ತಿ ನಿರೂಪಿಸಿದರು.





























































































































