Author: admin

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಪದಾಧಿಕಾರಿಗಳೊಂದಿಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ಅವರನ್ನು ಒಳಗೊಂಡ ಒಕ್ಕೂಟದ ನಿಯೋಗ ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು. ಬಂಟರ ಯಾನೆ ನಾಡವರ ನಿಗಮ ಸ್ಥಾಪನೆಗೆ ಮನವಿ ಮಾಡಿದರು. ಹಾಗೆಯೇ ಬಂಟರ ಮೀಸಲಾತಿಯ ಬಗ್ಗೆ ಕ್ರಮ ಕೈಗೊಂಡು ಬಂಟರ ಸಮುದಾಯ 3B ಯಿಂದ 2A ಗೆ ಸೇರ್ಪಡೆಗೊಳಿಸಬೇಕೆಂದು ವಿನಂತಿಸಿದರು. ಒಕ್ಕೂಟದ ಮನವಿಯನ್ನು ಪರಿಶೀಲಿಸಿ ಬೇಡಿಕೆಗಳ ಕುರಿತು ಸ್ಪಂದಿಸುವುದಾಗಿ ಭರವಸೆ ನೀಡಿದರು. ಈ ಸಂಧರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸಂಸದ ಡಿ ಕೆ ಸುರೇಶ್ ಉಪಸ್ಥಿತರಿದ್ದರು.

Read More

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ  ಬಿದ್ಕಲ್ ಕಟ್ಟೆ  ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿಶೇಷ ಕಾರ್ಯಕ್ರಮ ಅನಾವರಣಗೊಂಡಿದೆ. ಇದರ ವಿಶೇಷತೆ ಸಮಾಜಕ್ಕೆ ಮಾದರಿಯಾಗುವುದರೊಂದಿಗೆ ಇಂದಿನ ದುಬಾರಿ ಕಾಲದಲ್ಲಿ ಇಂಧನವಿಲ್ಲದೆ ,ಅಡುಗೆ ತಯಾರಿ ಮಾಡುವ ವೈಶಿಷ್ಟ್ಯತೆಯನ್ನು ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು ಮನನ ಮಾಡಿದರು.ಇತ್ತೀಚಿಗೆ ಬಿದ್ಕಲ್ ಕಟ್ಟೆ ಸರ್ಕಾರಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಇಂತಹ ಇಂಧನರಹಿತ ಪ್ರಾತ್ಯಕ್ಷಿಕೆಯನ್ನು ತಯಾರಿ ಮಾಡುವುದರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಈ ವೈಶಿಷ್ಟ್ಯತೆಯನ್ನು ನೋಡಿ ಫುಲ್ ಫಿದಾ ಆಗಿದ್ದಾರೆ. ಏನಿದು ಕಾರ್ಯಕ್ರಮ:- ಸುಂದರ ಪರಿಸರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್  ಸರ್ಕಾರಿ  ಶಾಲೆ ಕಾರ್ಯನಿರ್ವಹಿಸುತ್ತಿದೆ. ಹತ್ತಾರು ಮುಗ್ಧ ಮನಸುಗಳು ಇಲ್ಲಿ ಕಲಿಯುವ ಚಿನ್ನಾರಿಗಳು. ಪುಟ್ಟ ಪುಟ್ಟ ಕೈಗಳ ನಡುವೆ ತಮ್ಮನ್ನ ವಿಶೇಷವಾಗಿ ತೊಡಗಿಸಿಕೊಳ್ಳುವ ಉತ್ಸಾಹ, ಇಂಧನ ದುಬಾರಿಯಾದಂತಹ ಇಂದಿನ ಜನಮಾನಸದಲ್ಲಿ ಇಂಧನವಿಲ್ಲದೆ ತುರ್ತಾಗಿ ತಯಾರಿಸಬಹುದಾದಂತಹ ಅಡುಗೆ ಪದಾರ್ಥಗಳ ಪ್ರಾತ್ಯಕ್ಷಿಕೆಯನ್ನು ಸ್ಥಳದಲ್ಲಿ ಸಿದ್ಧಪಡಿಸಲಾಯಿತು. ಅಂತಹ ಪ್ರಾತ್ಯಕ್ಷಿಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಫುಲ್ ಫಿದಾ ಆಗ್ಬಿಟ್ಟಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕರ…

Read More

ಅಲ್ಲಿರುವುದು ಕೃಷಿಯಾಧಾರಿತ ಭೂಮಿ, ಅದು ದೇವ ಭೂಮಿ, ಹಸಿರು ಉಡುಗೆ ತೊಟ್ಟು ನಿಂತಿರುವ ಭೂಮಾತೆಯ ಗರ್ಭದಲ್ಲಿ ಅದೆಷ್ಟೋ ಕಾಲವಿದ್ದ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನಗಳು ದೈವ ಪ್ರೇರಣೆಯಂತೆ ಸುಮಾರು 25 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು ಇಂದು ಸಾವಿರಾರು ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿರುವುದರ ಹಿನ್ನೆಲೆಯೂ ರೋಚಕವಾಗಿದೆ. ಹೌದು ಭಕ್ತರೇ ನಾವು ನಿಮಗೆ ಹೇಳಲು ಹೊರಟಿರುವುದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಅಡಪಾಡಿ ಕೋಡಿ ಎಂಬಲ್ಲಿನ ಗ್ರಾಮೀಣ ಪ್ರಕೃತಿಯ ಮಡಿಲಲ್ಲಿರುವ ದೇವಸ್ಥಾನದ ಬಗ್ಗೆ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ಪ್ರಧಾನ ದೇವರುಗಳ ಜೊತೆಗೆ ಸುಮಾರು 36 ಪರಿವಾರ ಶಕ್ತಿಗಳನ್ನು ಹೊಂದಿರುವ ಈ ಕ್ಷೇತ್ರ ಇದೀಗ ಮತ್ತೊಮ್ಮೆ ಭಗವದ್ಭಕ್ತರ ಗಮನವನ್ನು ಸೆಳೆಯುತ್ತಿದೆ. ಇಲ್ಲಿಯ ವೈಶಿಷ್ಟ್ಯವೇನೆಂದರೆ ಎಲ್ಲಾ ವರ್ಗದ ಭಕ್ತರು ಇಲ್ಲಿ ವಿಶೇಷ ಹರಕೆ ಹೊತ್ತು ತಮ್ಮ ಮನದ ಕೋರಿಕೆಗಳನ್ನು ಈಡೇರಿಸಿಕೊಂಡು ನೆಮ್ಮದಿಯಿಂದ ಬಾಳುವುದು ಹಾಗೂ ಈ ಕ್ಷೇತ್ರದಲ್ಲಿ ವಿಶ್ವಾಸವನ್ನಿಟ್ಟುಕೊಂಡು ಪ್ರತಿ ವಿಶೇಷ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿರುವುದು. ದೇವಸ್ಥಾನದಲ್ಲಿ ಪ್ರತಿ ವರ್ಷವೂ ನವರಾತ್ರಿಯ ಹತ್ತು ದಿನಗಳಲ್ಲಿ…

Read More

ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದಲ್ಲಿ ವಿಶ್ವ ಮಹಿಳೆಯರ ದಿನಾಚರಣೆಯನ್ನು ಬಂಟ್ಸ್ ಫ್ರೆಂಡ್ಸ್ ಸಂಘ ಹಾವಂಜೆ ಇವರ ಸಂಘದ ವತಿಯಿಂದ ಹಾವಂಜೆ ಮಂಜುನಾಥ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು. ವಿಶ್ವ ಮಹಿಳೆಯ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಸದಸ್ಯರು ಹಾಗೂ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ಶೆಟ್ಟಿಯವರು ನೆರವೇರಿಸಿದರು. ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕರಾದ ಶಶಿಕಲಾ ಶೆಟ್ಟಿ ವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಜಾತ ಯು ಶೆಟ್ಟಿ ಹಾಗೂ ಶ್ರೀಮತಿ ಉಷಾ ಶೆಟ್ಟಿ ಶ್ರೀಮತಿ ಸುಗುಣ ಡಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತಿ ಇದ್ದರು. ಈ ಒಂದು ಶುಭ ಸಮಾರಂಭದ ಕಾರ್ಯಕ್ರಮದಲ್ಲಿ ಬಂಟ ಸಮುದಾಯದ ಹಿರಿಯ ಸಾಧಕರಾದ ಶ್ರೀಮತಿ ರಾಧಮ್ಮ ಶೆಟ್ಟಿ, ಶ್ರೀಮತಿ ಅಕ್ಕಯ್ಯ ಶೆಟ್ಟಿ, ಮೀನಕ್ಕಶೆಟ್ಟಿ, ಮೈರ ಶೆಟ್ಟಿ ಇವರನ್ನು ಶ್ರೀಯುತ ಸುಂದರ ಶೆಟ್ಟಿ ನಿವೃತ್ತ ಅಧ್ಯಾಪಕರು ಹಾವಂಜೆ ಇವರ ಸಹಕಾರದಿಂದ ಹಾಗೂ ನೇತೃತ್ವದಲ್ಲಿ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು. ಈ ಒಂದು ಶುಭ ಸಂದರ್ಭದಲ್ಲಿ…

Read More

ದಿನಾಂಕ 26.2.2023ರ ಭಾನುವಾರ ಸಾಗರದ ಎಸ್.ಎ.ಎನ್ ನಗರದ ಬಂಟರ ಸಂಘದ ಕಚೇರಿಯಲ್ಲಿ, ಬಂಟರ ಯಾನೆ ನಾಡವರ ಸಂಘದ ವತಿಯಿಂದ ಜನಪ್ರಿಯ ಶಾಸಕರಾದ ಹರತಾಳು ಹಾಲಪ್ಪನವರಿಗೆ ಸನ್ಮಾನಿಸಲಾಯಿತು. ಈ ಹಿಂದೆ ಸಾಗರ ಬಂಟರ ಸಂಘದ ಕಟ್ಟಡಕ್ಕೆ 30 ಲಕ್ಷ ರೂಪಾಯಿಗಳ ಅನುದಾನವನ್ನು ಶಾಸಕರು ನೀಡಿದ್ದರು. ಇದಕ್ಕಾಗಿ ಬಂಟ ಸಮಾಜ ಬಾಂಧವರೆಲ್ಲ ಒಟ್ಟುಗೂಡಿ ಶಾಸಕರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಸಕ ಹರತಾಳು ಹಾಲಪ್ಪನವರು ಮಾತನಾಡಿ ಬಂಟರು ಶ್ರಮಜೀವಿಗಳು, ಪ್ರಪಂಚದಾದ್ಯಂತ ಬಂಟರ ಸಮುದಾಯಕ್ಕೆ ಅವರದೇ ಆದಂತ ಗೌರವವಿದ್ದು ವಿವಿಧ ರೀತಿಯ ಉದ್ಯಮಗಳಲ್ಲಿ ಅವರು ಅವರನ್ನು ತೊಡಗಿಸಿಕೊಂಡಿದ್ದಾರೆ ಎಂದರು. ಸಾಗರ ಬಂಟರ ಸಂಘದ ಕಟ್ಟಡವನ್ನು ಪೂರ್ಣಗೊಳಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುದಾನ ನೀಡುವುದಾಗಿ ತಿಳಿಸಿದರು. ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ ಶಾಸಕರಿಗೆ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಸಾಗರ ಬಂಟರ ಸಮಾಜ ಸಾಗರ ತಾಲೂಕಿನಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಯನ್ನು ಸಮಾಜಮುಖಿಯಾಗಿ ನಡೆಸಲು ಅನುದಾನ ಹಾಗೂ ಸ್ಥಳಾವಕಾಶವನ್ನು ನೀಡಬೇಕಾಗಿ ಕೋರಿದರು. ಸಂಘದ…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಪುಂಜಾಲಕಟ್ಟೆ ಘಟಕದ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮ ನ,21ರಂದು ಸಂಜೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವರ ಪ್ರೀತ್ಯರ್ಥವಾಗಿ ನಡೆಯುವ ಯಕ್ಷಗಾನ ಸೇವೆ ಉತ್ತಮ ಕಾರ್ಯವಾಗಿದೆ. ಕಲಾವಿದರ ಕುರಿತು ಸಂಪೂರ್ಣ ಕಾಳಜಿ ವಹಿಸುವ ಕಾರ್ಯ ನಡೆಸುತ್ತಿರುವ ಯಕ್ಷಧ್ರುವ ಟ್ರಸ್ಟ್ ಅಭಿನಂದನೀಯ ಎಂದು ಅವರು ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನದ ಬೆಳವಣಿಗೆಗೆ ಕಲಾಭಿಮಾನಿಗಳು ನೀಡುವ ಪ್ರೋತ್ಸಾಹ, ಪರಿಶ್ರಮ ಅಭಿನಂದನೀಯ ಎಂದ ಅವರು ಪುಂಜಾಲಕಟ್ಟೆ ಘಟಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಟ್ರಸ್ಟ್ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ನವಶಕ್ತಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಯಕ್ಷಗಾನದ ಕಲಾವಿದರಿಗೆ ಚೈತನ್ಯ ನೀಡುವ ಕಾರ್ಯವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನಡೆಸುತ್ತಿದೆ, ಈಗಾಗಲೆ 38 ಘಟಕಗಳು ರಚನೆಯಾಗಿದ್ದು,…

Read More

ಫ್ರೆಂಚ್ ಓಪನ್ ಸೂಪರ್ 2022 ಬ್ಯಾಡ್ಮಿಂಟನ್ ಟೂರ್ನಮೆಂಟ್ ಪುರುಷರ ಡಬಲ್ಸ್ ಫೈನಲ್ ನಲ್ಲಿ ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ಅವರನ್ನು 21-13, 21-19 ನೇರ ಗೇಮ್‌ಗಳಿಂದ ಸೋಲಿಸಿದ ಭಾರತದ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಿಡಬ್ಲ್ಯೂಎಫ್ ಸೂಪರ್ 750 ಕಿರೀಟವನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಇದಾಗಿದೆ. ಇದರೊಂದಿಗೆ ಸಾತ್ವಿಕ್ ಮತ್ತು ಚಿರಾಗ್ ಈ ವರ್ಷ ತಮ್ಮ ಮೊದಲ ಸೂಪರ್ 750 ಮತ್ತು ಎರಡನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯನ್ನು ಗೆದ್ದರು. ಇದು ಅವರ ನಾಲ್ಕನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಹೈದರಾಬಾದ್ ಓಪನ್ 2018, ಥೈಲ್ಯಾಂಡ್ ಓಪನ್ 2019 ಮತ್ತು ಇಂಡಿಯಾ ಓಪನ್ 2022 ಗಳಲ್ಲಿ ಈ ಜೋಡಿ ಗೆಲುವು ಸಾಧಿಸಿತ್ತು. ಇವರಿಬ್ಬರು 2019 ರ ಫ್ರೆಂಚ್ ಓಪನ್ ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಇಂಡೋನೇಷ್ಯಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ವಿರುದ್ಧ ಸೋಲನುಭವಿಸಿದ್ದರು.…

Read More

ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಹಳೆಯಂಗಡಿ, ಜೆಸಿಐ ಸುರತ್ಕಲ್ ಮತ್ತು ಕೆಎಂಸಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಾಚ್೯ 20 ಭಾನುವಾರ ಬೆಳಿಗ್ಗೆ 9 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಲಿದ್ದಾರೆ. ರಕ್ತದಾನ ಶಿಬಿರವನ್ನು ಸುರತ್ಕಲ್ ಶೆಟ್ಟೀಸ್ ಕ್ಲಿನಿಕ್ ನ ಡಾ. ಟಿ ಆರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಹಳೆಯಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸುರತ್ಕಲ್ ಜೆಸಿಐ ಅಧ್ಯಕ್ಷೆ ರಾಜೇಶ್ವರಿ ಡಿ ಶೆಟ್ಟಿ, ನಾಗೇಶ್ ಕುಮಾರ್ ಎನ್ ಜೆ ಉಪಸ್ಥಿತರಿರಲಿದ್ದಾರೆ ಎಂದು ವೈದ್ಯಕೀಯ ಸಮಿತಿಯ ಸಂಚಾಲಕ ಪ್ರತಾಪ್ ಶೆಟ್ಟಿ ತಿಳಿಸಿದ್ದಾರೆ.

Read More

“ಕರಾವಳಿಯಲ್ಲಿ 17,000 ಕೋಟಿ ರೂ. ಮೊತ್ತದ ಯೋಜನೆಯಲ್ಲಿ ಸದ್ಯ 3,000 ಕೋಟಿ ರೂ. ವಿನಿಯೋಗದಲ್ಲಿ ಕಾಮಗಾರಿಗಳು ನಡೆದಿವೆ. ನದಿ ಮತ್ತು ಸೇತುವೆಯಲ್ಲಿ ಪೈಪ್ ಅಳವಡಿಸಲು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಮುಂದಿನ ಮೂರು ತಿಂಗಳಲ್ಲಿ ಮನೆ ಮನೆಗೆ ಗೇಲ್ ಇಂಡಿಯಾ ಗ್ಯಾಸ್ ಪೂರೈಕೆ ಮಾಡಲಿದೆ” ಎಂದು ಗೇಲ್ ಇಂಡಿಯಾದ ಆರ್ಥಿಕ ವಿಭಾಗ ನಿರ್ದೇಶಕ ರಾಕೇಶ್ ಕುಮಾರ್ ಜೈನ್ ಹೇಳಿದರು. ಅವರು ಸುರತ್ಕಲ್ ನ ವಿಜಯ ಫ್ಯೂಲ್ ಪಾರ್ಕ್ ನಲ್ಲಿ 22ನೇ ಸಿಎನ್ ಜಿ ಸ್ಟೇಷನ್ ಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದರು. ಬಳಿಕ ಮಾತಾಡಿದ ಹೆಚ್ ಪಿಸಿಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಮಾತನಾಡಿ, “ಮಂಗಳೂರಿನಲ್ಲಿ ಪ್ರಪ್ರಥಮ ಆನ್ ಲೈನ್ ಸಿಎನ್ ಜಿ ಸ್ಟೇಷನ್ ಸುರತ್ಕಲ್ ನಲ್ಲಿ ಪ್ರಾರಂಭಗೊಂಡಿರುವುದು ಸಂತಸದ ವಿಚಾರ. ಹೆಚ್ ಪಿಸಿ ಎಲ್ ಸಹಯೋಗದಲ್ಲಿ ಸಿಎನ್ ಜಿ ಸ್ಟೇಷನ್ ಶುಭಾರಂಭಗೊಂಡಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ವರ್ಷದ ಹಿಂದೆ ಪ್ರಾರಂಭಗೊಂಡಿರುವ ಫ್ಯೂಲ್ ಸ್ಟೇಷನ್ ಹೆಚ್ಚಿನ…

Read More

ಆಹಾರ ನಮ್ಮೆಲ್ಲರ ಪ್ರಾಥಮಿಕ ಆವಶ್ಯಕತೆ. ಆದರೆ ಒಪ್ಪೊತ್ತಿನ ಆಹಾರ ಸಿಗದೆ ಹಸಿವಿನಿಂದ ದಿನದೂಡುವವರು ಇನ್ನೂ ವಿಶ್ವದಲ್ಲಿದ್ದಾರೆ ಎಂದರೆ ಮಾನವರ ಅಥವಾ ಮಾನವೀಯತೆಯ ಸೋಲು ಎಂದರೆ ಅದು ಅತಿಶಯೋಕ್ತಿಯಾಗದು. ಇದಕ್ಕೆ ಪ್ರಮುಖ ಕಾರಣ ಬಡತನವಾಗಿದ್ದರೂ, ಪ್ರತೀವರ್ಷ ಸಾವಿರಾರು ಟನ್‌ ಆಹಾರ ಧಾನ್ಯ, ವಸ್ತುಗಳು ಪೋಲಾಗುತ್ತಿರುವುದನ್ನು ನಿರ್ಲಕ್ಷಿಸಲಾಗದು. ನಾವು ಪ್ರತಿನಿತ್ಯ ವ್ಯರ್ಥ ಮಾಡುವ ಆಹಾರ, ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಯ ಹೊಟ್ಟೆ ತುಂಬಿಸಬಹುದು ಎಂಬುದನ್ನು ಎಂದಿಗೂ ಮರೆಯಬಾರದು. ಹಸಿವಿನಿಂದ ಪ್ರತೀ ವರ್ಷ 50 ಲಕ್ಷ ಮಕ್ಕಳು ಸಾವು! ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಆಹಾರ ಸೇವಿಸುವ ಹಕ್ಕಿದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತೀ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗು ತ್ತಿದ್ಧಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಏಕೆಂದರೆ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಿದೆ. ಬಡ ರಾಷ್ಟ್ರಗಳಲ್ಲಿ ಶೇ. 50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ಧಾರೆ. ಹೀಗಾಗಿಯೇ ವಿಶ್ವದ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡುವ ಸಂಕಲ್ಪದೊಂದಿಗೆ ವಿಶ್ವ ಆಹಾರ ದಿನವನ್ನು…

Read More