Author: admin

ಜನ್ಮ ಭೂಮಿಯನ್ನು ತೊರೆದು ಕರ್ಮ ಭೂಮಿಯಲ್ಲೇ ನಮ್ಮ ಅಸ್ಥಿತ್ವವನ್ನು ಕಂಡುಕೊಂಡ ನಾವು ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಆಚರಣೆಗಳನ್ನು ಮರೆಯದೇ ನಮ್ಮ ಬಂಟರ ಸಂಘದಲ್ಲಿ ಮಾಡುತ್ತಾ ಬಂದಿದ್ದೇವೆ. ಅದೇ ಪ್ರಕಾರ ನಮ್ಮ ಬಂಟ ಕಲಾವಿದರ ಕೂಡುವಿಕೆಯ ಶ್ರೀ ಮಹಾವಿಷ್ಣು ಕೃಪಾಪೋಷಿತ ಬಂಟ ಯಕ್ಷಕಲಾ ವೇದಿಕೆಯ ವಾರ್ಷಿಕೋತ್ಸವ ಹಾಗೂ ಬಂಟ ದಿನಾಚರಣೆಯನ್ನು ಕೂಡ ಇದೇ ಸಂದರ್ಭ ಮಾಡುತ್ತಿರುವುದು ಕೂಡ ಅರ್ಥಪೂರ್ಣವಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್ ರೈ ಅವರ ಮುಂದಾಳತ್ವದಲ್ಲಿ ಇಲ್ಲಿ ಉತ್ತಮ ಕಾರ್ಯಕ್ರಮ ನಡೆಯುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಇಲ್ಲಿ ಹಿರಿಯ ಕಲಾವಿದ ದಾಮೋದರ ಶೆಟ್ಟಿ ಇರುವೈಲು ಅವರಿಗೆ ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ ಹಾಗೂ ಕಪೋಲ್ ವಿದ್ಯಾನಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಡಾ. ರೇಷ್ಮಾ ಅಶೋಕ್ ಹೆಗ್ಡೆ ಅವರಿಗೆ ಪ್ರೇಮ ನಾರಾಯಣ ರೈ ಪ್ರಶಸ್ತಿಯನ್ನು ನೀಡಿರುವುದು ಅರ್ಥಪೂರ್ಣವಾಗಿದೆ. ಇಲ್ಲಿ ಮುಂಡ್ಕೂರು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನವನ್ನು ಸಾಂಸ್ಕೃತಿಕ ಸಮಿತಿಯವರು ಆಯೋಜಿಸಿದ್ದಾರೆ. ಕಿಕ್ಕಿರಿದ ಸಭಾಗೃಹವನ್ನು ನೋಡುವಾಗ ನಮ್ಮವರ…

Read More

ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ್ ಬಿ. ಶೆಟ್ಟಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವಾರ್ಷಿಕ ವಿಧವಾ ವೇತನ, ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ ಆರ್ಥಿಕ ಧನ ಸಹಾಯ ವಿತರಣೆಯು ಜೂನ್ ತಿಂಗಳಲ್ಲಿ ನಡೆಯಲಿದೆ. ಈ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಇದೇ ಬರುವ ಮಾ.19ರ ಆದಿತ್ಯವಾರದಂದು ರೈ ಎಜ್ಯುಕೇಶನ್ ಟ್ರಸ್ಟ್ ನ ಸೈಂಟ್ ಅಗ್ನೇಸಿಯಸ್ ಹೈಸ್ಕೂಲ್, ಎಸ್. ಎನ್ ಕಾಲೇಜ್ ಸಮೀಪ ಶಿವಶಕ್ತಿ ನಗರ, ನವಘರ್ ರೋಡ್, ಭಯಂದರ್…

Read More

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರನ್ನು ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದ ಕಚೇರಿಗೆ ಕರೆಸಿ ಬಂಟ ಸಮುದಾಯದ ಎಲ್ಲಾ ವಿಚಾರಗಳ ಬಗ್ಗೆ ಕೂಲಂಕುಶವಾಗಿ ಮಾತುಕತೆ ಮಾಡಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ಮತ್ತು ಇತರ ಯೋಜನೆಗಳಿಗೆ ಸರಕಾರದ ಅನುದಾನವನ್ನು ಬಿಡುಗಡೆಗೊಳಿಸಿದರು. ಬಂಟ ಸಮುದಾಯವನ್ನು 2A ಕೆಟಗರಿಗೆ ಸೇರಿಸುವ ಬಗ್ಗೆ ಆಶ್ವಾಸನೆಯನ್ನು ನೀಡಿ, ಬಂಟರ ಯಾನೆ ನಾಡವರ ಎಲ್ಲಾ ಆಶೋತ್ತರಗಳನ್ನು ಈಡೇರಿಸುವುದಾಗಿ ಒಕ್ಕೂಟದ ಅಧ್ಯಕ್ಷರಿಗೆ ಭರವಸೆಯನ್ನು ನೀಡುವ ಮೂಲಕ ಸಮುದಾಯದ ಹೋರಾಟಕ್ಕೆ ಒಂದು ಹಂತದ ಜಯ ದೊರಕಿದೆ. ದಿನಾಂಕ 07.03.2023 ರಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ತಡರಾತ್ರಿ 11 ಗಂಟೆಗೆ ಶ್ರೀ ಐಕಳ ಹರೀಶ್ ಶೆಟ್ಟಿಯವರ ಜೊತೆ ವಿಸ್ತೃತವಾದ ಮಾತುಕತೆ ನಡೆಸಿ ಐಕಳ ಅವರು ಬಂಟ ಸಮಾಜದ ಎಲ್ಲಾ ವಿಚಾರಗಳನ್ನು ಮನದಟ್ಟು…

Read More

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇಳದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ದಿನಾಂಕ 27-02-2023 ರಂದು ಸಂಜೆ 6 ಗಂಟೆಯಿಂದ ಹಿರಿಯಡ್ಕ ಕೋಟ್ನಕಟ್ಟೆ ಗಾಂಧಿ ಮೈದಾನದಲ್ಲಿ ಶ್ರೀಮತಿ ಪುಷ್ಪಲತಾ ಶೆಟ್ಟಿ ಹಾಗೂ ಗುಂಡಿಬೈಲು ಬಾಲಕೃಷ್ಣ ಶೆಟ್ಟಿಯವರ ಸೇವಾ ಬಯಲಾಟವು ನಡೆಯಲಿದೆ. ಅದೇ ದಿನ ಬೆಳಗ್ಗೆ ಅವರ ಸ್ವಗೃಹ ಸಾಯಿದೀಪದಲ್ಲಿ 10 ಗಂಟೆಗೆ ಗಣಹೋಮ, ಮದ್ಯಾಹ್ನ 12 ಗಂಟೆಯಿಂದ ಓಂಕಾರ ಮ್ಯೂಸಿಕಲ್ ಸ್ಟಾರ್ಸ್ ಕುಂದಾಪುರ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆಯೂ ನಡೆಯಲಿದೆ. ಸಮಾಜ ಬಾಂಧವರು ಈ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಬಾಲಕೃಷ್ಣ ಶೆಟ್ಟಿ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ. ಸೌಮ್ಯ ಸ್ವಭಾವದ ಶ್ರೀ ಗುಂಡಿಬೈಲು ಬಾಲಕೃಷ್ಣ ಶೆಟ್ಟಿಯವರು ಓರ್ವ ಯಶಸ್ವೀ ಉದ್ಯಮಿಯಾಗಿ, ಹಲವಾರು ವರ್ಷಗಳಿಂದ ಸಮಾಜಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಕೊರೋನ ಸಂಧರ್ಭದಲ್ಲಿ ಹಲವಾರು ಬಂಟ ಕುಟುಂಬಗಳಿಗೆ ಆಸರೆಯಾಗಿ ನಿಂತ ಶ್ರೀಯುತರು ಧಾರ್ಮಿಕ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಡ…

Read More

ವಿಶ್ವ ವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಕೇಂದ್ರ ಹಂಪನ ಕಟ್ಟೆ ಮಂಗಳೂರಿನಲ್ಲಿ ಡಾ.ದಯಾನಂದ ಪೈ ,ಸತೀಶ್ ಪೈ. ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಯಕ್ಷಾಂಗಣ ಮಂಗಳೂರು ಕರ್ನಾಟಕ ಯಕ್ಷಭಾರತಿ ಪುತ್ತೂರು ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ಕಾರ್ಯಕ್ರಮದ ಸುಂದರ ಸಮಾರಂಭದಲ್ಲಿ ದಶಮಾನೋತ್ಸವ ಸಂದರ್ಭದ ಯಕ್ಷಾಂಗಣ ರಾಜ್ಯೋತ್ಸವ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾನ್ಯ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

Read More

ನಾಡ ಹಬ್ಬ ಮೈಸೂರು ದಸರಾ ಅಂದಾಕ್ಷಣ ಗಜಪಡೆಗಳು ನೆನಪಾಗುತ್ತದೆ. ಜಗತ್ತಿನ ‌ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಶ್ರೀಮಂತ ಸಂಸ್ಕೃತಿಯ ಪರಂಪರೆಯು ದಸರಾದ ವಿಶ್ವ ವಿಖ್ಯಾತ ಜಂಬೂ ಸವಾರಿ ‌ಮೆರವಣಿಗೆಗೆ ಗಜಪಡೆಯನ್ನು ಸಜ್ಜುಗೊಳಿಸಲು ಅಭ್ಯಾಸ ಮಾಡಿಸುವ ಸಂಪ್ರದಾಯ ಇದೆ. ಇಲ್ಲಿ ಗಜ ಪಡೆಯ ಗಂಭೀರ ನಡಿಗೆಗೆ ತಾಲೀಮು ದಸರಾಗೆ ತಿಂಗಳು ಇರುವಾಗಲೇ ‌ಪ್ರಾರಂಭವಾಗುತ್ತದೆ. ಅದ್ದೂರಿಯಾಗಿ ದಸರಾ ಜಂಬೂ ಸವಾರಿಗಾಗಿ ಕಾಡಿನಿಂದ ನಾಡಿಗೆ ತಂದಿರುವ ಆನೆಗಳಿಗೆ ಬೆಳಿಗ್ಗೆ ಹಾಗೂ ಸಂಜೆ ತಾಲೀಮು ನಡೆಯುತ್ತದೆ. ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಎಷ್ಟು ಸುಂದರವೋ ಅಷ್ಟೇ ಸುಂದರ ನಾಡಹಬ್ಬಕ್ಕೆ ಮುನ್ನುಡಿಯಂತಿರುವ ಗಜ ಪಯಣ ದಸರಾದಲ್ಲಿ ಆನೆ ಅಂಬಾರಿ ಹೊರುವುದನ್ನು ಜನ ವಿಶೇಷವಾಗಿ ‌ನೋಡಿರಬಹುದು. ಆದರೆ ಅದೇ ಆನೆಗಳು ಕಾಡಿನಿಂದ ನಾಡಿಗೆ ಬರುವ ದಿನ ಅಂದರೆ ದಸರಾಕ್ಕೆ ಒಂದು ತಿಂಗಳು ಮೊದಲು ಗಜ ಪಡೆಗಳನ್ನು ನಾಡಿಗೆ ಸ್ವಾಗತಿಸುವ ರೀತಿ ರಿವಾಜುಗಳು ಒಂದು ತರದ ಹಬ್ಬದ ವಾತಾವರಣವನ್ನು ನಿರ್ಮಾಣ‌ಗೊಳಿಸುತ್ತವೆ. ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನ…

Read More

“ಸಂತೋಷವಾಗಿ ಜೀವಿಸುವುದು ಹೇಗೆ”? ಎಂಬುದು ಬಹುತೇಕ ಜನರ ಪ್ರಶ್ನೆ. ಈ ಪ್ರಶ್ನೆಗೆ ಯಾರ ಬಳಿಯೂ ಸರಿಯಾದ ಉತ್ತರ ಸಿಗಲಾರದು. ಏಕೆಂದರೆ ಆ ವ್ಯಕ್ತಿಯ ಕೈಯ್ಯಲ್ಲೇ ಅವನ ಜೀವನದ ಸಂತೋಷವು ಅಡಗಿದೆ. ಒಂದು ಕೈಯಲ್ಲಿನ ಐದು ವಿವಿಧ ಬೆರಳುಗಳ ಉದ್ದದಂತೆಯೇ, ವಿವಿಧ ಜನರಿಗೆ ಸಂತೋಷವು ವಿಭಿನ್ನವಾಗಿರುತ್ತದೆ. ಈ ಹಿಂದೆ ನಮ್ಮ ಜೀವನದ ಸಂತೋಷವು ವಿಭಿನ್ನವಾಗಿತ್ತು. 50 ವರ್ಷಗಳ ಹಿಂದೆಯಷ್ಟೇ ತಂತ್ರಜ್ಞಾನವು ಹುಟ್ಟಿಕೊಂಡಿತು ಮತ್ತು ಪ್ರಸ್ತುತ ಸ್ಮಾರ್ಟ್‌ ಫೋನ್‌ ಯುಗದಲ್ಲಿ ನಾವು ಸಂತೋಷವನ್ನು ಬೇರೆ ರೀತಿಯಲ್ಲಿ ಹುಡುಕುತ್ತಿದ್ದೇವೆ. ಜೀವನದಲ್ಲಿನ ಸಂತೋಷವನ್ನು ಅನುಭವಿಸುವಲ್ಲಿ ಬಹಳಷ್ಟು ಅಡಚಣೆಗಳಿವೆ. ಆತಂಕ, ವೈಫ‌ಲ್ಯದ ಭಯ, ಕೋಪ, ಹತಾಶೆ, ಹೋಲಿಕೆ ಇತ್ಯಾದಿ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ತನ್ನ ಜೀವನದ ಯಾವುದಾದರೊಂದು ಸಮಯದಲ್ಲಿ ಆತಂಕವನ್ನು ಅನುಭವಿಸುತ್ತದೆ. ಅದು ಮನೆಗೆ ಆಹಾರವನ್ನು ಹೊತ್ತೊಯ್ಯುತ್ತಿರುವ ಇರುವೆಯಾಗಿರಬಹುದು ಅಥವಾ ಸಾಗರದಾಳದಲ್ಲಿರುವ ನೀಲಿ ತಿಮಿಂಗಿಲವೇ ಆಗಿರಬಹುದು. ನರಮಂಡಲವನ್ನು ಹೊಂದಿರುವ ಪ್ರತಿಯೊಂದು ಜೀವಿಯಲ್ಲಿಯೂ ಆತಂಕ ಕಂಡು ಬರುತ್ತದೆ. ಹೆಸರೇ ಸೂಚಿಸುವಂತೆ, ನರ್ವಸ್‌ ಸಿಸ್ಟಮ್‌ ಪೂರ್ವ ನಿಯೋಜಿತವಾಗಿ ಕೆಲವೊಮ್ಮೆ ನರ್ವಸ್‌…

Read More

ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಯುವ ಬಂಟರ ದಿನಾಚರಣೆಯ ಪ್ರಯುಕ್ತ ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜು.23 ರಂದು ನಡೆಯಲಿರುವ ತುಳುನಾಡ ಬಂಟೆರೆ ಪರ್ಬ – 2023 ಕಾರ್ಯಕ್ರಮದ ಸಿದ್ಧತಾ ಸಭೆಯು ಪುತ್ತೂರು ಬಂಟರ ಭವನದಲ್ಲಿ ಜರಗಿತು. ಅಪರೂಪದ ಅವಕಾಶ – ಶಶಿರಾಜ್ ರೈ : ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳ ಗುತ್ತುರವರು ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜು.23 ರಂದು ನಡೆಯುವ ಅದ್ದೂರಿ ಕಾರ್ಯಕ್ರಮ ತುಳುನಾಡ ಬಂಟೆರೆ ಪರ್ಬಕ್ಕೆ ಸಮಸ್ತ ಬಂಟ ಬಾಂಧವರು ಪೂರ್ಣ ರೀತಿಯ ಸಹಕಾರವನ್ನು ನೀಡಿ, ಯಶಸ್ಸುಗೊಳಿಸಬೇಕು ಎಂದು ಹೇಳಿದರು. ಬೆಳಿಗ್ಗೆಯಿಂದ ಸಂಜೆ ತನಕ ನಡೆಯುವ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಬಂಟರ ಸಾಂಸ್ಕೃತಿಕ ಸ್ವರ್ಧೆಯ ವೈಭವವನ್ನು ನೋಡುವುದೇ ಒಂದು ಅಪರೂಪದ ಅವಕಾಶವಾಗಿದೆ ಎಂದು ಅವರು ಹೇಳಿದರು. ಯುವ ಬಂಟರ ಸಂಘದ ಕಾರ್ಯ ಪ್ರಶಂಸನೀಯ -…

Read More

ಆನಂದ ಫಿಲಂಸ್ ಮತ್ತು ದ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ತುಳು ಚಲನಚಿತ್ರದ ಚಿತ್ರೀಕರಣ, ಡಬ್ಬಿಂಗ್ ಕೆಲಸ ಕಾರ್ಯಗಳು ಸಂಪೂರ್ಣಗೊಂಡಿದ್ದು, ಸಿನಿಮಾ ಆಗೋಸ್ಟ್ ತಿಂಗಳಿನಲ್ಲಿ ತೆರೆಕಾಣಲಿದೆ. ಉಡುಪಿ ಸುತ್ತಮುತ್ತ ಒಂದೇ ಹಂತದಲ್ಲಿ 25 ದಿನಗಳ ಕಾಲ ಯಾನ್ ಸೂಪರ್ ಸ್ಟಾರ್ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು. ಮುಖ್ಯವಾಗಿ ಇಲ್ಲಿ ಜನಮನ್ನಣೆ ಪಡೆದಿರುವ ಸಿಐಡಿ ಧಾರಾವಾಹಿಯ ಮುಂಬಯಿ ಕಲಾವಿದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಲ್ ರೊಂದಿಗೆ ತುಳುನಾಡಿನ ಖ್ಯಾತ ಕಲಾವಿದರಾದ ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಮಾನಸಿ ಸುಧೀರ್, ಅನ್ ಷಾ, ಅಶೋಕ್ ಪಕ್ಕಳ, ಮಾಸ್ಟರ್ ಅತಿಶ್ ಶೆಟ್ಟಿ, ಮಾಸ್ಟರ್ ಅರುಷ್ ಯು ಪೂಜಾರಿ, ಕುಮಾರಿ ಶ್ರೀಯಾ ಹೆಗ್ಡೆ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ಶೆಟ್ಟಿಯವರ ಕತೆಗೆ ಸಚಿನ್ ಶೆಟ್ಟಿ ಕುಂಬಳೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆ :…

Read More

ಮೂಡುಬಿದಿರೆಯ ಯುವ ಬಂಟರ ಸಂಘದ ವತಿಯಿಂದ ಮೂರನೇ ವರ್ಷದ ಬಂಟರ ಸಮ್ಮಿಲನ – ಬಂಟ ಕ್ರೀಡೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಮೂರು ವರ್ಷಗಳಲ್ಲಿ ಯುವ ಬಂಟರ ಸಂಘದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಕೊರೋನಾ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ನೀಡಿದ ನೆರವು ಹಾಗೂ ಸಹಕರಿಸಿದ ಸದಸ್ಯರ ಬಗ್ಗೆ ಉಲ್ಲೇಖಿಸಿ, ಸಂಘವು ನಡೆಸಿದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. 19 ರಂದು ಬೆಳಿಗ್ಗೆ 9 ಗಂಟೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹಾಗೂ ಬಾರ್ಕೂರು ಸಂತೋμï ಗುರೂಜಿ ಆಶೀರ್ವಚನ ನೀಡಲಿದ್ದು ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಅವರು ಪುμÁ್ಪರ್ಚನೆಗೈಯಲಿದ್ದಾರೆ. ಉದ್ಯಮಿ ಪ್ರಕಾಶ್…

Read More