ನಮ್ಮ ಧರ್ಮವನ್ನು ಪರಿಪಾಲನೆ ಮಾಡಿ ಹಿತವನ್ನು ಕಾಪಾಡಿ ಧರ್ಮ ರಕ್ಷಣೆ ಮಾಡಿದರೆ ದೇವರು ನಮ್ಮನ್ನು ಕಾಪಾಡುತ್ತಾರೆ .ನಾವು ಯಾವುದನ್ನೂ ಪವಿತ್ರ ಭಾವನೆಯಿಂದ ನೋಡುವೆವೋ ಮತ್ತು ಭಕ್ತಿಯ ಸಂಕೇತದ ಸಂಬಂದ ಇರುತ್ತದೋ ಅದುವೇ ಧರ್ಮ .ಹಾಗೆಯೇ ಪವಿತ್ರವಾದ ಸಂಬಂದಗಳು ಅನೇಕ ಬಗೆಯಲ್ಲಿರಬಹುದು ,ಅದು ಪ್ರಕ್ರತಿ, ಜಲ, ವಾಯು ,ಆಕಾಶ, ಭೂಮಿಯೊಂದಿಗೂ ಇರಬಹುದು ಅವುಗಳಲ್ಲಿ ಪೂಜೆ ಎಂಬುದು ಮುಖ್ಯವಾದುದು .ಇಂದು ಇಲ್ಲಿ ನಾವು ಆಚರಿಸುವ ತೆನೆ ಹಬ್ಬ ಎಂದರೆ ಕೂಡಾ ಇದು ನಾವು ಪ್ರಕೃತಿಯೊಂದಿಗಿನ ಪೂಜೆಗೆ ಸಂಬಂದ ಪಟ್ಟದ್ದು .ಸ್ತ್ರೀ ಪ್ರಧಾನವಾದ ಸಮಾಜದಲ್ಲಿ ನವರಾತ್ರಿಯ ಶುಭ ಪರ್ವದಲ್ಲಿ ಇದರ ಆಚರಣೆಗೆ ಪ್ರಾಮುಖ್ಯತೆ ಇದೆ .ನಾವು ತುಳುನಾಡಿಗರು ಎಲ್ಲಿ ಹೋದರು ನಮ್ಮ ಸಂಪ್ರದಾಯ ,ಸಂಸ್ಕ್ರತಿಯನ್ನು ಬಿಟ್ಟವರಲ್ಲ .ಇಲ್ಲಿ ತುಳುನಾಡಿನ ಭಕ್ತಿ ಭಾವದ ಮನೆ ತುಂಬಿಸುವ ತೆನೆ ಹಬ್ಬದ ವೈಭವ ಮೂಡಿ ಬಂದಿದೆ, ಇಂತಹ ಧರ್ಮದ ಚೌಕಟ್ಟಿನಲ್ಲಿ ನಡೆಯುವ ಆಚರಣೆಗಳಿಗೆ ಮಹತ್ವವಿದೆ ಎಂದು ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ನುಡಿದರು .
ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ನವರಾತ್ರಿಯ ಪ್ರಯುಕ್ತ ವಾರ್ಷಿಕ ದಸರಾ ಪೂಜೆ ,ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಅ 22 ರಂದು ,ಪುಣೆಯ ಕ್ಯಾಂಪ್ ನಲ್ಲಿಯ ಪೂನಾ ಕ್ಲಬ್ ಸಿನೆಮಾ ಹಾಲ್ನ ಲ್ಲಿ ವಿವಿದ ಧಾರ್ಮಿಕ ,ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಜರಗಿತು .ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಉಮಾ ಕೃಷ್ಣ ಶೆಟ್ಟಿ ಯವರು ಮಾತನಾಡಿ ನಮ್ಮ ಕಲೆ ಸಂಸ್ಕ್ರತಿ ಸಂಸ್ಕಾರವನ್ನು ಯುವ ಜನತೆಗೆ ತಿಳಿಸುವ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಅಗತ್ಯತೆ ಇದೆ .ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ಹೆ ಗ್ಡೆಯವರ ಮುಂದಾಳತ್ವದಲ್ಲಿ ಈ ಸಂಸ್ಥೆ ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ಮಹತ್ತರ ಬದಲಾವಣೆಯೊಂದಿಗೆ ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡಲಿ ಎಂದು ಶುಭ ಹಾರೈಸುತ್ತೇನೆ ಎಂದರು .
ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರು ರವರ ಅಧ್ಯಕ್ಷತೆಯಲ್ಲಿ ಜರಗಿದ ಈ ದಸರಾ ಪೂಜೆ ತೆನೆ ಹಬ್ಬದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕಾರ್ಕಳ ದ ಖ್ಯಾತ ಶಿಕ್ಷಕಿ ವಂದನಾ ಜಿ .ರೈ ,ಬಂಟ್ಸ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಅರವಿಂದ್ ರೈ, ,ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು .ಶೆಟ್ಟಿ ,ಯುವ ವಿಭಾಗದ ಅಧ್ಯಕ್ಷ ರೋಹನ್ ಶೆಟ್ಟಿ ,ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ,ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಎಸ್.ಶೆಟ್ಟಿ ಯವರು ಉಪಸ್ಥಿತರಿದ್ದರು .
ಅಧ್ಯಕ್ಷರಾದ ಗಣೇಶ್ ಶೆಗ್ದೆ ಮತ್ತು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ದಸರಾ ಪೂಜೆ ತೆನೆ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು , ಶ್ರೀಮತಿಯರಾದ ಸುಜಾತಾ ಎ .ಶೆಟ್ಟಿ ,ಆಶಾ ಡಿ.ಶೆಟ್ಟಿ , ಪ್ರಾರ್ಥನೆ ಗೈದರು , ಅಧ್ಯಕ್ಷರಾದ ಗಣೇಶ್ ಹೆಗ್ಡೆಯವರು ಸ್ವಾಗತಿ,ಪ್ರಾಸ್ತಾವಿಕವಾಗಿ ಮಾತನಾಡಿದರು ಅತಿಥಿ ಗಣ್ಯರನ್ನು ಅಧ್ಯಕ್ಷ ಗಣೇಶ್ ಹೆಗ್ಡೆ ಮತ್ತು ಮಹಿಳಾಧ್ಯಕ್ಷೆ ಉಷಾ ಯು ,ಶೆಟ್ಟಿ ಯವರು ಶಾಲು ಪುಷ್ಪ ಗುಚ್ಛ ,ಸ್ಮರಣಿಕೆ ನೀಡಿ ಗೌರವೀಸಿದರು ,ಅತಿಥಿ ಗಣ್ಯರ ಪರಿಚಯವನ್ನು ಕ್ರಮವಾಗಿ ಸಾಯಿಭದ್ರಾ ಎ. ಶೆಟ್ಟಿ .ಮತ್ತು ದೀಪಾ ಎ. ರೈಯವರು ಓದಿದರು.
ಧಾರ್ಮಿಕ ಕಾರ್ಯಕ್ರಮವಾಗಿ ರಾಘವೇಂದ್ರ ಭಟ್ ರವರ ಪೌರೋಹಿತ್ಯದಲ್ಲಿ ದುರ್ಗಾ ಪೂಜೆ ನೆರವೇರಿತು ,ಸಂಘದ ಅಧ್ಯಕ್ಷರು ,ಅತಿಥಿ ಗಣ್ಯರು ,ಮಹಿಳಾ ವಿಭಾಗದ ಅಧ್ಯಕ್ಷರು,ಮಾಜಿ ಅಧ್ಯಕ್ಷರುಗಳು ಮತ್ತು ಸರ್ವ ಸದಸ್ಯರು ಶ್ರೀದೇವಿಯ ಅಲಂಕೃತ ಮೂರ್ತಿಗೆ ದೀಪ ಬೆಳಗಿಸಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಮಹಿಳಾ ವಿಭಾಗದ ಸದಸ್ಯೆಯರು ದೇವಿಗೆ ಮಂಗಳಾರತಿ ಬೆಳಗಿದರು ಅಸೋಸಿಯೇಷನ್ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಯವರು ಭತ್ತದ ತೆನೆಗೆ ಹಾಲೆರೆದು ಪೂಜೆ ಸಲ್ಲಿಸಿ ಸಮಾಜ ಭಾಂದವರಿಗೆ ತೆನೆ ವಿತರಿಸಿದರು ,ಮಹಿಳಾ ವಿಭಾಗದ ಸದಸ್ಯರು ದೇವಿಯನ್ನು ಅರಾದಿಸುವ ಸ್ತುತಿಯೊಂದಿಗೆ ನೃತ್ಯ ಗೈದರು .ಸಂಘದ ಮಹಿಳೆಯರಿಂದ ಮತ್ತು ಯುವ ವಿಬಾಗದ ಸದಸ್ಯರಿಂದ ವಿಶೇಷ ದಾಂಡಿಯಾ ನೃತ್ಯ ಪ್ರದರ್ಶನ ಗೊಂಡಿತು . ನಂತರ ಮಕ್ಕಳು ಮಹಿಳೆಯರು ಪುರುಷರು ಸೇರಿದಂತೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು.
ಈ ದಸರಾ ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು , ,ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ,ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ,ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ,ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘ ಕಾತ್ರಜ್ ನ ಅಧ್ಯಕ್ಷ ಸುಭಾಶ್ ಶೆಟ್ಟಿ ,ಪಿಂಪ್ರಿ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ,ಪಿಂಪ್ರಿ ಚಿಂಚ್ವಾಡ್ ಬಂಟ್ಸ್ ಸಂಘದ ಕಾರ್ಯದರ್ಶಿ ಅರುಣ್ ಶೆಟ್ಟಿ ,ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಎಸ್ .ಶೆಟ್ಟಿ , ಪುಣೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ .ಶೆಟ್ಟಿ , ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷೆ ಜ್ಯೋತಿ ವಿ.ಶೆಟ್ಟಿ ಪುಣೆ ತುಳುಕೂಟದ ಅಧ್ಯಕ್ಷೆ ಸುಜಾತಾ ಡಿ.ಶೆಟ್ಟಿ,ಪುಣೆ ಬಂಟರ ಸಂಘ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿಯವರನ್ನು ಪುಷ್ಪ ಗುಚ್ಚನೀಡಿ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಕವಿತಾ ಶೆಟ್ಟಿ ,ಮಾಜಿ ಅಧ್ಯಕ್ಷೆ ಸುಜಾತಾ ಅರ್.ಶೆಟ್ಟಿ ,ಜೊತೆ ಕೋಶಾಧಿಕಾರಿ ರತ್ನಾ ಶೆಟ್ಟಿ ,ಕಾರ್ಕಳ ದುರ್ಗಾ ವಾಹಿನಿ ಸಂಘದ ಅಧ್ಯಕ್ಷೆ ಪ್ರೇಮಾ ಎಸ್.ಶೆಟ್ಟಿ ಯವರನ್ನು ಶಾಲು ಪುಷ್ಪ ಗುಚ್ಚ ನೀಡಿ ಸತ್ಕರಿಸಲಾಯಿತು , ಗೌರವಾರ್ಪಣೆಯ ಯಾದಿಯನ್ನು ಸುಧಾಕರ್ ಶೆಟ್ಟಿ ಕೆಮ್ತೂರು ಓದಿದರೂ. ನಾರಿಗೊಂದು ಸೀರೆ ಪ್ರದರ್ಶನವು ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು..ವಿಜೇತರಾದವರಿಗೆ ಸೀರೆ ನೀಡಿ ಗೌರವಿಸಲಾಯಿತು . ಸಂಘದ ಮಾಜಿ ಅಧ್ಯಕ್ಷೆ ಸುಜಾತಾ ಸುಬಾಶ್ಚಂದ್ರ ಹೆಗ್ಡೆ ಇದರ ಪ್ರಾಯೋಜಕತ್ವವನ್ನು ವಹಿಸಿಕೊಂಡರು . ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ಆನಂದ್ ಶೆಟ್ಟಿ ಮಿಯ್ಯಾರ್ ,ಮಾಜಿ ಅಧ್ಯಕ್ಷರುಗಳಾದ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿ ,ನಾರಾಯಣ ಶೆಟ್ಟಿ , ಉಪಾಧ್ಯಕ್ಷರಾದ ,ಸತೀಶ್ ರೈ,ಕಲ್ಲಂಗಳ ಗುತ್ತು ,ಕೋಶಾದಿಕಾರಿ ದಿನೇಶ್ಶೆ ಟ್ಟಿ ಮೇಲ್ಮನೆ ಪೆಲತ್ತೂರು , ಸಾಂಸ್ಕ್ರತಿಕ ಜೊತೆ ಕಾರ್ಯದರ್ಶಿ ತಾರಾನಾಥ್ ರೈ ಸೂರಂಬೈಲ್ ,ಸಲಹೆಗಾರಾರ ಸುಧೀರ್ ಶೆಟ್ಟಿ ಕೊಳ್ಕೆಬೈಲು,ಕ್ರೀಡಾ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಯೆರವಾಡ, ಜೊತೆ ಕೋಶಾಧಿಕಾರಿ ರವಿ ,ಎನ್.ಶೆಟ್ಟಿ ,ಮಹಿಳಾ ವಿಭಾಗದ ಮಾಜಿ ಅಧ್ಕ್ಯಕ್ಷೆಯರುಗಳಾದ ಸುಜಾತ ಎಸ್.ಹೆಗ್ಡೆ , ಸರೋಜಿನಿ ಜೆ .ಶೆಟ್ಟಿ ,ಸುಧಾ ಎನ್ .ಶೆಟ್ಟಿ ,ಮಲ್ಲಿಕಾ ಎ.ಶೆಟ್ಟಿ ,ದೀಪಾ ಎ.ರೈ, ಮಹಿಳಾ ಸಾಂಸ್ಕ್ರತಿಕ ಕಾರ್ಯಾಧ್ಯಕ್ಷೆ ಶರ್ಮಿಳಾ ಟಿ.ರೈ ,ರೇಷ್ಮಾ ಅರ್ .ಶೆಟ್ಟಿ ,ಶುಭಾ ಜೆ .ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಯುವ ವಿಬಾಗದ ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು .
ಈ ದಸರಾ ಹಬ್ಬದ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಸಮಾಜ ಭಾಂದವರು ಶ್ರೀ ದುರ್ಗಾ ದೇವಿಯ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು , ಅಸೋಸಿಯೇಷನ್ ನ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶಾಲಿನಿ ಎಂ .ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ಯುವ ವಿಭಾಗದ ಕೃತಿ ಎಲ್ .ಶೆಟ್ಟಿ ವಂದಿಸಿದರು . ಭೂ ಮಂಡಲದ ಪುನರ್ ಸೃಷ್ಠಿ ಸ್ತ್ರೀ ಸ್ವರೂಪಿನಿ ಅದಿಮಾಯೆಯಿಂದ ಆದಂತಹ ಈ ದರಣಿಯಲ್ಲಿ ನಾವೆಲ್ಲರೂ ಮಾನವ ಜನ್ಮ ತಳೆದವರು .ಸತ್ಯ ಧರ್ಮ ನ್ಯಾಯ,ಸನ್ಮಾರ್ಗದಲ್ಲಿ ನಡೆದು ಅಧರ್ಮ ನೆಲೆಯಾಗದಂತೆ ಧರ್ಮ ರಕ್ಷಣೆ ಮತ್ತು ಕಾಪಾಡುವ ಕಾರ್ಯ ಆಗಬೇಕಿದೆ .ನವರಾತ್ರಿಯ ವಿಶೇಷತೆ ಎಂದರೆ ಅಧರ್ಮ ನೆಲೆಯಾಗಿ ಧರ್ಮದ ರಕ್ಷಣೆಗಾಗಿ ದುರ್ಗೆ ನವ ರೂಪದಲ್ಲಿ ದುಷ್ಟ ಸಂಹಾರ ಮಾಡಿದ ಪುಣ್ಯ ಪರ್ವ ಕಾಲವೇ ಈ ನವರಾತ್ರಿ .ಶ್ರೀ ದುರ್ಗಾ ಮಾತೆಯನ್ನು ಭಕ್ತಿ ಮತ್ತು ಆರಾಧನೆಯ ಮೂಲಕ ಪೂಜಿಸಿದರೆ ಜೀವನದಲ್ಲಿ ಧರ್ಮದ ಹಾದಿಯಲ್ಲಿ ಮನ ಶಾಂತಿಯಿಂದ ಸಂತೃಪ್ತಿ ದೊರೆಯಲು ಸಾದ್ಯ ,ಉತ್ತಮ ಕಾರ್ಯಕ್ಕೆ ಪುಣ್ಯ ಪ್ರಾಪ್ತಿಯಾಗುವಂತೆ ,ನಮ್ಮ ಸಂಸ್ಕ್ರತಿಗೆ ದಕ್ಕೆ ಬಾರದಂತೆ ಪ್ರಕೃತಿಯ ಜೊತೆ ಗೂಡಿ ನಾವು ಮಾಡುವ ಈ ತೆನೆ ಹಬ್ಬ ನವರಾತ್ರಿಯ ಉತ್ಸವ ಮಹತ್ವದ್ದು .ಇಂದು ನಮ್ಮ ಅಸೋಸಿಯೇಷನ್ ವತಿಯಿಂದ ಶ್ರದ್ದಾ ಭಕ್ತಿಯಿಂದ ನಡೆದಿದೆ , ಅತಿಥಿ ಗಣ್ಯರ ಶುಭ ಹಿತ ನುಡಿ,ಆಶೀರ್ವಾದ ಸದಾ ನಮಗೆ ಪ್ರೇರಣೆಯಾಗಿರಲಿ, ತಾಯಿ ಭುವನೇಶ್ವರಿಯ ಆರಾಧನೆಯಿಂದ ನಮ್ಮೆಲ್ಲರ ಜೀವನದಲ್ಲಿ ಸನ್ಮಂಗಲವನ್ನು ತರಲಿ ,ಅಪಾರ ಸಂಖ್ಯೆಯಲ್ಲಿ ಸೇರಿದ ಸಮಾಜ ಭಾಂದವರ ಪ್ರೋತ್ಸಾಹ ಸದಾ ಇದೆ ರೀತಿ ಮುಂದುವರಿಯಲಿ ,ನಮ್ಮ ಸಂಸ್ಥೆಯ ಎಲ್ಲಾ ಸದಸ್ಯರ ಸಹಕಾರದಿಂದ ದುರ್ಗಾದೇವಿಯ ದಸರಾ ಪೂಜೆ ,ಸಾಂಪ್ರದಾಯಿಕ ತೆನೆಹಬ್ಬದ ಕಾರ್ಯಕ್ರಮ ಬಹಳ ಶಿಸ್ತು ಬದ್ದವಾಗಿ ನಡೆದಿದೆ ತಮಗೆಲ್ಲರಿಗೂ ಧನ್ಯವಾದಗಳು -ಶ್ರೀ ಗಣೇಶ್ ಹೆಗ್ಡೆ ಪುಣ್ಚೂರು-ಅಧ್ಯಕ್ಷರು ಬಂಟ್ಸ್ ಅಸೋಸಿಯೇಷನ್ ಪುಣೆ
ಹಿರಿಯರು ನೀಡಿದ ದೈರ್ಯ ,ಸಹಕಾರ ಪ್ರೋತ್ಸಾಹದಿಂದ ನಮ್ಮ ಪ್ರತಿಭೆಗೆ ಅನುಗುಣವಾಗಿ ಶಕ್ತಿ ಮತ್ತು ಯುಕ್ತಿಯಿಂದ ಶೂನ್ಯದಿಂದ ಮೇಲೆ ಬರಬಹುದು ಎಂಬುದಕ್ಕೆ ನಾನೇ ಉಅದಾಹರಣೆ .ಮಾನವಿಯತೆಯ ಸೇವೆ ಎಲ್ಲಿಯವರೆಗೆ ನಡೆಯುತ್ತದೆಯೋ ಅಲ್ಲಿ ಸತ್ಯ ಧರ್ಮ ನೆಲೆಯಾಗುತ್ತದೆ .ತಾನು ಬೆಳೆಯುವ ಜೊತೆಯಲ್ಲಿ ಇತರರನ್ನು ಬೆಳೆಸುವ ಮಾನವ
ಧರ್ಮ ನಮ್ಮಲ್ಲಿರಬೇಕು .ನಂಬಿಕೆ ಸತ್ಯ ,ಪ್ರಾಮಾಣಿಕತೆ ಯಿಂದ ನಡೆದರೆ ತಾನು ಬೆಳೆದರೆ ಸಮಾಜವು ನಮ್ಮನ್ನು ಪ್ರೀತಿಸುತ್ತದೆ .ಇಲ್ಲಿಯ ನಮ್ಮ ಸಂಸ್ಕ್ರತಿಯ ಕದಿರು ಕಟ್ಟುವ ಸಂಪ್ರದಾಯ,ದೇವಿಯ ಆರಾಧನೆ , ಪೂಜೆ ಪುರಸ್ಕಾರ ನೋಡಿ ಮನ ತುಂಬಿ ಬಂತು,ನಮ್ಮ ಬಂಟರು ಎಲ್ಲಿ ಹೋದರು ನಮ್ಮ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ರೀತಿ ಬಂಟ್ಸ್ ಅಸೋಸಿಯೇಷನ್ ಈ ಕಾರ್ಯಕ್ರಮದಲ್ಲಿ ನೋಡಿ ಸಂತೋಷವಾಯಿತು.ಇಲ್ಲಿಯವರ ಪ್ರೀತಿ ಅದಾರಾತಿಥಿತ್ಯಕ್ಕೆ ನಾನು ಸದಾ ಚಿರಋಣಿ ,ನನ್ನನ್ನು ಇಲ್ಲಿ ಕರೆದು ಸನ್ಮಾನಿಸಿ ಇಂತಹ ಕಾರ್ಯಕ್ರಮದಲ್ಲಿ ಅವಕಾಶ ನೀಡಿದಕ್ಕೆ ವಂದನೆಗಳು – ಶ್ರೀಮತಿ ವಂದನಾ ಜಿ ರೈ-ಖ್ಯಾತ ಶಿಕ್ಷಕಿ ಕಾರ್ಕಳ ,ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ .