ನಾನು ನನ್ನದು ಎಂಬ ಸ್ವಾರ್ಥವಿಲ್ಲದೇ ನಾವು ನಮ್ಮದು ಎಂಬ ಭಾವನೆ ಮೂಡಿಸುವ ಸಂಸ್ಥೆ ಚಿಣ್ಣರಬಿಂಬ- ಶೇಖರ್ ಪೂಜಾರಿ
ಮುಂಬಯಿ:- ಇನ್ನು ಮುಂದೆ ಚಿಣ್ಣರ ಬಿಂಬದ ಬಳಗದಲ್ಲಿ ನಾವೂ ಇರುತ್ತೇವೆ, ನಾವೂ ಕೂಡಾ ಚಿಣ್ಣರ ಬಿಂಬದ ಕುಟುಂಬದಂತೆ ನಾವೂ ನಿಮ್ಮ ಜೊತೆಗೆ ಇರುತ್ತೇವೆ. ಚಿಣ್ಣರ ಬಿಂಬ ಇದರ 2023-2024ನೇ ಸಾಲಿನ ಸಾಕಿನಾಕ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವು ಸೆಪ್ಟೆಂಬರ್ 3 ರಂದು ಭಾನುವಾರ ಮಧ್ಯಾಹ್ನ ಸಮತ ವಿದ್ಯಾ ಮಂದಿರ್
ಸಾಕಿನಾಕದಲ್ಲಿ ಸುಂದರವಾಗಿ ಜರುಗಿತು.
ಉದ್ಘಾಟಕರಾದ ರಾಜು ಮೆಂಡನ್, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೊತೆಯಲ್ಲಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಮುಖ್ಯ ಅತಿಥಿಯಾಗಿ ಆಗಮಿಸಿದ ದಿನೇಶ್ ದೇವಾಡಿಗ, ಕೇಂದ್ರ ಸಮಿತಿಯ ಸದಸ್ಯರಾದ ರಮೇಶ್ ರೈ, ಸವಿತಾ ಶೆಟ್ಟಿ, ಅನಿತಾ ಶೆಟ್ಟಿ, ವಲಯ ಮುಖ್ಯಸ್ಥೆ ದೇವಿಕಾ ಶೆಟ್ಟಿ, ರಾಜವರ್ಮ ಜೈನ್, ಶಿಬಿರ ಮುಖ್ಯಸ್ಥೆ ಉಷಾ ಶೇರುಗಾರ್ ವೇದಿಕೆಯಲ್ಲಿದ್ದರು.
ಚಿಣ್ಣರ ಬಿಂಬಕ್ಕೆ ಈಗ ಇಪ್ಪತ್ತು ವರುಷ ತುಂಬಿದೆ. ಚಿಣ್ಣರ ಬಿಂಬದ ಮಕ್ಕಳ ಪಾಲಕರು ಸ್ವ ಇಚ್ಛೆಯಿಂದ ಸ್ವಯಂಸೇವಕರಂತೆ ಕೆಲಸ ಮಾಡುತ್ತಾರೆ. ಆಗ ಅದೊಂದು ಕುಟುಂಬ ಆಗುತ್ತದೆ. ಅವರು ಆ ಕುಟುಂಬದ ಸದಸ್ಯರಾಗುತ್ತರೆ. ಪಾಲಕರು ತಮ್ಮ ಮಕ್ಕಳು ಒಳ್ಳೆಯ ರೀತಿಯಲ್ಲಿ ಬೆಳೆಯಲಿ ಎಂಬ ಸದುದ್ದೇಶದಿಂದ ಮಕ್ಕಳನ್ನು ನಮ್ಮ ಈ ಚಿಣ್ಣರ ಬಿಂಬ ಸಂಸ್ಥೆಗೆ ಸೇರಿಸುತ್ತಾರೆ. ಸಂಸ್ಥೆ ಮಕ್ಕಳಲ್ಲಿ ಸಭಾ ಕಂಪನ ದೂರವಾಗಲಿಯೆಂದು ಶಿಬಿರ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿ, ಅದರಲ್ಲಿ ವಿಜೇತರಾದವರನ್ನು ವಲಯ ಮಟ್ಟ, ನಂತರದ ದಿನಗಳಲ್ಲಿ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತರಬೇತಿ ನೀಡುವುದು ಚಿಣ್ಣರ ಬಿಂಬದ ವಿಶೇಷತೆಯಾಗಿದೆ. ಈ ಎಲ್ಲಾ ಸ್ಪರ್ಧೆಗಳ ಉದ್ದೇಶ, ತಾರುಣ್ಯದಲ್ಲಿ ನಮ್ಮ ಮಕ್ಕಳಿಗೆ ಇಂತಹ ವೇದಿಕೆ ಸಿಕ್ಕಿದರೆ, ನಮ್ಮ ಮಕ್ಕಳು ಮುಂದೆ, ಉತ್ತಮ ಭಾಷಣಕಾರರು, ಅಭಿನಯ ಹಾಗೂ ಒಳ್ಳೆಯ ಹಾಡುಗಾರರಾಗಬಹುದು ಎಂಬ ಆಶಯದಿಂದ ಚಿಣ್ಣರ ಬಿಂಬದ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದು ಚಿಣ್ಣರಬಬದ ರೂವಾರಿಗಳಾದ ಪ್ರಕಾಶ್ ಭಂಡಾರಿಯವರು ನುಡಿದರು.
ಉದ್ಘಾಟನಾ ಭಾಷಣ ಮಾಡಿದ ರಾಜು ಮೆಂಡನ್ ಅವರು ಇಂದಿನ ಪುಟಾಣಿಗಳು ಮುಂದಿನ ಪೀಳಿಗೆ. ಪಾಲಕರು ಮಕ್ಕಳಿಗಾಗಿ ತುಂಬಾ ಶ್ರಮಿಸುತ್ತಿದ್ದಾರೆ. ಗಿಡ ನೆಟ್ಟು ಬೆಳೆಸಲು ಎಷ್ಟು ಕಷ್ಟವಿದೆಯೋ, ಮಕ್ಕಳನ್ನು ಬೆಳೆಸುವುದು ಕೂಡಾ ಅಷ್ಟೇ ಕಷ್ಟ. ಮಕ್ಕಳ ಬೆಳವಣಿಗೆ ಮುಂದೆ ಪಾಲಕರಿಗೆ ಹೆಮ್ಮೆ, ಖುಷಿ ತರುತ್ತದೆ ಎಂದರು. ಪ್ರಕಾಶ್ ಭಂಡಾರಿಯವರು ಮುಂಬಯಿಯಲ್ಲಿ ಚಿಣ್ಣರ ಬಿಂಬದ ಹಲವಾರು ಶಿಬಿರಗಳನ್ನು ಆರಂಬಿಸಿ ಕರ್ನಾಟಕದ, ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಯನ್ನು ಬೆಳೆಸಲು ಸಹಕರಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದಂತಹ ಶೇಖರ್ ಪೂಜಾರಿಯವರು ನಾನು ನನ್ನದು ಎಂಬ ಸ್ವಾರ್ಥವಿಲ್ಲದೇ ನಾವು ನಮ್ಮದು ಎಂಬ ಭಾವನೆ ಮೂಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಅಂತಹ ಸಂಸ್ಥೆ ಈ ಚಿಣ್ಣರಬಿಂಬ.ಇನ್ನು ಮುಂದೆ ಚಿಣ್ಣರ ಬಿಂಬದ ಬಳಗದಲ್ಲಿ ನಾವೂ ಇರುತ್ತೇವೆ, ನಾವೂ ಕೂಡಾ ಚಿಣ್ಣರ ಬಿಂಬದ ಕುಟುಂಬ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿಯ ಸಾಕಿನಾಕ ಸದಾ ನಿಮ್ಮ ಜೊತೆಗಿರುತ್ತೇವೆ. ಎಂಬ ಹಿರಿದಾದ ಭರವಸೆಯನ್ನು ನೀಡಿದರು.
ಮುಖ್ಯ ಅತಿಥಿಗಳಾದ ದಿನೇಶ್ ದೇವಾಡಿಗ ವರು ಮಾತನಾಡುತ್ತ ಇಂಗ್ಲೀಷ್ ಮೀಡಿಯಂ ಮಕ್ಕಳ ಕನ್ನಡ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂತು. ನಿಮ್ಮ ಕಲಿಕೆ ತುಂಬಾ ಚೆನ್ನಾಗಿದೆ. ಪಾಲಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳ ಕಡೆಗೆ ಗಮನ ಹರಿಸಬೇಕು ಎಂದರು. ಮುಂದಿನ ನಿಮ್ಮ ಚಿಣ್ಣರ ಬಿಂಬದ ಈ ಭಾಗದ ಕಾರ್ಯಕ್ರಮವನ್ನು ನೇರಪ್ರಸಾರ ಮಾಡುವ ಜವಾಬ್ದಾರಿ ನನ್ನದು ಎಂದು ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.
ಚಿಣ್ಣರ ಬಿಂಬದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಪೂರ್ಣಿಮಾ ಶೆಟ್ಟಿಯವರು ಚಿಣ್ಣರ ಬಿಂಬದ ಮೂಲಕ ಮುಂಬಯಿಯಲ್ಲಿ ಕನ್ನಡದ ಹಬ್ಬ ನಡೆಯುತ್ತಿದೆ. ಈ ಸ್ಪರ್ಧೆಗಳಿಂದಾಗಿ ನಮ್ಮ ಮಕ್ಕಳು ಬೆಳೆಯುತ್ತಿದ್ದಾರೆ, ಸ್ಪರ್ಧೆಗೆ ಬಂದ ಅತಿಥಿಗಳಿಂದಾಗಿ ನಮ್ಮ ಚಿಣ್ಣರ ಬಿಂಬದ ಪರಿವಾರ ಬೆಳೆಯುತ್ತಿದೆ. ಒಂದು ಕಾರ್ಯಕ್ರಮವನ್ನು ಮಾಡುವುದು ಅಷ್ಟು ಸುಲಭವಲ್ಲ. ಪಾಲಕರ, ಶಿಕ್ಷಕರ, ಮಕ್ಕಳ ಪರಿಶ್ರಮ ತುಂಬಾ ಇರುವುದನ್ನು ಕಾಣಬಹುದು. ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುವ ಮಕ್ಕಳು ಕನ್ನಡದಲ್ಲಿ ಮಾತನಾಡುವಾಗ , ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ನೋಡಿ ಹೆಮ್ಮೆಯಾಗುತ್ತದೆ.
ಚಿಣ್ಣರ ಬಿಂಬ ಕಲಿಕೆ ಇಲ್ಲದೇ ಹೋಗಿದ್ದರೆ ಈ ಮಕ್ಕಳು ಇಷ್ಟೊಂದು ಚೆನ್ನಾಗಿ ಕನ್ನಡದಲ್ಲಿ ಓದಲು, ಬರೆಯಲು ಹಾಗೂ ಮಾತನಾಡಲು ಸಾಧ್ಯವಾಗುತ್ತಿರಲ್ಲಿಲ್ಲ. ನಮ್ಮ ಚಿಣ್ಣರ ಬಿಂಬದಲ್ಲಿ ಈಗ 5000 ಕ್ಕಿಂತಲೂ ಹೆಚ್ಚು ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ನಮ್ಮಲ್ಲಿ ಸ್ವಾರ್ಥವಿಲ್ಲ, ಜಾತಿ ಮತಗಳ ಬೇಧವಿಲ್ಲ ಎಂದು ಶುಭ ಹಾರೈಸಿದರು. ನಮ್ಮ ಉದಯವಾಣಿ, ಕರ್ನಾಟಕ ಮಲ್ಲ ಪತ್ರಿಕೆಗಳು ನಮ್ಮ ಈ ಚಿಣ್ಣರಬಿಂಬಕ್ಕೆ ಉತ್ತಮ ಪ್ರಚಾರವನ್ನು ನೀಡುತ್ತಿವೆ. ಅವರಿಗೆ ನಮ್ಮ ಕೃತಜ್ನತೆಗಳು ಎಂದು ನುಡಿದರು. ಕೇಂದ್ರ ಸಮಿತಿಯ ರಮೇಶ್ ರೈ ಅವರು ಮಾತನಾಡುತ್ತಾ ಪ್ರಕಾಶ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ 20 ವರುಷದ ಮೊದಲು ಪೇಜಾವರ ಮಠದಲ್ಲಿ 50 ಮಕ್ಕಳಿಂದ ಆರಂಭವಾದ ನಮ್ಮೀ ಚಿಣ್ಣರ ಬಿಂಬ
ಸಂಸ್ಥೆಯು ಇಂದು 25, 26 ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾಕಿನಾಕದಲ್ಲಿ ಮಕ್ಕಳಿಗೆ ಕಲಿಸಲು ಜಾಗದ ಸಮಸ್ಯೆ ತುಂಬಾ ಇತ್ತು. ಆದರೆ ಈಗ ಅನಿತಕ್ಕ, ಉಷಕ್ಕ ಪೂರ್ಣಿಮಕ್ಕ ಹಾಗೂ ರಾಜವರ್ಮಾ ಜೈನ್ ಇವರ ಸಹಯೋಗದಿಂದ ಆ ಸಮಸ್ಯೆ ಬಗೆ ಹರಿದಿದೆ. ಇಲ್ಲಿ ಯಾವ ಭೇದಭಾವವಿಲ್ಲ. ಪ್ರತಿಯೊಬ್ಬರೂ ನಿಸ್ವಾರ್ಥ ಭಾವನೆಯಿಂದ ದುಡಿಯುವರು. ಸಮಾಜದಲ್ಲಿ ಇತರರನ್ನು ಬೆಳೆಸಿದರೆ, ನಾವು ತನ್ನಷ್ಟಕ್ಕೆ ತಾನೇ ಬೆಳೆಯುತ್ತಾ ಹೋಗುತ್ತೇವೆ ಎಂದು ನುಡಿದರು. ಗೀತಾಂಬಿಕ ಶಿಬಿರದ ಆಗಿದ್ದ ಶ್ರಿಯುತ ಡಿ ಎಮ್ ಕೋಟ್ಯಾನ್ ರವರು ಮಾತನಾಡುತ್ತ ನಮ್ಮಲ್ಲಿ ವರ್ಷಗಳ ಕಾಲ ಚಿಣ್ಣರ ಬಿಂಬದ ತರಗತಿಗಳು ನಡೆಯುತ್ತಿದ್ದವು. ನನ್ನ ಮಕ್ಕಳು ಕೂಡಾ ಚಿಣ್ಣರ ಬಿಂಬದಲ್ಲಿಯೇ ಕನ್ನಡ ಕಲಿಯುತ್ತಿದ್ದರು ಎಂದರು. ಚಿಣ್ಣರ ಬಿಂಬ ಮಕ್ಕಳಿಗೆ ಶಿಸ್ತನ್ನು ಕಲಿಸುವ ದೇಗುಲ ಎಂದರು.
ತೀರ್ಪುಗಾರರಾದ ನಾಗರಾಜ್ ಗುರುಪುರ ಅವರು ಮಾತನಾಡುತ್ತಾ ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿದ್ದಾರೆ. ಪಾಲಕರೂ ಕೂಡಾ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಮಕ್ಕಳಿಗಾಗಿ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ಭಂ ಡಾರಿಯವರು ತುಂಬಾ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೇವರು ಆಯೂರಾರೋಗ್ಯ ನೀಡಿ ಕರುಣಿಸಲಿ ಎಂದು ಹಾರೈಸಿದರು. ಇನ್ನೋರ್ವ ತೀರ್ಪುಗಾರರಾದ ಸವಿತಾ ರತ್ನಾಕರ್ ಶೆಟ್ಟಿಯವರು ಮಾತನಾಡುತ್ತಾ ಮಕ್ಕಳ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂತು. ನನಗೆ ತುಂಬಾ ಖುಷಿಯಾಯಿತು. ಮುಂದೆ ಮಕ್ಕಳು ಇನ್ನಷ್ಟು ಪ್ರಗತಿ ಸಾಧಿಸಬಹುದು ಎಂದರು. ತನ್ನನ್ನು ಈ ಕಾರ್ಯಕ್ರಮಕ್ಕೆ ಕರೆದಿರುದಕ್ಕೆ ಧನ್ಯವಾದಗಳು ಎಂದರು.
ಹಲವಾರು ವರ್ಷಗಳಿಂದ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುತ್ತಿರುವ, ಎಸ್ ಎಂ ಶೆಟ್ಟಿ ಶಿಬಿರದ ಶಿಕ್ಷಕಿ ಶ್ರೀಮತಿ ಅನಿತಾ ಎಸ್ ಶೆಟ್ಟಿ ಅವರಿಗೆ ಶಾಲು ಹಾಕಿ, ಪುಷ್ಪ ಗುಚ್ಛ ನೀಡಿ ವಿಶೇಷವಾಗಿ ಗೌರವಿಸಲಾಯಿತು. ನಂತರ ಮಾಜಿ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಪುಷ್ಪಲತಾ ಗೌಡ, ಶಿಬಿರ ಮುಖ್ಯಸ್ಥೆ ಉಷಾ ಶೇರಿಗಾರ ಇವರನ್ನು ಗೌರವಿಸಲಾಯಿತು. ಉಮಾ ಮಹೇಶ್ವರಿ ಹಾಗೂ ಎಸ್ ಎಂ ಶೆಟ್ಟಿ ಪೋವಾಯಿ ಶಿಬಿರದಿಂದ ಆಗಮಿಸಿದ ಶಿಬಿರದ ಪದಾಧಿಕಾರಿಗಳಿಗೆ ಗೌರವಾರ್ಪಣೆ ಮಾಡಲಾಯಿತು, ಜೊತೆಗೆ ಪರಿಸರದ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಸಸಿ ನೀಡಿ ವೇದಿಕೆಯಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಜೀವ ಪೂಜಾರಿ, ಕೋಟ್ಯಾನ್, ರಾಜಾ ವರ್ಮ ಜೈನ್, ಶೋಭಾ ಶೆಟ್ಟಿ, ಸವಿತಾ ಶೆಟ್ಟಿ , ಅನಿತಾ ಶೆಟ್ಟಿ, ರಮೇಶ್ ರೈ, ಡಾ. ಪೂರ್ಣಿಮ ಶೆಟ್ಟಿ, ದೇವಿಕಾ ಶೆಟ್ಟಿ, ಉಷಾ ಶೇರುಗಾರ್, ಲತಾ ಶೆಟ್ಟಿ ಅವರು ಉಪಸ್ಥಿತರಿದ್ದರು.
ಅತಿಥಿಗಳ ಪರಿಚಯವನ್ನು ಗಣೇಶ್ ಶೇರುಗಾರ್, ಸ್ವಸ್ತಿಕ ಶೆಟ್ಟಿ ಹಾಗೂ ತ್ರಿಷಾ ಶೆಟ್ಟಿ ಅವರು ಮಾಡಿದರು. ದೃಷ್ಟಿ ಶೆಟ್ಟಿ, ಶ್ರೇಯಾ ಹೆಗ್ಡೆ, ಸನಿಹ ಶೆಟ್ಟಿ, ದಿಶಾ ಶೇರುಗಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರದ ಮಕ್ಕಳಾದ ದೀಪ್ತಿ, ತ್ರಿಷಾ ಶೆಟ್ಟಿ, ವರ್ಷ ಹೆಗ್ಡೆ , ರಿಯಾ ಹೆಗ್ಡೆ ಪ್ರಾರ್ಥನೆಯನ್ನು ಹಾಡಿದರು.
ಶಿಬಿರದ ಮಕ್ಕಳು ಒಟ್ಟಾಗಿ ಸುಂದರವಾಗಿ ಭಜನೆಯನ್ನು ಭಜಿಸಿದರು. ಸ್ವಾಗತ ಭಾಷಣವನ್ನು ಶಿಬಿರದ ಮುಖ್ಯಸ್ಥೆ ಉಷಾ ಶೇರುಗಾರ್ ಅವರು ಮಾಡಿದರು. ತೀರ್ಪುಗಾರರ ಪರಿಚಯವನ್ನು ಶಶಿ ಶೆಟ್ಟಿ, ಹಾಗೂ ಪುಷ್ಪಾ ಲತಾ ಗೌಡ ಅವರು ಮಾಡಿದರು. ಶಿಬಿರದ ಮಕ್ಕಳು ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನು ಮಾಡಿ ಎಲ್ಲರನ್ನು ಮನರಂಜಿಸಿದರು. ಫಲಿತಾಂಶ ಪ್ರಕಟಣೆ ಕಾರ್ಯಕ್ರಮವನ್ನು s m ಶೆಟ್ಟಿ ಶಿಬಿರದ ಮುಖ್ಯಸ್ಥೆ ಸುಜಾತ ಶೆಟ್ಟಿ ನಡೆಸಿಕೊಟ್ಟರು. ಸಾಂಸ್ಕೃತಿಕ ಮುಖ್ಯಸ್ಥೆ ಲತಾ ಶೆಟ್ಟಿ ಅವರು ಧನ್ಯವಾದ ಸಮರ್ಪಣೆ ಮಾಡಿದರು. ರಾಷ್ಟ್ರಗೀತೆಯನ್ನು ಹಾಡಲಾಯಿತು. ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ಮತ್ತು ಪಾಲಕರ ಹೆಸರು
ಛದ್ಮವೇಷ ಸ್ಪರ್ಧೆ
ಪ್ರಥಮ ಸ್ಥಾನ – ಶರಣ್ಯ ಹೆಗ್ಡೆ
ದ್ವಿತೀಯ ಸ್ಥಾನ – ಸಾತ್ವಿಕ್ ಶೆಟ್ಟಿ
ತೃತೀಯ ಸ್ಥಾನ – ದೈವೀಕ್ ಅಂಚನ್
ಜೂನಿಯರ್ ಭಾಷಣ
ಪ್ರಥಮ ಸ್ಥಾನ – ಗಿನ್ನೀಶ್ರೀ ಅಮೀನ್
ದ್ವಿತೀಯ ಸ್ಥಾನ – ಪ್ರತೀತಿ ಪೂಜಾರಿ
ತೃತೀಯ ಸ್ಥಾನ – ವರ್ಷಿತಾ ಬಿರಾದಾರ್
ಸೀನಿಯರ್ ಭಾಷಣ
ಪ್ರಥಮ ಸ್ಥಾನ – ತನುಶ್ರಿ ಅಮೀನ್
ದ್ವಿತೀಯ ಸ್ಥಾನ – ದೀಪ್ತಿ ಶೆಟ್ಟಿ
ತೃತೀಯ ಸ್ಥಾನ – ಶ್ರಾವ್ಯ ಕಾಂಚನ್
ಜೂನಿಯರ್ ಜಾನಪದ ಗೀತೆ
ಪ್ರಥಮ ಸ್ಥಾನ – ದೈವೀಕ್ ಅಂಚನ್
ದ್ವಿತೀಯ ಸ್ಥಾನ – ಪ್ರತೀತಿ ಪೂಜಾರಿ
ತೃತೀಯ ಸ್ಥಾನ – ಶರಣ್ಯ ಹೆಗ್ಡೆ
ಸೀನಿಯರ್ ಭಾವಗೀತೆ
ಪ್ರಥಮ ಸ್ಥಾನ – ಸ್ವಸ್ತಿಕ ಶೆಟ್ಟಿ
ದ್ವಿತೀಯ ಸ್ಥಾನ – ರಿಯಾ ಹೆಗ್ಡೆ
ತೃತೀಯ ಸ್ಥಾನ – ಇಶಾನ್ ಗೌಡ
ಏಕಪಾತ್ರಾಭಿನಯ
ಪ್ರಥಮ ಸ್ಥಾನ – ಶ್ರಾವ್ಯ ಕಾಂಚನ್
ದ್ವಿತೀಯ ಸ್ಥಾನ – ದೀಪ್ತಿ ಶೆಟ್ಟಿ
ತೃತೀಯ ಸ್ಥಾನ – ಅನ್ವಿಶ ಶೆಟ್ಟಿ
ಪಾಲಕರ ದೇಶಭಕ್ತಿ
ಪ್ರಥಮ ಸ್ಥಾನ – ನಾಗರಾಜ್ ಶೇರಿಗಾರ್
ದ್ವಿತೀಯ ಸ್ಥಾನ – ಸುಮನಾ ದೇವಾಡಿಗ
ತೃತೀಯ ಸ್ಥಾನ – ಶೋಭಾ ಶೆಟ್ಟಿ