ಕರ್ನಾಟಕ ಸರಕಾರದ ಅತ್ಯುನ್ನತ ಗೌರವಾನ್ವಿತ ಪ್ರಶಸ್ತಿ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಯನ್ನು ನವೆಂಬರ್ 1 ರಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹಿತ ರಾಜ್ಯದ ಗೌರವಾನ್ವಿತ ಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮುಂಬೈಗೆ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಮಾಜಿ ಜೊತೆ ಕಾರ್ಯದರ್ಶಿಯಾದ ಡಾ. ಪಿ ವಿ ಶೆಟ್ಟಿ ಶಿಮಂತೂರು ನಡಿಗುತ್ತು ಅವರನ್ನು ನವೆಂಬರ್ 2 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮತ್ತು ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಶಸ್ತಿಯೊಂದಿಗೆ ಮುಂಬೈಗೆ ಆಗಮಿಸಿದ ಡಾ. ಪಿ ವಿ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶಕೀಲಾ ಪಿ ಶೆಟ್ಟಿ ದಂಪತಿಯನ್ನು ಐಕಳ ಹರೀಶ್ ಶೆಟ್ಟಿಯವರು ಶಾಲು, ಮೈಸೂರು ಪೇಟ, ಬೃಹತ್ ಹೂವಿನ ಹಾರದೊಂದಿಗೆ ಅಭಿನಂದಿಸಿದರು. ಈ ಸಂದರ್ಭದಲ್ಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ನಿರ್ದೇಶಕರಾದ ಶಶಿಧರ ಕೆ ಶೆಟ್ಟಿ ಇನ್ನಂಜೆ, ಗಿರೀಶ್ ಶೆಟ್ಟಿ ತೆಳ್ಳಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಗುಣಪಾಲ್ ಶೆಟ್ಟಿ ಐಕಳ, ಡಾ. ಪಿ ವಿ ಶೆಟ್ಟಿಯವರ ಮಗಳು ಅನಿಷಾ ಪಿ ಶೆಚ್ಟಿ, ಶರ್ಮಿಳಾ ರಮಾನಾಥ ಪಯ್ಯಡೆ, ಗೌರವ್ ರಮಾನಾಥ ಪಯ್ಯಡೆ ಮತ್ತು ಧೀರಜ್ ಶೆಟ್ಟಿ ಉಪಸ್ಥಿತರಿದ್ದರು.

ಐಕಳ ಹರೀಶ್ ಶೆಟ್ಟಿಯವರು ಡಾ. ಪಿ ವಿ ಶೆಟ್ಟಿಯವರನ್ನು ಅಭಿನಂದಿಸಿ ಕರ್ನಾಟಕ ಸರಕಾರದ 2025ನೆಯ ಸಾಲಿನ ಪ್ರತಿಷ್ಠಿತ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” ಲಭಿಸಿರುವುದು ನಮಗೆಲ್ಲರಿಗೂ ಅತೀವ ಸಂತೋಷ ತಂದಿದೆ. ಓರ್ವ ಸಮಾಜ ಸೇವಕರಾಗಿ, ವೈದ್ಯರಾಗಿ, ಓರ್ವ ಉತ್ತಮ ಸಂಘಟಕರಾಗಿ, ಹೊಟೇಲು ಉದ್ಯಮಿಯಾಗಿ, ಕ್ರೀಡಾ ಮುಖ್ಯಸ್ಥರಾಗಿ, ಸಮಾಜ ಬಾಂಧವರ ಹಿತ ಚಿಂತಕರಾಗಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಕ್ರೀಡಾತ್ಮಕ ಚಟುವಟಿಕೆಗಳಿಂದ ತಮ್ಮ ಸೇವಾ ಕಾರ್ಯಗಳಿಗೆ ಸಂದ ಗೌರವವಾಗಿದೆ. ತಮ್ಮ ಸೇವಾ ವೈಖರಿಗಳು ಇತರರಿಗೂ ಮಾದರಿಯಾಗಲಿ. ತಾವು ನಂಬಿದ ಧೈವ ದೇವರ ಅನುಗ್ರಹ ತಮಗೆ ಸದಾ ಇರಲಿ. ಭವಿಷ್ಯದಲ್ಲಿ ಸಕಲೈಶ್ವರ್ಯ, ಆಯುರಾರೋಗ್ಯ ಭಾಗ್ಯದೊಂದಿಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ತಮಗೆ ಲಭಿಸಲಿ ಎಂದು ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.





































































































