ಮಂಗಳೂರಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು2022-23ನೇ ಸಾಲಿನ ಶೈಕ್ಷಣಿಕ ವರ್ಷದಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿ ಅತ್ಯುನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ 92ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ. ಬಿ. ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವನ್ನು ದಿನಾ0ಕ 05.11.2023ರ0ದು ಮ0ಗಳೂರಿನ ಶ್ರೀಮತಿ ಗೀತಾ ಎಸ್. ಯಂ. ಶೆಟ್ಟಿ ಸಭಾಭವನದಲ್ಲಿ ಜರಗಿಸಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟಕರಾದ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರುರವರನ್ನು ಮತ್ತು ಮುಖ್ಯ ಅತಿಥಿಯಾದ ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕರಾದ ಶ್ರೀ ಟಿ. ಪ್ರವೀಣ್ಚಂದ್ರ ಆಳ್ವರವರನ್ನು ಸನ್ಮಾನಿಸಲಾಯಿತುಮತ್ತು ಸಂಘದ ಮಂಗಳೂರು ಶಾಖೆಯ ಪಿಗ್ಮಿ ಸಂಗ್ರಾಹಕರಾದ ಖ್ಯಾತ ವೃಕ್ಷ ಪ್ರೇಮಿ ಶ್ರೀ ಮಾಧವ ಉಳ್ಳಾಲ್ರವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ, ಸಂಘವು ಕಳೆದ 6 ವರ್ಷಗಳಿಂದ ಸಿಬ್ಬಂದಿಗಳ ಮಕ್ಕಳಿಗೆ ಹಾಗೂ ಕಳೆದ ಸಾಲಿನಿಂದ ಸಂಘದ ಸದಸ್ಯರ ಮಕ್ಕಳಿಗೆ ಈ ಪ್ರತಿಭಾ ಪುರಸ್ಕಾರವನ್ನು ಸಂಘದ ಸ್ಥಾಪಕಾಧ್ಯಕ್ಷ ಕೆ. ಬಿ. ಜಯಪಾಲ ಶೆಟ್ಟಿಯವರ ಸ್ಮರಣಾರ್ಥ ನೀಡುತ್ತಿದೆ. ಸಂಘದ ಸ್ಥಾಪಕಾಧ್ಯಕ್ಷರ ನೆನಪನ್ನು ಅಜರಾಮರವಾಗಿ ಉಳಿಸಿಕೊಳ್ಳಲು ಹಾಗೂ ಸಂಘದ ಸದಸ್ಯರು ವ್ಯವಹರಿಸುವ ಸಂಸ್ಥೆಯನ್ನು ಅವರ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ನಮ್ಮದು. ಸಹಕಾರಿ ಸಂಸ್ಥೆಗಳುಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಉತ್ತಮ ಪ್ರಗತಿಯನ್ನು ಹೊಂದಿದೆ.ಸಹಕಾರಿ ಸಂಸ್ಥೆಗಳಲ್ಲಿ ಕೂಡಾ ಔದ್ಯೋಗಿಕವಾಗಿ ಉತ್ತಮ ಅವಕಾಶಗಳಿವೆ. ಶೈಕ್ಷಣಿಕ ಬದುಕಿನಲ್ಲಿ ಉತ್ತಮ ಸಾಧನೆಗೈದ ಈ ಎಲ್ಲಾ ಮಕ್ಕಳ ಮುಂದಿನ ಭವಿಷ್ಯವು ಉಜ್ವಲವಾಗಲಿ ಹಾಗೂ ಸಮಾಜಕ್ಕೆ ಇವರು ಉತ್ತಮ ಕೊಡುಗೆಗಳನ್ನು ನೀಡಿ ನಾಡಿಗೆ ಕೀರ್ತಿಯನ್ನು ತರಲಿ ಎಂದು ಹಾರೈಸಿದರು. ಮುಂದಿನ ದಿನಗಳಲ್ಲಿ ಪದವೀಧರ ವೃತ್ತಿಪರ ಕಾಲೇಜಿನ ವಿದ್ಯಾರ್ಥಿಗಳಿಗೆ ಕೂಡಾ ಈಪ್ರತಿಭಾ ಪುರಸ್ಕಾರವನ್ನು ವಿಸ್ತರಿಸಲಾಗುವುದು. ಸಂಘವುರೂ.900 ಕೋಟಿ ಮೀರಿದ ಒಟ್ಟು ವ್ಯವಹಾರದ ಮೈಲುಗಲ್ಲನ್ನು ದಾಟಿದ್ದು, ಸಂಘದ ಸದಸ್ಯರ ಸಹಕಾರದಿಂದ ಕಾರ್ಯಯೋಜನೆಯಂತೆ ರೂ.1000 ಕೋಟಿ ವ್ಯವಹಾರ ದಾಖಲಿಸುವತ್ತ ದೃಢ ಹೆಜ್ಜೆಯನ್ನಿಟ್ಟಿದೆ. ಪ್ರಸ್ತುತ ಅವಿಭಜಿತ ದ. ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ 25 ಶಾಖೆಗಳ ಮೂಲಕ ಸದಸ್ಯರಿಗೆ ಸೇವೆಯನ್ನು ನೀಡುತ್ತಿದ್ದು ಇನ್ನೂ 5 ಹೊಸ ಶಾಖೆಗಳನ್ನು ಶ್ರೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರುರವರು ಶ್ರೀ ರಾಮಕೃಷ್ಣ ಸಂಸ್ಥೆಯು ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಸ್ಥಾಪಕಾಧ್ಯಕ್ಷರ ಧ್ಯೇಯ ಮತ್ತು ಉದ್ದೇಶಗಳನ್ನು ಹಾಲಿ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾದ ಮಕ್ಕಳು ಇನ್ನೂ ಉನ್ನತ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾದ ಶ್ರೀ ಟಿ. ಪ್ರವೀಣ್ಚಂದ್ರ ಆಳ್ವರವರು ದ. ಕ. ಜಿಲ್ಲೆಯು ಬ್ಯಾಂಕಿಂಗ್ ಕ್ಷೇತ್ರದ ತವರೂರು. ಶ್ರೀ ರಾಮಕೃಷ್ಣ ಸೊಸೈಟಿಯು ಶ್ರೀ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಒಳ್ಳೆಯ ಕೀರ್ತಿಯನ್ನು ಗಳಿಸುತ್ತಿದೆ ಹಾಗೂ ನಿರ್ದೇಶಕರುಗಳು ಕೂಡಾ ಉತ್ತಮ ಸಹಕಾರವನ್ನು ನೀಡುತ್ತಿದ್ದಾರೆ. ನಮ್ಮದು ಬುದ್ಧಿವಂತರ ಜಿಲ್ಲೆ ಎಂದೇ ಪ್ರಸಿದ್ಧಿಯಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಈ ಕೆಲಸಕ್ಕೆ ಅಭಿನಂದನೆಯನ್ನು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಖ್ಯಾತ ಪರಿಸರ ಪ್ರೇಮಿ ಶ್ರೀ ಮಾಧವ ಉಳ್ಳಾಲ್ರವರು ಸಂಘವು ನನಗೆ ಬದುಕು ಕಟ್ಟಿಕೊಟ್ಟಿದೆ. ಪಿಗ್ಮಿ ಸಂಗ್ರಹಣೆಯಿಂದ ದೊರಕಿರುವ ಆದಾಯದ ಒಂದಂಶವನ್ನು ಗಿಡಗಳ ಪೋಷಣೆಗೆ ಬಳಸುತ್ತಿದ್ದೇನೆ. ಸಂಘಕ್ಕೆ ನಾನು ಸದಾಚಿರಋಣಿ ಎಂದರು.
ನಿರ್ದೇಶಕರಾದ ಶ್ರೀ ಕೆ. ಸೀತಾರಾಮ ರೈ ಸವಣೂರುರವರು ಸ್ವಾಗತಿಸಿದರು.ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಶುಭ ಸಂದೇಶವನ್ನು ವಾಚಿಸಲಾಯಿತು. ಸಂಘದ ನಿರ್ದೇಶಕರಾದ ಶ್ರೀ ಪಿ. ಶಿವರಾಮ ಅಡ್ಯಂತಾಯ, ಶ್ರೀ ವಿಠಲ ಪಿ. ಶೆಟ್ಟಿ, ಶ್ರೀ ಯಂ ರಾಮಯ ಶೆಟ್ಟಿ, ಶ್ರೀ ಅರುಣ್ ಕುಮಾರ್ ಶೆಟ್ಟಿ, ಶ್ರೀ ಪಿ. ಬಿ. ದಿವಾಕರ ರೈ, ಶ್ರೀ ರವೀಂದ್ರನಾಥ ಜಿ. ಹೆಗ್ಡೆ, ಶ್ರೀ ಕುಂಬ್ರ ದಯಾಕರ ಆಳ್ವ ಮತ್ತು ಅರಿಯಡ್ಕ ಚಿಕ್ಕಪ್ಪ ನಾೈಕ್, ಮಹಾಪ್ರಬಂಧಕರಾದ ಶ್ರೀ ಗಣೇಶ್ ಜಿ.ಕೆ.ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವೈಷ್ಣವಿ,ಅದಿತಿ ಭಂಡಾರಿ ಮತ್ತು ಮಂಜುನಾಥ್ ರೈ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಿಬ್ಬಂದಿಗಳಾದ ಶ್ರೀಲಕ್ಷ್ಮಿ, ಸೌಮ್ಯ ರಾಣಿ ಮತ್ತು ಸನಿಹ ಶೆಟ್ಟಿಯವರು ಪ್ರಾರ್ಥಿಸಿದರು. ನಿರ್ದೇಶಕರಾದ ಶ್ರೀ ಪಿ. ಬಿ. ದಿವಾಕರ ರೈಯವರು ಧನ್ಯವಾದ ಸಮರ್ಪಿಸಿದರು. ಆರ್.ಜೆ. ಶ್ರೀ ಅಭಿಷೇಕ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.