ಸಮಾಜ ಬಾಂಧವ ಬಡವರ ಆಶಾಕಿರಣ ಆದರಣೀಯ ಶ್ರೀ ಕೆ.ಪ್ರಕಾಶ್ ಶೆಟ್ಟಿ ಅವರು ಡಿಸೆಂಬರ್ 25ರಂದು ಅಪರಾಹ್ನ 3 ಘಂಟೆಗೆ ಮಂಗಳೂರು ಗೋಲ್ಡ್ ಪಿಂಚ್ ಸಿಟಿ ಇಲ್ಲಿ ತನ್ನ ಧರ್ಮಪತ್ನಿಯ ಹೆಸರಿನಲ್ಲಿ ಆರಂಭಿಸಿದ ಬಡಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವ ಉದಾತ್ತ ಮಾನವೀಯ ಕಾರ್ಯಕ್ರಮವೊಂದನ್ನು ಆಯೋಜಿಸಲಿದ್ದು ಪ್ರತಿ ವರ್ಷದಂತೆ ಈ ಸಲವೂ ಸಾವಿರ ಕುಟುಂಬಗಳಿಗೂ ಹೆಚ್ಚು ಫಲಾನುಭವಿಗಳು ಈ ಅರ್ಥ ಪೂರ್ಣ ಕಾರ್ಯಕ್ರಮದ ಲಾಭ ಪಡೆಯಲಿದ್ದಾರೆ.
ಈ ಸಮಾಜಮುಖಿ ಕಾರ್ಯಕ್ರಮ ಸಂಭ್ರಮದಲ್ಲಿ ಹೆಸರಾಂತ ಚಿತ್ರ ನಟ ನಿರ್ದೇಶಕ ಹಾಗೂ ಜನಪರ ಚಿಂತನೆಯ ಕಾರ್ಯಕ್ರಮ ಸಂಯೋಜಕ ಶ್ರೀ ರಮೇಶ್ ಅರವಿಂದ್ ಅಧ್ಯಕ್ಷತೆ ವಹಿಸಿ ಕೊಳ್ಳಲಿದ್ದು ಉಳಿದಂತೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ್ ಎಂ ಆಳ್ವ ಕಾಪು ಕ್ಷೇತ್ರದ ಜನಾನುರಾಗಿ ಶಾಸಕ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಎಂ.ಆರ್.ಜಿ ಗ್ರೂಪಿನ ಆಡಳಿತ ನಿರ್ದೇಶಕ ಶ್ರೀ ಗೌರವ್ ಪಿ ಶೆಟ್ಟಿ ಇವರು ಆಹ್ವಾನಿತ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವರ್ಷಂಪ್ರತಿ ನಡೆಯುವ ಈ ಸೇವಾಯಜ್ಞದಲ್ಲಿ ಪ್ರಕಾಶ್ ಶೆಟ್ಟಿ ಅವರು ಸಮಾಜದ ಅಶಕ್ತರು ಹಾಗೂ ಇತರ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಕಷ್ಟಗಳಿಗೆ ಸ್ಪಂದಿಸಲಿದ್ದು ನಗರದಲ್ಲಿ ನಡೆಯುವ ವಿಶಿಷ್ಟವೂ ಸರ್ವ ಜನಾದರಣೀಯವೂ ಆಗಿದ್ದು ಒಬ್ಬ ಉದ್ಯಮಿಯ ಮಾನವಾಂತಕರಣದ ಉದಾಹರಣೆಯಾಗಿದೆ ಎಂದು ಜನ ಸಾಮಾನ್ಯರು ಶ್ಲಾಘಿಸುತ್ತಿದ್ದಾರೆ. ಆರ್ಥಿಕವಾಗಿ ಸಬಲರಾಗಿರುವವರು ಸಮಾಜದ ನತದೃಷ್ಟ ಬಂಧುಗಳಿಗೆ ನೀಡುವ ಈ ಸಹಾಯ ಹಸ್ತ ಇತರರಿಗೆ ಮಾದರಿಯಾಗಬೇಕೆಂದು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.