
ಯುವ ಬಂಟರ ಸಂಘ ಮೂಡುಬಿದಿರೆಯ ಪ್ರಥಮ ಪದಾಧಿಕಾರಿಗಳ ಸಭೆಯು ನೂತನ ಅಧ್ಯಕ್ಷ ಬೆಳುವಾಯಿ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜೂನ್ 21 ರಂದು ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆಯಿತು. ಶರತ್ ಶೆಟ್ಟಿಯವರು ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಪದಾಧಿಕಾರಿಗಳನ್ನು ಸ್ವಾಗತಿಸಿದರು. ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿಯವರು ಪ್ರಾಸ್ತವಿಕವಾಗಿ ಮಾತನಾಡಿ, ಅವರ ಅಧ್ಯಕ್ಷ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳನ್ನು ವಿವರಿಸಿದರು ಹಾಗೂ ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದರು.



ಗೌರವಾಧ್ಯಕ್ಷರಾದ ವಿವೇಕ್ ಆಳ್ವರವರು ಮಾತನಾಡಿ, ಅನೇಕ ಸಲಹೆ ಸೂಚನೆಯನ್ನು ನೀಡಿದರು ಅದರಲ್ಲಿ ಮುಖ್ಯವಾಗಿ ಗ್ರಾಮ ಸಮಿತಿ ರಚಿಸಬೇಕೆಂದು ತಿಳಿಸಿದರು. ಪ್ರತೀ ಗ್ರಾಮದ ಯುವಕ ಯುವತಿಯರನ್ನು ಯುವ ಬಂಟರ ಸಂಘಕ್ಕೆ ಸದಸ್ಯರನ್ನಾಗಿ ಮಾಡಬೇಕೆಂದು ಹೇಳಿದರು. ಗೂಗಲ್ ಫಾರಂನ ಮುಖಾಂತರ ಎಲ್ಲಾ ಮಾಹಿತಿಯನ್ನು ನೀಡಿ ಸದಸ್ಯರಾಗಬೇಕೆಂದು ತಿಳಿಸಿದರು. ಗೌರವ ಸಲಹೆಗಾರರಾದ ಮಿಥುನ್ ಶೆಟ್ಟಿ, ಮನೋಜ್ ಶೆಟ್ಟಿ, ಅರುಣ್ ಶೆಟ್ಟಿ ವಾಲ್ಪಾಡಿ, ಉಪಾಧ್ಯಕ್ಷ ಸಂದೀಪ್ ಶೆಟ್ಟಿ ತೋಡಾರು, ಖಜಾಂಜಿ ಭರತ್ ಶೆಟ್ಟಿ, ಕಾನೂನು ಸಲಹೆಗಾರರಾದ ಯೋಗೀಶ್ ಶೆಟ್ಟಿಯವರು ಅನೇಕ ಸಲಹೆಯನ್ನು ನೀಡಿದರು.
ಗ್ರಾಮ ಸಮಿತಿ ಜವಾಬ್ದಾರಿಯ ಪಟ್ಟಿಯನ್ನು ಅಧ್ಯಕ್ಷರಾದ ಬೆಳುವಾಯಿ ಸಂದೀಪ್ ಶೆಟ್ಟಿಯವರು ಸಭೆಗೆ ತಿಳಿಸಿದರು. ವಿವೇಕ್ ಆಳ್ವ ಅವರು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬೆದ್ರರವರು ಪ್ರಥಮ ಪದಾಧಿಕಾರಿಗಳ ಸಭೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.





























































































































