Author: admin

ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ‘ಬಂಟ ಕಲಾ ಸಂಭ್ರಮ” ಆದಿತ್ಯವಾರ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದ ಗಣೇಶೋತ್ಸವದ ವೇದಿಕೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಸಮಾಜದ ಸಂಘಟನೆಗೆ ಬಂಟ ಕಲಾ ಸಂಭ್ರಮದಂತಹ ಕಾರ್ಯಕ್ರಮ ಪೂರಕವಾಗಿರುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಸುಮಾರು 16 ತಂಡಗಳು ಭಾಗವಹಿಸುತ್ತಿದೆ. ಇಂತಹ ಸ್ಪರ್ಧೆಯಿಂದ ಎಲ್ಲಾ ಸಂಘಗಳು ಸಕ್ರಿಯವಾಗುತ್ತದೆ. ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಒಳ್ಳೆಯ ವೇದಿಕೆ. ಬಂಟ ಕಲಾ ಸಂಭ್ರಮ ಶಿಸ್ತುಬದ್ಧವಾಗಿ ಆಯೋಜನೆಗೊಂಡಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿರುವುದು ಬಂಟರ ಸಂಘದ ಹಿರಿಮೆಯಾಗಿದೆ. ಬಂಟರ ಮಾತೃ ಸಂಘದ ಅಡಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅತೀವ ಸಂತಸ ತಂದಿದೆ.…

Read More

ತುಳುವ ತಿರಿತ ಸಿರಿ ಪಜಿತೊಂದು ಪೋಯಿಲೆಕೊನೇ ಒಂಜೆತ ಬೆರಿಕ್ಕೊಂಜಿ ದಿಂಜಿ ಪೊಸತನ ಅರಲೊಂದು ನೆಗತೊಂದು ಬರ್ಪುಂಡು. ಅರಲಿ ಸಿರಿಮುಡಿತುಲಯಿಡ್ದ್ ಪಸರು ಕಮ್ಮೆನ ನಾಲೂರ ಮೂಂಕುಗೆಡ್ತ್‌ದ್, ಕೆಬಿ ಅರಲಾದ್, ತುಳುವ ಸೀಮೆದಂಚೊರ ಕಣ್ಣ್ ಹಾಸ್‌ದ್, ಕಾರ್ ಒಯ್ತೊಂದು ಬರ್ಪಿಲೆಕ ಮಲ್ಪುಂಡು. ಅತ್ತಂದೆ ಮರಪಂದಿ ನೆಂಪುದ ಮಾಲೆನ್ ಕೋತ್ ಕಡಪುಡುಂಡು ಪನ್ಪಿನೆಕ್ ಸಾಕ್ಷಿಯಾದ್ ಪಿದಯಿ ಊರುದಕ್ಲ್ ನಮ್ಮಾಡೆ ಬಿನ್ನೆರಾದ್ ಬತ್ತ್, ಬಿಕ್ಕೆರಾದ್ ಇತ್ತ್, ಮುಲ್ತ ಸಿರಿ ಸೊಬಗ್‌ನ್ ಅನುಭವಿತ್, ನೆಲಮೂಲೊದ ಐಸ್ರೊನು ತೆರಿದ್, ಅಕ್ಲೆಕ್ಲೆನ ದೇಸೊಡು, ಅಕ್ಲಕ್ಲೆನ ಬಾಸೆಡ್ ಮುಲ್ತ ಐಸಿರಿ ಐಭೋಗೊನು ಪುಗರ್‌ದ್ ವರ್ಣಿತ್‌ದ್ ಬರೆದ್ ಒರಿತ್‌ನವೇ ನೆಗತ್ ತೋಜುಂಡು. ಪರದೇಸೊ ಪರ ಊರುದಕ್ಲೆನ್ ಮರ್ಲ್ ಮಲ್ಪಿ ತುಳುವ ಪೋಕುಡು ಒಂಜಾತ್ ಆಚರಿಪುಲು, ಒಂಜಾತ್ ಪರ್ಬೊಲುಲಾ ಉಲ್ಲೊ. ಪಗ್ಗುದ ಬಿಸುಕಣಿಡ್ದ್ ಸುಗ್ಗಿದ ಕಡೆಮುಟ್ಟ ಒಂಜೆಕ್ಕೊಂಜಿ ಒತ್ತು ಕೊರೊಂದು ಬರ್ಪಿ ಪರ್ಬೊಲೆನ ಆಚರಿಪುದೊಟ್ಟು ಅಯಿಕ್ಕ್ ಸರಿಯಾಯಿ ತೆನಸಮಾಲಿಕೆಲಾ ಉಂಡು. ಪತ್ತನಾಜೆ ಪರ್ಬೊಲೆಗ್ ಗಿಡ್ಕ್ ಅಡೆತ್ತ್ ಬೆನ್ನಿ ಬೇಲೆದಂಚಿ ಮೋನೆ ಪಾಡ್ದ್ ಬೆನ್ನಿದ ಒಂಜಿ ಮೊಟ್ಟುದ…

Read More

ಪೂಜ್ಯ ಪದ್ಮವಿಭೂಷಣ ಡಾl ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಕ್ಯವನ ಪರಿಕಾ ಪರ್ಕಳದಲ್ಲಿ ಆಯೋಜಿಸಲಾದ “9ನೇ ವಿಶ್ವ ಯೋಗ ದಿನಾಚರಣೆ” ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ಶ್ರೀ ಧರ್ಮಸ್ಥಳ ಶಾಂತಿವನ ಟ್ರಸ್ಟ್ (ರಿ.) ಕಾರ್ಯದರ್ಶಿಗಳಾದ ಬಿ. ಸೀತಾರಾಮ್ ತೋಳ್ಪಡಿತ್ತಾಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಕ್ಯವನದ ಮುಖ್ಯ ವೈದ್ಯಕೀಯ ಅಧಿಕಾರಿಗಳಾದ ಗೋಪಾಲ್ ಪೂಜಾರಿ, ರೆಸಿಡೆಂಟಲ್ ವೈದ್ಯಕೀಯ ಅಧಿಕಾರಿಗಳಾದ ಶೋಭಿತ್ ಶೆಟ್ಟಿ ಉಪಸ್ಥಿತರಿದ್ದರು.

Read More

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾ. 21 ಮತ್ತು 22ರಂದು ಜರಗಲಿರುವ ಸುಗ್ಗಿ ಮಾರಿಪೂಜೆಯ ಸಂದರ್ಭದಲ್ಲಿ ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಯ ಗರ್ಭಗುಡಿ ನಿರ್ಮಾಣಕ್ಕೆ ಬಳಸುವ ಶಿಲಾ ಸೇವೆ ಸಮರ್ಪಣೆಗೆ ಅವಕಾಶ ಒದಗಿಸಲಾಗಿದೆ. ಇಳಕಲ್‌ ಕೆಂಪು ಶಿಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಥಮ ಹಂತದಲ್ಲಿ ನಡೆಯುತ್ತಿರುವ ಗರ್ಭಗುಡಿ ಮತ್ತು ಸುತ್ತುಪೌಳಿ ನಿರ್ಮಾಣ ಸಹಿತ ವಿವಿಧ ಜೀರ್ಣೋದ್ದಾರ ಕಾರ್ಯಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಎರಡು ವರ್ಷಗಳಿಂದ ಭಕ್ತರಿಂದ ನಿರಂತರ ಶಿಲಾ ಸೇವೆ – ಶಿಲಾ ಪುಷ್ಪ ಸಮರ್ಪಣ ಕಾರ್ಯಕ್ರಮ ನಡೆಯುತ್ತಿದೆ. ಒಂದು ಶಿಲಾ ಸೇವೆಗೆ 999 ರೂ., 9 ಶಿಲಾ ಸೇವೆಗೆ 9,999 ರೂ., 99 ಶಿಲಾಸೇವೆಗೆ 99,999 ರೂ., 999 ಶಿಲಾ ಸೇವೆಗೆ 9,99,999 ರೂ., 9,999 ಶಿಲಾ ಸೇವೆಗೆ 99,99,999 ರೂ. ನಿಗದಿ ಪಡಿಸಲಾಗಿದ್ದು 9ಕ್ಕಿಂತ ಹೆಚ್ಚಿನ ಶಿಲಾ ಸೇವೆ ಸಮರ್ಪಿಸುವ ಭಕ್ತರನ್ನು ಕಾಪುವಿನ ಅಮ್ಮನ ಭಕ್ತರು ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿಲಾ…

Read More

ಮುಂಬಯಿ, ಮಾ.05:ತೋನ್ಸೆ ಜನರು ಉದಾತ್ತ ಕೊಡುಗೈದಾನಿಗಳಾಗಿದ್ದು ಇಂದು ವಿಶ್ವಮಾನ್ಯರಾಗಿದ್ದಾರೆ. ಉತ್ಕೃಷ್ಟ ನಿಸ್ವಾರ್ಥ ಸೇವೆಗೆ ತೋನ್ಸೆ ಜನತೆ ಮಾದರಿ ಆಗಿದ್ದಾರೆ. ಬಿಲ್ಲವರ ಹಸ್ತಗಳನ್ನು ಸೇರಿ ಅಭಿವೃದ್ಧಿ ಕಂಡ ಸರ್ವೋತ್ಕೃಷ್ಟ ಗರಡಿಗಳಲ್ಲೊಂದಾಗಿದ್ದು ಇಂದು ತೋನ್ಸೆ ಗರಡಿ ಸಾಮರಸ್ಯದ ತಾಣವಾಗಿ ಬೆಳೆದಿದೆ. ವಿಸ್ವಸ್ಥ ಜನರÀ ಕೈಯಲ್ಲಿ ಸಾರಥ್ಯ ನೀಡಿದಾಗ ಗರಡಿಗಳ ಸರ್ವೋಭಿವೃದ್ಧಿ ಸಾಧ್ಯವಾಗುವುದು ಅನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಗರೋಡಿ ಹೆಸರಲ್ಲಿ ಮುಂಬಯಿನಲ್ಲಿ ಮೇಲ್ಫಂಕ್ತಿತಲ್ಲಿರುವ ಟ್ರಸ್ಟ್ ತೋನ್ಸೆಯ ಸಮನ್ವಯದ ಸಂಭ್ರಮವಾಗಿಸಿದ ಈ ಕಾರ್ಯಕ್ರಮ ಪರಿಪೂರ್ಣತೆ ಕಂಡಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ತಿಳಿಸಿದರು. ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಸಮಿತಿ ತನ್ನ 14ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಾಕ್ರೂಸ್ ಪೂರ್ವದ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ರಚಿತ ತೋನ್ಸೆ ಶಾನ್‍ಬೋಗ್ ದಿ| ಬಾಬು ಎನ್.ಶೆಟ್ಟಿ ವೇದಿಕೆಯಲ್ಲಿ ಅದ್ದೂರಿಯಾಗಿ ಸಂಭ್ರಮಿಸಿದ್ದು ಮುಖ್ಯ ಅತಿಥಿಯಾಗಿದ್ದು ಸಮಾರಂಭವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಜಯಕೃಷ್ಣ…

Read More

ಯಕ್ಷಗಾನ ರಂಗದಲ್ಲಿ ಅದ್ವಿತೀಯರು. ಬಲಿಪ ಪರಂಪರೆಯ ಹಿರಿಯ ಕೊಂಡಿ. ನಾರಾಯಣ ಭಾಗವತರು ಪದಲೀನವಾಗುವ ಮೂಲಕ ತೆಂಕುತಿಟ್ಟಿನ ಪರಂಪರೆಯಲ್ಲಿ ಅಂತರ ಮೂಡಿದೆ. ಹಿಮ್ಮೇಳದ ಭೀಷ್ಮರಾಗಿದ್ದ ಬಲಿಪರು ಗಾನಯಾನದ ಜತೆಗೆ ಬದುಕಿನ ಯಾನಕ್ಕೂ ಮಂಗಲ ಹಾಕಿದ್ದಾರೆ. ಏರು ಪದ್ಯ ಗ ಳಿಂದಲೇ ಪ್ರಸಿದ್ಧಿ ಪಡೆದ ಯಕ್ಷ ಗಾ ನದ ಮುಕು ಟದ ಮಣಿ. ಪರಂಪರೆಯನ್ನು ಸರ್ವತಾ ಉಳಿಸಿಕೊಂಡಿದ್ದ ಮತ್ತು ಉಳಿಸಲು ಶ್ರಮಿಸಿದ ಭಾಗವತಶ್ರೇಷ್ಠರು. “ಬಲಿಪ” ಮನೆತನವೆಂದರೆ ಭಾಗವತರ ಮನೆ ಎಂದೇ ಖ್ಯಾತಿ. ಇವರ ಅಜ್ಜ ದಿ. ಬಲಿಪ ನಾರಾಯಣ ಭಾಗವತರು ( ಅಂದಿನ ಹಿರಿಯ ಬಲಿಪರು ) ಯಕ್ಷರಂಗದಲ್ಲಿ ಮೆರೆದ ದೊಡ್ಡ ಹೆಸರು. ತಮ್ಮ ಅಪಾರ ಸಾಧನೆಯಿಂದ “ಬಲಿಪ ಮಟ್ಟು’ ಎಂಬ ಶೆ„ಲಿಯನ್ನು ಹುಟ್ಟು ಹಾಕಿದ ಭಾಗವತ ಪಿತಾಮಹ. ತಮ್ಮ ಅಜ್ಜನಲ್ಲಿ ಹಾಗೂ ತಂದೆಯವರಲ್ಲಿ ಭಾಗವತಿಕೆ ಕಲಿತ ಪುಟ್ಟ ಬಾಲಕ ನಾರಾಯಣ, ಮುಂದೆ ತಮ್ಮ ಅಜ್ಜನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, 13ನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿದ ಅವರು ತಮ್ಮ ಅಜ್ಜನ “ಬಲಿಪ ಶೈಲಿ ‘ಯನ್ನೇ…

Read More

ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ “ಹಡಿಲು ಭೂಮಿ ಕೃಷಿ ಅಂದೋಲನ” ನಡೆಸಿ ಹಡಿಲು ಬಿಟ್ಟ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಮಾಡಿ ಬೆಳೆದಿರುವ ಭತ್ತದಿಂದ ಉತ್ಪಾದಿಸಿದ ಸಂಪೂರ್ಣ ಸಾವಯವ ಕುಚ್ಚಲಕ್ಕಿ “ಉಡುಪಿ ಕೇದಾರ ಕಜೆ” ಮಹಾರಾಷ್ಟ್ರದ ಪುಣೆಯಲ್ಲಿ ಡಿ. 17 ರಂದು ಮಾರುಕಟ್ಟೆ ಬಿಡುಗಡೆ ಮಾಡಲಾಗುವುದು. “ಉಡುಪಿ ಕೇದಾರ ಕಜೆ” ಕುಚ್ಚಲಕ್ಕಿ ಮಹಾರಾಷ್ಟ್ರದ ಪುಣೆಯಲ್ಲಿ ಬಿಡುಗಡೆ ಮಾಡುವ ಸಂಬಂಧ ಇಂದು ದಿನಾಂಕ 07-12-2022 ರಂದು ಪುಣೆಯ ವಿವಿಧ ಸಂಘ ಸಂಸ್ಥೆಯವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ಸಭೆ ನಡೆಸಿ ಪೂರ್ವ ತಯಾರಿಯ ಬಗ್ಗೆ ಚರ್ಚಿಸಿದರು. ರೈತರಿಗೆ ಪ್ರೋತ್ಸಾಹ ನೀಡಬೇಕು. ಎಲ್ಲರೂ ಕೃಷಿ ಮಾಡುವಂತೆ ಪ್ರೇರೇಪಿಸಬೇಕು ಎಂಬ ಉದ್ದೇಶದಿಂದ ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಮುನ್ನಡಿಯಿಟ್ಟಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ “ಹಡಿಲು ಭೂಮಿ ಕೃಷಿ ಅಂದೋಲನ” ಮಾಡಿ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಿ ಬೆಳೆದಿರುವ ಭತ್ತದಿಂದ ಉತ್ಪಾದಿಸಿದ ಸಂಪೂರ್ಣ ಸಾವಯುವ ಕುಚ್ಚಲಕ್ಕಿಯನ್ನು ಉಡುಪಿ…

Read More

ನಮ್ಮ ಬದುಕು ಗಿಡಮರಗಳಿಂದ ಅರಳಿದೆ ಹಿರಿಯರು ಮಕ್ಕಳಿಗೆ ಗಿಡಮರಗಳ ಅಗತ್ಯತೆ ಬಗ್ಗೆ ತಿಳಿಸಿದಲ್ಲಿ ಅವರ ಅತ್ಮಸ್ಥೆರ್ಯ ಹೆಚ್ಚುತ್ತದೆ ಎಂದು ಮಂಗಳೂರು ವಲಯಾ ಅರಣ್ಯಾಧಿಕಾರಿ ಪಿ ಶ್ರೀಧರ್ ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ನಡೆದ ಸುರತ್ಕಲ್ ಬಂಟರ ಸಂಘದ ವತಿಯಿಂದ ಮಹತ್ವಾಕಾಂಕ್ಷೆ ಯೋಜನೆಯಾದ ಮನೆಗೊಂದು ಮರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ಕಾಲಘಟ್ಟದಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಸಂಧರ್ಭದಲ್ಲಿ ಗಿಡಮರಗಳನ್ನು ಹೆಚ್ಚು ಬೆಳೆಸುವುದು ಅತೀ ಅಗತ್ಯ ಇಲ್ಲವಾದಲ್ಲಿ ಮುಂದೆ ನಾವು ಸ್ವಚ್ಛ ಗಾಳಿ ಉಸಿರಾಡುವುದು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಬಂಟರ ಸಂಘವು ಮನೆಗೊಂದು ಮರ ಕಾರ್ಯ ಕ್ರಮ ಹಮ್ಮಿಕೊಂಡದ್ದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಸುರತ್ಕಲ್ ಬಂಟರ ಸಂಘವು ಬೆಳ್ಳಿಹಬ್ಬ ಅಚರಿಸುತ್ತಿರುವ ಸಂದರ್ಭದಲ್ಲಿ ಸಂಘವು ಹಲವಾರು ಸಮಿತಿಗಳನ್ನು ಸಮಾಜಮುಖಿಯಾಗಿ ಕೆಲಸ ಮಾಡಲು ರಚಿಸಿದ್ದು ಅದರಲ್ಲಿ ಕೃಷಿ ಸಮಿತಿ ಮುಖಾಂತರ ಮಹತ್ವಾಕಾಂಕ್ಷೆ ಯೋಜನೆಯಾದ ಪ್ರತಿ ಸಂಘದ…

Read More

ಬಂಟರ ಸಂಘ ಪೂರ್ವ ಆಫ್ರಿಕಾ ನೈರೋಬಿ ಕೀನ್ಯಾ ಇದರ ಮೊದಲನೇ ವಾರ್ಷಿಕೋತ್ಸವ ಹೋಟೆಲ್ ರೆಡ್ ಜಿಂಜರ್ 2 ನೇ ಪಾರ್ಕ್ ಲ್ಯಾಂಡ್ಸ್ ಅವೆನ್ಯೂ ನೈರೋಬಿ ಕೀನ್ಯಾದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಶೈಲೇಶ್ ಶೆಟ್ಟಿಯವರು ಮಾತನಾಡುತ್ತಾ ಜಗತ್ತಿನ ಯಾವ ಮೂಲೆಯಲ್ಲಿ ಸಮಾಜ ಬಾಂಧವರು ಇದ್ದರೂ ಕೂಡ ಸಮಾಜದ ಅಭಿಮಾನ ಒಗ್ಗಟ್ಟು ಗುರುತಿಸಿಕೊಂಡು ಬಂದವರು. ಭಾರತವನ್ನು ಬಿಟ್ಟು ಈ ದೇಶಕ್ಕೆ ಬಂದರೂ ಇಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಆಚರಣೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಒಗ್ಗಟ್ಟಿನಲ್ಲಿ ನಮ್ಮ ಸಮಾಜವನ್ನು ಬೆಳೆಸುವಲ್ಲಿ ಎಲ್ಲರೂ ಒಂದಾಗಿದ್ದೇವೆ. ನಮ್ಮೆಲ್ಲರ ಒಗ್ಗಟ್ಟು ಸಮಾಜದ ಮೇಲಿನ ಅಭಿಮಾನ ನಿರಂತರ ಇರಬೇಕು ಎಂದು ನುಡಿದರು. ಸಂಘದ ಮಹಿಳಾ ಸದಸ್ಯೆಯರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಮೀನನಾಥ ಖ್ಯಾತಿಯ ರಾಘವೇಂದ್ರ ರೈ ಕುಂಜತ್ತೂರು ಇವರಿಂದ ಹಾಗೂ ಸಂಘದ ಸದಸ್ಯರಿಂದ ಸಂಗೀತ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಕ್ಷಯ ರಾಜೇಶ್ ಶೆಟ್ಟಿ ಇವರ ಸನ್ಮಾನ ಪತ್ರ ವಾಚನದೊಂದಿಗೆ ನಟ ಹಾಗೂ ರಂಗಭೂಮಿ ಕಲಾವಿದರಾದ ರಾಘವೇಂದ್ರ ರೈ ಅವರನ್ನು…

Read More

ಮೂಡುಬಿದಿರೆ: ಕೆ.ಸಿ.ಇ.ಟಿ ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಅರ್ಹತೆ ಪಡೆದು ಸಾಧನೆ ಮಾಡಿದ್ದಾರೆ. ಆ ಮೂಲಕ ಆಳ್ವಾಸ್ ಈ ಬಾರಿಯೂ ಉನ್ನತ ಸಾಧನೆ ಮಾಡಿದೆ. ಸಾನ್ವಿ ಗುರುಮೂರ್ತಿ ಬೇವಿನಕಟ್ಟಿ 30ನೇ ರ್ಯಾಂಕ್ ಗಳಿಸಿದರೆ, ಪೂರ್ವಿ ವಿ. ಧಾರೇಶ್ವರ್ 91, ನಂದಿತ ರವಿ ಕರೆನ್ನವರ್ 97, ಪ್ರಪುಲ್ ರಾಜ್ ಜಿ.ಆರ್ 205, ಯಶ್ವಂತ್ ಕೆ. 322, ಪ್ರಾರ್ಥನಾ ಎಸ್. ಗೌಡ 326, ರುಕ್ಮಿಣಿ ನಾಯರ್ 333, ಅಲ್ ಫಾಯಿಝಿಯಾ 452ನೇ ರ್ಯಾಂಕ್‍ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Read More