ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜೂನ್ 18 ರಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದ್ದು ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಜೂ. 8 ರಂದು ಜರಗಿತು.
ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ‘ಸಹಕಾರ ರತ್ನ ‘ ಸವಣೂರು ಕೆ. ಸೀತಾರಾಮ ರೈ ಯವರು ಆಮಂತ್ರಣ ಪತ್ರವನ್ನು ಅನಾವರಣಗೊಳಿಸಿದ್ದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು, ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಮಾತೃ ಸಂಘದ ನೀರ್ದೇಶಕರುಗಳಾದ ಕುಂಬ್ರ ದುರ್ಗಾಪ್ರಸಾದ್ ರೈ, ನೋಣಾಲು ಜೈರಾಜ್ ಭಂಡಾರಿ ಡಿಂಬ್ರಿ, ವಾಣಿ ಶೆಟ್ಟಿ ನೆಲ್ಯಾಡಿ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ಭಂಡಾರಿ, ಬಂಟರ ಸಂಘದ ಪ್ರಮುಖರಾದ ಎಮ್. ಕೆ. ಜಯರಾಮ್ ರೈ, ಸಂತೋಷ್ ಶೆಟ್ಟಿ ಸಾಜ ಶಿವರಾಮ್ ರೈ ಆಳ್ವ ಬಳ್ಳಮಜಲು ಗುತ್ತು, ಎಮ್. ಆರ್ ಜಯಕುಮಾರ್ ರೈ ಮಿತ್ರಂಪಾಡಿ, ದೇರ್ಲ ಅಮ್ಮಣ್ಣ ರೈ ಪಾಪೆಮಜಲು, ಅಶೋಕ್ ಕುಮಾರ್ ರೈ ಅರ್ಪಿನಿಗುತ್ತು, ಕರುಣಾಕರ ರೈ ದೇರ್ಲ, ಅನಿತಾ ಹೇಮನಾಥ್ ಶೆಟ್ಟಿ ಕಾವು, ಹರಿಣಾಕ್ಷಿ ಜೆ. ಶೆಟ್ಟಿ, ಅನುಶ್ರೀ ಶೆಟ್ಟಿ, ಅಮಿತಾ ಎನ್. ಶೆಟ್ಟಿ, ಮಲ್ಲಿಕಾ ಜೆ. ರೈ, ವತ್ಸಲಾ ಪದ್ಮನಾಭ ಶೆಟ್ಟಿ, ಲಾವಣ್ಯ ನ್ಯಾಕ್, ಜಗನ್ಮೋಹನ್ ರೈ ಸೂರಂಬೈಲು, ದಯಾನಂದ ರೈ ಕೊರ್ಮಂಡ, ಸದಾಶಿವ ರೈ ಸೂರಂಬೈಲು, ದಿವ್ಯನಾಥ ಶೆಟ್ಟಿ ಕಾವು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸದಾನಂದ ಶೆಟ್ಟಿ ಕೊರೇಲು, ರವಿಪ್ರಸಾದ್ ಶೆಟ್ಟಿ ಬನ್ನೂರು, ಕೆ.ಸಿ. ಅಶೋಕ್ ಶೆಟ್ಟಿ, ಉಮಾಪ್ರಸಾದ್ ರೈ ನಡುಬೈಲು, ರವಿಚಂದ್ರ ರೈ ಕುಂಬ್ರ, ಭಾಸ್ಕರ್ ರೈ ಎಂ. ರವರುಗಳು ಉಪಸ್ಥಿತರಿದ್ದರು.