“ನಂಬಿಕೆ ವಿಶ್ವಾಸ ಬಲ ನಮ್ಮಲ್ಲಿದ್ದರೆ ಬದುಕು ಚೆನ್ನಾಗಿ ಸಾಗುತ್ತದೆ. ನಂಬಿಕೆ ಬೇಕು ಆದರೆ ಮೂಢನಂಬಿಕೆ ಬೇಡ. ತುಳುನಾಡಿನ ಮಣ್ಣಿನಲ್ಲಿ ನಾಗದೇವರ ಇರುವಿಕೆ ಬಗ್ಗೆ ನಂಬಿಕೆ ಮಣ್ಣಲ್ಲಿ ಬೆರೆತುಹೋಗಿದ್ದು ಬಾಳ ತೊತ್ತಾಡಿಯಂತಹ ಧಾರ್ಮಿಕ ಕೇಂದ್ರಗಳು ಪುನರುಜ್ಜೀವನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ” ಎಂದು ಒಡಿಯೂರು ಶ್ರೀ ದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬಾಳ ತೊತ್ತಾಡಿ ನಾಗಬ್ರಹ್ಮ ಸ್ಥಾನದಲ್ಲಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು. “ಕಡಲಿಗೆ ಕಸ ತ್ಯಾಜ್ಯ ಎಸೆದರೆ ವಾಪಾಸ್ ಬರುತ್ತದೆ, ಅದೇ ಚಿನ್ನ ಎಸೆದರೆ ಬರುವುದಿಲ್ಲ ಯಾಕೆಂದರೆ ಒಳ್ಳೆಯದನ್ನು ಕಡಲು ಸ್ವೀಕರಿಸುತ್ತದೆ. ನಮ್ಮ ಜೀವನ ಕೂಡ ಹಾಗೆ ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸಿ ಬೇಡವಾದ್ದನ್ನು ತಿರಸ್ಕರಿಸಬೇಕು” ಎಂದರು.
ವೇದಿಕೆಯಲ್ಲಿ ಮುಂಬೈ ಸಮಿತಿ ಅಧ್ಯಕ್ಷರು ಕುಶಾಲ್ ಭಂಡಾರಿ ಐಕಳ ಬಾವ, ಬ್ರಹ್ಮಶ್ರೀ ಪಾಂಗಾಳ ಅನಂತ ಪದ್ಮನಾಭ ತಂತ್ರಿಗಳು, ಉದ್ಯಮಿ ಜೆ.ಡಿ ವೀರಪ್ಪ, ಡಾ| ರೋಹಿತ್, ರವೀಂದ್ರನಾಥ ಜಿ. ಶೆಟ್ಟಿ, ಕಳತ್ತೂರು, ಮುಂಬೈ ಸಮಿತಿ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್ ಬಾಳ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ, ಲಯನ್ಸ್ ಕ್ಲಬ್, ಮಂಗಳೂರು ಅಧ್ಯಕ್ಷ ಲ| ಜ್ಞಾನೇಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರಿಂದ “ತುಳುನಾಡ ಸಂಸ್ಕೃತಿ” ಕಾರ್ಯಕ್ರಮ ಜರುಗಿತು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ ಆಡಳಿತ ಸಮಿತಿಯ ಅಧ್ಯಕ್ಷ ದೇವದಾಸ ಶೆಟ್ಟಿ ಬಾಳ ಸಾನದ ಹೊಸಮನೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಶೆಟ್ಟಿ, ಮುಂಬಯಿ ಸಮಿತಿಯ ಅಧ್ಯಕ್ಷ ಕುಶಲ್ ಭಂಡಾರಿ ಐಕಳಬಾವ, ಕರುಣಾಕರ ಶೆಟ್ಟಿ ಬಾಳದಗುತ್ತು , ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೇಣುವಿನೋದ್ ಶೆಟ್ಟಿ ಬಾಳದಗುತ್ತು, ಬಾಲಕೃಷ್ಣ ಶೆಟ್ಟಿ ಗುತ್ತಿನಾರ್ ಉಳಾಯಿಬೆಟ್ಟು, ಶಿವಪ್ರಸಾದ್ ಬಾಳ, ಜಯಲಕ್ಷೀ ಶೆಟ್ಟಿ ಮೇಗಿನ ಮನೆ, ಭಾಸ್ಕರ ರಾವ್ ಬಾಳ. ಜೆ ಡಿ ವೀರಪ್ಪ, ಮುಕ್ತಾನಂದ ಮೇಲಾಂಟ, ಅರುಣ್ ಚೌಟ ಬಾಳದ ಗುತ್ತು, ಸಂತೋಷ್ ಪೂಂಜ ಬಾಳದ ಗುತ್ತು, ಬಾಳ ಮೇಗಿನಮನೆ ಜಗನ್ನಾಥ ಭಂಡಾರಿ, ಸುಧಾಮ ಶೆಟ್ಟಿ, ನಾಗೇಶ್ ಶೆಟ್ಟಿ ಬಾಳ ಸಾನದ ಹೊಸಮನೆ, ಪುಷ್ಪರಾಜ ಅಡಪ್ಪ, ವೈ ಡಿ ಸಾಲ್ಯಾನ್ ಹಾಗೂ ಸರ್ವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ
ವೇಣು ವಿನೋದ್ ಶೆಟ್ಟಿ ಬಾಳದ ಗುತ್ತು ಸ್ವಾಗತಿಸಿದರು. ಜೀಣೋದ್ದಾರ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ ವಂದಿಸಿದರು. ಶಕುಂತಳಾ ನಾಗೇಶ್ ಶೆಟ್ಟಿ ಬಾಳ ಸಾನದ ಹೊಸಮನೆ ಕಾರ್ಯಕ್ರಮ ನಿರ್ವಹಿಸಿದರು.