


ಬಂಟರ ಸಂಘ ಮುಂಬಯಿಯ ಸಿಟಿ ಪ್ರಾದೇಶಿಕ ಸಮಿತಿಯು ಜೂನ್ 18 ರಂದು ಗುರುವಾರ ಬೆಳಿಗ್ಗೆ 10.30 ರಿಂದ ಬಂಟರ ಭವನದ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಎನೆಕ್ಸ್ ಕಟ್ಟಡದ ಎರಡನೇ ಮಹಡಿಯ ಶ್ರೀಮತಿ ವಿಜಯಲಕ್ಷ್ಮಿ ಮಹೇಶ್ ಶೆಟ್ಟಿ ಸಭಾಭವನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿಕೊಂಡಿತು. ಯೋಗ ಶಿಕ್ಷಣದ ಮೊದಲು ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಭೆಯಲ್ಲಿ ಸಮಿತಿಯ ಉಪ ಕಾರ್ಯಾಧ್ಯಕ್ಷ ಪದ್ಮನಾಭ ಎಸ್ ಶೆಟ್ಟಿ ಮತ್ತು ದಿವ್ಯ ಪಿ ಶೆಟ್ಟಿ ಅವರ ವಿವಾಹ ವಾರ್ಷಿಕೋತ್ಸವದ ಬೆಳ್ಳಿ ಹಬ್ಬ ಆಚರಣೆಯನ್ನು ಬಂಟರ ಸಂಘದ ಮಹಿಳಾ ವಿಭಾಗದ ಕೋಶಾಧಿಕಾರಿ ಮತ್ತು ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಶುಚಿತ ಕೆ ಶೆಟ್ಟಿಯವರ 50ನೇ ವರ್ಷದ ಹುಟ್ಟುಹಬ್ಬವನ್ನು ಮತ್ತು ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಕಲ್ಪನಾ ಕೃಷ್ಣ ಶೆಟ್ಟಿಯವರ 75 ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. 25- 50- 75 ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ಅವರೆಲ್ಲರನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.




ಅಧ್ಯಕ್ಷ ಸ್ಥಾನ ವಹಿಸಿ ದೀಪ ಪ್ರಜ್ವಲಿಸಿ ಮಾತನಾಡಿದ ಪ್ರವೀಣ್ ಭೋಜ ಶೆಟ್ಟಿಯವರು, ಯೋಗವು ಮಾನಸಿಕ ಮತ್ತು ದೈಹಿಕ ದೃಢತೆಯನ್ನು ಕಾಪಾಡುತ್ತದೆ. ಪ್ರತಿನಿತ್ಯವೂ ನಿಯಮಿತವಾಗಿ ದೇಹವನ್ನು ವ್ಯಾಯಾಮದ ಮೂಲಕ, ಯೋಗ ಮಾಡುವುದರ ಮೂಲಕ ದಂಡಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ ಹಾಗೂ ಮಾನಸಿಕವಾದ ನೆಮ್ಮದಿಯನ್ನು ಪಡೆಯುತ್ತೇವೆ ಎಂದರು. ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಪಕ್ಕಳರ ಈ ವಿಶೇಷ ಪರಿಕಲ್ಪನೆ 25 -50 -75 ಸಂತಸ ತಂದಿದೆ. ಇಂದು ಗೌರವಿಸಲ್ಪಟ್ಟ ಪ್ರತಿಯೋರ್ವರು ಸಮಾಜಕ್ಕಾಗಿ ದುಡಿದವರು ದುಡಿಯುತ್ತಿರುವವರು. ಮನೆ ಮನೆಯಲ್ಲಿ ಭಜನೆ ಒಂದು ಒಳ್ಳೆಯ ಕಾರ್ಯಕ್ರಮ. ಅದನ್ನು ಮುಂದುವರಿಸಿ ನಾನು ಸದಾ ನಿಮಗೆ ಬೆಂಬಲವನ್ನು ನೀಡುತ್ತೇನೆ ಎಂದರು. ಸಂಘದ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ ಅವರು ಸಮಯೋಚಿತವಾಗಿ ಮಾತನಾಡಿ, ನಾವೆಲ್ಲರೂ ನಮ್ಮ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಕರೆಕೊಟ್ಟರು.
ಶ್ರೀಮತಿ ಜಯಲಕ್ಷ್ಮಿ ಶೆಟ್ಟಿಯವರು ಯೋಗದಿಂದ ನಮ್ಮ ದೇಹದ ಅಂಗಾಂಗಕ್ಕೆ ಆಗುವ ಆರೋಗ್ಯಕರ ಸಹಾಯವನ್ನು ವಿವರವಾಗಿ ತಿಳಿಸಿದರು. ಪ್ರತಿನಿತ್ಯ ಸುಲಭವಾಗಿ ನಾವು ಮಾಡಬಹುದಾದ ಕೆಲವೊಂದು ಮಾಹಿತಿಗಳನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಕವಿತಾ ಐ.ಆರ್ ಶೆಟ್ಟಿ, ಸಮಿತಿಯ ಪದಾಧಿಕಾರಿಗಳಾದ ಶಿವರಾಮ ಶೆಟ್ಟಿ ಕಾರ್ಯಾನಗುತ್ತು, ಪದ್ಮನಾಭ ಶೆಟ್ಟಿ, ಸುರೇಂದ್ರ ಶೆಟ್ಟಿ ಮಾರ್ನಾಡು, ನಿತೇಶ್ ಶೆಟ್ಟಿ, ಕೇಶವ ಶೆಟ್ಟಿ ಮತ್ತು ಜ್ಯೋತಿ ಎಸ್ ಶೆಟ್ಟಿಯವರು ಉಪಸ್ಥಿತರಿದ್ದರು. ಕೃಷ್ಣ ವಿ ಶೆಟ್ಟಿ, ಪ್ರಸಾದ್ ಶೆಟ್ಟಿ ಅಂಗಡಿ ಗುತ್ತು, ಆಶಾ ಸುಧೀರ್ ಶೆಟ್ಟಿ, ಸುಜಯ ಆರ್ ಶೆಟ್ಟಿ, ಕಲ್ಪನಾ ಕೆ ಶೆಟ್ಟಿಯವರು ದೀಪ ಪ್ರಜ್ವಲನೆಗೆ ಜೊತೆಯಾದರು.
ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಪಕ್ಕಳರು ಪ್ರಸ್ತಾವಿಕವಾಗಿ ಮಾತನಾಡಿ ವೇದಿಕೆಯ ಗಣ್ಯರೆಲ್ಲರನ್ನೂ, ನೆರೆದಿರುವ ಸದಸ್ಯರೆಲ್ಲರನ್ನು ಸ್ವಾಗತಿಸಿ ಗೌರವಿಸಿದರು. ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಮಾರ್ನಾಡ್ ರವರು ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ಶೆಟ್ಟಿಯವರು ಪ್ರಾರ್ಥನೆಗೆದರು. ಯೋಗ ಶಿಕ್ಷಕರಾದ ಯಶೋಧಾ ಶೆಟ್ಟಿ ಮತ್ತು ತಂಡದವರು ಒಂದೂವರೆ ಗಂಟೆಗಳ ಕಾಲ ಯೋಗ ಶಿಕ್ಷಣ ಹೇಳಿಕೊಟ್ಟರು. ಬಹಳ ಶಿಸ್ತು ಬದ್ಧವಾಗಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಪ್ರೀತಿ ಭೋಜನದೊಂದಿಗೆ ಸಮಾಪ್ತಿಯಾಯಿತು.
ಚಿತ್ರ, ವರದಿ : ಗುರುದತ್ ಪೂಂಜಾ ಮುಂಡ್ಕೂರು





























































































































