ಮೂಡಬಿದ್ರೆ ಬಂಟರ ಸಂಘ ಹಾಗೂ ಯುವ ಬಂಟರ ಸಂಘ ಗ್ರಾಮ ಸಮಿತಿ ದರೆಗುಡ್ಡೆ ಆಶ್ರಯದಲ್ಲಿ ದರೆಗುಡ್ಡೆ ಅಂಗರಜಾಲು ಗದ್ದೆಯಲ್ಲಿ ಕೆಸರ್ಡೊಂಜಿ ಬಂಟರ ಕೂಟ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಮೂಡುಬಿದಿರೆ ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಬೆಳುವಾಯಿ, ಮೂಡುಬಿದಿರೆ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಶೋಭಾ ಶಿವಪ್ರಸಾದ್ ಹೆಗ್ಡೆ, ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಅಮರನಾಥ ಶೆಟ್ಟಿ, ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಿ ಅಮರಶ್ರೀ ಶೆಟ್ಟಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಉದ್ಯಮಿಗಳಾದ ಅಜಯ್ ಶೆಟ್ಟಿ, ಬಾಲಕೃಷ್ಣ ಸಾಮಾನಿ, ಬಂಟರ ಸಂಘ ದರೆಗುಡ್ಡೆ ಅಧ್ಯಕ್ಷ ಗೋಪಾಲ ಶೆಟ್ಟಿ, ಜಯಕುಮಾರ್ ಶೆಟ್ಟಿ, ಯುವ ಬಂಟರ ಸಂಘ ದರೆಗುಡ್ಡೆ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಗ್ಯಾರೆಂಟಿ ಅನುಷ್ಠಾನ ಸಮಿತಿಯ ಮೂಡಬಿದಿರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ವಾಲ್ಪಾಡಿ, ರಮೇಶ್ ಶೆಟ್ಟಿ ಪಡು ಮಾರ್ನಾಡು, ಭರತ್ ಶೆಟ್ಟಿ ಬೆಳುವಾಯಿ, ದಿನೇಶ್ ಶೆಟ್ಟಿ ತಿಮೊಟ್ಟು, ಸೌಮ್ಯ ಶೆಟ್ಟಿ ದರೆಗುಡ್ಡೆ ಹಾಗೂ ಆನಂದ ಶೆಟ್ಟಿ ಉಪಸ್ಥಿತರಿದ್ದರು. ಶ್ರೀನೀತ್ ಶೆಟ್ಟಿ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು.




















































































































