ಆಗಸ್ಟ್ 9 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ವೆನ್ಷನ್ ಹಾಲ್ ಮೈಸೂರು ಇಲ್ಲಿ ಬಂಟರ ಸಂಘ ಮೈಸೂರು ವತಿಯಿಂದ ಆಟಿಡೊಂಜಿ ದಿನ / ಆಷಾಢದಲ್ಲೊಂದು ದಿನ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಲಿದೆ. ಮೈಸೂರು ಬಂಟರ ಸಂಘದ ಅಧ್ಯಕ್ಷ ಕೆ ಗಣೇಶ್ ನಾರಾಯಣ ಹೆಗ್ಡೆಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮೈಸೂರು ಬಂಟ್ಸ್ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಪಿ ಸುರೇಶ್ ಆಳ್ವರ ಉಪಸ್ಥಿತಿಯಿರಲಿದೆ.



ಅಂದು ಮನೋರಂಜನೆಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯಗಳು ಸಭಿಕರ ಮನರಂಜಿಸಲಿದೆ. ಉತ್ತಮ ಕಾರ್ಯಕ್ರಮ ನೀಡಿದವರಿಗೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಸಮಾಜ ಬಾಂಧವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ನಮ್ಮ ಬಂಟರ ಸಾಂಪ್ರದಾಯಿಕ ಉಡುಗೆ ತೊಡುಗೆಗಳೊಂದಿಗೆ ಆಗಮಿಸಿ ಕಾರ್ಯಕ್ರಮಕ್ಕೆ ಕಳೆ ತೋರುವಂತೆ ಕೋರಲಾಗಿದೆ. ನಮ್ಮ ತುಳುವ ಕನ್ನಡಿಗ ಬಂಟರ ಸಾಂಸ್ಕೃತಿಕ ಪರಂಪರೆ, ಆಷಾಢ ಮಾಸದ ವಿಶೇಷತೆ ಕುರಿತಂತೆ ಅರಿವು ಮೂಡಿಸುವ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪರಿಸರದ ಬಂಟ ಬಾಂಧವರು ಪಾಲ್ಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಹೆಗ್ಡೆ, ಸಾಂಸ್ಕೃತಿಕ ವಿಭಾಗದ ಚೆಯರ್ ಪರ್ಸನ್ ಪ್ರತಿಭಾ ಶೆಟ್ಟಿಯವರು ವಿನಂತಿಸಿದ್ದಾರೆ.






















































































































