ಬಂಟರ ಸಂಘ ಮುಂಬಯಿ ಇದರ ಮೀರಾ – ಭಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಜೂ.26 ರ ಬುಧವಾರ ಮಧ್ಯಾಹ್ನ ಮೀರಾರೋಡ್ ಪೂರ್ವದ ಠಾಕೂರ್ ಮಾಲ್ ಮತ್ತು ಪ್ರಸಾದ್ ಇಂಟರ್ ನ್ಯಾಶನಲ್ ಹೋಟೆಲ್ ಸಮೀಪದ ಮಹಾಜನ್ ವಾಡಿಯಲ್ಲಿನ ಭಾರತ ರತ್ನ ಗಾನ ಸಾಮ್ರಾಜ್ಞೆ ದಿ. ಲತಾ ಮಂಗೇಷ್ಕರ್ ನಾಟ್ಯ ಸಭಾಗೃಹದಲ್ಲಿ ಯಕ್ಷಗಾನ ವೇಷಧಾರಿ ಮಹಾಬಲೇಶ್ವರ ಭಟ್ ಕ್ಯಾದಗಿ ಅವರ ವಿನೂತನ ಶೈಲಿಯ ಪುಷ್ಪಕ ಯಾನ ‘ಏಕವ್ಯಕ್ತಿ ನವರಸಾಭಿವ್ಯಕ್ತಿ’ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ನೀಡಿದ ಮಹಾಬಲೇಶ್ವರ ಭಟ್ ಕ್ಯಾದಗಿ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸನ್ಮಾನಿಸಿದರು. ಬಳಿಕ ಮಾತನಾಡಿ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನು ಒಳಗೊಂಡ ಯಕ್ಷಗಾನ ಶಾಸ್ತ್ರೀಯ ಕಲೆ, ಭಾರತೀಯ ಸಂಸ್ಕೃತಿಯ ರೂಪಕಗಳನ್ನು ಸಾಕ್ಷಾತ್ಕರಿಸುವಲ್ಲಿ ಯಶಸ್ಸು ಕಂಡಿದೆ ಎಂದರು.

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಪಶ್ಚಿಮ ವಲಯ ಸಮನ್ವಯಕಾರ ಶಶಿಧರ ಕೆ. ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ವಸಾಯಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ, ಮೀರಾ – ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಮಾಜಿ ಕಾರ್ಯಧ್ಯಕ್ಷ ಅರುಣೋದಯ ರೈ, ಸಲಹೆಗಾರ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಬಂಟರ ಸಂಘ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಪಾಂಡು ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘಟಕ ಬಾಬಾ ಪ್ರಸಾದ ಅರಸ ನಿರೂಪಿಸಿದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಯೋಗೀಶ್ ಗಾಣಿಗ ಅವರನ್ನು ಗೌರವಿಸಲಾಯಿತು.








































































































