Author: admin
ಭಾರತ ದೇಶದಲ್ಲೇ ಅಗ್ರ ಹೃದಯ ತಜ್ಞರಲ್ಲಿ ಒಬ್ಬರಾಗಿದ್ದುಕೊಂಡು ಪ್ರಸ್ತುತ ಬೆಂಗಳೂರಿನ ಕೊಲಂಬಿಯ ಏಷ್ಯಾ ಹಾಸ್ಪಿಟಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಗ್ಗುಂಜೆ ಡಾ.ಪ್ರಭಾಕರ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.
ಮಂಗಳೂರು ವಿಶ್ವವಿದ್ಯಾಲಯದ 102 ಕ್ರೀಡಾಪಟುಗಳ ಪೈಕಿ 82 ವಿದ್ಯಾರ್ಥಿಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್, ಖೋ ಖೋ: ಕ್ರೀಡಾಪಟುಗಳಿಗೆ ಜರ್ಸಿ ವಿತರಣೆ
ವಿದ್ಯಾಗಿರಿ: ಮಹಿಳೆಯರ ಹಾಗೂ ಪುರುಷರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಹಾಗೂ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋ ಖೋ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ 102 ಕ್ರೀಡಾಪಟುಗಳಿಗೆ ಆಳ್ವಾಸ್ ಕಾಲೇಜಿನಲ್ಲಿ ಜರ್ಸಿ ವಿತರಿಸಲಾಯಿತು. ಅಥ್ಲೆಟಿಕ್ಸ್‍ನ್ಲ 72ರ ಪೈಕಿ 59 ಹಾಗೂ ಖೋ ಖೋ 30ರ ಪೈಕಿ 23 ಸೇರಿದಂತೆ 82 ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ತಮಿಳುನಾಡಿನಲ್ಲಿ ನಡೆಯಲಿರುವ ಪುರುಷರ ರಾಷ್ಟ್ರೀಯ ಮಟ್ಟದ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾಲಯದ 39 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಈ ಪೈಕಿ 33 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ಒಡಿಶಾದಲ್ಲಿ ನಡೆಯಲಿರುವ ಮಹಿಳೆಯರ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾಲಯದ 33 ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದು, 26 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು. ಪುರುಷರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋ ಖೋ ಚಾಂಪಿಯನ್‍ಶಿಪ್ ಕೇರಳದ ಕಲ್ಲಿಕೋಟೆಯಲ್ಲಿ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾಲಯ ತಂಡದ 15 ಆಟಗಾರರಲ್ಲಿ 12 ಮಂದಿ…
ಯುಪಿಎಸ್‌ಸಿಯು 2022ರ ಸಿವಿಲ್ ಸರ್ವಿಸಸ್ ಪರೀಕ್ಷೆಯ consolidated ಲಿಸ್ಟ್ ಅನ್ನು ಬಿಡುಗಡೆಗೊಳಿಸಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದರೂ ಪಾಸ್ ಆಗುವುದು ಕೇವಲ ಸಾವಿರದಲ್ಲಿ ಮಾತ್ರ. ಈ ಸಾರಿಯ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ 11 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು ಕೇವಲ 1022 ಅಭ್ಯರ್ಥಿಗಳು ಮಾತ್ರ ಆಯ್ಕೆಗೊಂಡಿದ್ದಾರೆ. ಅದೆಷ್ಟೋ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಲ್ಲಿ ಪಾಸ್ ಆಗುವುದು ಕನಸಾಗಿ ಉಳಿದಿರುತ್ತದೆ. ಅದರಲ್ಲಿಯೂ ಮದುವೆಯಾದ ನಂತರವಂತೂ ಇದು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿ ಅದೆಷ್ಟು ಸ್ತ್ರೀಯರಲ್ಲಿ ಇದೆ. ಆದರೆ ಇದಕ್ಕೆಲ್ಲ ಮನಸ್ಥಿತಿಯೊಂದೇ ಕಾರಣ. ನಾವು ಸಾಧಿಸುವ ಮನಸಿದ್ದರೆ ಸಾಧಿಸಬೇಕೆಂಬ ಛಲ ಇದ್ದರೆ ಏನೆನ್ನಾದರೂ ಸಾಧಿಸಬಹುದು ಎಂಬುದನ್ನು ಮೂರು ವರ್ಷದ ಮಗುವಿನ ತಾಯಿ ಉಡುಪಿಯ ನಿವೇದಿತಾ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ನಿವೇದಿತಾ ಮೂಲತ ಉಡುಪಿಯಯವರು. ಇವರ ತಂದೆ ಸದಾನಂದ ಶೆಟ್ಟಿ ಮತ್ತು ತಾಯಿ ಸಮಿತ ಶೆಟ್ಟಿ ಉಡುಪಿಯಲ್ಲಿ ವಾಸವಾಗಿದ್ದಾರೆ. ನಿವೇದಿತಾ ಅವರ ಪತಿ ದಿವಾಕರ ಶೆಟ್ಟಿ, ಓಮನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .…
ಎಸ್. ಆರ್. ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಸುರತ್ಕಲ್, ತುಳು ಪರಿಷತ್ ಮಂಗಳೂರು, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಕನ್ನಡ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯ, ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಸಂಸ್ಥೆಗಳ ಸಹಯೋಗದಲ್ಲಿ ಡಾ. ಇಂದಿರಾ ಹೆಗ್ಗಡೆ : ನೆಲ ಮೂಲದ ನಡೆ : ಶೋಧ -ಸ್ವಾಧ, ಸಂಶೋಧನೆ, ಸಾಹಿತ್ಯಾವಲೋಕನ, ರಾಜ್ಯಮಟ್ಟದ ವಿಚಾರಗೋಷ್ಠಿ ಕೃತಿ ಲೋಕಾರ್ಪಣೆ ಸಮಾರಂಭ ಅಕ್ಟೋಬರ್ 26ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3.30 ರವರೆಗೆ ನಗರದ ವೆಲೆನ್ಸಿಯಾದ ರೋಶನಿ ನಿಲಯದ ಮರಿಯಾ ಪೈವಾ ಸಭಾಂಗಣದಲ್ಲಿ ನಡೆಯಲಿದೆ. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಮಾತನಾಡಿ, ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ಉದ್ಘಾಟಿಸಿ, ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಡೆ, ರೋಶನಿ ನಿಲಯದ ಪ್ರಾಂಶುಪಾಲೆ ಡಾ. ಸೋಫಿಯಾ ಎನ್. ಫೆರ್ನಾಂಡಿಸ್,…
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಆಯೋಜಿಸಲಾದ ‘ಬಂಟ ಕಲಾ ಸಂಭ್ರಮ’ ದಲ್ಲಿ ಭಾರತ ದರ್ಶನ ಕಲ್ಪನೆಯ ಸ್ಪರ್ಧೆಯಲ್ಲಿ ಶ್ರೀಮತಿ ರಾಜೇಶ್ವರಿ ಡಿ ಶೆಟ್ಟಿ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘ ಪ್ರದರ್ಶಿಸಿದ ಭಾರತ ದರ್ಶನ ಪ್ರಹಸನ ಒಂದು ಲಕ್ಷ ರೂಪಾಯಿ ನಗದು ಸಹಿತ ಶಾಶ್ವತ ಫಲಕದೊಂದಿಗೆ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿತು. ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಕೆ ಅಜಿತ್ ಕುಮಾರ್ ರೈ ಅವರು ಪ್ರಶಸ್ತಿಯನ್ನು ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಸಾಂಸ್ಕೃತಿಕ ಕಾರ್ಯದರ್ಶಿ ಜಯರಾಮ ಶೆಟ್ಟಿ ಮತ್ತು ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ ಹಾಗೂ…
ರಕ್ಷಿತ್ ಶೆಟ್ಟಿ ನಾಯಕರಾಗಿರುವ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಸೈಡ್ – ಎ ಹಾಗೂ ಸೈಡ್ – ಬಿ ಎಂದು ಈ ಎರಡು ಭಾಗಗಳನ್ನು ವಿಂಗಡಣೆ ಮಾಡಲಾಗಿದ್ದು, ‘ಸೈಡ್ – ಎ’ ಸೆಪ್ಟೆಂಬರ್ 1 ರಂದು ತೆರೆಕಂಡರೆ, ‘ಸೈಡ್ – ಬಿ’ ಅಕ್ಟೋಬರ್ 20 ರಂದು ತೆರೆಗೆ ಬರಲಿದೆ. ಈಗ ಮೊದಲ ಹಂತವಾಗಿ ‘ಸಪ್ತಸಾಗರದಾಚೆ ಎಲ್ಲೋ- ಸೈಡ್-ಎ’ ನಿಂದ ಮೊದಲ ಹಾಡು ಬಿಡುಗಡೆಯಾಗಿದೆ. ‘ಹೋರಾಟ ಹೋರಾಟ ಮುಗಿಯೋವರೆಗೂ ಅಲೆದಾಟ, ಅಂತ್ಯನೇ ಇರದಂತಹ ದೂರ ತೀರದ ಹುಡುಕಾಟ’ ಎಂಬ ಹಾಡು ಪರಂವ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಬಿಡಗಡೆಯಾಗಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಅಂದಹಾಗೆ, ಈ ಚಿತ್ರವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿದ್ದು, ಹೇಮಂತ್ ರಾವ್ ಈ ಸಿನಿಮಾದ ನಿರ್ದೇಶಕರು. ಈಗಾಗಲೇ ಹೇಮಂತ್ ರಾವ್ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಾಣ ಮೈ ಕಟ್ಟು’ ಸಿನಿಮಾದಲ್ಲಿ ರಕ್ಷಿತ್ ನಟಿಸಿದ್ದರು. ಈಗ ಮತ್ತೊಮ್ಮೆ ಈ ಜೋಡಿ ‘ಸಪ್ತಸಾಗರದಾಚೆ…
ಮಲಗಿರುವಾಗ ಮತ್ತು ಹಠಾತ್ತನೆ ಎದ್ದು ನಿಂತಾಗ ಅಥವಾ ಫಕ್ಕನೆ ತಲೆ ಮೇಲೆತ್ತಿ ನೋಡಿದಾಗ ಯಾ ಬಾಗಿದಾಗ ತಲೆ ತಿರುಗಿದ ಅನುಭವ ನಮ್ಮಲ್ಲಿ ಅನೇಕರಿಗೆ ಆಗಿರುತ್ತದೆ. ಪ್ರತೀ ಬಾರಿಯೂ ಹೀಗಾದರೆ ಪರಿಹಾರ ಏನು? ಸಮತೋಲನ ಕಳೆದುಕೊಂಡ ಹಾಗೆ, ತಲೆ ಹಗುರವಾದ ಹಾಗೆ ಅಥವಾ ಇಡೀ ಕೋಣೆ ನಿಮ್ಮ ಸುತ್ತ ಸುತ್ತುತ್ತಿರುವ ಹಾಗೆ ಅನುಭವವಾದರೆ ಏನು ಮಾಡಬೇಕು? ಈ ಲಕ್ಷಣಗಳೆಲ್ಲ ಹಠಾತ್ತನೆ ಅನುಭವಕ್ಕೆ ಬಂದಾಗ ನೂರು ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತವೆ. ಏಕೆ ಹೀಗಾಗುತ್ತದೆ? ತಲೆ ತಿರುಗುವಿಕೆಯು ವರ್ಟಿಗೊ, ಮೂರ್ಛೆ ತಪ್ಪುವುದು, ದೈಹಿಕ ಸಮತೋಲನ ಕಡಿಮೆಯಾಗಿರುವುದು ಅಥವಾ ಮೂರ್ಛೆ ರೋಗ/ ಸೆಳವಿನಿಂದ ಆಗಿರಬಹುದು. ವರ್ಟಿಗೊ ಎಂದರೆ ತಲೆ ತಿರುಗುವಿಕೆಯ ಒಂದು ವಿಧವಾಗಿದ್ದು, ಇಡೀ ಜಗತ್ತು ವೇಗವಾಗಿ ಸುತ್ತುತ್ತಿರುವ ಅನುಭವ ಉಂಟಾಗುತ್ತದೆ. ಇದರ ಇನ್ನಿತರ ಲಕ್ಷಣಗಳಲ್ಲಿ ದೇಹಭಂಗಿಗಳಲ್ಲಿ ಅಸ್ಥಿರತೆ, ಚಳಿ ಹಿಡಿಯುವುದು, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಸೇರಿರುತ್ತವೆ. ಈ ಲಕ್ಷಣಗಳು ಕೆಲವು ಸೆಕೆಂಡುಗಳಿಂದ ತೊಡಗಿ ಕೆಲವು ದಿನಗಳ ವರೆಗೆ ಇರಬಹುದು ಮತ್ತು ಚಲಿಸಿದಾಗ ಇನ್ನಷ್ಟು ಉಲ್ಬಣಗೊಳ್ಳಬಹುದು.…
ಬಂಟರ ಸಂಘ (ರಿ) ಸುರತ್ಕಲ್ ಇದರ ನಾಮ ನಿರ್ದೇಶಿತ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ಪಾಂಡು ಎಲ್ ಶೆಟ್ಟಿ ಮುಂಚೂರು ಇವರನ್ನು ಸುರತ್ಕಲ್ ಬಂಟರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಅವಿರೋಧವಾಗಿ ನೇಮಕ ಮಾಡಲಾಯಿತು. ಹೊರನಾಡು ಕ್ಷೇತ್ರ ವಿಭಾಗದಲ್ಲಿ ಹೊಟೇಲ್ ಉದ್ಯಮಿ, ಸಮಾಜ ಸೇವಕ ಪಾಂಡು ಎಲ್ ಶೆಟ್ಟಿ ಮುಂಚೂರು ಅವರನ್ನು ನೇಮಕ ಮಾಡಲಾಗಿದೆ. ಸಭೆಯಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಗಜರಾಜ ಅಂದಾಕ್ಷಣ ನೆನಪಿಗೆ ಬರುವುದು ಮೈಸೂರು ದಸರಾ ಹಾಗೂ ಜಂಬೂಸವಾರಿ. ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುವ ಶ್ರೀಮಂತ ಸಂಸ್ಕೃತಿ ಪರಂಪರೆಯ ಪ್ರದರ್ಶನಕ್ಕೆ ಸಾಕ್ಷಿಯಾಗಿ 1999 ರಿಂದ 2011 ರ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ 14 ಬಾರಿ 750 ಕೆ. ಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿಯನ್ನು ಹೊತ್ತ ಕೀರ್ತಿ ಗಜರಾಜ ಬಲರಾಮನದ್ದು. ಕೆಲ ದಿನಗಳ ಹಿಂದೆ 67 ವರ್ಷ ಪ್ರಾಯದ ಗಜಪಡೆಯ ಮಾಜಿ ಕ್ಯಾಪ್ಟನ್ ಬಲರಾಮ ಆನೆ ಮೈಸೂರಿನ ಹುಣಸೂರು ಭೀಮನ ಕಟ್ಟೆ ಆನೆ ಶಿಬಿರದಲ್ಲಿ ಮೃತ ಪಟ್ಟ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವು ಹಾಗೂ ನಿರಾಶೆ ಆಯಿತು. ಹಲವು ವರ್ಷಗಳ ಹಿಂದೆ ಮೈಸೂರು ಪ್ರವಾಸದಲ್ಲಿ ನಾವು ಇದೆ ಬಲರಾಮನ್ನೊಂದಿಗೆ ಕಳೆದ ಸಮಯ ಪುನಃ ನೆನಪಿಗೆ ಬಂತು. ಅಷ್ಟು ಶಾಂತ ಸ್ವಭಾವದವ ಈತ ಎಂಬ ಅರಿವಿಲ್ಲದೆ ಕೆಲ ಹೊತ್ತು ದೂರದಿಂದಲೇ ಮಾವುತರೊಂದಿಗೆ ಮಾತಾಡುತ್ತಾ ಆನೆಗೆ ನೀಡಲು ತಂದ ಆಹಾರವನ್ನು ಮಾವುತರ…
ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರ ಪ್ರೇರಣೆಯಂತೆ ಗೋವುಗಳ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಿದ್ದು ಜನರು ಆಶೀರ್ವಾದ ನೀಡಿ ಶಾಸಕನನ್ನಾಗಿ ಚುನಾಯಿಸಿದರೆ ಕಾಪು ಕ್ಷೇತ್ರದಲ್ಲಿ ಕರ್ನಾಟಕದ ಮೊದಲ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತದಾರರಿಗೆ ಭರವಸೆ ನೀಡಿದ್ದಾರೆ. ಕಳತ್ತೂರು, ಮುದರಂಗಡಿ, ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಢೆ ಮನೆ ಮನೆ ಭೇಟಿ, ಕಾರ್ಯಕರ್ತರ ಜತೆಗೆ ಸಮಾಲೋಚನೆ ಮತ್ತು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜ ಸೇವಾ ಕಾರ್ಯಗಳಿಗೆ ತಾಯಿಯ ಪ್ರೇರಣೆಯೇ ಪೂರಕವಾಗಿದೆ. ಅವರ ಇಚ್ಛೆಯಂತೆ ನಾವು ಮನೆಯಲ್ಲೇ ಗೋವುಗಳನ್ನು ಸಾಕುತ್ತಿದ್ದು ಗುರ್ಮೆ ಗೋ ವಿಹಾರಧಾಮ ಸ್ಥಾಪಿಸಿ ಅನಾಥ ಗೋವುಗಳೂ ಸೇರಿದಂತೆ ನೂರಾರು ಗೋವುಗಳಿಗೆ ರಕ್ಷಣೆ ನೀಡುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿಯೂ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡುವುಕ್ಕಾಗಿ ಸುಸಜ್ಜಿತ ಗೋ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ…














