ಬಾಳ ತೊತ್ತಾಡಿ ಶ್ರೀ ನಾಗಬ್ರಹ್ಮ ಸ್ಥಾನ ಶ್ರೀ ಕ್ಷೇತ್ರದ ಆರಾಧ್ಯ ಶ್ರೀ ನಾಗಬ್ರಹ್ಮ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಭಕ್ತ ಸಮುದಾಯದ ಸಮ್ಮುಖದಲ್ಲಿ ನಡೆಯಿತು. ಕ್ಷೇತ್ರದ ತಂತ್ರವರೇಣ್ಯರಾದ ಅನಂತ ಪದ್ಮನಾಭ ಪಾಂಗಳ ಇವರ ನೇತ್ರತ್ವದಲ್ಲಿ ಕ್ಷೇತ್ರದ ಅರ್ಚಕ ಗುರುರಾಜ ಭಟ್ ಉಪಸ್ಥಿತಿಯಲ್ಲಿ ಬ್ರಹ್ಮ ಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆದವು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ, ಆಡಳಿತ ಸಮಿತಿಯ ಅಧ್ಯಕ್ಷ ದೇವದಾಸ ಶೆಟ್ಟಿ ಬಾಳ ಸಾನದ ಹೊಸಮನೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಶೆಟ್ಟಿ, ಮುಂಬಯಿ ಸಮಿತಿಯ ಅಧ್ಯಕ್ಷ ಕುಶಲ್ ಭಂಡಾರಿ ಐಕಳಬಾವ, ಕರುಣಾಕರ ಶೆಟ್ಟಿ ಬಾಳದಗುತ್ತು , ಬಾಲಕೃಷ್ಣ ಶೆಟ್ಟಿ ಗುತ್ತಿನಾರ್ ಉಳಾಯಿಬೆಟ್ಟು, ಶಿವಪ್ರಸಾದ್ ಬಾಳ, ಜಯಲಕ್ಷೀ ಶೆಟ್ಟಿ ಮೇಗಿನ ಮನೆ, ಭಾಸ್ಕರ ರಾವ್ ಬಾಳ, ಜೆ ಡಿ ವೀರಪ್ಪ, ಮುಕ್ತಾನಂದ ಮೇಲಾಂಟ, ಅರುಣ್ ಚೌಟ ಬಾಳದ ಗುತ್ತು, ಸಂತೋಷ್ ಪೂಂಜ ಬಾಳದ ಗುತ್ತು , ಬಾಳ ಮೇಗಿನಮನೆ ಜಗನ್ನಾಥ ಭಂಡಾರಿ, ಸುಧಾಮ ಶೆಟ್ಟಿ, ನಾಗೇಶ್ ಶೆಟ್ಟಿ ಬಾಳ ಸಾನದ ಹೊಸಮನೆ, ಪುಷ್ಪರಾಜ ಅಡಪ್ಪ, ವೈ ಡಿ ಸಾಲ್ಯಾನ್ ಹಾಗೂ ಸರ್ವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.