ಮುಂಬಯಿ (ಆರ್ಬಿಐ), ಮಾ.12: ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧಿಪತಿ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಅವರು ಇಂದಿಲ್ಲಿ ಉಪನಗರ ಥಾಣೆಗೆ ಪಾದಾರ್ಪಣೆಗೈದು ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಇದರ ಭಕ್ತರ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಅವರಿಗೆ ಆರತಿ ಬೆಳಗಿಸಿ ಅನುಗ್ರಹಿಸಿದರು.
ಯೋಗಾಶ್ರಮ ಸಮಿತಿ ಮುಂಬಯಿ ಇದರ ಕಾರ್ಯದರ್ಶಿ ಹರೀಶ್ ಕೆ.ಚೇವಾರ್ ಅವರು ಥಾಣೆ ಕಾಪೂರ್ ಬಾವ್ಡಿ ಅಲ್ಲಿನ ಸಮಿತಿಯ ಕೋಶಾಧಿಕಾರಿ ಸದಸ್ಯ, ಭಾರತ್ ಬ್ಯಾಂಕ್ನ ಮಾಜಿ ನಿರ್ದೇಶಕ ಅಶೋಕ್ ಎಂ.ಕೋಟ್ಯಾನ್ ಅವರ ಕೋಸ್ಮಸ್ ಹಾಬಿಟಾಟ್ ನಿವಾಸದಲ್ಲಿ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೆರೆದ ಭಗವದ್ಭಕ್ತರಿಗೆ ಹರಸಿದರು.
ಈ ಸಂದರ್ಭದಲಿ ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಸಮಿತಿಯ ಅಧ್ಯಕ್ಷ ರಾಜೇಶ್ ರೈ, ಮಾಜಿ ಗೌ| ಪ್ರ| ಕಾರ್ಯದರ್ಶಿ ನಿತ್ಯಾನಂದ ಡಿ.ಕೋಟ್ಯಾನ್, ತೋನ್ಸೆ ಸಂಜೀವ ಪೂಜಾರಿ, ಯಶೋಧಾ ಭಟ್ಟಿಪಾಡಿ, ರಮೇಶ್ ಕೋಟ್ಯಾನ್, ಜಯರಾಮ ಪೂಜಾರಿ, ಎಸ್.ಎಸ್ ಪೂಜಾರಿ.ಎಸ್.ಸುಧಾಕರ್, ಜಾನಕಿ ಅಶೋಕ್ ಕೋಟ್ಯಾನ್, ಅಜಯ್ ಎ. ಕೋಟ್ಯಾನ್, ಅಖಿಲ್ ಎ.ಕೋಟ್ಯಾನ್ ಸೇರಿದಂತೆ ಸಮಿತಿಯ ಅನೇಕ ಸದಸ್ಯರು, ಧಾರ್ಮಿಕ ಮುಂದಾಳುಗಳು ಪಾಲ್ಗೊಂಡು ಭಜನೆಗೈದರು. ಶ್ರೀಗಳು ಮಂತ್ರಾಕ್ಷತೆ, ಪ್ರಸಾದ ನೀಡಿ ಹರಸಿದರು.