ಅಡಿಕೆ ಬೆಳೆ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವು ದನ್ನು ನೋಡಿದರೆ ಅದುವೇ ರೈತರಿಗೆ ಮಾರಕವಾಗುವ ದಿನಗಳು ದೂರವಿಲ್ಲ ಎಂಬುದಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸದನದಲ್ಲಿ ನೀಡಿರುವ ಹೇಳಿಕೆ ಅಡಿಕೆ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಹೇಳಿದ್ದಾರೆ.
ಅಡಿಕೆ ಬೆಳೆಗೆ ಚುಕ್ಕಿ ರೋಗ ದಿಂದಾಗಿ ಬೆಳೆಗಾರರು ಈಗಾ ಗಲೇ ತತ್ತರಿಸಿ ಹೋಗಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದಲೂ ಬೆಲೆ ಕುಸಿತ ವಾಗುತ್ತಿದೆ. ರಾಸಾಯನಿಕ ಗೊಬ್ಬರ, ಉಪಕರಣಗಳ ಬೆಲೆಯೂ ಹೆಚ್ಚುತ್ತಿದೆ. ಬೇರೆ ದೇಶಗಳಿಂದಲೂ ಅಡಿಕೆ ಕಳ್ಳ ಸಾಗಣೆ ಮೂಲಕ ಭಾರತಕ್ಕೆ ಬರುತ್ತಿದೆ. ಈಗ ಗೃಹ ಸಚಿವರು ನೀಡಿರುವ ಹೇಳಿಕೆಯಿಂದ ಅಡಿಕೆಯ ಬೆಲೆ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ. ಸಚಿವರ ಹೇಳಿಕೆ ಅಡಿಕೆ ಬೆಳೆಗಾರರಿಗೆ ಆಘಾತವನ್ನುಂಟು ಮಾಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
Next Article ಸರಕಾರಿ ಗೌರವಗಳೊಂದಿಗೆ ಯೋಧ ಮುರಳೀಧರ ರೈ ಅಂತ್ಯಸಂಸ್ಕಾರ