Author: admin

ಸೆ. 05 ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆಯಂದು ಶಾಲಾ ಆಡಳಿತ ಮಂಡಳಿಯು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಲ್ಲಾ ಪ್ರಧಾನ ಶಿಕ್ಷಕರಿಗೂ ಗ್ರೀಟಿಂಗ್ಸ್ ಕಾರ್ಡ್ ನೀಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಕಳ ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ, ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಸುರೇಶ್ ಮರಕಾಲ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಮಾತನಾಡಿ ಮಾಜಿ ರಾಷ್ಟ್ರಪತಿ ದಿ. ಡಾ. ಶಂಕರ್ ದಯಾಳ್ ಶರ್ಮಾ ರವರು ತನ್ನ ಶಿಷ್ಯ ಅರಬ್ ದೇಶದ ದೊರೆಯಿಂದ ವಿದೇಶದಲ್ಲಿ ರಾಜ ಮರ್ಯಾದೆಯನ್ನು ಪಡೆದುಕೊಂಡಿದ್ದರು. ಇದು ಗುರು ಮತ್ತು ಶಿಷ್ಯರ ಉತ್ತಮ ಸಂಬಂಧಕ್ಕೆ ಉದಾಹರಣೆಯಾಗಿದೆ. ಜಿ ಎಮ್ ಒಂದು ಅತ್ಯದ್ಭುತ ವಿದ್ಯಾ ಸಂಸ್ಥೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಅದೃಷ್ಟವಂತರು. ಇಲ್ಲಿನ ಮಕ್ಕಳ ಶಿಸ್ತು, ಸಂಸ್ಕಾರವನ್ನು ನೋಡುವಾಗ ತುಂಬಾ ಸಂತೋಷವಾಗುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಪ್ರತಿಯೊಂದು ಮಗುವಿನ ಯಶಸ್ಸಿನ ಹಿಂದೆ ಶಿಕ್ಷಕರು ಇರುತ್ತಾರೆ. ತಂದೆ ತಾಯಿಯರು ನಮ್ಮ…

Read More

ಮುಂಬೈ,ಜು:25: ಧಾರಣೆಗೆ ಯೋಗ್ಯವಾಗಿರುವಂಥದ್ದು ಧರ್ಮ. ಧರ್ಮವಿರುವುದೇ ಅನುಷ್ಠಾನ ಮಾಡವುದಕ್ಕಾಗಿ. ಮನುಷ್ಯ ಮಾನವ ಧರ್ಮವನ್ನು ಬಿಟ್ಟರೆ ದಾನವನಾಗುತ್ತಾನೆ. ಮನುಷ್ಯ ಮಾಡುವ ಸತ್ಕರ್ಮಗಳಿಗೆ ಸತ್ಪಲ ಹಾಗೂ ದುಷ್ಕರ್ಮಗಳಿಗೆ ದುಷ್ಪಲ ಸಿಗುತ್ತದೆ. ಮನುಷ್ಯನ ಜೀವನವೇ ಒಂದು ರಥ. ಆ ರಥಕ್ಕೆ ಒಂದು ಪಥವೆಂದರೆ ಅದು ಧರ್ಮ. ಧರ್ಮ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಸಂಸ್ಕೃತಿ ಬೆಳೆಯಲು ಧರ್ಮ ಬೇಕು. ಸಂಸ್ಕೃತಿಯನ್ನು ಉಳಿಸಿಕೊಂಡರೆ ಧರ್ಮ ಉಳಿಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು. ಅವರು ಜುಲೈ 22 ರಂದು ಕಲಿನಾ ಕ್ಯಾಂಪಸ್, ಜೆ.ಪಿ.ನಾಯಕ್ ಸಭಾಭವನದಲ್ಲಿ ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಆಯೋಜಿಸಿದ್ದ “ಸಂಸ್ಕೃತಿ ಚಿಂತನ ಮಂಥನ” ಕಾರ್ಯಕ್ರಮದಲ್ಲಿ “ಧರ್ಮ ಮಾನವ ಧರ್ಮ” ಎಂಬ ವಿಷಯದ ಕುರಿತು ಮಾತನಾಡಿದರು. ತ್ಯಾಗ, ಸೇವೆ ಎನ್ನುವುದು ಭಾರತದ ರಾಷ್ಟ್ರೀಯ ಆದರ್ಶವಾಗಿವೆ. ಮನುಷ್ಯ ಧರ್ಮಯುಕ್ತವಾಗಿ ಗಳಿಸಬೇಕು. ಧರ್ಮಯುಕ್ತವಾಗಿ ಅದನ್ನು ಬಳಸಬೇಕು. ಧರ್ಮಯುಕ್ತವಾಗಿ ಉಳಿಸಬೇಕು. ಆಗ ಯಾವುದೇ ಅಪಾಯವೂ ಬರಲಾರದು. ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ ಬೇಕಾಗಿರುವಂತಹ ಸಾಧನವೇ ಸಾಹಿತ್ಯ.…

Read More

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಂದಳಿಕೆ ಅಯನೋತ್ಸವ, ಸಿರಿಜಾತ್ರಾ ವೈಭವ ಎ. 6ರಂದು ನಡೆಯಲಿದೆ. ಕ್ಷೇತ್ರದ ಉರಿಬ್ರಹ್ಮ, ಗಣಪತಿ, ವೀರಭದ್ರ, ನಂದಿಗೋಣ, ಸಿರಿ ಕುಮಾರ, ಅಬ್ಬಗ-ದಾರಗ, ಖಡ್ಗೇಶ್ವರೀ, ರಕ್ತೇಶ್ವರೀ, ಚಾಮುಂಡಿ, ಅಣ್ಣಪ್ಪ, ಕ್ಷೇತ್ರಪಾಲ, ಭೂತರಾಜ, ಗಜಮಲ್ಲ, ಮಹಾನಾಗ ರಾಜ ಸ್ವಾಮಿ ಸನ್ನಿಧಿಗಳಲ್ಲಿ ಪೂಜೆ ನಡೆಯಲಿದೆ. ಬೆಳಗ್ಗೆ 8ರಿಂದ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಆಲಡೆಯಲ್ಲಿ ಶ್ರೀ ಅಣ್ಣಪ್ಪ ದರ್ಶನ, ಹಸಿರು ಮಡಲು ಚಪ್ಪರ ಕಟ್ಟೆ ಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ನಂದಳಿಕೆ ಚಾವಡಿ ಆರಮನೆಯಿಂದ ಶ್ರೀ ಹೆಗ್ಡೆಯವರ ಆಗಮನ, ರಾತ್ರಿ 10.30ರಿಂದ ಅಯನೋತ್ಸವ ಬಲಿ, ಕೆರೆ ದೀಪೋತ್ಸವ, ಕೆರೆದೀಪ ಕಟ್ಟೆಪೂಜಾ ಮಹೋತ್ಸವ, ರಾತ್ರಿ 11ರಿಂದ ಶ್ರೀ ಆಲಡೆ ಸನ್ನಿಧಿಯಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ…

Read More

ಮಕ್ಕಳ ಆರೋಗ್ಯ  ದ್ರಷ್ಟಿಯಲ್ಲಿ ಇದು ಮಾದರಿ ಸೇವೆಯಾಗಬಹುದು   -ಗಣೇಶ್ ಹೆಗ್ಡೆ ಪುಣ್ಚೂರು  ಪುಣೆ : ಮನುಷ್ಯರಲ್ಲಿ  ಅರೋಗ್ಯ ಎಂಬುದು ಇಂದಿನ ಕಾಲದಲ್ಲಿ ಬಹಳ ಎಚ್ಚರಿಕೆವಹಿಸಬೇಕಾದ ಒಂದು ಮುಖ್ಯ ವಿಚಾರ ,ಅದರಲ್ಲೂ ಮಕ್ಕಳ ಅರೋಗ್ಯ ಕಾಪಾಡುವಲ್ಲಿ ತುಂಬಾ ಮುತುವರ್ಜಿ ವಹಿಸಬೇಕಾಗುತ್ತದೆ ,ಏಳವೆಯಿಂದ ಪ್ರೌಡವಸ್ಥೆಯ ವರೆಗಿನ ಬೆಳವಣಿಗೆಯಲ್ಲಿ  ಮಕ್ಕಳ ಆರೋಗ್ಯದಲ್ಲಿ ಬಗ್ಗೆ ಜಾಗ್ರತಿ ಮೂಡಿಸುವುದು ಒಳ್ಳೆಯದು ,ಈ ರೀತಿಯ ಸೇವೆಯಲ್ಲಿ ನಮ್ಮ  ಬಂಟ್ಸ್ ಅಸೋಸಿಯೇಷನ್  ಮೆಡಿಕಲ್ ವಿಬಾಗದ  ಕಾರ್ಯಾಧ್ಯಕ್ಷರಾದ  ಬೇಬಿ ಫ್ರೆಂಡ್ ಕ್ಲಿನಿಕ್ ನ ಮಾಲಕರಾದ ಡಾ ಸುಧಾಕರ್  ಶೆಟ್ಟಿ ಯವರು ಮಾಡುತ್ತಾ ಬರುತಿದ್ದು ,  ಮಕ್ಕಳ ಅರೋಗ್ಯ ಸೇವೆಯಲ್ಲಿ ಸುಮಾರು 40 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬಂದವರು ,ಇವರ ಜೊತೆಯಲ್ಲಿ ಬಹಳ ವರ್ಷಗಳ ಒಡನಾಟ ನನಗೆ ಇದೆ, ಇಂತಹ ಸೇವೆಯ ಬಗ್ಗೆ ನಮ್ಮಲ್ಲಿ ಹಲವಾರು ಬಾರಿ ಮಾತುಕತೆ ನಡೆದಿತ್ತು ,ಸಮಾಜಕೊಸ್ಕರ ಏನಾದರು ಮಾಡಬೇಕು ಎಂಬ ಯೋಚನೆ ನಮ್ಮಲ್ಲಿತ್ತು ,ಈಗ ಡಾ .ಸುಧಾಕರ್ ಶೆಟ್ಟಿ ಯವರ   ಪರಿಕಲ್ಪನೆಯ ಈ ಮಕ್ಕಳ ಆರೋಗ್ಯದ ಕಾರ್ಯಕ್ರಮ ವೈದ್ಯಕೀಯ…

Read More

ತುಳು ಸಿನಿಮಾರಂಗದ ರಾಕ್ ಸ್ಟಾರ್, ಬಿಗ್ ಬಾಸ್ ಒಟಿಟಿ ಹಾಗೂ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ “ಸರ್ಕಸ್” ತುಳು ಸಿನಿಮಾ ಬಿಡುಗಡೆಗೆ ದಿನ‌ ನಿಗದಿಯಾಗಿದೆ. ಜೂನ್ 23 ರಂದು ಸಿನಿಮಾ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾವನ್ನು ಏಕಕಾಲದಲ್ಲಿ ವಿದೇಶದಲ್ಲೂ‌ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದ್ದಾರೆ. ತುಳು ಸಿನಿಮಾ ರಂಗದಲ್ಲಿ ಅತಿ ದೊಡ್ಡ ಹಿಟ್ ಚಿತ್ರ “ಗಿರಿಗಿಟ್” ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ತುಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಾಗಿದ್ದಾರೆ. ರೂಪೇಶ್ ಶೆಟ್ಟಿ ಕನ್ನಡದಲ್ಲಿ ‘ಗೋವಿಂದಾ ಗೋವಿಂದಾ’ ಸಹಿತ ಐದು ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ರೂಪೇಶ್ ಶೆಟ್ಟಿ ತಂಡ ಸರ್ಕಸ್ ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆಗಾಗಿ ಜೂನ್ ತಿಂಗಳಿನಲ್ಲಿ ದಿನ ನಿಗದಿಗೊಳಿಸಿದ್ದಾರೆ. ಪ್ರತೀ ಚಿತ್ರದಲ್ಲೂ ಹೊಸತನ ಬಯಸುವ ರೂಪೇಶ್ ಶೆಟ್ಟಿ ಈ ಬಾರಿ ಕೂಡಾ ಒಂದು ಉತ್ತಮ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಗಿರಿಗಿಟ್, ಗಮ್ಜಾಲ್ ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ…

Read More

ನ್ಯೂಯಾರ್ಕ್ ನ ಕ್ಲಾರಾಜೆಟಿಕಿನ್ ಎಂಬ ಮಹಿಳೆ ಉದ್ಯೋಗಸ್ಥ ಮಹಿಳೆಯರ ಸಮಾನ ವೇತನ ಹೆರಿಗೆ ಸೌಲಭ್ಯ ಹಾಗೂ ಮಹಿಳೆಯರ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ನಡೆಸಿ ಗೆಲುವು ಸಾದಿಸಿದ ದಿನವನ್ನು ಮಹಿಳೆಯರಿಗೆ ಅರ್ಪಿಸುತ್ತಾ ಗೆಲುವಿನ ಸ್ಮರಣೆಗಾಗಿ ಸಾಧನೆಯ ಸಂಕೇತವಾಗಿ ಮಾರ್ಚ್ 8 ನ್ನು ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಲಾರಂಬಿಸಿದರು. ಹೀಗೊಂದು ನಿಗದಿತ ವಿಶ್ವ ಮಹಿಳಾ ದಿನ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದಿರಲಿ. ಸ್ತ್ರೀ ಪ್ರಕೃತಿಯ ವರದಾನ, ಬದುಕಿನಂಚಿನವರೆಗೂ ಮಹಿಳೆ ಕುಟುಂಬಕ್ಕೆ, ಸಮಾಜಕ್ಕೆ ಅಗಾಧ ಜ್ಞಾನ ಒಲವು ನೆರವು ನೀಡುತ್ತಿರುತ್ತಾಳೆ. ಕೇವಲ ಅಲಂಕಾರಿಕ ವಸ್ತುಗಳಾಗಿ ಉಳಿಯದೆ ಶಿಕ್ಷಣ, ಸಾಹಿತ್ಯ, ಧರ್ಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಕಿರುತೆರೆ ಬೆಳ್ಳಿ ತೆರೆ,ಎಲ್ಲದರಲ್ಲೂ ಮಹಿಳೆಯರು ಮಿಂಚುತ್ತಿರುವುದು ಹೆಮ್ಮೆಯ ವಿಷಯ. ಮಹಿಳೆಯರಿಗಿಂದು ತೆರೆದ ಜಗತ್ತು ಎಲ್ಲಾ ‌ಕ್ಷೇತ್ರಗಳಲ್ಲಿ ಅವಕಾಶ ನೀಡುತ್ತಿದೆ. ಆದರೆ ತೆರದ ಜಗತ್ತಿನಲ್ಲೂ ಉಸಿರುಗಟ್ಟಿಸುವ ದೌರ್ಜನ್ಯಕ್ಕೆ ಕೊರತೆ ಇಲ್ಲದಿರುವುದೇ ವಿಪರ್ಯಾಸ. ಸಮಾಜದ ಯಾವುದೇ ಮೂಲೆಯನ್ನು ಅವಲೋಕಿಸಿ ನೋಡಿ, ಹೆಣ್ಣು ಮಗಳೊ ಬ್ಬಳ ರೋಧನ ಇದ್ದೆ ಇರುತ್ತದೆ. ಕಾನೂನಿನ ದುರುಪ…

Read More

ಹೊಟೇಲ್ ಬಾರ್ ಎಂಡ್ ರೆಸ್ಟೋರೆಂಟ್ ಗಳ 2023-2024 ರ ಸಾಲಿನ ಶೇ 15 ರಷ್ಟು ಅಬಕಾರಿ ಸುಂಕ ಹೆಚ್ಚಳವನ್ನು ಕಡಿತ ಮಾಡುವಂತೆ ಫೆಡರೇಶನ್ ಆಫ್ ಹೊಟೇಲ್ ಹಾಗೂ ರೆಸ್ಟೋರೆಂಟ್ ಅಸೋಸಿಯೇಶನ್ ನಿಯೋಗವು ವಿರಾರ್ ಶಂಕರ್ ಶೆಟ್ಟಿಯವರ ನೇತೃತ್ವದಲ್ಲಿ ಮೀರಾ ಭಯಂಧರ್ ಶಾಸಕಿ ಗೀತಾ ಜೈನ್ ರವರ ಮುಂದಾಳತ್ವದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರನ್ಮು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. ಈಗಾಗಲೇ ಕೊರೊನಾ ಹಾವಳಿಯಿಂದ ಕಂಗೆಟ್ಟಿರುವ ಹೊಟೇಲ್ ಉದ್ಯಮ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಳ್ಳುವ ಸಮಯದಲ್ಲಿಯೇ ಸುಂಕ ಹೆಚ್ಚಳವು ಉದ್ಯಮಕ್ಕೆ ಮಾರಕ ಹೊಡೆತ ಬಿದ್ದಂತಾಗಿದೆ. ಮಾತ್ರವಲ್ಲದೆ ಸರಕಾರದ ನಿಯಮಾವಳಿಗಳ ಪ್ರಕಾರ ಕ್ರಮಬದ್ದವಾಗಿ ಉದ್ಯಮವು ಮುಂದುವರಿಯುತ್ತಿದೆ. ತೀವ್ರ ಸಂಕಷ್ಟದಲ್ಲಿರುವ ಉದ್ಯಮಕ್ಕೆ ಅಬಕಾರಿ ಸುಂಕ ಹೆಚ್ಚಳದಿಂದ ತುಂಬಲಾರದ ನಷ್ಟವಾಗುತ್ತಿದೆ ಎಂದು ನಿಯೋಗವು ಮುಖ್ಯಮಂತ್ರಿಯವರಿಗೆ ಪೂರ್ಣ ಮಾಹಿತಿಯೊಂದಿಗೆ ಮನವರಿಕೆ ಮಾಡಲಾಯಿತು. ನಿಯೋಗದ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಯವರು ವಿಮರ್ಷಾತ್ಮಕವಾಗಿ ನಿಯೋಗದೊಂದಿಗೆ ಚರ್ಚಿಸಿದರು. ಹೊಟೇಲ್ ಉದ್ಯಮದ ಸಂಕಷ್ಟಗಳನ್ನು ಆಲಿಸಿದ ಮುಖ್ಯಮಂತ್ರಿಯವರು ಸರಕಾರದ ಅಬಕಾರಿ ಮಂತ್ರಿ ಶಂಭುರಾಜ್ ದೇಸಾಯಿಯವರಿಗೆ ಪೋನಾಯಿಸಿ ಸುಂಕ ಹೆಚ್ಚಳವನ್ನು…

Read More

ತುಳುನಾಡ ಸೃಷ್ಟಿಕರ್ತನ ಕಂಚಿನ ಪ್ರತಿಮೆಯನ್ನು ಹೊಂದಿರುವ “ಪರಶುರಾಮ ಥೀಂ ಪಾರ್ಕ್‌’ 15 ಕೋ.ರೂ. ವೆಚ್ಚದಲ್ಲಿ ಕಾರ್ಕಳ ಸಮೀಪದ ಉಮ್ಮಿಕ್ಕಳ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿದೆ. 57 ಅಡಿ ಎತ್ತರದಲ್ಲಿ 33 ಅಡಿಯ ಸುಂದರ ಕಂಚಿನ ಮೂರ್ತಿ ಸ್ಥಾಪನೆಯಾಗಲಿದೆ. 2 ಕೋಟಿ ರೂ. ವೆಚ್ಚದ ಈ ಮೂರ್ತಿ ರಚನೆಗೆ 15 ಟನ್‌ ಕಂಚು ಮತ್ತು ಉಕ್ಕು ಬಳಸಲಾಗಿದೆ.ಪ್ರತಿಮೆಯ ನಿರ್ಮಾಣ ಕಾರ್ಯವು ಬೆಂಗಳೂರಿ ನಲ್ಲಿ 7 ತಿಂಗಳ ಹಿಂದೆ ಆರಂಭ ಗೊಂಡಿದ್ದು, ಅಂತಿಮ ಹಂತಕ್ಕೆ ತಲುಪಿದೆ. ಉಮ್ಮಿಕ್ಕಳ ಬೆಟ್ಟಕ್ಕೆ ಪ್ರತಿಮೆಯ ತಳಭಾಗ ಬಂದಿದ್ದು ಅಳವಡಿಸುವ ಕಾರ್ಯ ನಡೆಯುತ್ತಿದೆ. ಸೊಂಟದ ಪಟ್ಟಿ, ಮೂರ್ತಿ ಹಾಗೂ ಪರಶುರಾಮನ ಕೊಡಲಿ ಬರಲು ಬಾಕಿಯಿದೆ. 10 ದಿನಗಳಲ್ಲಿ ಮೂರ್ತಿ ಜೋಡಣೆ ಕಾರ್ಯ ಪೂರ್ಣಗೊಳ್ಳಲಿವೆ. ಜನವರಿ 10ರ ವೇಳೆಗೆ ಬೆಟ್ಟದ ಮೇಲೆ ಪರಶುರಾಮ ಮೂಡಿಬರಲಿದ್ದಾನೆ. ಪಾರ್ಕ್‌ನಲ್ಲಿ ಆಡಿಯೋ ವಿಶುವಲ್‌ ಕೊಠಡಿ, ಸುಸಜ್ಜಿತ ಆರ್ಟ್‌ ಮ್ಯೂಸಿಯಂ, ನೇಯ್ಗೆ ಡೆಕ್‌ ಗ್ಯಾಲರಿ, ಸಾವಿರ ಮಂದಿ ಆಸನ ಸಾಮರ್ಥ್ಯದ ಬಯಲು ಮಂದಿರ, ಭಜನ ಮಂದಿರ, ಹಸುರು ಕೋಣೆಗಳ ಪಾಪ್‌ ಸಂಗ್ರಹಣೆ, ಪೂರಕ…

Read More

ಸಮಾಜಸೇವಕ, ನೇರ ನಡೆ ನುಡಿಯ ಪ್ರಖ್ಯಾತ್ ಶೆಟ್ಟಿಯವರು ಉದ್ಯಮಿಯಾಗಿದ್ದುಕೊಂಡು ಉಡುಪಿ ಜಿಲ್ಲಾ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಹಸನ್ಮುಖಿಯಾಗಿರುವ ಪ್ರಖ್ಯಾತ್ ಶೆಟ್ಟಿಯವರು ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿದ್ದು ಇವರ ಮುಂದಿನ ರಾಜಕೀಯ ಜೀವನ ಉಜ್ವಲವಾಗಿರಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಕೋರುತ್ತಿದ್ದೇವೆ.

Read More

ಕ್ಯಾಪ್ಟನ್ ಬ್ರಜೇಶ್ ಚೌಟ ಸಾರಥ್ಯದಲ್ಲಿ 7 ನೇ ವರ್ಷದ ಮಂಗಳೂರು ಕಂಬಳ ಡಿ. 30 ರಂದು ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡು ಕೆರೆಯಲ್ಲಿ ನಡೆಯಲಿದ್ದು ಆ ಪ್ರಯುಕ್ತ ಕಂಬಳದ ಪೂರ್ವಭಾವಿ ಸಭೆಯು ಶುಕ್ರವಾರ ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ನಡೆಯಿತು. ಸಭೆಯನ್ನು ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗರಾದ ಪ್ರಸಾದ್ ಕುಮಾರ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಶೆಟ್ಟಿ ಮಾತನಾಡಿ 7 ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಕಂಬಳವನ್ನು ಮುಂದಿನ ತಲೆಮಾರುಗಳಿಗೆ ಉಳಿಸುವ ಉದ್ದೇಶದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯೋನ್ಮುಖರಾಗುವಂತೆ ಹಾಗೂ ಕಂಬಳಕ್ಕೆ ಮೆರುಗನ್ನು ನೀಡುವ ದೃಷ್ಟಿಯಿಂದ ಕರಾವಳಿಯ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಮಾತನಾಡಿ, ಮಂಗಳೂರು ನಗರದಲ್ಲಿ ನಡೆಯುವ ಕಂಬಳ ಜನ ಆಕರ್ಷಣೀಯ ಕೇಂದ್ರವಾಗುತ್ತಿದ್ದು ಕಂಬಳಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ…

Read More