ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜರತ್ನ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರು ಕರ್ನಾಟಕ ಟೇಬಲ್ ಟೆನ್ನಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೌತಮ್ ಶೆಟ್ಟಿ ಅವರು ಧಾರವಾಡದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರಲಿದ್ದಾರೆ.
ಆಯ್ಕೆಯ ಬಳಿಕ ಮಾತನಾಡಿದ ಗೌತಮ್ ಶೆಟ್ಟಿ “ಮಾನಸಿಕ ಮತ್ತು ದೈಹಿಕ ಅರೋಗ್ಯಕ್ಕೆ ಇದು ಪ್ರಯೋಜನಕಾರಿ, ಏಕಾಗ್ರತೆ ಹೆಚ್ಚಿಸುವ ಆಟಗಳಲ್ಲಿ ಟೇಬಲ್ ಟೆನಿಸ್ ಕೂಡ ಒಂದಾಗಿದ್ದು, ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದರು.
ನೂತನವಾಗಿ ಆಯ್ಕೆಗೊಂಡ ತಂಡಕ್ಕೆ ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾಗೂ ಬಂಟ್ಸ್ ಬ್ರಿಗೇಡ್ ವತಿಯಿಂದ ಶುಭಾಶಯಗಳು.