Author: admin
ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿಯ 7 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಮನೋರಂಜನೆಯಂಗವಾಗಿ “ಸುಧನ್ವಾರ್ಜುನ “ಯಕ್ಷಗಾನ ಪ್ರದರ್ಶನವು ಫೆ.12 ರಂದು ರವಿವಾರ ಸಂಜೆ ಗಂಟೆ 3 ರಿಂದ ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್ ನ ದಿ . ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪುಣೆ ಕನ್ನಡ ಸಂಘದ ಅಧ್ಯಕ್ಷರಾದ ಕುಶಲ್ ಹೆಗ್ಡೆ, ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಕಡ್ತಲ, ಬಂಟ್ಸ್ ಅಸೋಸಿಯೇಷನ್ ಪುಣೆ ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ, ತುಳುಕೂಟದ ಗೌರವಾಧ್ಯಕ್ಷರಾದ ತಾರಾನಾಥ ಕೆ ರೈ ಮೇಗಿನಗುತ್ತು, ಶ್ರೀ ಗುರುದೇವಾ ಸೇವಾ ಬಳಗದ…
ಜಗತ್ತಿನಲ್ಲೇ ಪಶ್ಚಿಮ ಘಟ್ಟಗಳೆಂದರೆ ಅದು ಜೀವವೈವಿಧ್ಯದ ಆಗರ. ಇಲ್ಲಿರುವ ಜೀವಸಂಕುಲಗಳ ವೈವಿಧ್ಯತೆ ಪ್ರಪಂಚದ ಬೇರೆಲ್ಲೂ ಕಂಡುಬರುವುದಿಲ್ಲ. ಅದೇ ರೀತಿ ಇಲ್ಲಿನ ಸಸ್ಯ ಸಂಕುಲಗಳ ವೈವಿಧ್ಯತೆ ಕೂಡ. ಪಶ್ಚಿಮಘಟ್ಟಗಳ ದಟ್ಟವಾದ ಶೋಲಾ ಅರಣ್ಯಗಳ ಮಧ್ಯೆ ಮಧ್ಯೆ ಕಂಡುಬರುವ Montane grassland ಅನ್ನುವ ವಿಶಿಷ್ಟ ಬಗೆಯ ಹುಲ್ಲುಗಾವಲುಗಳ ಈ ವ್ಯವಸ್ಥೆ ತುಂಬಾ ಅಪರೂಪದ ಭೂಲಕ್ಷಣವಾಗಿದೆ. ದಟ್ಟಾರಣ್ಯದ ಮಧ್ಯೆ ಅಲ್ಲಲ್ಲಿ ಹುಲ್ಲುಗಾವಲುಗಳು ಕಂಡುಬರುವುದರಿಂದ ಇದನ್ನು ಭೂ ವಿಜ್ಞಾನಿಗಳು ಶೋಲಾ ಮೊಸಾಯಿಕ್ ಅಂತ ಕರೆಯುತ್ತಾರೆ. ಬಹುಶಃ ನಮ್ಮ ಕೊಯ್ಲದ ಸುಮಾರು ಏಳುನೂರು ಎಕರೆಯಷ್ಟು ವಿಶಾಲವಾದ ಈ ಹುಲ್ಲುಗಾವಲು ಕೂಡ ಪಶ್ಚಿಮ ಘಟ್ಟದ ಈ ಶೋಲಾ ಮೊಸಾಯಿಕ್ ನ ಭಾಗವೇ. ಕೊಯ್ಲದ ಈ ಹುಲ್ಲುಗಾವಲೀಗ ನಾಗರಿಕ ಸಮಾಜದ ಮಧ್ಯೆಯೇ ಇರುವುದರಿಂದ ಮತ್ತು ಸರ್ವಋತು ರಸ್ತೆಗಳು, ವಿದ್ಯುಚ್ಛಕ್ತಿ ಇತ್ಯಾದಿ ಎಲ್ಲಾ ಆಧುನಿಕ ಸೌಲಭ್ಯಗಳೂ ಇರುವ ಸ್ಥಳವಾದುದರಿಂದ ಅಧ್ಯಯನ ಕೇಂದ್ರ ಸ್ಥಾಪನೆಗೆ ಅತ್ಯಂತ ಸೂಕ್ತವಾದ ಜಾಗವಾಗಿದೆ. ಇಲ್ಲಿ ಈಗ ಪಶುವೈದ್ಯಕೀಯ ಕಾಲೇಜು ಹೇಗೂ ಸ್ಥಾಪನೆಯಾಗಿರುವುದರಿಂದ ಇದನ್ನೊಂದು ಉನ್ನತ ಅಧ್ಯಯನ ಕೇಂದ್ರವನ್ನಾಗಿ, ತೋಟಗಾರಿಕಾ,…
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಜಗತ್ತಿನಾಧ್ಯಂತ ಸದಸ್ಯರನ್ನೊಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ 2022-2025 ರ ಸಾಲಿಗೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಅಜಿತ್ ಕುಮಾರ್ ರೈ ಬಂಟರ ಮಾತೃ ಸಂಘಕ್ಕೆ ಸತತವಾಗಿ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುತ್ತಾರೆ. ಮುಂದಿನ ದಿನಗಳಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಹತ್ವಾಕಾಂಕ್ಷೆ ಯೋಜನೆಯಾದ ಶತಮಾನೋತ್ಸವ ಕಟ್ಟಡ ಸಂಕೀರ್ಣ, ವಿಶ್ವವ್ಯಾಪಿ ಸಮಾಜ ಭಾಂಧವರನ್ನು ಒಂದೇ ಸೂರಿನಡಿ ತರ ಬಯಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈ ಗೊಳ್ಳುವುದು ಹಾಗೂ ಸಮಾಜದ ಸವೋತೊಮುಖ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ಮಾಲಾಡಿ ಅಜಿತ್ ಕುಮಾರ್ ರೈ ನುಡಿದರು. ಮುಖ್ಯ ಚುನಾವಣಾಧಿಕಾರಿ ವಕೀಲರಾದ ಬಿ ಗುರುಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಉಪ ಚುನಾವಣಾಧಿಕಾರಿ ವಕೀಲರಾದ ಬಿಪಿನ್ ರೈ, ಹಾಗೂ ಚುನಾವಣಾಧಿಕಾರಿ ದಿವಾಕರ ಸಾಮಾನಿ ಚೇಳಾರ್ ಗುತ್ತು ಉಪಸ್ಥಿತರಿದ್ದರು
ಪುತ್ತೂರಿನ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರವಹಿಸಿ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದ ಮಾಜಿ ತಹಶೀಲ್ದಾರ್ ಕೋಚಣ್ಣ ರೈ ಚಿಲ್ಮೆತ್ತಾರು (85) ಮಂಗಳೂರಿನಲ್ಲಿ ಮಾ 27 ರಂದು ಇಹಲೋಕ ತ್ಯಜಿಸಿದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮೃತರು ಪುತ್ರಿಯರಾದ ವಿಜಯ ಹಾಗು ಸುಜಯ, ಪುತ್ರ ಮಂಗಳೂರಿನಲ್ಲಿ ದಂತ ವೈದ್ಯರಾಗಿರುವ ಡಾ| ಮಂಜುನಾಥ್ ರೈ ಹಾಗೂ ಅಪಾರ ಬಂಧು ಮಿತ್ರರೂ ಅಭಿಮಾನಿಗಳನ್ನು ಆಗಲಿದ್ದಾರೆ. ಕೋಚಣ್ಣ ರೈಯವರ ಪತ್ನಿ ದಿ. ಮುಂಡಾಲ ಗುತ್ತು ಸುಗುಣ ರೈ. ಕೋಚಣ್ಣ ರೈ ಅವರನ್ನು ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ಬಿರುದು ನೀಡಿ ಗೌರವಿಸಿದೆ. ತಮ್ಮ ಅಧಿಕಾರವಧಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅರ್ಹವಾದ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಹೆಗ್ಗಳಿಕೆ ಕೋಚಣ್ಣ ರೈ ಅವರದು, ಬೆಳ್ತಂಗಡಿಯಲ್ಲಿ ಸಾವಿರಾರು ದೀನ ದಲಿತರಿಗೆ ಅತ್ಯಂತ ಸುಲಭವಾಗಿ ಹಾಗೂ ಸುಲಲಿತವಾಗಿ ನಿವೇಶನದ ಹಕ್ಕು ಪತ್ರವನ್ನು ಒದಗಿಸಿದವರು ಇವರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 14 ಎಕ್ರೆ ಜಾಗವನ್ನು…
ಸಿನಿಮಾ ನಿರ್ಮಾಪಕರು, ಹೋಟೆಲ್ ಉದ್ಯಮಿಗಳು, ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿರುವಂತಹ ಉಪೇಂದ್ರ ಆರ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ.
ನಾಟಕ ರಂಗಭೂಮಿ ಕಂಡ ಮಹಾನ್ ನಿರ್ದೇಶಕ, ರಂಗಕರ್ಮಿ ಜಗದೀಶ್ ಶೆಟ್ಟಿ ಕೆಂಚನಕೆರೆ ಅವರು ಉಡುಪಿ, ದಕ್ಷಿಣ ಕನ್ನಡ ಹಾಗೂ ಮುಂಬಯಿ ಮಹಾನಗರದಲ್ಲಿ ಸಂಪಾದಿಸಿದ ಜನಪ್ರಿಯತೆ, ಅವರ ನಿರ್ದೇಶನ ಪ್ರತಿಭೆ ಮರೆಯಲಾಗದು. ತುಳು ರಂಗಭೂಮಿ ಹಾಗೂ ಕೆಲವು ಅಪರೂಪದ ಪಾತ್ರ ಚಿತ್ರಣಗಳ ಕನ್ನಡ ನಾಟಕ ನಿರ್ದೇಶನಗಳ ಮೂಲಕ ರಂಗಭೂಮಿಯ ದೈತ್ಯ ಪ್ರತಿಭೆ ಎಂದು ಪ್ರಶಂಸೆ ಪಡೆದವರು. ಇತ್ತೀಚೆಗೆ ತನ್ನ ಹುಟ್ಟೂರಲ್ಲೇ ಇದ್ದುಕೊಂಡು ಅಲ್ಲಿಯೂ ಅನೇಕ ನಾಟಕ ತಂಡಗಳಿಗೆ ನಿರ್ದೇಶಕರಾಗಿ ದುಡಿಯುತ್ತಾ ವ್ಯಾಪಕ ಪ್ರಸಿದ್ಧಿ ಪಡೆದಿರುತ್ತಾರೆ. ಶ್ರೀಯುತರ ನಿರ್ದೇಶನದಲ್ಲಿ ಪಾತ್ರಗಳು ಜೀವ ತಳೆದು ಭಾವತುಂಬಿ ಮಾತಾಡುತ್ತವೆ. ಹೊಸ ಕಲಾವಿದನನ್ನು ತನ್ನ ನಿರ್ದೇಶನ ಸಾಮರ್ಥ್ಯದಿಂದ ಪ್ರಬುದ್ಧತೆಯ ಅಭಿನಯ ಪಡೆದು ಕಲಾವಿದರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಕಿರಿಯ ಕಲಾವಿದರು ಅವರನ್ನು ನಾಟಕ ಗುರು ಎಂದೇ ಸಂಬೋಧಿಸುತ್ತಾರೆ. ಹುಟ್ಟುತ್ತಲೇ ಒಬ್ಬಾತ ಪರಿಣತ ಕಲಾವಿದನಾಗಿರುವುದಿಲ್ಲ. ಅವನನ್ನು ತಿದ್ದಿ ತೀಡಿ ಒಬ್ಬ ಪರಿಪೂರ್ಣ ಕಲಾವಿದನನ್ನಾಗಿ ರೂಪಿಸಬೇಕಾಗುತ್ತದೆ. ಶಿಲ್ಪಿಯೊಬ್ಬ ಕಾಟುಶಿಲೆಯನ್ನು ಆಕರ್ಷಕ ಮೂರುತಿಯನ್ನಾಗಿ ರೂಪಿಸುವ ರೀತಿ ನಿರ್ದೇಶಕನಲ್ಲೂ ಅಂಥಾ ಮಂತ್ರ ಸ್ಪರ್ಷ ಇರಬೇಕಾಗುತ್ತದೆ.…
‘ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ’ ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೇತೃತ್ವದಲ್ಲಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ರೆಡ್‍ಕ್ರಾಸ್ ಮಂಗಳೂರು, ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಎಚ್‍ಡಿಎಫ್‍ಸಿ ಬ್ಯಾಂಕ್ ಮೂಡುಬಿದಿರೆಯ ಸಹಯೋಗದಲ್ಲಿ ಶುಕ್ರವಾರ ಆಳ್ವಾಸ್ ಕಾಲೇಜಿನಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 449 ಯುನಿಟ್ ರಕ್ತದಾನ ಮಾಡಿದರು. ಶಿಬಿರ ಉದ್ಘಾಟಿಸಿದ ಗೇಲ್ ಪೆಟ್ರೋ ಕೆಮಿಕಲ್ಸ್‍ನ ವೈದ್ಯಕೀಯ ಸಲಹಾ ಅಧಿಕಾರಿ, ಡಾ ಜೆ ಎನ್ ಭಟ್, ದೇಶದಲ್ಲಿ 4 ಕೋಟಿ ರಕ್ತದಾನಿಗಳ ಅವಶ್ಯಕತೆ ಇದ್ದು, 4.5 ಲಕ್ಷ ದಾನಿಗಳು ಮಾತ್ರ ಇದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಬೇಕು. ಒಬ್ಬ ವ್ಯಕ್ತಿ ಯೌವನದಿಂದ ಒಟ್ಟು ಸುಮಾರು 80ರಿಂದ 90 ಬಾರಿ ರಕ್ತದಾನ ಮಾಡಬಹುದು. ಪುರುಷರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದ ಅವರು, ನಾನು 36 ಬಾರಿ ರಕ್ತದಾನ ಮಾಡಿದ್ದೇನೆ ಎಂದರು. ರಕ್ತದಾನವೂ ದೇಶಪ್ರೇಮ. ಬದ್ಧತೆಯಿಂದ ರಕ್ತದಾನ ಮಾಡಿ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ,…
ಪ್ರತಿಷ್ಠಿತ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ಇದರ 2022-2023 ನೇ ಸಾಲಿನ ವಿಕಾಸ ಪುಸ್ತಕ ಪುರಸ್ಕಾರಕ್ಕೆ ಪತ್ರಕರ್ತ ಡಾ. ದಿನೇಶ್ ಶೆಟ್ಟಿ ರೆಂಜಾಳ ಅವರ “ಮುಂಬೈ ಕನ್ನಡ ಪತ್ರಿಕೋದ್ಯಮ” ಸಂಶೋಧನ ಕೃತಿ ಆಯ್ಕೆಯಾಗಿದೆ. ರೆಂಜಾಳರ ಈ ಗ್ರಂಥಕ್ಕೆ ಮುಂಬಯಿ ವಿಶ್ವವಿದ್ಯಾಲಯ ಪಿ ಎಎಚ್ ಡಿ ಪದವಿ ನೀಡಿದೆ. 500 ಕ್ಕೂ ಅಧಿಕ ಪುಟಗಳನ್ನು ಹೊಂದಿರುವ ಈ ಕೃತಿ ಕಳೆದ ವರ್ಷ ಪ್ರಕಟಗೊಂಡು, ಮುಂಬಯಿ ಬಂಟರ ಸಂಘದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ “ಮುಂಬಯಿ ಪತ್ರಕರ್ತರ ಸಮಾಗಮ” ಸಂಭ್ರಮದಲ್ಲಿ ಗಣ್ಯಾಥಿ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತ್ತು. ಕೃತಿಯು ಮುಂಬಯಿ ಕನ್ನಡ ಪತ್ರಿಕೋದ್ಯಮದ ನೂರೈವತ್ತಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಹಿರಿಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈಯಲ್ಲಿ ಯುವ ಪತ್ರಕರ್ತರಾಗಿರುವ ರೆಂಜಾಳರು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಎಂಎ ಪದವಿಯನ್ನು ಪ್ರಥಮ ಶ್ರೇಣಿಯೊಂದಿಗೆ ವರದರಾಜ ಆದ್ಯ ಚಿನ್ನದ ಪದಕವನ್ನು ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವ ಅವರ ಎಂಫಿಲ್ ಸಂಶೋಧನ ಕೃತಿ “ಗಿರಿಕುಂಜರ”, “ದೀಪದ ಬುಡ ಕತ್ತಲು”, “ಚಿನ್ನದ…
ದಿವಂಗತ ಮಧುಕರ್ ಶೆಟ್ಟಿ ಸಾಹೇಬರು ತಾವು ಚಾಮರಾಜನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ತಮ್ಮ ಸಂಬಂಧಿಕರು ಮನೆಗೆ ಬಂದಾಗ ಅತಿಥಿಗಳಿಗೆ ಮಲಗಲು ಒಂದು ಮಂಚವನ್ನು ಬಾಡಿಗೆಗೆ ಪಡೆದಿದ್ದರಂತೆ,ಸರ್ ಮಾತ್ರ ಸದಾ ನೆಲದ ಮೇಲೆ ಒಂದು ಚಾಪೆ ಹಾಸಿಕೊಂಡು ಮಲಗುವ ಅಭ್ಯಾಸವಿತ್ತು. ಜೀವನವನ್ನು ಹೊರೆ ಮಾಡಿಕೊಳ್ಳದೆ ಕನಿಷ್ಠ ವಸ್ತುಗಳೊಂದಿಗೆ ತೀರಾ ಅಗತ್ಯ ಅವಶ್ಯ ಪದಾರ್ಥಗಳನ್ನು ಮಾತ್ರ ಖರೀದಿಸಿ ಸ್ವಂತ ಮಾಡಿಕೊಳ್ಳುತ್ತಿದ್ದರಂತೆ. ನಿತ್ಯದ ಖರ್ಚಿನ ಬಗ್ಗೆ ಡೈರಿಯಲ್ಲಿ ಬರೆದಿಡುತ್ತಿದ್ದರಂತೆ. ತಿಂಗಳ ಕೊನೆಯಲ್ಲಿ ಅಧೀನ ಸಿಬ್ಬಂದಿಗಳಿಂದಲೂ ಸಾಲ ಪಡೆಯುತ್ತಿದ್ದರಂತೆ. ಒಟ್ಟಾರೆ ಲೆಕ್ಕದಲ್ಲಿ ಪಕ್ಕ. ಪ್ರತಿ ಬಾರಿ ವರ್ಗಾವಣೆಯಾದಾಗಲೂ, ನಾಲ್ಕು ಬ್ಯಾಗ್ ಗಳಿಗಿಂತ ಹೆಚ್ಚಿಗೆ ಲಗೇಜ್ ಇರುತ್ತಿರಲಿಲ್ಲ. ಹಾಗೆಯೇ ಅದನ್ನು ಸಾಗಿಸಲು ಎಂದಿಗೂ ಸರ್ಕಾರಿ ವಾಹನವನ್ನು ಬಳಸಿಲ್ಲ. ಸಾಮಾನ್ಯವಾಗಿ ಕರ್ತವ್ಯ ಮಾಡಿದ ಕಡೆಯಲ್ಲಿ ಅಧಿಕಾರ ಉಪಯೋಗಿಸಿಕೊಂಡು ಕೆಲವೊಮ್ಮೆ ದುರುಪಯೋಗ ಪಡಿಸಿಕೊಂಡು ಒಂದೊಂದು ಆಸ್ತಿ ಕಟ್ಟಡ ಕಾಂಪ್ಲೆಕ್ಸ್ ಕಟ್ಟಿ ಬಾಡಿಗೆ ಬರುವ ರೀತಿ ಮಾಡಿಕೊಳ್ಳಬೇಕು ಎಂಬ ಧೋರಣೆ ಇರುವವರ ನಡುವೆ ಸಾಹೇಬರು ಮಾತ್ರ ಈ ಬಾಡಿಗೆ ಜಗತ್ತಿನಲ್ಲಿ ಒಬ್ಬ ಲೋಕ…
ಮೋಕ್ಷ ಕ್ರಿಯೇಷನ್ಸ್ ಲಾಂಛನದಲ್ಲಿ ಭಾಸ್ಕರ ನಾಯ್ಕ್ ನಿದೇಶನ, ನಿರ್ಮಾಣದಲ್ಲಿ ತಯಾರಾದ ಕುದ್ರು ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಕುದ್ರು ಸಿನಿಮಾದ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿದೆ. ಕುದ್ರು ಸಿನಿಮಾದಲ್ಲಿ ಉತ್ತಮ ಸಂದೇಶವುಳ್ಳ ಕತೆಯಿದೆ. ಮತ್ತೊಂದು ಕರಾವಳಿ ಭಾಗದ ಚಿತ್ರ ಕನ್ನಡ ಹಾಗೂ ತುಳು ಭಾಷೆಯಲ್ಲಿ ಕುದ್ರು ಎಲ್ಲೆಡೆ ಸದ್ದು ಮಾಡುತ್ತಿದೆ. “ಕುದ್ರು” ವಿನ ಮೂರನೇ ಹಾಡು ಉಡುಪಿ ಹಾಗೂ ಮಲೆನಾಡು ಪ್ರದೇಶದ ಸುಂದರ ಪರಿಸರದಲ್ಲಿ ಚಿತ್ರಿಕರಿಸಿದ ಗೀತೆಯಾಗಿದೆ. “ಉಡಾಯಿಸು” ಅನ್ನುವ ಗೀತೆಯನ್ನು ಕಾಲೇಜು ಹುಡುಗರಿಗಾಗಿ ಚಿತ್ರೀಕರಿಸಿದ ಹಾಡು. ಕಾಲೇಜ್ ನಲ್ಲಿ ಕ್ಲಾಸ್ ಬಂಕ್ ಮಾಡಿ ಎಂಜಾಯ್ ಮಾಡುವ ಗೀತೆಯಿದು. ಕಲ್ಯಾಣಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ನೀರಿನಿಂದ ಸುತ್ತುವರೆದ ದ್ವೀಪವನ್ನು ತುಳುವಿನಲ್ಲಿ “ಕುದ್ರು” ಎನ್ನುತ್ತಾರೆ. ಈ ಚಿತ್ರದ ಕಥೆಯನ್ನು ಭಾಸ್ಕರ ನಾಯ್ಕ್ ಬರೆದಿದ್ದು, ಅವರೇ ನಿರ್ದೇಶಕರಾಗಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. “ಕುದ್ರು” ದ್ವೀಪದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ಪಂಗಡದವರು ವಾಸಿಸುತ್ತಿರುತ್ತಾರೆ. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಈ ರೀತಿಯಲ್ಲಿ ಚಿತ್ರದ ಕಥೆ ಸಾಗುತ್ತದೆ.…














