Author: admin

ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ವತಿಯಿಂದ ಹನುಮಾನ್‌ ಜಯಂತ್ಯುತ್ಸವ ಸ್ವಾರ್‌ಗೇಟ್‌ನ ಮಹಾರಾಷ್ಟ್ರ ಛೇಂಬರ್‌ ಆಫ್‌ ಕಾಮರ್ಸ್‌ ಇದರ ಲಕಾಕಿ ಹಾಲ್‌ನಲ್ಲಿ ನಡೆಯಿತು. ಪುಣೆ ಬಳಗದ ಗೌರವಾಧ್ಯಕ್ಷ ಸದಾನಂದ ಕೆ. ಶೆಟ್ಟಿ, ಅಧ್ಯಕ್ಷ ಪ್ರಭಾಕರ ಶೆಟ್ಟಿ ಮತ್ತು ವಿಭಾಗದ ಅಧ್ಯಕ್ಷೆ ಜಯಲಕ್ಷ್ಮೀ ಪಿ. ಶೆಟ್ಟಿ ಅವರು ಹನುಮಾನ್‌ ದೇವರಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು, ಬಳಗದ ಸದಸ್ಯರಿಂದ ದಾಮೋದರ ಬಂಗೇರ ಅವರ ಮಾರ್ಗದರ್ಶನದಲ್ಲಿ ಬಳಗದ ಭಜನ ಮಂಡಳಿಯಿಂದ ಭಜನ ಕಾರ್ಯಕ್ರಮ ನಡೆಯಿತು. ಭಕ್ತರೆಲ್ಲರೂ ಸಾಮೂಹಿಕವಾಗಿ ಹನುಮಾನ್‌ ಚಾಲೀಸ್‌ ಅನ್ನು ಪಠಿಸಿದರು. ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸದಾನಂದ ಕೆ. ಶೆಟ್ಟಿ, ಅಧ್ಯಕ್ಷ ಪ್ರಭಾಕರ ಶೆಟ್ಟಿ, ವೀಣಾ ಪಿ. ಶೆಟ್ಟಿ ದಂಪತಿ, ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಗಣೇಶ್‌ ಹೆಗ್ಡೆ, ಬಳಗದ ಕಾರ್ಯದರ್ಶಿ ರೋಹಿತ್‌ ಶೆಟ್ಟಿ ಮತ್ತು ಪದಾಧಿಕಾರಿಗಳು, ಶ್ರೀ ವಜ್ರಮಾತಾ ಮಹಿಳಾ ವಿಕಾಸ…

Read More

ಪುಣೆ ತುಳು ಕನ್ನಡಿಗರ ಆಶೋತ್ತರದಂತೆ ನೂತನ ಸಂಸ್ಥೆಯೊಂದರ ಉದಯವಾಗಿದ್ದು ನೂತನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ತುಳು ಕನ್ನಡಿಗರ ಕಣ್ಮಣಿ, ಪುಣೆ ತುಳು ಕೂಟದ ಮಾಜಿ ಅಧ್ಯಕ್ಷ, ಸಮಾಜಸೇವಕ, ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು. ನಗರದ ವಾರ್ಜೆಯಲ್ಲಿರುವ ಹೋಟೆಲ್ ಕನಿಷ್ಕಾ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆಯನ್ನು ನಡೆಸಲಾಯಿತು. ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಪುಣೆಯಲ್ಲಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡ ಮೇರು ವ್ಯಕ್ತಿತ್ವದ ವ್ಯಕ್ತಿ. ಪುಣೆಯಲ್ಲಿ ಉದ್ಯಮ ರಂಗದಲ್ಲಿ ಯಶಸ್ಸನ್ನು ಸಾಧಿಸಿದ ರಾಜ್ ಕುಮಾರ್ ಎಂ ಶೆಟ್ಟಿಯವರು 2010 ರಿಂದ 2014 ರ ವರೆಗೆ ಪುಣೆ ತುಳುಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪುಣೆ ತುಳುಕೂಟದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಸಾಧಕನೆಂದರೆ ತಪ್ಪಾಗಲಾರದು. ಯಾಕೆಂದರೆ ತುಳುನಾಡ ಭಾಷೆ, ಸಂಸ್ಕೃತಿಯ ಆರಾಧಕರಾಗಿದ್ದ ರಾಜ್ ಕುಮಾರ್ ಶೆಟ್ಟಿಯವರು ಪುಣೆ ತುಳುಕೂಟದ ಚುಕ್ಕಾಣಿಯನ್ನು ವಹಿಸಿಕೊಂಡು ಪುಣೆಯಲ್ಲಿರುವ ತುಳುನಾಡ ಬಾಂಧವರೆಲ್ಲರನ್ನು ಜಾತಿ ಮತ…

Read More

ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ವಿವಾಹವಾದರು. ಅಥಿಯಾ ಮತ್ತು ಕೆಎಲ್ ರಾಹುಲ್ ಅವರು ಕೇವಲ 100 ಅತಿಥಿಗಳ ಸಮ್ಮುಖದಲ್ಲಿ ವಿವಾಹವಾದರು. ಇವರಲ್ಲಿ ಬಾಲಿವುಡ್ ಮತ್ತು ಕ್ರಿಕೆಟ್ ಪ್ರಪಂಚದ ಅನೇಕ ಸೆಲೆಬ್ರಿಟಿಗಳನ್ನು ಒಳಗೊಂಡಿದ್ದರು. ಮದುವೆಯ ನಂತರ, ಕೆಎಲ್ ಮತ್ತು ಅಥಿಯಾ ಅವರು ಬಾಲಿವುಡ್ ಮತ್ತು ಕ್ರಿಕೆಟ್ ಸೆಲೆಬ್ರಿಟಿ ಗಳಿಗಾಗಿ ವಿಶೇಷ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಅಲ್ಲದೆ ಅನೇಕ ಕೈಗಾರಿಕೋದ್ಯಮಿಗಳು ಮತ್ತು ರಾಜಕಾರಣಿಗಳು ಸಹ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಸಮಾರಂಭದಲ್ಲಿ ಸುನೀಲ್ ಶೆಟ್ಟಿ, ”ಕೆಎಲ್ ರಾಹುಲ್ ನನ್ನ ಅಳಿಯನಲ್ಲ, ಅವರ ಮಗ. ಸಂಬಂಧದಿಂದ ನಾನು ಅವರ ಮಾವ ಆಗಿದ್ದರೂ, ಸಹ ಅವರು ನನ್ನ ಮಗನೇ. ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಆರತಕ್ಷತೆ ಐಪಿಎಲ್ ನಂತರ ನಡೆಯಲಿದೆ. ಮದುವೆಯ ನಂತರ, ಸುನೀಲ್ ಶೆಟ್ಟಿ ಹಾಗೂ ಅವರ ಮಗ ಅಹಾನ್ ಶೆಟ್ಟಿಯೊಂದಿಗೆ ಪೋಸ್ ನೀಡಿದರು. ಅಲ್ಲದೆ ಸಿಹಿ…

Read More

ನವೆಂಬರ್ 24,25,26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ರಾಜ್ಯದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೊಟ್ ರವರಿಗೆ ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರೂ ಆಗಿರುವ ಅಶೋಕ್ ರೈ ಅವರು ಆಮಂತ್ರಣ ಪತ್ರ ನೀಡಿ ಕಂಬಳಕ್ಕೆ ಆಹ್ವಾನ ಮಾಡಿದರು. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಶಾಸಕರ ನೇತೃತ್ವದ ನಿಯೋಗ ಕಂಬಳದ ಬಗ್ಗೆ ಪೂರ್ಣ ವಿವರಣೆ ನೀಡಿದರು. ನಿಯೋಗದಲ್ಲಿ ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ್ ರೈ ದರ್ಬೆ, ಅಜಿತ್ ಹೆಗ್ಡೆ, ತುಳು ಕೂಟದ ಅಧ್ಯಕ್ಷರಾದ ಸುಂದರ್ ರಾಜ್ ರೈ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಸೇರಿದಂತೆ ತುಳು ಕೂಟ ಹಾಗೂ ಕಂಬಳ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

Read More

ಶುದ್ಧ ಭಾರತೀಯ ಸಾಂಪ್ರದಾಯಿಕ ಉಡುಗೆ ಧೋತಿ ಎಂದರೆ ಹಳೆಯ ಕಾಲದ ಧಿರಿಸು ಎಂದು ಮೂಗು ಮುರಿಯುತ್ತಿರುವ ಕಾಲ‌ ಬದಲಾಗಿದೆ. ಇತ್ತೀಚೆಗಂತು ಧೋತಿ ಪ್ಯಾಶನ್ ಲೋಕದಲ್ಲಿ ಮಿಂಚುತ್ತಿದ್ದು ಸಂಪ್ರದಾಯ ಬದ್ಧ ಉಡುಗೆಯಾದರೂ ಮಾಡರ್ನ್‌ ಲುಕ್ ಪಡೆದುಕೊಂಡಿದೆ. ಧೋತಿ ಸಂಪ್ರದಾಯದ ಚೌಕಟ್ಟಿನೊಳಗೆ ನಲಿಯುತ್ತಿರುವ‌ ಕಾಲದಲ್ಲೇ ಪ್ಯಾಶನ್ ಜಗತ್ತಿಗೂ ಲಗ್ಗೆ ಇಟ್ಟಿದ್ದು ವಿಶೇಷ. ಚಿಣ್ಣರಿಂದ ವೃದ್ದರ‌ವರೆಗೂ ಎಲ್ಲರೂ ‌ಇಷ್ಟ ಪಡುವ ಧೋತಿ ಆಧುನಿಕತೆಯ ಅಟ್ಟಹಾಸದಲ್ಲಿ ನಲುಗಿ ಹೋಗದೆ ದಿನೆ ದಿನೆ ಹೆಚ್ಚು ಮಾನ್ಯತೆ ‌ಪಡೆಯುತ್ತಿರುವುದು ಆಶ್ಚರ್ಯವಾದರೂ ವಾಸ್ತವ. ಪ್ಯಾಶನ ಪ್ರಿಯರ ಅಭಿರುಚಿಗೆ ಒಪ್ಪುವಂತಹ ಡಿಸೈನ್ ಬಟ್ಟೆಗಳು ಯಶಸ್ಸು ಪಡೆಯುತ್ತಿದ್ದರೂ ಈ ಎಲ್ಲವುದರ ನಡುವೆಯು ಸರಳತೆ, ಸ್ವಚ್ಛತೆ, ಶಿಸ್ತು, ನಮ್ಮ ಸಂಸ್ಕೃತಿ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಗರಿಗೆದರಿ ಆದಿಯಿಂದಲೂ ತನ್ನ ಸ್ಥಾನ ಉಳಿಸಿಕೊಂಡ ಧೋತಿ ಅಪಾರ ಬೇಡಿಕೆ ಗಿಟ್ಟಿಸಿಕೊಂಡಿದೆ. ಈಗಂತೂ ಪ್ಯಾಶನ್ ಲೋಕದಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಹರಿದಾಡಿದರೂ ಧೋತಿ ಬಗ್ಗೆ ಜನರಿಗೆ ಹೊಸ ಆಕರ್ಷಣೆ ಹಾಗೂ ಆಸಕ್ತಿ ‌ಮೂಡಿರುವುದು ಈ ಉದ್ಯಮದ ಪ್ರಗತಿಯ ಗುಟ್ಟು. …

Read More

ಹಿರಿಯಡ್ಕ ಬಂಟರ ಸಂಘ(ರಿ.) ಹಿರಿಯಡ್ಕ ಇದರ ವಾರ್ಷಿಕ ಸಮ್ಮಿಲನ ಸಮಾರಂಭವು ಹಿರಿಯಡ್ಕದಲ್ಲಿ ನಿತೀಶ್ ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಮಣಿ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಮಾಜಿ ಅಧ್ಯಕ್ಷರೂ ನಿವೃತ್ತ ಮುಖ್ಯೋಪಧ್ಯಾಯರೂ ಆಗಿರುವ ಕುದಿ ವಸಂತ ಶೆಟ್ಟಿ ಉದ್ಘಾಟಕರ ವ್ಯಕ್ತಿ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯಡ್ಕದಲ್ಲಿ ಸಾರ್ಥಕ 45 ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿರುವ ದೇವದಾಸ್ ಕಾಮತ್ ಸುಧಾ ದೇವದಾಸ್ ಕಾಮತ್, ಹಾಗೂ ಉದಯೋನ್ಮಖ ಲೇಖಕಿ ನೀತಾ ರಾಜೇಶ್ ಶೆಟ್ಟಿ, ಕ್ರೀಡಾ ಸಾಧಕಿ ಸ್ವಸ್ತಿ ಶೆಟ್ಟಿಯವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು ಮತ್ತು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಸಂಘದ ಪ್ರಥಮ ಅಧ್ಯಕ್ಷರಾದ ವಿಶ್ವನಾಥ ರೈ ಮಾತನಾಡಿದರು, ಸಂಘದ ಉಪಾಧ್ಯಕ್ಷರಾದ ರವೀಂದ್ರನಾಥ್ ಶೆಟ್ಟಿ ಸ್ವಾಗತಿಸಿದರು. ಸಂಜನಾ ರೈ ಹಾಗೂ ಸುರೇಶ್ ಶೆಟ್ಟಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂದ್ಯಾ ಶೆಟ್ಟಿ ವಂದಿಸಿದರು. ನೀತಾ ರಾಜೇಶ್ ಶೆಟ್ಟಿ…

Read More

ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಾಲಯದ ಹೊಸ ಆಡಳಿತ ಮಂಡಳಿ ಏಪ್ರಿಲ್ 2 ರಂದು ಮಲಬಾರ್ ದೇವಸ್ವಂ ಬೋರ್ಡಿನ ಅಧಿಕಾರಿ ರಘು ಹಾಗೂ ಊರ ಹತ್ತು ಸಮಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಮತ್ತು ಕಾನೂನು ಬದ್ಧವಾಗಿ ನೂತನ ಸಮಿತಿ ಅಧಿಕಾರ ವಹಿಸಿಕೊಂಡಿತು. ಮುಂದಿನ ಮೊಕ್ತೇಸರರಾಗಿ ಉದ್ಯಮಿ, ಸಮಾಜಸೇವಕ ತಾರಾನಾಥ ರೈ ಪಡ್ಡoಬೈಲು ಗುತ್ತು, ಟ್ರಸ್ಟಿಗಳಾಗಿ ರಘುರಾಮ ರೈ ಕಟ್ಟತ್ತಾಡೆ, ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ ಆಯ್ಕೆಯಾದರು.

Read More

ಬ್ಯಾಂಕಿಂಗ್‌ ಉದ್ಯಮದ ಉಗಮ ಸ್ಥಾನ, ತೊಟ್ಟಿಲು, ತವರೂರು ಎಂದೇ ಖ್ಯಾತಿ ಪಡೆದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್‌ ದಿಗ್ಗಜರುಗಳಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರು ಅವಿಸ್ಮರಣೀಯ. ಒಬ್ಬ ವ್ಯಕ್ತಿ ಸಮಾಜಕ್ಕೆ ಸಲ್ಲಿಸಿದ ಮಹತ್ವದ ಸೇವೆಯನ್ನು ಮುಂದಿನ ಜನಾಂಗ ನೆನಪಿನಲ್ಲಿಟ್ಟುಕೊಳ್ಳಬೇಕು. ವೈಜ್ಞಾನಿಕವಾಗಿಯೂ ಇದೊಂದು ಪ್ರಬುದ್ಧ ಸಿದ್ಧಾಂತವೆಂದರೂ ತಪ್ಪಾಗಲಾರದು. ಅವರ ಜನ್ಮ ದಿನ ಇರುವುದು ಏಪ್ರಿಲ್ ತಿಂಗಳಲ್ಲಿ. (ಎಪ್ರಿಲ್‌ 30) ಅವರನ್ನು ಸ್ಮರಿಸುವುದು ನಿಜಕ್ಕೂ ಔಚಿತ್ಯಪೂರ್ಣ. 1962 ರಿಂದ 1979ರವರೆಗೆ ವಿಜಯ ಬ್ಯಾಂಕ್‌ನ ಅಧ್ಯಕ್ಷರಾಗಿ ಅನೇಕ ಸಾಧನೆಗಳನ್ನು ಮಾಡಿ ಬ್ಯಾಂಕ್‌ಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹಾನ್‌ ಚೇತನ. ಇಂದು ವಿಜಯ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡಾ ದೊಂದಿಗೆ ವಿಲೀನವಾದರೂ ಸುಂದರಾಮ ಶೆಟ್ಟಿ ಹೆಸರು ಬ್ಯಾಂಕ್‌ನೊಂದಿಗೆ ಅಚ್ಚಳಿಯದೇ ಉಳಿದಿದೆ. ರಾಜಮರ್ಜಿಯ ಸಮೃದ್ಧ ಮನೆತನದಲ್ಲಿ ಹುಟ್ಟಿದರೂ ಕೆಳವರ್ಗದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯ ಸುಂದರರಾಮ ಶೆಟ್ಟಿ ಅವರಿಗಿತ್ತು. ಅವರಿಗೆ ಬ್ಯಾಂಕ್‌ನ ಲಾಭವನ್ನು ಹೆಚ್ಚಿಸುವುದೊಂದೇ ಉದ್ಯಮದ ಉದ್ದೇಶವಾಗಿರಲಿಲ್ಲ. ಉದ್ಯಮವು ಸಮಾಜದ ಅನೇಕರಿಗೆ ಉದ್ಯೋಗಾವಕಾಶಗಳನ್ನು ನೀಡುವುದರೊಂದಿಗೆ…

Read More

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್‌ ಆರ್‌. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ. ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್‌ ಹಾಲ್ಕಲ್‌ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲ‌ಗಳ ವತಿಯಿಂದ ನೂತನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Read More

ಪುಣೆ ತುಳು ಕನ್ನಡಿಗರ ಆಶೋತ್ತರದಂತೆ ನೂತನ ಸಂಸ್ಥೆಯೊಂದರ ಉದಯವಾಗಿದ್ದು ನೂತನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ತುಳು ಕನ್ನಡಿಗರ ಕಣ್ಮಣಿ, ಪುಣೆ ತುಳು ಕೂಟದ ಮಾಜಿ ಅಧ್ಯಕ್ಷ, ಸಮಾಜಸೇವಕ, ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು. ನಗರದ ವಾರ್ಜೆಯಲ್ಲಿರುವ ಹೋಟೆಲ್ ಕನಿಷ್ಕಾ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆಯನ್ನು ನಡೆಸಲಾಯಿತು. ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ಪುಣೆಯಲ್ಲಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡ ಮೇರು ವ್ಯಕ್ತಿತ್ವದ ವ್ಯಕ್ತಿ. ಪುಣೆಯಲ್ಲಿ ಉದ್ಯಮ ರಂಗದಲ್ಲಿ ಯಶಸ್ಸನ್ನು ಸಾಧಿಸಿದ ರಾಜ್ ಕುಮಾರ್ ಎಂ ಶೆಟ್ಟಿಯವರು 2010 ರಿಂದ 2014 ರ ವರೆಗೆ ಪುಣೆ ತುಳುಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪುಣೆ ತುಳುಕೂಟದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಸಾಧಕನೆಂದರೆ ತಪ್ಪಾಗಲಾರದು. ಯಾಕೆಂದರೆ ತುಳುನಾಡ ಭಾಷೆ, ಸಂಸ್ಕೃತಿಯ ಆರಾಧಕರಾಗಿದ್ದ ರಾಜ್ ಕುಮಾರ್ ಶೆಟ್ಟಿಯವರು ಪುಣೆ ತುಳುಕೂಟದ ಚುಕ್ಕಾಣಿಯನ್ನು ವಹಿಸಿಕೊಂಡು ಪುಣೆಯಲ್ಲಿರುವ ತುಳುನಾಡ ಬಾಂಧವರೆಲ್ಲರನ್ನು ಜಾತಿ ಮತ…

Read More