ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಇದು ಮಾನವರು, ಸಸ್ಯಗಳು, ಪ್ರಾಣಿಗಳು, ನೀರು, ಗಾಳಿ ಇತ್ಯಾದಿಗಳನ್ನು ಒಳಗೊಂಡಂತೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಜೀವಂತ ಮತ್ತು ನಿರ್ಜೀವ ಘಟಕಗಳನ್ನು ಒಳಗೊಂಡಿದೆ. ನಾವು ಬದುಕಲು ಬೇಕಾದ ಎಲ್ಲವನ್ನು ನಮ್ಮ ಪರಿಸರ ನಮಗೆ ಒದಗಿಸುತ್ತದೆ. ನಮ್ಮ ಪರಿಸರವನ್ನು ಉಳಿಸುವ ಮತ್ತು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು.
ಪ್ರಕೃತಿಯು ನಮ್ಮ ಪರಿಸರ ವ್ಯವಸ್ಥೆಯನ್ನು ನಿಖರವಾಗಿ ವಿನ್ಯಾಸಗೊಳಿಸಿದೆ. ಮನುಷ್ಯ ತನ್ನ ವೈಯಕ್ತಿಕ ಪ್ರಯೋ ಜನಕ್ಕಾಗಿ ಪರಿಸರದ ಮೇಲೆ ನಿರಂತರ ವಾಗಿ ದಾಳಿ ನಡೆಸು ತ್ತಲೇ ಬಂದಿದ್ದಾನೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ. ಇದು ನಡೆಯಬಾರದೆಂದರೆ ಪರಿಸರ ಸಂರಕ್ಷಣೆ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸುವುದು ಅತೀಮುಖ್ಯ. ಪರಿಸರ ಸಂರಕ್ಷಣೆಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮ ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ.
ನಿಸರ್ಗದ ಜತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರ ಉಳಿವಿಗೆ ಪೂರಕ ವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಆವಿಷ್ಕಾರ ದಿಂದ ಇಂದಿನ ಮಾನವ ಜೀವನ ಹಾಗೂ ಚಟುವಟಿಕೆ ಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರವಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯನ ಉದಾಸೀನತೆ, ತಿಳಿ ಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ನಮಗೆಲ್ಲ ರಿಗೂ ಚೆನ್ನಾಗಿ ಗೊತ್ತಿರುವ ಸತ್ಯ. ಪರಿಸರ ನಾಶಕ್ಕೆ ಪ್ರಮುಖ ಕಾರಣಗಳೆಂದರೆ ವಾಯುಮಾಲಿನ್ಯ, ಅರಣ್ಯ ನಾಶ, ಅಧಿಕ ಜನಸಂಖ್ಯೆ, ಅಸಮರ್ಪಕ ಘನ ತ್ಯಾಜ್ಯ ವಿಲೇವಾರಿ, ಶಬ್ದ ಮಾಲಿನ್ಯ, ಓಝೋನ್ ಪದರದ ಹಾನಿ… ಇತ್ಯಾದಿಗಳ ಬಗ್ಗೆ ನಮಗೆ ಚಿಕ್ಕ ವಯಸ್ಸಿನಿಂದಲೂ ಶಾಲಾಕಾಲೇಜುಗಳಲ್ಲಿ ತಿಳಿಸುತ್ತಲೇ ಬಂದಿದ್ದಾರೆ. ಆದರೆ ಇತ್ತ ನಾವ್ಯಾರು ಹೆಚ್ಚು ತಲೆಕೆಡಿಸಿಕೊಳ್ಳದಿರುವುದರಿಂದ ಪರಿಸರ ನಾಶ ಹೆಚ್ಚುತ್ತಲೇ ಸಾಗಿದೆ. ಹಾಗೆಂದು ಕಾಲ ವಿನ್ನೂ ಮಿಂಚಿಲ್ಲ. ನಾವೆಲ್ಲರೂ ಒಗ್ಗೂಡಿ ಕಾರ್ಯೋನ್ಮುಖರಾದರೆ ನಮ್ಮ ಪರಿಸರವನ್ನು ಉಳಿಸಬಹುದು. ಹೇಗೆಂದರೆ
– ಓಝೋನ್ ಪದರ ಹಾನಿಯಾಗಲು ಮುಖ್ಯ ಕಾರಣವಾಗಿರುವ ಕ್ಲೋರೋ ಫ್ಲೋರೋ ಕಾರ್ಬನ್ ಬಳಕೆಯನ್ನು ಕಡಿಮೆ ಮಾಡುವುದು.
– ಮರಗಳನ್ನು ಕಡಿಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಅರಣ್ಯಗಳನ್ನು ಸಂರಕ್ಷಿಸುವುದು.
– ಕಾಡಿಗೆ ಕಿಚ್ಚಿಡುವುದು ಮತ್ತು ಕಸ ಸುಡುವುದನ್ನು ತಪ್ಪಿಸುವುದು.
– ಕೊಳಚೆ ನೀರು ಮತ್ತು ಕೈಗಾರಿಕೆ ತ್ಯಾಜ್ಯಗಳಿಂದ ನೀರು ಮಾಲಿನ್ಯಗೊಳ್ಳುವುದನ್ನು ನಿಯಂತ್ರಿಸುವುದು.
– ಮರುಬಳಕೆ ಮತ್ತು ಪರಿಸರ ಸ್ನೇಹಿ ಉತ್ಪನ್ನವನ್ನು ಮಾತ್ರ ಬಳಸುವುದು.
-ಜೀವವೈವಿಧ್ಯದ ಸಂರಕ್ಷಣೆ.
-ಸೈಕಲ್, ಎಲೆಕ್ಟ್ರಾನಿಕ್ ವಾಹನ ಮತ್ತು ಇತರ ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯ ಬಳಕೆಗೆ ಪ್ರೋತ್ಸಾಹ.
- ಕೈಗಾರಿಕ ತ್ಯಾಜ್ಯಗಳನ್ನು ಸಂಸ್ಕರಿಸದೆ ನೇರವಾಗಿ ಜಲಮೂಲಗಳಿಗೆ ಬಿಡುವು ದನ್ನು ತಡೆಯುವುದು.
– ಅಪಾಯಕಾರಿ ತ್ಯಾಜ್ಯಗಳನ್ನು ಜಾಗ್ರತೆಯಿಂದ ವಿಲೇವಾರಿ ಮಾಡುವುದು.
– ಒಣ ಮತ್ತು ಹಸಿ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಸಮರ್ಪಕ ವಿಲೇವಾರಿ.
– ಸಂಚಾರಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅವಲಂಬನೆ.
– ಸಾಧ್ಯವಾದಷ್ಟು ರಾಸಾಯನಿಕ ಮುಕ್ತ, ಸಾವಯವ ಮತ್ತು ಸಸ್ಯಮೂಲದ ಆಹಾರ ಪದಾರ್ಥಗಳ ಸೇವನೆ.
– ಮಳೆಯ ನೀರನ್ನು ಇಂಗಿಸಲು ಇಂಗುಗುಂಡಿಗಳ ನಿರ್ಮಾಣ.
– ಜನಸಂಖ್ಯೆ ನಿಯಂತ್ರಣಕ್ಕೆ ಸೂಕ್ತ ಕ್ರಮ.
– ನಮ್ಮ ಜನಪ್ರತಿನಿಧಿಗಳನ್ನು ಪರಿಸರ ಪ್ರೇಮಿಗಳಾಗಿ ಪರಿವರ್ತಿಸುವುದು.
ನಮ್ಮ ವಾತಾವರಣವನ್ನು ಮಾಲಿನ್ಯ ಮುಕ್ತವಾಗಿಸುವುದು, ನಮ್ಮ ಸುತ್ತ ಮುತ್ತಲಿನ ಸ್ವತ್ಛತೆ ಮತ್ತು ನೈರ್ಮಲ್ಯ ವನ್ನು ಕಾಪಾಡಿಕೊಳ್ಳುವುದು ಹಾಗೂ ಆರೋಗ್ಯಕರ ಪರಿಸರ ವ್ಯವಸ್ಥೆಗಾಗಿ ಆತ್ಮಸಾಕ್ಷಿಯಾಗಿ ಕೆಲಸ ಮಾಡುವ ಮೂಲಕ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
‘ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರು ಸಮಸ್ಯೆಗಳು ಪರಿಹಾರ ವಾದಂತೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಈಗ ಜಾಗೃತರಾಗಿರಿ, ಈಗ ಪರಿಸರವನ್ನು ಉಳಿಸಿ ನಾಳೆ ಸಂಪಾದಿಸಿ’.