ಚಿಕ್ಕಮಗಳೂರು ಸೇಂಟ್ ಮೆರೀಸ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಕಲಿಯುತ್ತಿರುವ ಉಡುಪಿ ಮೂಲದ ಸಫಲ್ ಎಸ್.ಶೆಟ್ಟಿ ಈ ಬಾರಿಯ ಐ.ಸಿ.ಎಸ್.ಇ. ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 98.2 ಅಂಕಗಳನ್ನು ಪಡೆಯುವುದರೊಂದಿಗೆ 10ನೇ ಸ್ಥಾನವನ್ನು ಪಡೆಯುವುದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ.
ಈತ ಉಡುಪಿ ಮೂಲದ ಚಿಕ್ಕಮಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಎನ್.ಸಖಾರಾಂ ಶೆಟ್ಟಿ ಮತ್ತು ಡಾ.ಬೆಳ್ಕಳೆ ಶರ್ಮಿಳಾ ಶೆಟ್ಟಿಯವರ ಪುತ್ರ. ಮುಂದೆ ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಸಫಲ್ ಶೆಟ್ಟಿ ಪ್ರಸ್ತುತ ಕ್ರಿಕೆಟ್ ನಲ್ಲಿ ಕೂಡಾ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಈತ ಕೊಕ್ಕರ್ಣೆ ಬಂಡ್ಸಾಲೆ ಮನೆ ದಿ.ಶೇಖರ್ ಶೆಟ್ಟಿ ಮತ್ತು ಶ್ರೀಮತಿ ಬೆಳ್ಕಳೆ ಲಲಿತಾ ಎಸ್.ಶೆಟ್ಟಿಯವರ ಮೊಮ್ಮಗ.