– ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ .ಉಡುಪಿ ಜಿಲ್ಲೆ.
ಪರಿಸರದಲ್ಲಿ ಸಿಗುವ ಸಸ್ಯಜನ್ಯ ಸಂಪತ್ತುಗಳಲ್ಲಿ ಪುದಿನ ಎಂಬ ಎಲೆ ದೇಹಕ್ಕೆ ಪರಿಣಾಮಕಾರಿ ಸಂಪತ್ತನ್ನು ನೀಡುತ್ತದೆ. ಅದಲ್ಲದೆ ಪ್ರಾಕೃತಿಕವಾಗಿ ನೀಡುವಂತಹ ಪುದಿನ ದೈನಂದಿನ ಆಹಾರ ಪದಾರ್ಥಗಳಲ್ಲಿ ಮತ್ತು ಅಡುಗೆ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಅದಲ್ಲದೆ, ಪುದಿನ ಸೊಪ್ಪಿನಿಂದ ಬೇಕಾಗುವಂತಹ ಸಸ್ಯಜನ್ಯ ಸಂಪತ್ತುಗಳಿಂದ ವಿಶಿಷ್ಟ ರೀತಿಯಲ್ಲಿ ನಾವು ವಿವಿಧ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮತ್ತು ಆಹಾರದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುವಂತಹ ಪ್ರಕೃತಿಗೆ ಸೀಮಿತವಾಗಿರುವಂತಹ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವಾಗ ಅಥವಾ ದೇಹಕ್ಕೆ ಬೇಕಾಗುವಂತಹ ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳನ್ನು ಅಗಾಧ ಪ್ರಮಾಣದಲ್ಲಿ ಪುದಿನ ಸೊಪ್ಪು ನೀಡುತ್ತದೆ ಸೊಪ್ಪಿನ ಬಹುಮುಖ್ಯ ಗುಣಗಳಾದ ವಿಟಮಿನ್ ಸಿ ಹಾಗೂ ಕ್ಯಾಲೋರಿ ಅಂತಹ ಅಂಶಗಳನ್ನು ಎಚ್ಚೆತವಾಗಿ ನೀಡುವುದಲ್ಲದೆ ರಕ್ತ ಪರಿಚಲನೆಗೆ ಇದು ಸಹಕಾರಿಯಾಗುತ್ತದೆ ಪುದಿನ ಸೊಪ್ಪಿನಲ್ಲಿ ಇರುವಂತಹ ಕೈ ಅಂಶವು ದೇಹದಲ್ಲಿನ ಸಕ್ಕರೆ ಕಾಯಿಲೆ ಮಧುಮೇಹ ಮಲಬದ್ಧತೆಯನ್ನು ನಿವಾರಣೆಗೆ ಇದು ಫಲಪ್ರದವಾಗುತ್ತದೆ.
ಪುದೀನಾ ಅನ್ನು ಇಂದಲೂ ಬಳಕೆ ಮಾಡಲಾಗುತ್ತಿದೆ. ಪುದೀನಾ ಹಸಿರು ಬಣ್ಣದಲ್ಲಿದ್ದು ಇದು ವಾಸನೆಯಲ್ಲಿ ಬಹಳ ಅದ್ಭುತವಾಗಿ ಇರುತ್ತದೆ. ಸ್ತ್ರೀಯರ ಸೌಂದರ್ಯ ಹೆಚ್ಚಿಸುವ ಗುಣ ಹೊಂದಿರುವ ಪುದೀನಾ ಸೊಪ್ಪು ಅತ್ಯುತ್ತಮ ಸೌಂದರ್ಯವರ್ಧಕ. ಸರ್ವ ಋತುವಿನಲ್ಲೂ ಸಿಗುವ ಅಡುಗೆಯಲ್ಲಿ ಬಳಸುವ ಸುವಾಸನೆಯುಕ್ತ ಹಾಗೂ ರುಚಿಕರವಾದ ಸೊಪ್ಪು.ಇದನ್ನು ಜ್ಯೂಸ್ ಚಟ್ನಿ ಸಲಾಡ್ ಮಾಡಿಕೊಂಡು ಸೇವನೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಟೂತ್ ಪೇಸ್ಟ್ ನಲ್ಲಿ ಕೂಡ ಪುದೀನಾ ಅನ್ನು ಬಳಕೆ ಮಾಡಲಾಗುತ್ತಿದೆ. ಇದ್ರಲ್ಲಿ ಕೀಟಾಣಗಳು ವಿರುದ್ಧ ಹೋರಾಡುವ ಶಕ್ತಿ ಇದ್ದು ಬಾಯಿಯನ್ನು ಸೂಕ್ಷ್ಮಾಣು ಜೀವಿಗಳಿಂದ ರಕ್ಷಣೆ ಮಾಡುತ್ತದೆ. ಪುದೀನಾ ಸೊಪ್ಪನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು. ಚರ್ಮದ ಆರೋಗ್ಯ ಸುಧಾರಿಸುವುದು. ಇಷ್ಟೇ ಅಲ್ಲದೆ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು.
ಪುದೀನದಲ್ಲಿ ಉತ್ಕರ್ಷಣ ನಿರೋಧಕಗಳು, ಮೆಂಥಾಲ್ ಮತ್ತು ಫೈಟೊನ್ಯೂಟ್ರಿಯಂಟ್ಗಳಿವೆ. ಇವು ಕಿಣ್ವಗಳಿಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ. ಪುದೀನದಲ್ಲಿ ಇರುವ ಸಾರಭೂತ ತೈಲಗಳು ಬಲವಾದ ಆಂಟಿಬ್ಯಾಕ್ಟೀರಿಯಾ ಮತ್ತು ನಂಜು ನಿರೋಧಕ ಪರಿಣಾಮಗಳನ್ನುಇವ ಹೊಂದಿರುತ್ತವೆ. ಅವು ಹೊಟ್ಟೆಯ ಸೆಳೆತವನ್ನು ಶಾಂತಗೊಳಿಸುತ್ತದೆ. ಆಮ್ಲೀಯತೆ ಮತ್ತು ವಾಯುವನ್ನು ಹಿಡಿತದಲ್ಲಿ ಇಡಲು ಸಹಾಯ ಮಾಡುವುದು.
ಪುದೀನದಲ್ಲಿ ಇರುವ ಔಷಧೀಯ ಗುಣ ಹಾಗೂ ಅದರ ಪರಿಮಳವು ಅರೋಮಾ ಥೆರಪಿಗಳಿಗೆ ಸಹಾಯ ಮಾಡುವುದು. ಪುದೀನ ಉಲ್ಲಾಸಕರವಾದ ವಾಸನೆಯನ್ನು ಒಳಗೊಂಡಿರುವುದರಿಂದ ಅದು ಬಹು ಬೇಗ ಶಾಂತ ಹಾಗೂ ಉಲ್ಲಾಸದ ಭಾವನಯನ್ನು ನೀಡುತ್ತವೆ. ಪುದೀನದ ರಸ ಮತ್ತು ಅದರ ಪರಿಮಳವು ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಭಾವನೆಯನ್ನು ಬಹುಬೇಗ ನಿವಾರಿಸುವುದು. ರಕ್ತದಲ್ಲಿ ಸಿರೋಟಿನ್ ಅನ್ನು ತಕ್ಷಣ ಬಿಡುಗಡೆಮಾaಡುವುದು.ಆಗ ಒತ್ತಡ ಹಾಗೂ ಖಿನ್ನತೆಯು ಸರಾಗವಾಗಿ ನಿವಾರಣೆಯಾಗುವುದು. ಮುಖದ ಮೇಲೆ ಆಗಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಪುದೀನಾ ಪುಡಿ ಗೆ ಕಡಲೆ ಹಿಟ್ಟು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಮೂಡಿರುವ ಎಲ್ಲ ಕಪ್ಪು ಕಲೆಗಳು ಮಾಯವಾಗುತ್ತದೆ ಜೊತೆಗೆ ಮುಖದ ಕಾಂತಿ ಹೆಚ್ಚುತ್ತದೆ. ಇನ್ನೂ ಯಾರಿಗೆ ಶೀತ ನೆಗಡಿ ಕೆಮ್ಮು ಆಗುತ್ತದೆ ಅಂತವರಿಗೆ ಇದು ದಿವ್ಯ ಔಷಧವಾಗಿದೆ.ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳು ಇದ್ದು ಕೆಮ್ಮು ನಿವಾರಣೆ ಅತಿ ಬೇಗನೆ ಮಾಡುತ್ತದೆ.ಶ್ವಾಸಕೋಶ ಅನ್ನು ಉತ್ತಮಗೊಳಿಸುತ್ತದೆ. ಇನ್ನೂ ಪುದೀನಾ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಇರುವ ಬೀಟಾ ಕ್ಯಾರೋಟಿನ್ ಅಂಶವು ಕಣ್ಣಿನ ದೃಷ್ಟಿ ಅನ್ನು ಸುಧಾರಿಸುತ್ತದೆ. ಪುದೀನ ಎಲೆಯನ್ನು ಅಗಿಯುವುದರಿಂದ ಬಾಯಿಯ ನೈರ್ಮಲ್ಯ ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುವುದು. ಪುದೀನದಲ್ಲಿನ ಸಾರಭೂತ ತೈಲಗಳು ತಾಜಾತನದ ಉಸಿರಾಟವನ್ನು ಪಡೆಯಲು ಸಹಾಯವಾಗುತ್ತದೆ. ಪುದೀನ ಎಣ್ಣೆಯನ್ನು ಹೊಂದಿರುವ ಮೌತ್ವಾಶ್ವನ್ನು ಬಳಸುವುದರಿಂದ ಬಾಯಿಗೆ ಸಂಬಂಧಿಸಿದ ಅನಾರೋಗ್ಯಗಳನ್ನು ಸುಧಾರಿಸಲು ಸಹಾಯವಾಗುವುದು.
ಬ್ಯಾಕ್ಟೀರಿಯಾ ಕೊಲ್ಲಲು, ಆರೋಗ್ಯಕರ ಒಸಡುಗಳು ಮತ್ತು ಹಲ್ಲುಗಳನ್ನು ಹೊಂದಲು ಸಹಾಯವಾಗುತ್ತದೆ. ಆಗಾಗ ನೆಗಡಿ ಅಥವಾ ಶೀತದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಪುದೀನ ರಸವನ್ನು ಸೇವಿಸಬೇಕು. ಪುದೀನ ರಸವು ನೈಸರ್ಗಿಕವಾಗಿಯೇ ಮೂಗು, ಗಂಟಲು, ಶ್ವಾಸನಾಳ ಮತ್ತು ಶ್ವಾಸಕೋಶದ ದಟ್ಟಣೆಯನ್ನು ತೆರವುಗೊಳಿಸುತ್ತದೆ. ಉಸಿರಾಟದ ಚಾನಲ್ಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತವೆ. ದೀರ್ಘಕಾಲದ ಕೆಮ್ಮಿನಿಂದ ಉಂಟಾಗುವ ಕಿರಿಕಿರಿಯನ್ನು ಸಹ ಸರಾಗಗೊಳಿಸುತ್ತವೆ.
ನಾವು ದೈನಂದಿನ ಅಡುಗೆಯನ್ನು ಸಿದ್ಧಪಡಿಸುವಾಗ ಪುದಿನ ರಸವನ್ನು ಕುಡಿದರೆ ಬ್ಯಾಕ್ಟೀರಿಯಾ ದೂರವಾಗುವುದರೊಂದಿಗೆ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಪ್ರಯತ್ನ ಪಡುತ್ತದೆ. ಅಡುಗೆ ಪದಾರ್ಥಗಳಲ್ಲಿ ಪುದಿನಗಳನ್ನ ಎಚ್ಚೆತವಾಗಿ ಬಳಸುವುದರಿಂದ ದೇಹಕ್ಕೆ ಬರುವಂತಹ ಕಾಶ್ಮಲಗಳನ್ನ ಹೊಡೆದೋಡಿಸುತ್ತದೆ.