ಸುರತ್ಕಲ್ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದ ಮೇಯರ್ ಸುಧೀರ್ ಶೆಟ್ಟಿ ಅವರನ್ನು ಸುಭಾಷಿತ ನಗರ ರೆಸಿಡೆನ್ಸಿ ವೆಲ್ಫೇರ್ ಎಸೋಸಿಯೇಶನ್ (ರಿ) ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಎಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಅವರು ಸುಭಾಷಿತನಗರದ ಅಭಿವೃದ್ದಿಯ ಕುರಿತು ಚರ್ಚಿಸಿದರು.
ಎಸೋಸಿಯೇಶನ್ ಪದಾಧಿಕಾರಿಗಳಾದ ಪುಷ್ಪರಾಜ ಶೆಟ್ಟಿ ಕುಡುಂಬೂರು, ಚಂದ್ರಶೇಖರ ಶೆಟ್ಟಿ, ನರಸಿಂಹ ಸುವರ್ಣ, ಚರಣ್ ಜೆ ಶೆಟ್ಟಿ ಕುಳಾಯಿಗುತ್ತು, ಲಕ್ಷ್ಮೀ ಚಂದ್ರಶೇಖರ್ ಆಚಾರ್ಯ, ತನುಜಾ, ಪ್ರೇಮನಾಥ ಹೆಗ್ಡೆ, ತಾರಾನಾಥ ಸಾಲ್ಯಾನ್, ಶಂಕರ ಶೆಟ್ಟಿ, ರಾಘವೇಂದ್ರ ರಾವ್ ಹಾಗೂ ಸುರತ್ಕಲ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಕಾರ್ಯದರ್ಶಿ ಲೀಲಾಧರ ಶೆಟ್ಟಿ, ರತ್ನಾಕರ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಕಾರ್ಪೋರೇಟರ್ ನಯನ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.
ಸುರತ್ಕಲ್ ಪ್ರದೇಶದ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದಾಗಿ ಮೇಯರ್ ತಿಳಿಸಿದರು. ಮೂಲ ಸೌಕರ್ಯ ಅಭಿವೃದ್ದಿ, ಕುಂಠಿತಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಒಳಚರಂಡಿ, ದಾರಿದೀಪ, ರಸ್ತೆ, ಪ್ರತಿಯೊಂದು ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ, ಸೇವಕನಾಗಿ ಕೆಲಸ ಮಾಡುವುದಾಗಿ ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.