Author: admin
‘ಶಾಲಾ ಕಾಲೇಜುಗಳಲ್ಲಿ ಯಕ್ಷಗಾನೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ಲಭಿಸುತ್ತಿರುವುದು ಇತ್ತೀಚಿನ ಒಂದು ಉತ್ತಮ ಬೆಳವಣಿಗೆ. ಮೂರೂವರೆ ದಶಕಗಳ ಹಿಂದೆ ಎಸ್.ಡಿ.ಎಂ ಲಾ ಕಾಲೇಜಿನಲ್ಲಿ ಪ್ರಾರಂಭವಾದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವದಿಂದಾಗಿ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಬಗ್ಗೆ ವಿಶೇಷ ಜಾಗೃತಿ ಉಂಟಾಗಿದೆ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2024 -25 ನೇ ಸಾಲಿನ ನೂತನ ಯಕ್ಷೋತ್ಸವ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.’ಪ್ರಸ್ತುತ ಅಲ್ಲಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನ ಮತ್ತು ಸ್ಪರ್ಧಾ ಕಾರ್ಯಕ್ರಮಗಳನ್ನು ಯಕ್ಷೋತ್ಸವ ಎಂದು ಕರೆಯುವುದು ವಾಡಿಕೆಯಾಗಿದೆ. ಧರ್ಮಸ್ಥಳ ಸಂಸ್ಥೆಯ ಯಕ್ಷೋತ್ಸವವೇ ಅದಕ್ಕೆ ಮೂಲ ಪ್ರೇರಣೆ. ವಿವಿಧ ವೃತ್ತಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಯಕ್ಷಗಾನದ ಹವ್ಯಾಸಿ ಕಲಾವಿದರಲ್ಲಿ ಹೆಚ್ಚಿನವರು ಬೇರೆ ಬೇರೆ ಕಾಲೇಜು ತಂಡಗಳ ಮೂಲಕ ಯಕ್ಷೋತ್ಸವದಲ್ಲಿ ಭಾಗವಹಿಸಿದವರೇ ಆಗಿದ್ದಾರೆ’ ಎಂದ ಅವರು ಅದಕ್ಕೆ ಕಾರಣವಾದ ಸಂಘಟನಾ ಸಮಿತಿಯನ್ನು ಅಭಿನಂದಿಸಿದರು.ಯಕ್ಷೋತ್ಸವದ ನಿರ್ದೇಶಕರಾದ ಉಪನ್ಯಾಸಕ ಪ್ರೊ.…
ಮುಂಬಯಿ : ಪ್ರತಿಷ್ಠಿತ ಮತ್ತು ಗೌರವಾನ್ವಿತ ಸಮುದಾಯ ಸಂಸ್ಥೆಯಾದ ಬಂಟ್ಸ್ ಸಂಘ ಅಹಮದಾಬಾದ್(ರಿ) ಗುಜರಾತ್ ತನ್ನ 31ನೇ ವಾರ್ಷಿಕೋತ್ಸವವನ್ನು ಅಹಮದಾಬಾದ್‍ನ ಗುಜರಾತ್ ವಿಶ್ವವಿದ್ಯಾಲಯದ ಸೆನೆಟ್ ಹಾಲ್‍ನಲ್ಲಿ ಕಳೆದ ರವಿವಾರ (ಡಿ.15)ರಂದು ಸಂಭ್ರಮದಿಂದ ಆಚರಿಸಿತು. ಬಂಟ್ಸ್ ಸಂಘ ಅಹಮದಾಬಾದ್‍ನ ಅಧ್ಯಕ್ಷ ಶಿರ್ವಾ ಕೋಡು ನಿತೇಶ್ ಎಸ್. ಶೆಟ್ಟಿ ಅಧ್ಯಕ್ಷತೆಯಲ್ಲಿ ನೇರವೇರಿದ ಸಂಭ್ರಮಕ್ಕೆ ವಿಶೇಷ ಅತಿಥಿಯಾಗಿ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಉಪಸ್ಥಿತರಿದ್ದು, ಗೌರವ ಅತಿಥಿsಗಳಾಗಿ ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ತುಳುನಾಡ ಐಸಿರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ತುಳು ಸಂಘ ಅಂಕಲೇಶ್ವರ ಅಧ್ಯಕ್ಷ ಶಂಕರ ಶೆಟ್ಟಿ ಉಪಸ್ಥಿತರಿದ್ದು, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಅವರನ್ನು ಬಂಟರೆನ ರತ್ನ ಬಿರುದು ನೀಡಿ ಗೌರವಿಸಲಾಯಿತು. ಶಶಿಧರ ಶೆಟ್ಟಿ ಮಾತನಾಡಿ, ಔದಾರ್ಯ ಮತ್ತು ದಾನದ ಮನೋಭಾವವು ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಜನರು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕೊಡುಗೆ ನೀಡಿದಾಗ, ಸಮಯ, ಶ್ರಮ, ಹಣ, ಆಲೋಚನೆಗಳು…
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಉಡುಪಿ ತಾಲೂಕು ಸಮಿತಿ ಹಾಗೂ ಉಡುಪಿ ತಾಲೂಕು ಸಮಿತಿ ವ್ಯಾಪ್ತಿಯ ಬಂಟರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ನಡೆದ ದಿವಂಗತ ಕೆ ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಬಂಟ ಸಮ್ಮಿಲನ ಕಾರ್ಯಕ್ರಮದಲ್ಲಿ ಬಂಟ ಸಮುದಾಯದ ಐವರು ಸಾಧಕರನ್ನು ಸನ್ಮಾನಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬ್ರಿಗೇಡಿಯರ್ ರಂಜಿತ್ ಆಳ್ವ (ಸೇವಾ ಮೆಡಲ್) ಸತೀಶ್ಚಂದ್ರ ಹೆಗ್ಡೆ ವಿದ್ಯಾರ್ಥಿವೇತನಕ್ಕೆ ಚಾಲನೆ ನೀಡಿದರು. ಬ್ರಿಗೇಡಿಯರ್ ರಂಜಿತ್ ಆಳ್ವ ಅವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಂದಿಕೂರು ಅಸ್ಪೆನ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ನ ಜಿಎಂ ಅಶೋಕ್ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಭುವನಪ್ರಸಾದ್ ಹೆಗ್ಡೆ, ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಕ್ರೀಡಾಪಟು ಅವಿನಾಶ್ ಕುಮಾರ್ ವಿ ಶೆಟ್ಟಿ ಕಟಪಾಡಿ, ಪ್ರಗತಿಪರ ಕೃಷಿಕರಾದ ಮಲ್ಲಿಕಾ ಶಿವರಾಂ ಶೆಟ್ಟಿ ಗಿಳಿಯಾರು, ಕರ್ನಾಟಕ ರಣಜಿ ಕ್ರಿಕೆಟ್ ಆಟಗಾರ ಅಭಿಲಾಶ್ ಶೆಟ್ಟಿ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಈ…
ವಿದ್ಯಾಗಿರಿ: ಗೋದಲಿಯಲ್ಲಿ ಬಾಲ ಯೇಸು ಜನನದ ದರ್ಶನ, ಕ್ಯಾರೆಲ್ ಹಾಡಿದ ವಿದ್ಯಾರ್ಥಿಗಳ ಗುಂಪು, ನಡುವೆ ಬಂದ ಸಂತ ಕ್ಲಾಸ್, ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿದ ಕ್ರಿಸ್ ಮಸ್ ಮರ- ಸಭಾಂಗಣ, ಏಂಜೆಲ್ಸ್, ಜಿಂಗಲ್ ಬೆಲ್ ಸಂಗೀತ, ಪುಟಾಣಿಗಳ ಬಾಯಿ ಸಿಹಿ ಮಾಡಿದ ಕೇಕ್… ಕರುಣಾಮಯಿ ಬಾಲಯೇಸು ಜನನದ ಕ್ರಿಸ್ ಮಸ್ ಸಂಭ್ರಮ, ಭಕ್ತಿ -ಭಾವ , ಆರಾಧನೆಯ ಸಂಪ್ರೀತಿಯು ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಗುರುವಾರ ಸಂಜೆ ಮೂಡಿತು. ಅದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ‘ಆಳ್ವಾಸ್ ಕ್ರಿಸ್ ಮಸ್’ ಸಂಭ್ರಮಾಚರಣೆ. ಸಂದೇಶ ನೀಡಿದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯಾಧ್ಯಕ್ಷ (ಬಿಷಪ್) ಡಾ.ಪೀಟರ್ ಪಾವ್ಲ್ ಸಲ್ಡಾನಾ, ‘ಭರವಸೆ ನಿರಾಶೆ ಮೂಡಿಸುವುದಿಲ್ಲ. ಬದುಕು ಪ್ರೀತಿಯ ಪಥ. ಜೀವನದಲ್ಲಿ ಉನ್ನತ ಭರವಸೆಯೇ ಕ್ರಿಸ್ ಮಸ್ ಸಂದೇಶ’ ಎಂದರು. ‘ಹ್ಯಾಪಿ ಕ್ರಿಸ್ ಮಸ್’ ಎಂದು ಶುಭಕೋರಿ ಮಾತು ಆರಂಭಿಸಿದ ಅವರು, ‘ಇಲ್ಲಿಗೆ ಕ್ರಿಸ್ ಮಸ್ ಬಂದಿದೆ. ಸತ್ಯ ಮತ್ತು ಬದುಕು ನಮ್ಮದಾಗಲಿ. ನಮ್ಮೆಲ್ಲ ಒಳಿತಿಗಾಗಿ ದೈವಿಕ ಮನುಷ್ಯನಾದರು. ಅವರ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಡಿಸೆಂಬರ್ 31 ಜನವರಿ 03 ರವರೆಗೆ ಪ್ರತಿದಿನ ಸಂಜೆ 6.45 ಕ್ಕೆ ಮೂಡುಬಿದ್ರೆ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನೀನಾಸಂ ತಿರುಗಾಟ ತಂಡದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ. ಡಿ.31 ಮತ್ತು ಜ.01 ರಂದು ಮೂಲ ಭವಭೂತಿಯ, ಅಕ್ಷರ ಕೆ.ವಿ.ಇವರು ನಿರ್ದೇಶಿಸಿದ ಮಾಲತಿ ಮಾಧವ ಹಾಗೂ ಜ.02 ಮತ್ತು 03 ರಂದು ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ, ಮೂಲ ಅಭಿರಾಮ್ ಭಡ್ಕಮ್ಕರ್ ರಚಿಸಿದ, ವಿದ್ಯಾನಿಧಿ ವನಾರಸ್ ನಿರ್ದೇಶಿಸಿದ ಅಂಕದ ಪರದೆ ನಾಟಕಗಳ ಪ್ರದರ್ಶನ ನಡೆಯಲಿದೆ. ಈ ವರ್ಷದ ಅತ್ಯುತ್ತಮ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ನೀನಾಸಂ ತಿರುಗಾಟದ ನಾಟಕಗಳ್ನು ಹೆಚ್ಚು ಜನರು ನೋಡಬೇಕೆಂಬ ಕಾರಣಕ್ಕೆ ಎರಡೆರಡು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ಪ್ರತಿದಿನ ನಾಟಕವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ತಿಳಿಸಿದ್ದಾರೆ.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥಾಪಕರ ದಿನಾಚರಣೆಯು ಕಾರ್ಕಳ ಜ್ಞಾನಸುಧಾ ಗಣಿತ ನಗರದ ಕ್ಯಾಂಪಸ್‍ನಲ್ಲಿ 22 ಡಿಸೆಂಬರ್ 2024 ಆದಿತ್ಯವಾರದಂದು ನಡೆಯಲಿದೆ. ಈ ಸಂದರ್ಭದಲ್ಲಿ 2024 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಅಡ್ವಾನ್ಸ್ಡ್ ಮೂಲಕ ಐ ಐ ಟಿ ಪ್ರವೇಶ ಪಡೆದ ಮೂವರು ವಿದ್ಯಾರ್ಥಿಗಳನ್ನು, ಜೆ.ಇ.ಇ ಮೈನ್ಸ್ ಮೂಲಕ ಎನ್.ಐ.ಟಿ ಪ್ರವೇಶ ಪಡೆದ ಎಂಟು ವಿದ್ಯಾರ್ಥಿಗಳನ್ನು, ನೀಟ್ ಮೂಲಕ ಎಂ.ಬಿ.ಬಿ.ಎಸ್. ಪ್ರವೇಶ ಗಳಿಸಿದ 155 ವಿದ್ಯಾರ್ಥಿಗಳನ್ನು, ಸಿ. ಎ. ಫೌಂಡೇಶನ್‍ನಲ್ಲಿ ತೇರ್ಗಡೆಗೊಂಡ ನಾಲ್ವರು ವಿದ್ಯಾರ್ಥಿಗಳನ್ನು, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಸಂಸ್ಥೆಯ ಮೂವರು ವಿದ್ಯಾರ್ಥಿಗಳನ್ನು, ಹಾಗೂ ಕಳೆದ ಮೂರು ವರ್ಷಗಳಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹನ್ನೊಂದು ಪೂರ್ವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಪ್ರತಿ ಎಂ.ಬಿ.ಬಿ.ಎಸ್ ಸೀಟ್‍ಗೆ (155) ರೂ,2000/- ದಂತೆ ಭಾರತೀಯ ಸೇನೆಗೆ ರೂ,3,10,000/ ವನ್ನು ದೇಣಿಗೆಯಾಗಿ ನಿಡಲಾಗುವುದು. ಒಟ್ಟು 3 ನೇ ಹಂತದಲ್ಲಿಇದೀಗ 7,47,500 ರೂಗಳ ವಿದ್ಯಾರ್ಥಿವೇತನವನ್ನು ವಿತರಿಸಲಾಗುವುದು. ಈ…
ಹೋಟೆಲ್ ಉದ್ಯಮದಲ್ಲಿ ಅಪಾರ ಅನುಭವ ಹೊಂದಿದ ಪ್ರವೀಣ್ ಶೆಟ್ಟಿ ತಮ್ಮ ಅನುಭವವನ್ನು ಧಾರೆಯೆರೆದು ವಿಶ್ವ ದರ್ಜೆಯ ರೆಸಾರ್ಟ್ ನಿರ್ಮಿಸಿದ್ದಾರೆ. ಇದು ಹುಟ್ಟೂರಿಗೆ ಅವರು ನೀಡಿದ ಬಹುದೊಡ್ಡ ಕೊಡುಗೆ. ಅಚ್ಚುಕಟ್ಟುತನದಿಂದ ನಿರ್ಮಿಸಿದ ಈ ರೆಸಾರ್ಟ್ ಗೆ ಉತ್ತಮ ಭವಿಷ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ ಆಳ್ವ ಹೇಳಿದರು. ಪುಣೆಯ ಅತಿಥಿ ಗ್ರೂಪ್ ಆಫ್ ರೆಸ್ಟೋರೆಂಟ್ಸ್ ನ ಸಹ ಸಂಸ್ಥೆಯಾಗಿ ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ನಿರ್ಮಿಸಲಾದ ಸಂಪಿಗೆ ರೆಸಾರ್ಟ್ ಅನ್ನು ಉದ್ಘಾಟಿಸಿ ಮಾತನಾಡಿದರು. ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಮೂಡಬಿದಿರೆಗೆ ಭೇಟಿ ನೀಡುವವರಿಗೆ ಸ್ಟಾರ್ ಹೋಟೆಲ್ ಸೌಲಭ್ಯ ಸಿಗಲಿದೆ. ಇದು ಮೂಡಬಿದಿರೆ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು ಇಲ್ಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಸಂಪಿಗೆ ರೆಸಾರ್ಟ್ ನ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ಮಾತನಾಡಿ, ಹುಟ್ಟೂರಿನಲ್ಲಿ ಸುಸಜ್ಜಿತ ರೆಸಾರ್ಟ್ ನಿರ್ಮಿಸಬೇಕೆಂಬ ಬಹುಕಾಲದ ಕನಸು ನನಸಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ| ಸುಧಾಕರ ಶೆಟ್ಟಿ ಪುಣೆ, ಮಾಜಿ ಸಚಿವರಾದ ಕೃಷ್ಣ ಜೆ…
ವಿದ್ಯಾಗಿರಿ: ಅಹಿಂಸೆಯು ಹಿಂಸೆಯ ಬದಲಿ ಅಥವಾ ಪ್ರತಿ ಅಲ್ಲ. ಅದು ಪರಿಪೂರ್ಣ ಜೀವನ ದರ್ಶನ. ಮನುಷ್ಯ ಜೀವನ ನಿರ್ವಹಿಸುವ ವಿಧಾನ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾಜಾರಾಮ ತೋಳ್ಪಾಡಿ ವಿಶ್ಲೇಷಿಸಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಕನ್ನಡ ವಿಭಾಗ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಆಶ್ರಯದಲ್ಲಿ ನಡೆದ ‘ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು’ ವಿಚಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅಹಿಂಸೆ ಎನ್ನುವುದು ಅಧ್ಯಾತ್ಮ. ಆದರೆ, ಅದಕ್ಕೆ ಲೋಕ ಹಾಗೂ ವಾಸ್ತವದ ಸ್ಪರ್ಶ ಇದೆ ಎಂದು ಉಲ್ಲೇಖಿಸಿದ ಅವರು, ಹಿಂಸೆಯ ಮೂಲಕ ಸ್ವಾತಂತ್ರ‍್ಯ ಗಾಂಧಿಗೆ ಬೇಕಾಗಿರಲಿಲ್ಲ. ಉಗ್ರ ಹೋರಾಟಗಾರರು ಜನರ ಜೊತೆ ಬೆರೆತು ಹೋರಾಡುತ್ತಿರಲಿಲ್ಲ. ಜನರ ಭಾಗವಹಿಸುವಿಕೆ ಗಾಂಧೀಜಿಗೆ ಬಹುಖ್ಯವಾಗಿತ್ತು ಎಂದರು. ಮಾಂಸಾಹಾರ ಮಾಡುವುದೇ ಹಿಂಸೆಯ ಭಾಗ ಅಲ್ಲ. ಹಿಂಸೆ ಎಂಬುದು ಬದುಕಿನಲ್ಲಿ ಹಾಸುಹೊಕ್ಕ ಅನೇಕ ವರ್ತನೆಗಳು ಎಂದರು. ಅಹಿಂಸೆ ಎಂದರೆ ಒಂದು ಬಾಂಧವ್ಯ. ಹಿಂಸೆ ಮಾಡದೇ ಇರುವುದು ಅಹಿಂಸೆ ಅಲ್ಲ. ಅಹಿಂಸೆ…
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನೆಟ್ಲಮುಡ್ನೂರು ಗ್ರಾಮ ನೇರಳಕಟ್ಟೆ. ಈ ಶಾಲೆಯು ಸುಮಾರು 105 ವರ್ಷಗಳನ್ನು ಪೂರೈಸಿದ ಶಾಲೆಯಾಗಿದ್ದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ನೀಡಿದೆ. ಈ ಶಾಲೆಯ ಕಟ್ಟಡಗಳು ದುಸ್ಥಿರವಾಗಿದ್ದನ್ನು ಮನಗಂಡ ಊರಿನ ಶಿಕ್ಷಣ ಅಭಿಮಾನಿಗಳು, ಹಳೆ ವಿದ್ಯಾರ್ಥಿಗಳು ಸೇರಿ ಶತಮಾನೋತ್ಸವದ ಕನಸನ್ನು ಕಂಡು ಒಂದು ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯ ಮುಖಾಂತರ ಶಾಲೆಗೆ ನೂತನ ಕಟ್ಟಡದ ಅವಶ್ಯಕತೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನು ಇಟ್ಟಿತು. ಮುಂದೆ ಎಂ.ಆರ್.ಪಿ.ಎಲ್, ಎನ್.ಎಂ.ಪಿ.ಟಿ, ಇನ್ನಿತರ ಸಂಸ್ಥೆಗಳಿಗೆ ತಮ್ಮ ಕಟ್ಟಡದ ಅವಶ್ಯಕತೆಯನ್ನು ಮನವಿ ಮೂಲಕ ತಿಳಿಸಿದಾಗ ಎಂ.ಆರ್.ಪಿ.ಎಲ್ ಮತ್ತು ಎನ್.ಎಂ.ಪಿ.ಟಿ ಸಂಸ್ಥೆ ತನ್ನ ಸಿಎಸ್ಆರ್ ಅನುದಾನದಿಂದ ಕ್ರಮವಾಗಿ 42 ಲಕ್ಷ ಮತ್ತು 20 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿತ್ತು. ಇದರಿಂದ ನೂತನ ಕೊಠಡಿಗಳ ನಿರ್ಮಿಸಲು ಶಂಕುಸ್ಥಾಪನೆಯು ಡಿಸೆಂಬರ್ 9 ರಂದು ಸೋಮವಾರ ಬೆಳಿಗ್ಗೆ ಶಾಲಾ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ…
ಎಸ್.ಬಿ ಗ್ರೂಪ್ ಅರ್ಪಿಸುವ “ಶಿಯಾನ ಪ್ರೊಡಕ್ಷನ್ ಹೌಸ್” ಅವರ ಯುವ ನಿರ್ಮಾಪಕ ಪ್ರತೀಕ್ ಯು ಪೂಜಾರಿ ನಿರ್ಮಾಣದ, ನವ ನಿರ್ದೇಶಕ ಭರತ್ ಶೆಟ್ಟಿಯವರ ಕಥೆ ನಿರ್ದೇಶನದ “ಪಿಲಿಪಂಜ” ವಿಭಿನ್ನ ಶೈಲಿಯ ತಂತ್ರಜ್ಞಾನದಿಂದ ಕೂಡಿದ, ವಿಭಿನ್ನ ಕಥಾ ಹಂದರದ ತುಳು ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಕೊಕ್ಕಡ ಸುತ್ತಮುತ್ತ ನಡೆಯಿತು. ಒಟ್ಟು ಮೂವತ್ತು ದಿನದ ಚಿತ್ರೀಕರಣದ ಈ ಸಿನಿಮಾ ಎರಡು ಹಂತದಲ್ಲಿ ಚಿತ್ರೀಕರಿಸಲ್ಟಟ್ಟಿತ್ತು. ತುಳು ಸಿನಿಮಾ ರಂಗದಲ್ಲಿ ಪ್ರಪ್ರಥಮ ಬಾರಿಗೆ ವಿಭಿನ್ನ, ವಿಶೇಷ ತಂತ್ರಜ್ಞಾನವನ್ನು ಈ ಸಿನಿಮಾದ ಮೂಲಕ ಪರಿಚಯಿಸುತ್ತಿದೆ. ಉತ್ತಮ ಕಥಾವಸ್ತು ಇರುವ ಈ ಚಿತ್ರದಲ್ಲಿ ಹಾಸ್ಯಕ್ಕೂ ಅಷ್ಟೇ ಒತ್ತು ಕೊಟ್ಟಿದೆ. ಇರಾ, ಮುಡಿಪು, ವರ್ಕಾಡಿ, ಕೂಟತ್ತಾಜೆ, ಬೋಳಿಯಾರ್, ಕೊಕ್ಕಡ ಮುಂತಾದ ಕಡೆ ಚಿತ್ರೀಕರಿಸಲಾಗಿತ್ತು. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ರವಿ ರಾಮಕುಂಜ, ಶಿವಪ್ರಕಾಶ್ ಪೂಂಜ, ಪ್ರತೀಕ್ ಯು ಪೂಜಾರಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳೂರು, ರಕ್ಷಣ್ ಮಾಡೂರು, ಪ್ರಕಾಶ್ ಶೆಟ್ಟಿ ಧರ್ಮನಗರ, ವಿಜಯಹರಿ…















