Author: admin

ದಶಮಾನೋತ್ಸವ ಆಚರಿಸಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ನೂತನ ಕಾರ್ಯಾಧ್ಯಕ್ಷರಾಗಿ ಹೊಟೇಲು ಉದ್ಯಮಿ ಸುದೇಶ್ ಶೆಟ್ಟಿ ನೇಮಕಗೊಂಡಿದ್ದಾರೆ.

Read More

ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 15- 9 – 2023 ರಂದು ಪೋಷಕರ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು, ಬಹಳ ಉತ್ಸಾಹದಿಂದ ನಡೆಸಲಾಯಿತು. ಕಾರ್ಯಕ್ರಮವು ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಯಿತು. ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಪೋಷಕರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ ಎಸ್ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಪೋಷಕರ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಕುರಿತು ಸಹ ಪ್ರೇರಕ ಭಾಷಣವನ್ನು ಮಾಡಿದರು. ಪ್ರತಿಯೊಬ್ಬರು ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದರು ಮತ್ತು ಕ್ರೀಡಾ ಚಟುವಟಿಕೆಗಳನ್ನು ಮಾಡುವುದರಿಂದ ಆಗುವ ಅನೇಕ ಪ್ರಯೋಜನಗಳನ್ನು ತಿಳಿಸಿದರು. ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಆಟವು ಅಷ್ಟೇ ಮುಖ್ಯ. ಕ್ರೀಡೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರೂ ಇದ್ದಾರೆ ಎಂದರು. ಶಾಲಾ ಕ್ರೀಡಾ ಇಲಾಖೆ ವತಿಯಿಂದ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪೋಷಕರು ತಮ್ಮ ಆಸಕ್ತಿಗೆ ಅನುಗುಣವಾಗಿ ಭಾಗವಹಿಸಿದರು. ಶಾಲೆಯ ಒಳ ಸಭಾಂಗಣದಲ್ಲಿ ಎಲ್ಲಾ ಆಟಗಳನ್ನು ಆಯೋಜಿಸಲಾಗಿತ್ತು. ಎಲ್ಲಾ…

Read More

ಹಳ್ಳಿಯ ಜನರ ಬೇಸಾಯದ ಆನಂತರದ ಭವಣೆ, ಅಂದಿನ ತೊಡರುಗಳನ್ನು, ಕಷ್ಟ ಕಾರ್ಪಣ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಈ ಒಂದು ಆಟಿದ ನೆಂಪು ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಹಿಂದೆ ಊರಿನ ನಂಬಿಕೆಯ ದಿನಗಳಲ್ಲಿ ಆಷಾಢ ತಿಂಗಳಲ್ಲಿ ಯಾವುದೇ ಪವಿತ್ರ ಕಾರ್ಯಕ್ರಮಗಳು ಜರಗುತ್ತಿರಲಿಲ್ಲ. ಕಾರಣ ಆ ತಿಂಗಳು ಯಾವುದೇ ಕಾರ್ಯಕ್ರಮಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ದೈಹಿಕವಾಗಿ, ಮಾನಸಿಕವಾಗಿಯೂ ಆಷಾಢ ತಿಂಗಳು ಒಂದು ತಟಸ್ಥ ಮಾಸವಾಗಿತ್ತು ಎಂದು ಕೇಮಾರು ಸಂದೀಪನಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜೀ ನುಡಿದರು. ಅವರು ಮಂಗಳೂರು ಉರ್ವ ಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಭಾಭವನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದ ವತಿಯಿಂದ “ಆಟಿದ ನೆಂಪು” ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿದರು. ಬದಲಾದ ಬದುಕಿನಲ್ಲಿ ಅಂದಿನ ಬದುಕಿನ ಆಚಾರ-ವಿಚಾರಗಳು ಕಟ್ಟುನಿಟ್ಟಿನ ಸಂಸ್ಕೃತಿ, ಸಂಪ್ರದಾಯದ ಪಾಲನೆಯ ಬಗ್ಗೆ ನಾವು ಇಂದಿನ ಮಕ್ಕಳಿಗೆ ಆಟಿಯ ಇಂತಹ ಕಾರ್ಯಕ್ರಮದ ಮೂಲಕ ತಿಳಿಸುವುದು ಅವಶ್ಯ. ಇಂದಿನ ಕಾರ್ಯಕ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆಯ…

Read More

ಉಳ್ಳಾಲ ಕೋಟೆಕಾರು ನೆತ್ತಿಲ ಪರಿಸರದ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೋಟೆಕಾರು ಪಟ್ಟಣ ಪಂಚಾಯತ್‌ ಮುಂಬಾಗದಲ್ಲಿ ಕೋಟೆಕಾರು ಪರಿಸರದ ನಾಗರಿಕರು ಮತ್ತು ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ನೀರಿನ ಖಾಲಿ ಬಿಂದಿಗೆಗಳನ್ನು ಇಟ್ಟು ವಿನೂತನ ರೀತಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್‌ ಶೆಟ್ಟಿ ಜಪ್ಪು, ನೀರು ಪ್ರಕೃತಿಯ ನೈಸರ್ಗಿಕ ಕೊಡುಗೆಗಳಲ್ಲಿ ಪ್ರಮುಖವಾದುದು. ಆದ್ದರಿಂದ ಅದರ ಸದ್ಬಳಕೆ ಇಂದಿನ ಕಾಲಘಟ್ಟದಲ್ಲಿ ಅತಿ ಅವಶ್ಯಕ. ಕೋಟೆಕಾರು ನೆತ್ತಿಲ ಪ್ರದೇಶ ಉಳ್ಳಾಲ ತಾಲೂಕಿನ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲೊಂದು. ಇಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣವಾಗಿದ್ದು ಹಾಗೂ ಸಣ್ಣಗಾತ್ರದ ಕೈಗಾರಿಕೆಗಳು ಕಾರ್ಯಚರಿಸುತ್ತಿವೆ. ಸಹಜವಾಗಿ ಬೇಸಿಗೆ ಕಾಲದಲ್ಲಿ ಮಾರ್ಚ್ ತಿಂಗಳಿನಿಂದ ಇಲ್ಲಿ ನೀರಿಗಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಮನೆಗಳ ಬಾವಿಗಳು ಬೇಸಿಗೆ ಕಾಲದಲ್ಲಿ ಬತ್ತಿ ಹೋಗುತ್ತಿರುವುದು ಆತಂಕದ ವಿಷಯ. ಜನರು ತಮ್ಮ ಮೂಲಭೂತ ಅವಶ್ಯಕತೆಗಳಾದ ಶೌಚಾಲಯ ಹಾಗೂ ಅಡುಗೆ…

Read More

ಕಾಪುವಿನ ಸುಂದರ ಭವಿಷ್ಯಕ್ಕಾಗಿ ದೂರದರ್ಶಿತ್ವದ ಯೋಜನೆಗಳುಳ್ಳ ನೀಲ ನಕ್ಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದೇವೆ. ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕಲ್ಪನೆಯ ಸಾಕಾರಕ್ಕಾಗಿ ಮತ್ತು ಸರ್ವ ವ್ಯಾಪಿ, ಸರ್ವ ಸ್ಪರ್ಷಿ ಚಿಂತನೆಯೊಂದಿಗೆ ಎಲ್ಲಾ ಜಾತಿ, ಧರ್ಮ, ಮತ, ಸಮುದಾಯದ ಜನರ ಸೇವೆಗಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಕಾಪು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ವಿನಂತಿಸಿದ್ದಾರೆ. ಕಾಪು ಪುರಸಭಾ ವ್ಯಾಪ್ತಿಯ ಕರಾವಳಿ ವಾರ್ಡ್, ಪೊಲಿಪುಗುಡ್ಡೆ, ಭಾರತ್‌ನಗರ, ಕಲ್ಯ, ದಂಡತೀರ್ಥ, ಕೋತಲಕಟ್ಟೆ, ಕೈಪುಂಜಾಲು, ಕಾಪು ಪರಿಸರದಲ್ಲಿ ಮತಯಾಚನೆ ನಡೆಸಿ, ಜೇಸಿ ಭವನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಮಹತ್ವಾಕಾಂಕ್ಷಿಯ ಜನೋಪಯೋಗಿ ಜನ ಸೇವಾ ಕಾರ್ಯಕ್ರಮಗಳು ಬಿಜೆಪಿಯ ಗೆಲುವಿಗೆ ಪೂರಕವಾಗಲಿವೆ. ಅದರ ಜತೆಗೆ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಕಳೆದ ಐದು ವರ್ಷಗಳಲ್ಲಿ…

Read More

ಕ್ರೀಡೆಯ ಮೂಲಕ ಸಮಾಜದ ಸಂಘಟನೆ: ಸುಧಾಕರ ಪೂಂಜ ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜ್ ಮೈದಾನದಲ್ಲಿ ನಡೆದ ಬಂಟರ ಕ್ರೀಡೋತ್ಸವದಲ್ಲಿ ಸುರತ್ಕಲ್ ಗ್ರಾಮ ಅತ್ಯಧಿಕ ಅಂಕ ಗಳಿಸಿ ಸಮಗ್ರ ಚಾಂಪ್ಯನ್ ಪ್ರಶಸ್ತಿ ಪಡೆದುಕೊಂಡಿದೆ. ಕೂಟದಲ್ಲಿ ಚೇಳಾರ್ ಗ್ರಾಮ ದ್ವೀತೀಯ, ಇಡ್ಯಾ ಗ್ರಾಮ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಪಥ ಸಂಚಲನ ವಿಭಾಗದಲ್ಲಿ ಇಡ್ಯಾ ಗ್ರಾಮ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಿದ್ದರು. ಸುರತ್ಕಲ್ ಬಂಟರ ಸಂಘವು ಸಾಂಸ್ಕೃತಿಕ, ಸಮಾಜ ಸೇವೆಯ ಜೊತೆಗೆ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಾ ಬಂದಿರುತ್ತದೆ. ಸುರತ್ಕಲ್ ಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಕ್ರೀಡಾಳುಗಳಿದ್ದಾರೆ. ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ಕೆಲಸವೂ ಸಂಘದಿಂದ ನಡೆದಿದೆ. ಕ್ರೀಡೆಯ ಮೂಲಕ ಸಮಾಜವನ್ನು ಸಂಘಟಿಸುವ ಕೆಲಸವೂ ನಡೆಯುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ…

Read More

ಒಡ್ಡೂರು ಫಾರ್ಮ್ಸ್ ನಲ್ಲಿ ನಿರ್ಮಾಣಗೊಂಡ ಹಸಿ ತ್ಯಾಜ್ಯದಿಂದ ಬಯೋ ಸಿ.ಎನ್.ಜಿ. ಉತ್ಪಾದನೆ ಮಾಡುವ ಘಟಕ ಒಡ್ಡೂರು ಎನರ್ಜಿಯನ್ನು ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲ್,ಮಂಗಳೂರು ಉತ್ತರ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ,ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಉಪಸ್ಥಿತರಿದ್ದರು. ಬಯೋ ಗ್ಯಾಸ್ ಉತ್ಪಾದನೆ, ಗೊಬ್ಬರ ಉತ್ಪಾದನೆಗೆ ಸಬ್ಸಿಡಿ, ಸವಲತ್ತು ನೀಡಲಾಗುವುದು, ಅವುಗಳನ್ನು ಬ್ರಾಂಡಿಂಗ್ ಮಾಡುವ ಕಾರ್ಯಕ್ಕೆ ಕೇಂದ್ರ ಪ್ರೋತ್ಸಾಹ ನೀಡಲಿದೆ.

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ವತಿಯಿಂದ ಅಕ್ಟೋಬರ್ 28 ಮತ್ತು 29 ರಂದು ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮಿಲನ ನಡೆಯಲಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಐಕಳ ಹರೀಶ್ ಶೆಟ್ಟಿ ಮಾತನಾಡಿದರು. ಅಕ್ಟೋಬರ್ 28 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಕ್ರೀಡಾಕೂಟ ಜರಗಲಿದೆ. ಅಕ್ಟೋಬರ್ 29 ರಂದು ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್ ನಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಮಾಜ ಬಾಂಧವರನ್ನು ಒಂದೇ ಸೂರಿನಡಿಯಲ್ಲಿ ಸೇರಿಸುವ ಉದ್ದೇಶದಿಂದ ವಿಶ್ವ ಬಂಟರ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಮಿತಿಗಳನ್ನು ರಚಿಸಲಾಗುತ್ತದೆ. ಜೊತೆಗೆ ಕಾರ್ಯಕ್ರಮದಲ್ಲಿ ಯುವಕ ಯುವತಿಯರನ್ನು ಸೇರಿಸಿ ಯುವ ವಿಭಾಗ ಸಮಿತಿಯನ್ನು…

Read More

ಅಂತರಂಗ ಸಾಧನೆಗೆ ಬೇಕು ಶ್ರೀರಂಗ ಅವನಲ್ಲಿ ಇಡಬೇಕು ನಿಜವಾದ ಸಂಗ ಪ್ರೀತಿಯಿಂದ ಕರೆಯುವ ರಂಗಾ ರಂಗ ಆಗ ನೆಲೆಯುವನು ಹೃದಯದಲಿ ದಯಾರಂಗ! ! ಅಂತರ್ಯಾಮಿ ಎಂದು ಅವನ ಹೆಸರು ಅವನೇ ನಮ್ಮ ಜೀವನದ ಉಸಿರು ನಾಮಗಳು ಸಾವಿರ ಒಬ್ಬನೇ ದೇವರು ದೇವರೇ ನಮ್ಮ ಜೀವನದ ಬೇರು! ! ಬಹಿರಂಗ ವಿಷಯ ಅವನದೇ ಮಾಯೆಯು ಬರುವ ಸುಖ: ದುಃಖ ಅವನದೇ ಕೃಪೆಯು ಬಯಕೆಗಳ ರಾಶಿಯನ್ನು ಹೊರುವ ಅಜ್ಞಾನಿಯು ಕ್ಷಣದಲ್ಲಿ ಬಿಡಬಹುದು ಆಗಿ ನೀ ಜ್ಞಾನಿಯು! ! ಜೀವನ ಆಸಕ್ತಿ ಮುಕ್ತಿ ಆಗಿರಬೇಕು ನಿತ್ಯಾ ನಿತ್ಯ ವಸ್ತು ವಿವೇಕ ಬೇಕೇಬೇಕು ಗುರುವೇ ಜೀವನದ ದಿವ್ಯ ಬೆಳಕು ಅಂತರಂಗ ಸಾಧನೆಗೆ ಗುರುವೇ ಬೇಕು! ! -ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ

Read More

ಮುಂಬಯಿ, (ಆರ್‍ಬಿಐ) ಫೆ.28 :ಗುರುಪುರ ಗೋಳಿದಡಿಗುತ್ತಿಗೆ ಹತ್ತಿರದ ಫಲ್ಗುಣಿ ನದಿ ತಟದಲ್ಲಿ ನಿರ್ಮಾಣಗೊಳ್ಳಲಿರುವ ದಕ್ಷಿಣ ಭಾರತದಲ್ಲೇ ಪ್ರಪ್ರಥಮವೆನ್ನಲಾದ ಶ್ರೀ ಗುರು ಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿಯ ಕೆತ್ತನೆ ಕಾರ್ಯಕ್ಕೆ ಭಾನುವಾರ(ಫೆ. 26) ಚಾಲನೆ ನೀಡಲಾಯಿತು. ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪತ್ನಿ ಉಷಾ ಹಾಗೂ ಮಕ್ಕಳ ಸಮಕ್ಷಮದಲ್ಲಿ, ಪಾವಂಜೆಯ ಶ್ರೀ ನಿರಂಜನ್ ಭಟ್ ಮತ್ತು ಅಮೆರೇಶ್ ಭಟ್ ಅವರ ಪೌರೋಹಿತ್ಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದ ಬಳಿಕ ಬೆಳ್ತಂಗಡಿಯ ಶಿಲ್ಪಿ ವೆಂಕಟೇಶ್ ಆಚಾರ್ಯ ಅವರಿಗೆ ಕಾಲಭೈರವನ ಏಕಶಿಲಾಮೂರ್ತಿ ಕೆತ್ತನೆ ಕೆಲಸ ವಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ(ಎಸಿ) ಗುರುಪ್ರಸಾದ್, ಗುತ್ತು ಮನೆತನದ ಯಜಮಾನರು, ಗಡಿಕಾರರು, ಗಣ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಮೂರ್ತಿ ವಿಶೇಷ : ತಳಪಾಯದಿಂದ 5 ಹಂತದಲ್ಲಿ ಒಟ್ಟು 20 ಅಡಿ ಎತ್ತರದಲ್ಲಿ ಶಿಲಾಪೀಠ ನಿರ್ಮಾಣಗೊಳ್ಳಲಿದ್ದು, ಈ ಪೀಠದ ಮೇಲೆ 22 ಅಡಿ ಎತ್ತರದ ಆರು ಕೈಗಳ ಮಹಾಕಾಲೇಶ್ವರನ ಭವ್ಯ ಏಕಶಿಲಾ ಮೂರ್ತಿ ಸ್ಥಾಪನೆಯಾಗಲಿದೆ. ಬಯಲು…

Read More