Author: admin
ಬಂಟರ ಸಂಘ ಉಡುಪಿ ವತಿಯಿಂದ ಮಿಸ್ ಇಂಡಿಯಾ ಗೆದ್ದ ಸಿನಿ ಶೆಟ್ಟಿ ಅವರಿಗೆ ಅಮ್ಮಣ್ಣಿ ರಾಮಣ್ಣ ಆಡಿಟೋರಿಯಂ ಉಡುಪಿಯಲ್ಲಿ ಸನ್ಮಾನ ಕಾರ್ಯಕ್ರಮ ನೆರೆದ ಜನಸ್ತೋಮದೊಂದಿಗೆ ಬಹಳ ವಿಜೃಂಭನೆಯಿಂದ ನಡೆಯಿತು. ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಮೂಲದ ಇನ್ನಂಜೆ ಸದಾನಂದ ಶೆಟ್ಟಿ ಅವರ ಸುಪುತ್ರಿ ಸಿನಿ ಶೆಟ್ಟಿ ಮಿಸ್ ಇಂಡಿಯ ಆಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತವರಿಗೆ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ವಹಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿನಿ ಶೆಟ್ಟಿ ಅವರು, “ಇವತ್ತು ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ. ಊರಿನಲ್ಲಿ ನನಗೆ ಸಿಕ್ಕಿರುವ ಸ್ವಾಗತಕ್ಕೆ ನನಗೆ ಸಂತೋಷವಾಗಿದೆ. ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ ಎಂದು ಹೇಳಿದರು. ಉಡುಪಿ ಬಂಟರ ಸಂಘದ ಸಂಚಾಲಕ ಜಯರಾಜ್ ಹೆಗ್ಡೆ, ಇಂದ್ರಾಳಿ ಜಯಕರ್ ಶೆಟ್ಟಿ, ಉದ್ಯಮಿ,…
ಬಂಟರ ಸಂಘ ( ರಿ ) ಸುರತ್ಕಲ್ ಇದರ ವತಿಯಿಂದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಹೈನುಗಾರಿಕೆ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕೃಷಿಕರಿಗೆ ದೊರಕುವ ವಿವಿಧ ಯೋಜನೆ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ ಫೆಬ್ರವರಿ 20ರಂದು ಭಾನುವಾರ ಸಂಜೆ 4 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹಿತಿ ಶಿಬಿರವನ್ನು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ ಶೆಟ್ಟಿ ಸುರತ್ಕಲ್, ಎಕ್ಕಾರ್ ರೈತ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಎಕ್ಕಾರ್ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಅಬ್ದುಲ್ ಬಸೀರ್ ( ಕೃಷಿ ಅಧಿಕಾರಿ ಸುರತ್ಕಲ್) ಯುಗೇಂದ್ರ ( ಸಹಾಯಕ ತೋಟಗಾರಿಕ ಅಧಿಕಾರಿ ಸುರತ್ಕಲ್) ಡಾ! ಸುರೇಶ್ ( ಸಹಾಯಕ ನಿರ್ದೇಶಕರು ಪಶುಇಲಾಖೆ ಸುರತ್ಕಲ್) ಇವರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಕೃಷಿ,…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ ದಿನಾಂಕ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮಿಲನದ ಪ್ರಯುಕ್ತ ನಡೆಯಲಿರುವ ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಕರಪತ್ರವನ್ನು ದಿನಾಂಕ 15/09/2023ರಂದು ಬೆಂಗಳೂರಿನ ಬಂಟರ ಸಂಘದಲ್ಲಿ ಅಧ್ಯಕ್ಷರಾದ ಶ್ರೀಯುತ ಎಂ ಮುರಲೀಧರ ಹೆಗ್ಡೆಯವರು ಬಿಡುಗಡೆ ಮಾಡಿದರು. ಜಾಗತಿಕ ಸಂಘಗಳ ಒಕ್ಕೂಟದ ಅದ್ಯಕ್ಷರಾದ ಶ್ರೀ ಐಕಳ ಹರೀಶ ಶೆಟ್ಟಿಯವರು ಕಾರ್ಯಕ್ರಮದ ವಿವರ ನೀಡಿ ಬೆಂಗಳೂರಿನ ಸಮಸ್ತ ಬಂಟರನ್ನು ಕಾರ್ಯಕ್ರಮಕ್ಕೆ ಪ್ರಿತಿಪೂರ್ವಕವಾಗಿ ಆಹ್ವಾನಿಸಿದರು. ಶ್ರೀ ಅಜಿತ್ ಶೆಟ್ಟಿ ಉಳ್ತೂರು ಇವರು ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಸಮಿತಿ ಸಂಚಾಲಕರಾದ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿಯವರು ಕಾರ್ಯಕ್ರಮದ ರೂಪುರೇಷೆ, ನಿಯಮಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಬೆಂಗಳೂರು ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ…
ಮೂಲ್ಕಿ ಬಂಟರ ಸಂಘದ ವತಿಯಿಂದ ಮೂಲ್ಕಿ ಬಂಟರ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ, ಆಟಿದ ತಮ್ಮನ ಅದ್ದೂರಿ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಮಂಗಳೂರು ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಆಡಳಿತ ನಿರ್ದೇಶಕ ಡಾ ಎ. ಸದಾನಂದ ಶೆಟ್ಟಿಯವರಿಗೆ 2023-24 ನೇ ಸಾಲಿನ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನಿಸಿ ಗೌರವಿಸಲಾಯಿತು. ಮೂಲ್ಕಿ ಬಂಟರ ಸಂಘದ 2022-24ನೇ ಸಾಲಿನ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ ಹಾಗೂ ಆಟಿದ ತಮ್ಮನದ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಧಕರ ನೆಲೆಯಲ್ಲಿ ಕರುಣಾಕರ ಶೆಟ್ಟಿ ಉಳೆಪಾಡಿ ಮುಗೇರಬೆಟ್ಟು ( ಕೃಷಿ ಕ್ಷೇತ್ರ ), ಸಾಯಿನಾಥ ಶೆಟ್ಟಿ ಮುಂಡ್ಕೂರು ( ಶಿಕ್ಷಣ ಕ್ಷೇತ್ರ ), ಡಾ. ಹರಿಪ್ರಸಾದ್…
ಬಂಟರ ಸಂಘದ ಮುಂಬಯಿಯ ಕಾರ್ಯಕ್ರಮಗಳಲ್ಲಿ ಅತೀ ಮಹತ್ವದ ಹಾಗು ಪ್ರೀತಿಯ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮವೆಂದರೆ, ಸಮಾಜ ಕಲ್ಯಾಣ ಕಾರ್ಯಕ್ರಮ. ಸಮಾಜ ಬಾಂಧವರು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸುಮಾರು 2.5 ಕೋಟಿಗೂ ಮಿಕ್ಕಿ ಶೈಕ್ಷಣಿಕ ಸಹಾಯ ನೀಡುವ ಸಂಸ್ಥೆ ಬಂಟರ ಸಂಘ ಮುಂಬಯಿ ಎಂದು ಹೆಮ್ಮೆಯಿಂದ ಹೇಳಬಹುದು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಮಾಜ ಬಾಂಧವರ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ನಾಲಾಸೋಪಾರ ಪೂರ್ವದ ರಿಜೆನ್ಸಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಂಘದ ಶಿಕ್ಷಣ ಮತ್ತುಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿಯವರು ಮಾತನಾಡುತ್ತಾ ಇಂದು ನಾವು ಇತರರಿಗೆ ಸಹಾಯ ಮಾಡಿದರೆ ದೇವರು ಇನ್ನೊಂದು ವಿಧದಲ್ಲಿ ನಮಗೆ ಸಹಾಯ ಮಾಡುತ್ತಾರೆ. ಸಮಾಜ ಬಾಂಧವರಿಗೆ ಸಂಘದ ಶಿಕ್ಷಣ…
ನಿಶ್ಚಯದ ವೇದಿಕೆಗೆ ಗಂಡು ಮತ್ತು ಹೆಣ್ಣನ್ನು ಕರೆತರುವುದು ಅವರವರ ಹಿರಿಯ ಮುತ್ತೈದೆ ಹೆಂಗಳೆಯರು. ಗಂಡಿನ ಬಲಭಾಗದಲ್ಲಿ ಹೆಣ್ಣನ್ನು ಕೂರಿಸುವುದು. ನಿಶ್ಚಿತಾರ್ಥಕ್ಕೆ ನಿಲ್ಲುವ ದಿಕ್ಕುಗಳು : ಬಂಟ ಗುರಿಕ್ಕಾರ – ಉತ್ತರಾಭಿಮುಖವಾಗಿ ವಧುವಿನ ಹಿರಿಯರು – ಪೂರ್ವಾಭಿಮುಖವಾಗಿ ವರನ ಹಿರಿಯರು – ಪಶ್ಚಿಮಾಭಿಮುಖವಾಗಿ ಎಲ್ಲಾ ಹಿರಿಯರನ್ನು ವೇದಿಕೆಗೆ ಆಹ್ವಾನಿಸುವುದು. ಮಾತಾ ಪಿತೃಗಳಿಂದ ದೀಪ ಬೆಳಗಿಸುವುದು. ದೀಪ ಬೆಳಗಿಸುವಾಗ ಪೂರ್ವದಿಂದ ಆರಂಭಿಸಿ ಪ್ರದಕ್ಷಿಣಾಕಾರವಾಗಿ ಉರಿಸಬೇಕು. ಗಣಪತಿ ಸ್ತುತಿ : ಸುತ್ಯೆ ಇಡುವುದು ಪ್ರಾರ್ಥನೆ : ಗುರುಪೀಠಕ್ಕೆ, ಕುಲದೇವರಿಗೆ, ಕುಲದೈವಕ್ಕೆ ಗುರು ಕಾರ್ನವರಿಗೆ : ಸೀಮೆ ದೇವರಿಗೆ, ಗ್ರಾಮ ದೇವರಿಗೆ. ಗಂಡು ಹೆಣ್ಣಿನ ತಂದೆ ತಾಯಂದಿರ ಕುಟುಂಬದ ನಾಗಶಕ್ತಿಗಳು, ದೈವ ದೈವತಾ ಶಕ್ತಿಗಳು, ದೇವ ದೇವತಾ ಶಕ್ತಿಗಳು ಹಾಗೂ ಸ್ಥಳ ಸಾನಿಧ್ಯಕ್ಕೆ ಕ್ಷಮಾಪಣೆ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಬೇಕು. ಗಂಡು ಹೆಣ್ಣಿನ ಪರಿಚಯವನ್ನು ಸಭೆಯ ಮುಂದಿಡುವುದು. ಎರಡು ಹರಿವಾಣಗಳಲ್ಲಿ 5+5 ವೀಳ್ಯದೆಲೆ, 1+1 ಅಡಿಕೆ, 1+1ಕುಂಕುಮದ ಕರಡಿಗೆ, 1+1 ಮಲ್ಲಿಗೆ ಚೆಂಡು ಇವುಗಳನ್ನು ಇಟ್ಟು ಟಿಪಾಯಿ…
ಸಾವಿರ ವರ್ಷಗಳ ಪ್ರಾಚೀನ ಇತಿಹಾಸ ಪ್ರಸಿದ್ಧ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಮತ್ತು ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವರ ಅಷ್ಠಬಂಧ ಸಹಿತ ಸಹಸ್ರ ಬ್ರಹ್ಮಕಲಶಾಭಿಷೇಕವು ವೇದಮೂರ್ತಿ ಷಡಂಗ ಶ್ರೀ ಬಿ. ಗುರುರಾಜ ತಂತ್ರಿಯವರ ನೇತೃತ್ವದಲ್ಲಿ ಮೇ 20 ರಿಂದ 25 ರವರೆಗೆ ಜರುಗಲಿದೆ. ಮೇ 20 ಶನಿವಾರ ಬೆಳಿಗ್ಗೆ ಗಂಟೆ 8:00 ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹಾವಾಚನ ದೇವ ನಾಂದಿ, 12 ಕಾಯಿ ಗಣಹೋಮ, ನವಗ್ರಹ ಹೋಮ, ಅನ್ನಸಂತರ್ಪಣೆ, ಸಂಜೆ 5:00 ರಿಂದ ಧಾರ್ಮಿಕ ಸಭಾಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ವಸಂತ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಹಾಗೂ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮಿಜಿ ಆಶೀರ್ವಚನ ನೀಡಲಿರುವರು. ಧಾರ್ಮಿಕ ಸಭಾ ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ಡಾ| ನಾಡೋಜ…
ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಫೆ. 16ರಂದು ಸಮರ್ಪಣೆಗೊಳ್ಳಲಿರುವ ಬ್ರಹ್ಮರಥವನ್ನು ಕುಂಭಾಶಿಯ ಕಾರ್ಯಾಗಾರದಿಂದ ಕೊಂಡೊಯ್ಯುವ ದಾರಿಯಲ್ಲಿ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇಗುಲಕ್ಕೆ ಆಗಮಿಸಿದಾಗ ದೇಗುಲದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಐತಾಳ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಮುರ್ಡೇಶ್ವರದ ಉದ್ಯಮಿ ದಿ| ಆರ್.ಎನ್. ಶೆಟ್ಟಿ ಅವರ ಪುತ್ರ ಸುನಿಲ್ ಆರ್. ಶೆಟ್ಟಿ ಅವರು ಕೊಲ್ಲೂರು ದೇಗುಲಕ್ಕೆ ಸೇವಾ ರೂಪದಲ್ಲಿ ಬ್ರಹ್ಮರಥವನ್ನು ಸಮರ್ಪಿಸುತ್ತಿದ್ದು, ಕೋಟೇಶ್ವರದ ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಿಸಲಾಗಿದೆ. 400 ವರ್ಷಗಳ ಬಳಿಕ ಕೊಲ್ಲೂರು ದೇಗುಲಕ್ಕೆ ನೂತನ ರಥ ನಿರ್ಮಾಣಗೊಂಡಿದೆ. ಹಳೆಯ ರಥದ ಮಾದರಿಯಲ್ಲೇ ಇದ್ದು, 1 ಕೋಟಿ ರೂ.ಗೂ ಅಧಿಕ ವೆಚ್ಚವಾಗಿದೆ. ರಥಕ್ಕೆ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇಗುಲದ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು, ವಂಡ್ಸೆ, ಚಿತ್ತೂರು, ಇಡೂರು, ಜಡ್ಕಲ್, ಹಾಲ್ಕಲ್ ಮಾರ್ಗವಾಗಿ ಕೊಲ್ಲೂರಿಗೆ ಮೆರವಣಿಗೆಯಲ್ಲಿ ಒಯ್ಯಲಾಯಿತು. ಉಡುಪಿಯ ಅಪರ…
ಕಳತ್ತೂರು ಗುರ್ಮೆ ಪದ್ಮಾವತಿ ಪಿ ಶೆಟ್ಟಿಯವರ ನಾಲ್ಕನೇಯ ಪುಣ್ಯತಿಥಿಯ ಪ್ರಯುಕ್ತ ಸಮಾಜಸೇವಕ, ರಾಜಕೀಯ ಮುಂದಾಳು ಗುರ್ಮೆ ಸುರೇಶ್ ಶೆಟ್ಟಿ ಮತ್ತು ಅವರ ಸಹೋದರರ ಸಾರಥ್ಯದಲ್ಲಿ ಕಾಪು ತಾಲೂಕಿನ ಗುರ್ಮೆ ಫೌಂಡೇಶನ್ ವತಿಯಿಂದ ಫೆಬ್ರವರಿ 20 ರಂದು ಸಂಜೆ 4 ಗಂಟೆಗೆ ಗುರ್ಮೆ ಗೋ ವಿಹಾರ ಲೋಕಾರ್ಪಣೆಯು ಜರಗಲಿದೆ. ಉದ್ಘಾಟನೆಯನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ನೆರವೇರಿಸಲಿದ್ದು ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಸ್ವಾಮೀಜಿ, ಪೇಜಾವರ ಮಠದ ಸ್ವಾಮೀಜಿ, ಗೌರಿ ಗದ್ದೆಯ ವಿನಯ್ ಗುರೂಜಿ, ಸಚಿವರಾದ ಅಂಗಾರ, ಕೋಟ ಶ್ರೀನಿವಾಸ್ ಪೂಜಾರಿ, ವಿ ಸುನೀಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಎಂ ಆರ್ ಜೆ ಗ್ರೂಪ್ ಛೇರ್ಮನ್ ಕೆ ಪ್ರಕಾಶ್ ಶೆಟ್ಟಿ, ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಡಾ ಮೋಹನ್ ಆಳ್ವ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನ ಹಾಗೂ ನೊಂದವರಿಗೆ ಸಾಂತ್ವನವೂ ನಡೆಯಲಿದೆ. ಶ್ರೀಕಾಂತ್ ಶೆಟ್ಟಿ ಕಾರ್ಕಳ ಮತ್ತು ಬಳಗ, ಸಂದೇಶ್ ನೀರುಮಾರ್ಗ ಮತ್ತು…
ಚಿಣ್ಣರ ಬಿಂಬ ಮುಂಬಯಿಯ ಇದರ ಮೀರಾರೋಡ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ವರ್ಧೆ ಆ. 13 ರಂದು ಅಪರಾಹ್ನ 1 ರಿಂದ ಭಾಯಂದರ್ ಪೂರ್ವ, ಶಕ್ತಿ ನಗರ ಎಸ್ ಎನ್ ಕಾಲೇಜಿನ ಸಮೀಪದ ನ್ಯೂ ಸೈಂಟ್ ಆಗ್ನೇಸ್ ಹೈಸ್ಕೂಲ್ ಸಭಾಗೃಹದಲ್ಲಿ ನಡೆಯಲಿದೆ. ಪ್ರತಿಭಾ ಸ್ವರ್ಧೆ ಕಾರ್ಯಕ್ರಮವನ್ನು ಸುಮತಿ ಎಜುಕೇಶನಲ್ ಟ್ರಸ್ಟ್, ಸೈಂಟ್ ಅಗ್ನೇಸ್ ಇಂಗ್ಲಿಷ್ ಹೈಸ್ಕೂಲ್, ಮೆಹ್ತಾ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಕಾರ್ಯಧ್ಯಕ್ಷ ಡಾ. ಅರುಣೋದಯ ರೈ ಬಿಳಿಯೂರು ಗುತ್ತು ಇವರು ಉದ್ಘಾಟಿಸಲಿದ್ದಾರೆ. ಬಂಟರ ಸಂಘ ಮುಂಬಯಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್ ಎಂ. ಶೆಟ್ಟಿ ಸಿದ್ಧಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೀರಾರೋಡ್ ಶುಭಂ ಹೊಟೇಲ್ ನ ಮಾಲಕ ಉದಯ್ ಎಂ ಶೆಟ್ಟಿ ಮಲಾರಬೀಡು, ಸಾಯಿ ಬಾಲಾಜಿ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಯೋಗೇಂದ್ರ ಎಸ್. ಗಾಣಿಗ ಹಾಗೂ ನಿತ್ಯಾನಂದ ಸೇವಾ ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಜಯಶ್ರೀ ಬಾಲಕೃಷ್ಣ ಶೆಟ್ಟಿ…