Author: admin
ವಿದ್ಯಾಗಿರಿ: ಯಾವುದೇ ಕೆಲಸದಲ್ಲೂ ಯಶಸ್ವಿಯಾಗಲು ಸ್ಪಷ್ಟತೆ ಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಮುಂಡ್ರೆದುಗುತ್ತು ಕೆ . ಅಮರನಾಥ ಶೆಟ್ಟಿ (ಕೃಷಿಸಿರಿ) ಸಭಾಂಗಣದಲ್ಲಿ ಬುಧವಾರ ನಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ‘ಪೋಷಕರ – ಶಿಕ್ಷಕರ ಸಭೆ ‘ಯಲ್ಲಿ ಅವರು ಮಾತನಾಡಿದರು. ‘ಎಲ್ಲಾ ವಿದ್ಯಾರ್ಥಿಗಳು ಆರಂಭದಲ್ಲಿ ಕನಸನ್ನು ಕಾಣುವುದು ಸಹಜ. ಆದರೆ ಕಂಡ ಕನಸನ್ನು ನನಸಾಗಿಸಲು ಸಾಗುವ ದಾರಿಯಲ್ಲಿ ಸ್ಪಷ್ಟತೆ ಇರುವುದಿಲ್ಲ. ವಿದ್ಯಾರ್ಥಿಗಳು ಪ್ರೌಢಾವಸ್ಥೆಗೆ ಬರುವಾಗ ದೈಹಿಕವಾಗಿ, ಮಾನಸಿಕವಾಗಿ, ವ್ಯಕ್ತಿತ್ವ ರೂಪಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದರು . ಅದೇ ರೀತಿ ಪ್ರೌಢ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣಕ್ಕೆ ಕಾಲಿಡುವಾಗ ಕಲಿಕಾ ಬೋಧನಾ ಕ್ರಿಯೆ, ವಿದ್ಯಾಭ್ಯಾಸ , ಆಳವಾಗಿ ಅಧ್ಯಯನ ನಡೆಸುವ ಕ್ರಮದಲ್ಲಿ ಅನೇಕ ಬದಲಾವಣೆಗಳಾಗುತ್ತವೆ ಎಂದರು. ಶಿಕ್ಷಣ ಒಂದು ಪಂಚಾಂಗವಿದ್ದಂತೆ. ನೀವು ಯಾವ ಕ್ಷೇತ್ರಕ್ಕೆ ಹೋಗಬೇಕೆಂದು ನಿರ್ಧರಿಸಿದ್ದರೋ ಆ ಕ್ಷೇತ್ರದ ಪ್ರವೇಶಾತಿ ಪರೀಕ್ಷೆಯನ್ನು ಎದುರಿಸಲು ಬದ್ಧರಾಗಿರಬೇಕು ಎಂದು ಅವರು ಹೇಳಿದರು. ಪದವಿ…
ಅವಿಭಕ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟರು ಉದ್ಯಮಶೀಲರು, ಸಾಹಸಿಗಳು ಮತ್ತು ಪರಿಶ್ರಮಿಗಳು. ತಾವು ತಮ್ಮ ಲಕ್ಷ್ಯವನ್ನು ಹಿಂಬಾಲಿಸುವಲ್ಲಿ ಎದುರಾಗುವ ಕಷ್ಟನಷ್ಟಗಳನ್ನು ಸವಾಲು ಎಂಬಂತೆ ಸ್ವೀಕರಿಸುತ್ತಾ ಕೊನೆಗೊಂದು ದಿನ ಯಶಸ್ಸಿನ ತುತ್ತ ತುದಿಯಲ್ಲಿದ್ದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಶ್ರೀ ಕೆ. ಎಂ. ಶೆಟ್ಟಿ ಹೆಸರು ದೇಶಾದ್ಯಂತ ಪರಿಚಿತ. 1975 ರ ಸುಮಾರಿಗೆ ವಿ. ಕೆ. ಇಂಜಿನಿಯರ್ಸ್ ಎಂಬ ಹೆಸರಿನೊಂದಿಗೆ ಉದ್ಯಮ ರಂಗ ಪ್ರವೇಶಿಸಿದ ಕೆ. ಎಂ ಶೆಟ್ಟರು ಟೂಲ್ ರೂಂ ವರ್ಕ್ ಶಾಪ್ ಯಂತ್ರೋಪಕರಣಗಳ ಮೂಲಕ ತಮ್ಮ ಕಾರ್ಯಾಗಾರವನ್ನು ಪ್ರಾರಂಭಿಸಿದರು. ಉದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಗುಣಮಟ್ಟದ ಇಂಜೆಕ್ಷನ್ ಮೌಲ್ಡಿಂಗ್ ಉಪಕರಣಗಳನ್ನು ಉತ್ಪಾದಿಸುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡರು. ತನ್ನ ಉದ್ಯಮ ಅಪೂರ್ವ ಯಶಸ್ಸು ಕಂಡ ಬಳಿಕ ದೇಶದ ಅನ್ಯಭಾಗಗಳಲ್ಲಿ ಗ್ರಾಹಕರ ಬೇಡಿಕೆಗಳನ್ನು ಅನುಸರಿಸಿ ಶಾಖೆಗಳನ್ನು ತೆರೆದು ಉದ್ಯಮ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡರು. ಕೆ. ಎಂ ಶೆಟ್ಟರು ಇದರ ಕಾರ್ಯಾಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸತೊಡಗಿದರು. ಪ್ರಸ್ತುತ ಈ ಕಂಪನಿಯಲ್ಲಿ ಗೃಹೋಪಯೋಗಿ…
ಶಶಿಕಿರಣ್ ಶೆಟ್ಟಿ ಅವರಿಗೆ `ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ’ ಹಿಂದುಳಿದವರ ಅಭಿವೃದ್ಧಿಯಿಂದ ಸಮಾಜದ ಅಭ್ಯುದಯ : ಶಶಿಕಿರಣ್ ಶೆಟ್ಟಿ ಮುಂಬಯಿ
ಮುಂಬಯಿ (ಆರ್ ಬಿ ಐ), ಅ.09: ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ನಿರ್ಮಾಣಕ್ಕೆ ನೆರವು ನೀಡುವುದರಿಂದ ಸಮಾಜದ ಅಭ್ಯುದಯ ಸಾಧ್ಯ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ನಮ್ಮ ಹೊಣೆಗಾರಿಕೆ ಎಂದು ಮುಂಬಯಿಯಲ್ಲಿನ ಪ್ರತಿಷ್ಠಿತ ಉದ್ಯಮಿ, ಆಲ್‍ಕಾರ್ಗೊ ಸಮೂಹ ಸಂಸ್ಥೆಯ ಸ್ಥಾಪಕ ಕಾರ್ಯಾಧ್ಯಕ್ಷ ಶಶಿಕಿರಣ್ ಶೆಟ್ಟಿ ತಿಳಿಸಿದರು. ಜಾಗತಿಕ ಬಂಟ ಪ್ರತಿಷ್ಠಾನದ ವತಿಯಿಂದ ನಗರದ ಎ.ಜೆ.ಗ್ರ್ಯಾಂಡ್ ಹೋಟೆಲ್‍ನಲ್ಲಿ ಕಳೆದ ಶನಿವಾರ ನಡೆದ ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಲ್‍ಕಾರ್ಗೊ ಸಮೂಹ ಸಂಸ್ಥೆಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ 17 ಕುಟುಂಬಗಳಿಗೆ ದಾನದ ರೂಪದಲ್ಲಿ ನೀಡಿದ ಮನೆಗಳ ಕೀಲಿ ಕೈ ಹಸ್ತಾಂತರಿಸಿ ಅವರ ಮಾತನಾಡಿದರು. ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಆರ್ಥಿಕ ಸಂಕಷ್ಟದಿಂದ ಇರುವವರು ಮನೆ ನಿರ್ಮಿಸುವು ದು ಕಷ್ಟ ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಜಾಗತಿಕ ಬಂಟ ಪ್ರತಿಷ್ಠಾನದ ಕೋರಿಕೆ ಮೇರೆಗೆ ಆಲ್‍ಕಾರ್ಗೊ ಸಂಸ್ಥೆ ಆರ್ಥಿಕವಾಗಿ ಹಿಂದುಳಿದ 17 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡುವ ಮೂಲಕ ಸಮಾಜಕ್ಕೆ ತನ್ನ…
ಪುಣೆ ಬಂಟ್ಸ್ ಅಸೋಸಿಯೇಷನ್ ನ 11ನೇ ವಾರ್ಷಿಕೊತ್ಸವ ಸಮಾರಂಭವು ಫೆಬ್ರವರಿ 3 ರಂದು ಲತಾ ಸುಧೀರ್ ಶೆಟ್ಟಿ ವೇದಿಕೆ, ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನ, ಬಂಟರ ಭವನ ಬಾಣೇರ್ ಇಲ್ಲಿ ಅಪರಾಹ್ನ ಗಂಟೆ 2.00 ರಿಂದ ವಿವಿಧ ಸಾಂಸ್ಕ್ರತಿಕ, ನಾಟಕ ಪ್ರದರ್ಶನ, ಸಭಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಗಣೇಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಂಭ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾ, ಗೌರವ ಅತಿಥಿಗಳಾಗಿ ಪುಣೆಯ ಖ್ಯಾತ ಕೈಗಾರಿಕೋದ್ಯಮಿ ಡಾ. ಜಿತೇಂದ್ರ ಹೆಗ್ಡೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಕಾರ್ಯಾಧ್ಯಕ್ಷರಾದ ಕೆರಾಡಿ ಚಂದ್ರಶೇಖರ್ ಶೆಟ್ಟಿಯವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಸಾಧಕರಿಗೆ ಸತ್ಕಾರ ನಡೆಯಲಿದೆ. ಬಂಟ್ಸ್ ಅಸೋಸಿಯೇಷನ್ ನ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಅಪರಾಹ್ನ ಗಂಟೆ 2 ಗಂಟೆಯಿಂದ ಆರಂಭಗೊಳ್ಳಲಿದ್ದು, ಸಂಘದ ಸದಸ್ಯರು ಮತ್ತು ಸಮಾಜ ಬಾಂಧವರಿಂದ…
ಲೀಲಣ್ಣ ಅಜಾತಶತ್ರು. ಕೂಡಿಟ್ಟಿದ್ದರೆ ಕೋಟ್ಯಾಧಿಪತಿ. ಆದರೆ ಹಂಚಿದ ಒಂದೊಂದು ಪೈಸೆಯೂ ಕೂಡ ತನ್ನ ಕಿಸೆಯಿಂದಲೇ ಬೆವರು ಸುರಿಸಿ ದುಡಿದ ಹಣದಿಂದ ಸತ್ಯದ ಬಾಗಿಲು ಅವರ ಹಿಂದೆಯೇ ಇತ್ತು. ಮರ್ಯಾದೆ ಅಂದರೆ ಯಾವುದನ್ನೂ ಲೆಕ್ಕಿಸದೆ ಜೀವನ ಪರ್ಯಾಂತ ಬದುಕು ಸಾಗಿಸಿದ ಪುಣ್ಯಾತ್ಮ ಲೀಲಣ್ಣ. ಹೋಗ್ಬಿಟ್ರಿ ನೀವು ಮಾನದ ಹಿಂದೆ ಪ್ರಾಣವನ್ನು ಲೆಕ್ಕಿಸದೆ ಹೋಗ್ಬಿಟ್ರಿ ನಮ್ಮನ್ನು ಬಿಟ್ಟು ಹೋಗ್ಬಿಟ್ರಿ. ನಿಮ್ಮ ಕಾಲಿನ ಧೂಳಿಗೂ ಸಮಾನವಲ್ಲದ ಆ ದತ್ತು ಪುತ್ರಿಯ ಕಪಟ ನಾಟಕಕ್ಕೆ ಬಲಿಯಾಗಿ ಬಿಟ್ರಿ. ನಿಮ್ಮ ಗಟ್ಟಿ ಧ್ವನಿ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದೆ. ಕಾಪುವಿನ ಗೋಡೆ ಗೋಡೆಯು ನಿಮ್ಮ ಬಗ್ಗೆ ಮಾತಾಡುತ್ತಿದೆ. ಬೀಸುತ್ತಿರುವ ಗಾಳಿ ಲೀಲಣ್ಣ ಅನ್ನುತ್ತಿದೆ. ಒಂದು ಬಾರಿಯಾದರೂ ಓ…. ಎನ್ನುವಿರಾ ಲೀಲಣ್ಣ..!! ಮನಸ್ಸಿನ ಭಾರವನ್ನು ನೀವು ಹಂಚಿಕೊಂಡಿಲ್ಲ. ದುಃಖವನ್ನು ಹೊರ ಪ್ರಪಂಚಕ್ಕೆ ಬಿಟ್ಟು ಕೊಟ್ಟಿಲ್ಲ. ಮಕ್ಕಳಿಗೆ ತಾತನಾದಿರಿ, ಹಿರಿಯರಿಗೆ ಗುರುವಾದಿರಿ. ಸಾವಿರಾರು ಮಂದಿಗೆ ಅಣ್ಣನಾಗಿ ಜೊತೆಗೆ ನಿಂತಿರಿ. ನೂರಾರು ಹೆಣ್ಣು ಮಕ್ಕಳಿಗೆ ಧಾರೆ ಎರೆದಿರಿ. ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ಕಟ್ಟಿ…
ಅ.16: ಉಡುಪಿ ಅಂಬಲಪಾಡಿಯಲ್ಲಿ ಮುಂಬಯಿ ವಾಪಸಿಗರ ಸಮ್ಮಿಲನ ಸರ್ವಾಧ್ಯಕ್ಷರಾಗಿ ಕರ್ನಾಟಕ ಸಂಶೋಧನಾ ರತ್ನ ಡಾ| ಎ.ಸುಬ್ಬಣ್ಣ ರೈ
ಮುಂಬಯಿ (ಆರ್ ಬಿ ಐ), ಅ.05: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ (ರಿಜಿಸ್ಟರ್ ) ಆಗಿರುವ ಗಡಿನಾಡ ಕನ್ನಡಿಗ ತುಳುವ ಡಾ| ಸುಬ್ಬಣ್ಣ ರೈ ಅವರು ಪ್ರಪ್ರಥಮ ಮುಂಬಯಿ ವಾಪಸಿಗರ ಸಮ್ಮಿಲನ ಐತಿಹಾಸಿಕ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿದ್ದಾರೆ ಎಂದು ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ, ವಿಶ್ವ ಮಾಧ್ಯಮ ಚಕ್ರವರ್ತಿ ಗೌರವಕ್ಕೆ ಪಾತ್ರರಾಗಿರುವ ಡಾ| ಶೇಖರ ಅಜೆಕಾರು ತಿಳಿಸಿದ್ದಾರೆ. ಕರಾವಳಿಗರ ಎರಡನೇ ತವರು ಎಂದೇ ಖ್ಯಾತವಾಗಿರುವ ಮುಂಬಯಿ ಕನ್ನಡಿಗರು ತುಳು-ಕನ್ನಡ ನಾಡಿನ ಅಭಿವೃದ್ಧಿಯ ಹರಿಕಾರರು. ನಿವೃತ್ತರಾಗಿ, ಊರಿನ ಅನಿವಾರ್ಯತೆಯಿಂದ, ಸೋಲು-ಗೆಲುವುಗಳಿಂದಾಗಿ ಊರಿಗೆ ಬಂದು ನೆಲೆಸಿದ್ದಾರೆ. ಮುಂಬಯಿಯಲ್ಲಿದ್ದು ಬಳಿಕ ಊರಿಗೆ ವಾಪಸು ಬಂದು ನೆಲೆಸಿರುವವರು ಒಂದು ದಿನ ಸಮ್ಮಿಲನವಾಗ ಬೇಕು. ಅಂತ ಮುಂಬಯಿಯಿಂದ ವಾಪಸು ಬಂದು ಊರಲ್ಲಿ ನೆಲೆಸಿರುವರನ್ನು ಒಂದು ಸೂರಿನಡಿ ತರುವ ಪ್ರಯತ್ನ ಇದಾಗಿದೆ. ಉಡುಪಿ ಜಿಲ್ಲೆಯ ರಜತ ಸಂಭ್ರಮ, ಕನ್ನಡ ಸೇವಾ ಸಂಘ ಪೊವಾಯಿ ಇದರ ಬೆಳ್ಳಿ ಹಬ್ಬದ ಸಂಧರ್ಭದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿತವಾಗಿದೆ. ಡಾ|…
ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿ ಮುಂಬಯಿಯ 122 ಬಂಟ ಪುಟಾಣಿಗಳೊಂದಿಗೆ ಬಂಟ ಭವಿಷ್ಯ ಸನಾತನ ಸನ್ನಡತೆಯ ಸತ್ಸಂಗ ಸಂಭ್ರಮ ಕಾರ್ಯಕ್ರಮವು ಜನವರಿ 27 ರಂದು ಸಂಜೆ 3:30 ಕ್ಕೆ ಬಂಟರ ಸಂಘ ಮುಂಬಯಿಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ಎಲ್ಲಾ ಸದಸ್ಯರು ಸೇರಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಮುಕ್ತಾನಂದ ಸಭಾಗೃಹದ ವೇದಿಕೆಗೆ ಸರಸ್ವತಿ ದೇವಿಯನ್ನು ಪೂರ್ಣ ಕುಂಭ, ಭಜನೆಯೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಕುಣಿತ ಭಜನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಸಮನ್ವಯಕರಾದ ಶ್ರೀ ರವೀಂದ್ರನಾಥ ಭಂಡಾರಿ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾದ್ಯಕ್ಷರಾದ ಕಾರ್ಯಾನಗುತ್ತು ಶಿವರಾಂ ಶೆಟ್ಟಿ ಮತ್ತು…
ಪ್ರಕೃತಿಯ ಮಡಿಲಲ್ಲಿ ಮೈವೆತ್ತು ನಿಂತಿರುವ ಶಿಬರೂರಿನ ಶ್ರೀ ಕೊಡಮಣಿತ್ತಾಯ ದೈವಸ್ಥಾನವು ಐತಿಹಾಸಿಕ ಮತ್ತು ಕಾರಣಿಕ ಕ್ಷೇತ್ರ. ಪೊಡಮಟ್ಟವರ ಒಡಲಿಷ್ಟಾರ್ಥವ ಕರುಣಿಸುವ ಧರ್ಮದೈವ ಶಿಬರೂರ ಕೊಡಮಣಿತ್ತಾಯ. ಪಾಡ್ದನದಲ್ಲಿ ತಿಳಿಸುವ ಕೊಡಮಣಿತ್ತಾಯ ದೈವದ ಹುಟ್ಟಿನ ಕಥೆ ಹೀಗಿದೆ. ತುಳುನಾಡಿನ ಪ್ರಸಿದ್ಧ ಜೈನ ಮನೆತನದ ಕೊಡಮಣಿ ಬರ್ಕೆಯ ಅರಸು ಕುಂಞ ಆಳ್ವರು. ಅಂದೊಂದು ಶುಭ ವರ್ಷ ತುಲಾ ಸಂಕ್ರಮಣ ಸಮಯದಲ್ಲಿ ಗಂಗಾ ಉಗಮ ಸ್ಥಾನದ ಗಂಗಾಮೂಲ ಸ್ಥಳದಲ್ಲಿ ನಡೆಯುವ ಗಂಗೆಯ ಉತ್ಸವಕ್ಕೆ ಹೋಗುತ್ತಾರೆ. ನಾಲ್ಕೆಂಟು ದಿನಗಳ ಉತ್ಸವದಲ್ಲಿ ಪಾಲ್ಗೊಂಡು ಇನ್ನು ನನ್ನ ಕೊಡಮಣಿ ಬರ್ಕೆಗೆ ಹಿಂತಿರುಗುತ್ತೇನೆಂದು ಮನದಲ್ಲಿ ನಿಶ್ಚಯಿಸಿ ಹಿಂತಿರುಗಲು ದೈವವೊಂದು ಪ್ರಕಟಗೊಂಡು ನಾನು ಕೊಡಮಣಿ ಬರ್ಕೆಗೆ ಬರುತ್ತೇನೆಂದು ಹೇಳುತ್ತದೆ. ಆಳ್ವರು ದೈವದ ಹೆಸರೇನೆಂದು ಕೇಳಲು ’ಹೊಸ ದೈವ ಕುಮಾರ (ಹೊಸದೈವ ಕುಮಾರೆ ಪಂಡ್ದ್ ಬರ್ರೆ)’ ಎಂದು ಕುಂಞ ಆಳ್ವರ ಬೆನ್ನು ಹಿಡಿದು ಬರುತ್ತದೆ. ಅವರ ಹಿಂದೆ ಬಂದ ದೈವವು ಕೊಡಂಗೆ ಗವಸಾಲೆ ಬರ್ಕೆಯಲ್ಲಿ ಹಾಲು ನೀರು ಸೇವಿಸಿ ಕೊಡಮಣಿ ಬರ್ಕೆಗೆ ಬರುತ್ತದೆ. ಮುಂದೆ ಕೊಡಮಣಿ…
✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಸುದ್ದಿ @ಹೈಕಾಡಿ (ಕುಂದಾಪುರ ) ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರು ,ಕೃಷಿಕರು ಹೈನುಗಾರರಾದ ಶ್ರೀಮತಿ ಚೈತ್ರ.ವಿ ಅಡಪ ಇವರಿಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ಯಲ್ಲಿ ಜರುಗಿದ ಹುಯ್ಯಾರು ಪಟೇಲ್ ಚಾರಿಟೆಬಲ್ ಟ್ರಸ್ಟ್ .(ರಿ.) ನವರು ನಡೆಸಿದ ಹತ್ತನೇ ವರ್ಷದ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಅಭಿನಂದನಾ ಸನ್ಮಾನ ಮಾಡಿ ಗೌರವಿಸಲಾಯಿತು. ಗ್ರಾಮೀಣ ಭಾಗದ ಕೈಲ್ಕೆರೆ ಪರಿಸರದಲ್ಲಿ ಸುಮಾರು 32 ಜಾನುವಾರುಗಳನ್ನು ಆರೈಕೆ ಮಾಡಿ ಪೋಷಿಸಿ, ಹೈನೋದ್ಯಮದಲ್ಲಿ ತನ್ನ ಹೆಸರನ್ನು ಪ್ರತಿಷ್ಠಾಪಿಸಿ ಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಅದೇ ರೀತಿ ಚೈತ್ರ ವಿ. ಅಡಪ ಅವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಬಾರಿ ಸನ್ಮಾನ ಪುರಸ್ಕಾರಗಳು ದೊರೆತಿವೆ. ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ರೈತ ಸಂಘ ಆಯೋಜನೆ ಆಯೋಜನೆ ಮಾಡಿದ್ದು ,ಕಾರ್ಯಕ್ರಮದ ಅಧ್ಯಕ್ಷರಾಗಿ ಡಾ. ಕೆ. ರತ್ನಾಕರ್ ಶೆಟ್ಟಿ ಹುಯ್ಯಾರು,ಕಾರ್ಯಕ್ರಮದ…
ಮುಲುಂಡ್ ಪರಿಸರದ ಪ್ರಸಿದ್ಧ ವಿದ್ಯಾಸಂಸ್ಥೆ ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಸಂಚಾಲಕ ಸಂಸ್ಥೆ ನವೋದಯ ಕನ್ನಡ ಸೇವಾ ಸಂಘದ ವತಿಯಿಂದ ಅಯೋಧ್ಯೆಯ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆಯ ಶುಭ ಸಂದರ್ಭ ಶ್ರೀರಾಮೋತ್ಸವ – ನವೋದಯ ದೀಪೋತ್ಸವ ಎಂಬ ವಿಶೇಷ ಕಾರ್ಯಕ್ರಮವು ಸಂಸ್ಥೆಯ ನವೋದಯ ಸದನ ಸಭಾಗೃಹದಲ್ಲಿ ಜರಗಿತು. ಸಂಘದ ಅಧ್ಯಕ್ಷರು ಮತ್ತು ಸಂಸ್ಥೆಯ ಕಾರ್ಯಾಧ್ಯಕ್ಷ ಎಳತ್ತೂರುಗುತ್ತು ದಯಾನಂದ್ ಎಸ್ ಶೆಟ್ಟಿಯವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಮತ್ತು ಯುವ ವಿಭಾಗದ ಸರ್ವ ಸದಸ್ಯರು, ಶಾಲೆಯ ಮುಖ್ಯ್ಯೊಪಾಧ್ಯಾಯಿನಿ, ಶಿಕ್ಷಕ ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಘದ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು. ನವೋದಯ ಭಜನಾ ಮಂಡಳಿಯ ಸದಸ್ಯರಿಂದ, ವಿಜಯ್ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದವರಿಂದ ಭಜನೆ ಹಾಗೂ ನವೋದಯದ ಮಕ್ಕಳಿಂದ ಕುಣಿತ ಭಜನಾ ಕಾರ್ಯಕ್ರಮವು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ನವೋದಯ ದೀಪೋತ್ಸವದಲ್ಲಿ ಭಕ್ತರು ಜತೆಗೂಡಿ ಸುಮಾರು 1000 ಹಣತೆಗಳ ದೀಪ ಪ್ರಜ್ವಲನೆ…