ಮಂದಾರ್ತಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮ ಶತಸಾರ್ಥಕ್ಯ ನವಂಬರ್ 3ರಂದು ಬೆಳಿಗ್ಗೆ 10:30 ರಿಂದ ಮಂದಾರ್ತಿ ರಥಬೀದಿಯಲ್ಲಿ ಜರಗಲಿದೆ. ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ವಿ.ವಿ. ಕುಲಪತಿ ಡಾ. ಜಯಕರ ಶೆಟ್ಟಿ ಎಂ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿರುವರು.
ನೂರು ವರ್ಷಗಳ ಹಿಂದೆ 1925 ರ ಜನವರಿ 14 ರಂದು ಊರಿನ ಹಿರಿಯರು ಕಟ್ಟಿ ಬೆಳೆಸಿದ ಸಹಕಾರಿ ಸಂಘವು ಶಿರೂರು ಗ್ರಾಮದಲ್ಲಿ ಪ್ರಾರಂಭಿಸಿ, ಆನಂತರ ಹೆಗ್ಗುಂಜೆ ಗ್ರಾಮದ ಮಂದಾರ್ತಿಗೆ ಸ್ಥಳಾಂತರಗೊಂಡು ಮಂದಾರ್ತಿ ಸೇವಾ ಸಹಕಾರಿ ಸಂಘ ಎನ್ನುವ ಹೆಸರಿನಿಂದ ಬೆಳೆದು ಬಂದಿತು.
ಶತಮಾನೋತ್ಸವ ವರ್ಷ ಸಂಘವು ಶತಮಾನೋತ್ಸವ ವರ್ಷದಲ್ಲಿ ಅಭೂತಪೂರ್ವ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ ಪ್ರತಿ ಗ್ರಾಮದಲ್ಲಿ ಸದಸ್ಯರ ಸಮಾವೇಶ, ರೈತರಿಗೆ ಸನ್ಮಾನ, ಆರೋಗ್ಯ ತಪಾಸಣೆ ಶಿಬಿರ, ಸಹಕಾರಿ ಕ್ರೀಡಾಕೂಟ ಸಂಪನ್ನಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.