ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಮುಂಬೈ 19ನೇ ವಾರ್ಷಿಕ ಯಕ್ಷೋತ್ಸವ ಸಂಭ್ರಮದ ಪ್ರಯುಕ್ತ ಯಕ್ಷ ಪಲ್ಲವಿ ಟ್ರಸ್ಟ್ ಯಕ್ಷಗಾನ ಮಂಡಳಿ ಮಾಳಕೋಡ್ ಇವರಿಂದ ಮಹೇಂದ್ರ ಶಪಥ ಯಕ್ಷಗಾನ ಪ್ರದರ್ಶನ ನವಂಬರ್ 1 ರಂದು ಅಪರಾಹ್ನ 2:30 ರಿಂದ ಪುಣೆಯ ಶಿವಾಜಿ ನಗರದ ಜಂಗ್ಲಿ ಮಹಾರಾಜ್ ಮಂದಿರದ ಎದುರುಗಡೆಯ ಪಾಸನ್ಕರ್ ರೋಡ್ ನಲ್ಲಿನ ಸಿಟಿ ಓಟೆಲ್ ನ ಸಭಾ ಭವನದಲ್ಲಿ ಜರಗಲಿದೆ. ಗಾನ ಕೋಗಿಲೆ, ಯಕ್ಷಮಾಣಿಕ್ಯ ಬಿರುದಾಂಕಿತ ಉದಯೋನ್ಮುಖ ಭಾಗವತೆ ಚಿಂತನಾ ಹೆಗಡೆ ಮಾಳಕೋಡ್ ಅವರು ಪುಣೆಯಲ್ಲಿ ಪ್ರಥಮ ಬಾರಿಗೆ ಭಾಗವತಿಕೆಯ ಗಾನಸುಧೆ ಹರಿಸಲಿದ್ದಾರೆ.
ಮುಮ್ಮೇಳದಲ್ಲಿ ಗೋಪಾಲ್ ಆಚಾರ್ಯ ತೀರ್ಥಹಳ್ಳಿ, ಉದಯ ಕುಮಾರ್ ಮಾಳಕೋಡ್, ನಾಗೇಶ್ ಕುಲಿಮನೆ, ರವಿಕೊಂಡ್ಲಿ ಸಹಿತ ಮಂಜುನಾಥ್ ಕೆರವಳ್ಳಿ ಸ್ತ್ರೀ ಪಾತ್ರದಲ್ಲಿ, ಶ್ರೀಧರ ಭಟ್ ಹಾಸ್ಯ ಪಾತ್ರದಲ್ಲಿ ಮೊದಲಾದ ಖ್ಯಾತ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಭಾಗವಹಿಸಲಿದ್ದಾರೆ. ಉಚಿತ ಪ್ರವೇಶವಿರುವ ಈ ಯಕ್ಷಗಾನ ಪ್ರದರ್ಶನಕ್ಕೆ ಪುಣೆಯ ಯಕ್ಷ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಯಕ್ಷಗಾನ ಪ್ರದರ್ಶನದ ವ್ಯವಸ್ಥಾಪಕರು, ಪ್ರೋತ್ಸಾಹಕರಾದ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿ, ಬಂಟರ ಸಂಘ ಪುಣೆ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಕಾತ್ರಾಜ್ ಪುಣೆ, ಬಂಟ್ಸ್ ಅಸೋಸಿಯೇಷನ್ ಪುಣೆ, ರತ್ನ ಕಲಾ ಸಾಂಸ್ಕೃತಿಕ ಪ್ರತಿಷ್ಠಾನ, ತುಳುಕೂಟ ಪುಣೆ, ಬಿಲ್ಲವ ಸಂಘ ಪುಣೆ, ಕುಂದಾಪ್ರ ಕನ್ನಡಿಗರ ವೇದಿಕೆ ಪುಣೆಯ ಪದಾಧಿಕಾರಿಗಳು, ಯಕ್ಷಗಾನ ಕಲಾಪೋಷಕರು ಹಾಗೂ ಮೇಳದ ಯಜಮಾನ ಉದಯ ಹೆಗಡೆ ಮಾಳಕೋಡ್, ಯಕ್ಷಗಾನದ ಸಂಚಾಲಕ ಸುರೇಶ್ ಬರ್ಕಲ್ ಮಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.