Author: admin
ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ಸ್ ನ ಕಲ್ಲೂರು ನಾಗೇಶ್ ಅವರು ಪ್ರಕಟಿಸಿದ ಲಕ್ಷ್ಮಣ ಅವರ ಕೃತಿ ‘ತುಳು ಬೆಳ್ಳಿ ತೆರೆಯ ಸುವರ್ಣ ಯಾನ’ ಕ್ಕೆ ಕಲಾ ವಿಭಾಗದಲ್ಲಿ ಮತ್ತು ಡಾ| ಇಂದಿರಾ ಹೆಗ್ಗಡೆ ಅವರ ‘ಅತಿಕಾರೆ’ ಕೃತಿಗೆ ಭಾಷಾ ವಿಭಾಗದಲ್ಲಿ ಭಾರತೀಯ ಪ್ರಕಾಶಕರ ಒಕ್ಕೂಟದವರು ಕೊಡುವ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕಲ್ಲೂರು ನಾಗೇಶರು ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. ವೈಚಾರಿಕ ಸ್ಪಷ್ಟತೆಯಿಂದ ಪ್ರಕಾಶನವನ್ನು ಮಾಡುತ್ತಿರುವ ನಾಗೇಶ್ ಹಾಗೂ ಸಾಹಿತಿ ಡಾ| ಇಂದಿರಾ ಹೆಗ್ಗಡೆ ಅವರಿಗೆ ಅಭಿನಂದನೆಗಳು.
ಮೂಡುಬಿದಿರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ನಡೆದ ಮೈಸೂರು ವಿಭಾಗ ಮಟ್ಟ ದಸರಾ ಕ್ರೀಡಾಕೂಟದಲ್ಲಿ ಆಳ್ವಾಸ್ ತಂಡವು ಅಥ್ಲೆಟಿಕ್ಸ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 11 ಚಿನ್ನ, 11 ಬೆಳ್ಳಿ, 07 ಕಂಚಿನ ಪದಕಗಳೊಂದಿಗೆ ಒಟ್ಟು 29 ಪದಕ ಪಡೆಯಿತು. ಕುಸ್ತಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 12 ಚಿನ್ನ, 07 ಬೆಳ್ಳಿ, 02 ಕಂಚಿನ ಪದಕಗಳೊಂದಿಗೆ ಒಟ್ಟು 21 ಪದಕ, ಯೋಗ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 01 ಚಿನ್ನ, 02 ಬೆಳ್ಳಿ, 02 ಕಂಚಿನ ಪದಕಗಳೊಂದಿಗೆ ಒಟ್ಟು 05 ಪದಕ ಪಡೆಯಿತು. ಕಬಡ್ಡಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ, ಖೋ-ಖೋ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ದ್ವಿತೀಯ, ವೇಯ್ಟ್ ಲಿಫ್ಟಿಂಗ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 11 ಚಿನ್ನ, 05 ಬೆಳ್ಳಿ, 02 ಕಂಚಿನ ಪದಕಗಳೊಂದಿಗೆ ಒಟ್ಟು 18…
ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ ಸಿರಿಮುಡಿ ದತ್ತಿನಿಧಿ ಟ್ರಸ್ಟ್ ಬಂಟರ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ತ ಬಂಟ ಸಮಾಜದ ಪರವಾಗಿ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಬಂಟ ಸಮಾಜದ ನಾಯಕ ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿಯನ್ನು ಪ್ರಧಾನಿಸಿ ಗೌರವಿಸಲಾಯಿತು. ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಉದ್ಯಮಿ, ಎಂಆರ್ ಜಿ ಗ್ರೂಪ್ ನ ಛೇರ್ಮನ್ ಡಾ| ಕೆ ಪ್ರಕಾಶ್ ಶೆಟ್ಟಿಯವರು, ಇಂದಿನ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ ಸನ್ಮಾನವು ನನ್ನ ಪಾಲಿಗೆ ಅವಿಸ್ಮರಣೀಯವಾಗಿದೆ. ಬಂಟರ ಸಮುದಾಯದ ಅಭ್ಯುತ್ಥಾನಕ್ಕಾಗಿ ಜೀವನ ಪರ್ಯಂತ ಪರಿಶ್ರಮವನ್ನು ಮುಂದುವರಿಸುವುದಾಗಿ ಹೇಳಿದ್ದು, ಪಡುಬಿದ್ರಿಯ ಅಭಿಮಾನಿ ಬಳಗದ ಪ್ರೀತಿಯು ಅಮೋಘವಾಗಿದೆ. ನಾನು ಪಡುಬಿದ್ರಿಗಾಗಿ ಬಲು ದೊಡ್ಡ ಕೊಡುಗೆ ನೀಡಬೇಕಿದೆ. ಈ ಊರಿನ ದೇವಳದ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗಿ…
ಬಂಟರು ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದು, ಕ್ರೀಡೋತ್ಸವಗಳಿಂದ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಉದ್ಯಮಿ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಎಂ. ಸುಂದರ ಶೆಟ್ಟಿ ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಬಂಟ ಕ್ರೀಡೋತ್ಸವ – 2024 ಉದ್ಘಾಟಿಸಿದರು. ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಡಾ. ಆಶಾಜ್ಯೋತಿ ರೈ ಅವರು ಮಾತನಾಡಿ, ಈ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳಿಗೆ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಅವಕಾಶ ಒದಗಿ ಬರಲಿ ಎಂದು ಹಾರೈಸಿದರು. ಉದ್ಯಮಿ ಪುರುಷೋತ್ತಮ ರೈ, ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ, ಡಾ. ಸಂಜೀವ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ…
ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಸುಸಜ್ಜಿತವಾದ ಪಾಕಶಾಲೆಯನ್ನು ನಿರ್ಮಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಮಾರು ಈಶ ವಿಠಲದಾಸ ಸ್ವಾಮೀಜಿ ದೇವರಿಗೆ ಕೊಟ್ಟ ನೈವೇದ್ಯ ದೇವರಿಗೆ ತಲುಪುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಬಡವರಿಗೆ ಕೊಟ್ಟ ಸಹಾಯ ದೇವರಿಗೆ ತಲುಪುತ್ತದೆ ಎಂದು ಹೇಳಿದರು. ದೇವರು ಇರುವಾಗ ಯಾರೂ ಅನಾಥರಲ್ಲ, ನಾವು ಬಂದದ್ದು ಒಬ್ಬರೇ ಹೋಗುವುದು ಒಬ್ಬರೇ. ಭೂಮಿಗೆ ಬಂದಿರುವಾಗ ಯಾರು ನಮ್ಮೊಂದಿಗೆ ಇದ್ದಾರೆ ಎನ್ನುವುದು ಮುಖ್ಯವಲ್ಲ. ದೇವರೊಂದಿಗೆ ನಾವಿದ್ದೇವೆ ಎಂಬುದು ಮುಖ್ಯ ಎಂದು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ವಿಶ್ವನಾಥ್ ಶೆಟ್ಟಿ ದುಬೈ ಗಮ್ಮತ್ ಕಲಾವಿದೆರ್ UAE ಇದರ ಕುರಿತು ವಿವರಿಸಿದರು. ಅರುಣ್ ಶೆಟ್ಟಿ ಮಂಗಳೂರು, ಸತೀಶ್ ಹೆಗ್ಡೆ ದುಬೈ, ಆಯಿಷಾ ಬಾನು, ಅಮ್ಮನ ನೆರವು ಟ್ರಸ್ಟ್ ನ ಅವಿನಾಶ್ ಜಿ ಶೆಟ್ಟಿ ಉಪಸ್ಥಿತರಿದ್ದರು.
ಮುಂಬಯಿ ನಗರದಲ್ಲಿ ಶಿಕ್ಷಣ ಪಡೆದು ಕೆಲ ವರ್ಷಗಳ ಕಾಲ ಉದ್ಯೋಗ ಮಾಡಿ ಬಳಿಕ ಕೊಲ್ಲಿರಾಷ್ಟ್ರ ದುಬೈ ಸೇರಿದಂತೆ ವಿದೇಶಗಳಲ್ಲಿ ದುಡಿದ ಅನುಭವಗಳಿದ್ದರೂ ದೈವ ಕೊಡಮಣಿತ್ತಾಯನ ಆದೇಶವನ್ನು ಪಾಲಿಸಿ ಊರಿನಲ್ಲಿ ನೆಲೆ ನೆಂತು ಹಲವಾರು ವರ್ಷಗಳಿಂದ ಕೊಡಮಣಿತ್ತಾಯ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಾ ದೈವದ ವಿಶೇಷ ಕೃಪೆಗೆ ಪಾತ್ರರಾದ ಪ್ರಸಾದ ಮುಕ್ಕಾಲ್ದಿ ಇಂದು ತುಳುನಾಡಿನಲ್ಲಿ ಜನಜನಿತ ಹೆಸರು. ಸನ್ಮಾನ್ಯ ಪ್ರಸಾದ ಮುಕ್ಕಾಲ್ದಿ ಅವರ ತೀರ್ಥ ರೂಪರಾದ ಸಂಜೀವ ಶೆಟ್ಟಿ ಅವರು ಕಾರ್ಕಳ ತಾಲ್ಲೂಕಿನ ಪೆರ್ವಾಜೆ ಗ್ರಾಮದಲ್ಲಿ ಸತತ ಮೂವತ್ತೈದು ವರ್ಷಗಳ ಸುದೀರ್ಘ ಕಾಲ ಕೊಡಮಣಿತ್ತಾಯ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸಿ ದೈವದ ಕೃಪೆಗೆ ಪಾತ್ರರಾಗಿದ್ದಷ್ಟೇ ಅಲ್ಲದೇ ಊರಿನ ದೈವಾರಾಧಕರ ಪಾಲಿಗೆ ಗೌರವಾದರಗಳ ಹಿರಿಯ ವ್ಯಕ್ತಿಯಾಗಿ ಮನ್ನಣೆ ಗಳಿಸಿದ್ದರು. ಒಮ್ಮೆ ಊರ ನೇಮೋತ್ಸವಕ್ಕೆ ಬಂದಿದ್ದ ಪ್ರಸಾದ್ ಅವರ ಮೈಮೇಲೆ ಕೊಡಮಣಿತ್ತಾಯ ದೈವದ ಆವೇಶ ಬಂದು ಈತನನ್ನು ನನ್ನ ಸೇವೆಗೆ ಒಪ್ಪಿಸುತ್ತೇನೆಂಬ ಭಾಷೆ ಕೊಡಬೇಕೆಂದು ಅವರ ಹಿರಿಯರಿಗೆ ಅಪ್ಪಣೆ ಕೊಡಿಸಿದ ಹಿನ್ನೆಲೆಯಲ್ಲಿ ಮುಂದೆ ದೈವದ ಸೇವೆ ಮಾಡುತ್ತೇನೆಂಬ…
ಬ್ರಹ್ಮಾವರ ಸೆ. 28 ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ ಜಿ ಎಮ್ ಅಡಿಟೋರಿಯಮ್‍ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ನಾಗರಾಜ ಸೋಮಯಾಜಿ ಮಾತನಾಡಿ ಗುಣಮಟ್ಟದ ಶಿಕ್ಷಣದೊಂದಿಗೆ ಸಾಧನೆಯ ಉತ್ತುಂಗದಲ್ಲಿ ರಾರಾಜಿಸುತ್ತಿರುವ ಜಿ ಎಮ್ಸಂ ಸ್ಥೆಯನ್ನು ನೋಡುವಾಗ ಹೆಮ್ಮೆಯಾಗುತ್ತದೆ. ನಾವೆಲ್ಲರೂ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಅವರು ಶಾಲೆಯಿಂದ ಮನೆಗೆ ಬಂದಾಗ ಅವರ ಜೊತೆ ಪ್ರೀತಿಯಿಂದ ಮಾತನಾಡಿ ಸಮಯವನ್ನು ಕಳೆಯಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಮಕ್ಕಳ ಜೀವನೋಪಾಯಕ್ಕಾಗಿ ಮಾತ್ರ ಶಿಕ್ಷಣ ಸೀಮಿತವಾಗಿರದೆ ಅವರ ಉತ್ತಮ ಜೀವನಕ್ಕಾಗಿ ಮೌಲ್ಯದ ಜೊತೆಗೆ ಜ್ಞಾನವನ್ನು ನೀಡಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ ಶಾಲೆ ಆಯೋಜಿಸುವ ರಕ್ಷಕರ ಸಭೆಯಲ್ಲಿ ಭಾಗವಹಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದ್ದು ಇದರಿಂದ ಮಕ್ಕಳ ಕಲಿಕೆ ಸುಗಮವಾಗಲಿದೆ ಎಂದರು. ಪೋಷಕರು ಶಾಲೆಯ ಕುರಿತು ಪ್ರಶಂಸನೀಯ ನುಡಿಗಳನ್ನಾಡಿ ಸಲಹೆ ಸೂಚನೆಗಳನ್ನು ನೀಡಿದರು. ರಕ್ಷಕ- ಶಿಕ್ಷಕ…
ವಿದ್ಯಾಗಿರಿ: ‘ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಗಳು ನಿರ್ಮಾಣಗೊಳ್ಳಬೇಕು’ ಎಂದು ಬಂಟರ ಮಹಿಳಾ ಸಂಘದ ಮೂಡುಬಿದಿರೆ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ವತಿಯಿಂದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ‘ಸಕ್ಷಮ’- ಆಳ್ವಾಸ್ ಮಹಿಳಾ ಸಂಘಟನೆಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಮಹಿಳೆ ಹಲವಾರು ಸಮಸ್ಯೆಗಳನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಇಂತಹ ವೇದಿಕೆಗಳ ಮೂಲಕ ಆಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬೇಕು ಎಂದು ಅವರು ಆಶಿಸಿದರು. ಮುಂದಿನ ದಿನಗಳಲ್ಲಿ ಸಕ್ಷಮ ಸಂಘಟನೆಯ ಮೂಲಕ ಅನೇಕ ಸಮಾಜಮುಖಿ ಕಾರ್ಯ ನಡೆಯಲಿ. ಸಂಘಟನೆಯ ಎಲ್ಲಾ ನೂತನ ಪದಾಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಮುತುವರ್ಜಿ ಹಾಗೂ ಚಾಕಚಕ್ಯತೆಯಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಸರಿಯಾದ ಶಕ್ತಿ ಮತ್ತು ಸಾಮಥ್ರ್ಯದ ಶಕ್ತಿಯೇ ಸಕ್ಷಮ. ಮಹಿಳೆಯರು ತಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು. ನೈಸರ್ಗಿಕವಾಗಿ ಮಹಿಳೆಯರಲ್ಲಿ…
ಗಣಿತ ನಗರ : ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗವು ದ್ವಿತೀಯ ಪಡೆದು ಮೂವರು ವಿದ್ಯಾರ್ಥಿನಿಯರಾದ ದ್ವಿತೀಯ ವಿಜ್ಞಾನ ವಿಭಾಗದ ಕು.ಗುಣಶ್ರೀ ಆರ್, ಮನಸ್ವಿ.ಎಚ್.ಟಿ, ಪ್ರಥಮ ವಿಜ್ಞಾನ ವಿಭಾಗದ ಕು.ಪೂರ್ಣಶ್ರೀ.ವಿ.ಎಸ್. ಹಾಗೂ ಬಾಲಕರ ವಿಭಾಗದಲ್ಲಿ ಕು.ದಿಗಂತ್.ಎಚ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು, ಸಿ.ಇ.ಒ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರುರವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಉದ್ಯಮಿ, ದರ್ಬೆ ಕಟ್ಟಾವು ಇನ್ಸೂರೆನ್ಸ್ ಸೆಂಟರ್ ಮಾಲಕ ಸತೀಶ್ ರೈ ಕಟ್ಟಾವುರವರಿಗೆ ಐಸಿಐಸಿಐ ಲಾಂಬೋರ್ಡ್ ಇನ್ಶೂರೆನ್ಸ್ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ. ಇಂಡೋನೇಷ್ಯಾದಲ್ಲಿ ಇನ್ಸೂರೆನ್ಸ್ ಸಂಸ್ಥೆಯ ವತಿಯಿಂದ ನಡೆದ ಸಮ್ಮೇಳನದಲ್ಲಿ ಅತ್ಯಂತ ಹೆಚ್ಚು ಬಿಸಿನೆಸ್ ಮಾಡುವವರಲ್ಲಿ ಒಬ್ಬರಾಗಿ ಪ್ರಶಸ್ತಿ ಪಡೆದುಕೊಂಡರು. ಸತೀಶ್ ರೈ ಕಟ್ಟಾವುರವರ ಕಟ್ಟಾವು ಇನ್ಸೂರೆನ್ಸ್ ಶಾಖೆಗಳು ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿದೆ.















