Author: admin

ನಮ್ಮ ಹಿರಿಯರ ಆಚರಣೆಗಳು ಅರ್ಥಪೂರ್ಣವಾಗಿದ್ದವು. ಪ್ರಕೃತಿ ಪೂಜೆಗೆ ವಿಶೇಷ ‌ಮಹತ್ವ ಇದ್ದು ಕಲ್ಲು, ಮಣ್ಣು,ಗಿಡ ಮರಗಳ ‌ಪೂಜೆ ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯ ಅವುಗಳಲ್ಲಿ ದೈವತ್ವವನ್ನು ಕಂಡು ಆರಾಧಿಸುವುದು ಕೃಷಿಕರಿಗೆ ಸಂತಸದ ‌ಕಾಯಕವಾಗಿತ್ತು. ಹಾಗೆ ಕೃಷಿ ಪ್ರಧಾನವಾದ ಕುಟುಂಬಗಳು ಮೇಟಿಕಂಬವನ್ನು ವಿಶೇಷ ದಿನಗಳಲ್ಲಿ ಮೇಟಿ ಕಂಬಕ್ಕೆ ಹೂ ಹಾಕುವುದು, ಮೇಟಕಂಬಕ್ಕೆ ಹೊದಳು ಹಾಕುವ ಕ್ರಮ, ಮೇಟಿಕಂಬಕ್ಕೆ ಭಕ್ತಿಯಿಂದ ಪೂಜಿಸುತ್ತಿದ್ದರು. ಮೇಟಿಕಂಬ ಎಂಬ ಹೆಸರಿನಿಂದ ಬೇಸಾಯಕ್ಕೆ ಮೇಟಿವಿದ್ಯೆ ಎಂಬ ಹೆಸರು ಬಂತು ಎನ್ನುವವರು ಇದ್ದಾರೆ. ಶ್ರಿ ಕೃಷ್ಣಜನ್ಮಾಷ್ಟಮಿಯಂದು, ಕದಿರು ಕಟ್ಟುವ ದಿನ, ಕೃಷಿ ಪ್ರಧಾನ ಮನೆಯ ಎದುರು ಇರುವ ಮರದ ಮೇಟಿಕಂಬದ ಸೊಬಗೆ ‌ಬೇರೆ ‌ಇತ್ತು. ಮೇಟಿಕಂಬವನ್ನು ಒದ್ದೆ ಬಟ್ಟೆಯಲ್ಲಿ ಚೆನ್ನಾಗಿ ಒರಸಿ ಕಂಬದ ಸುತ್ತಾ ರಂಗೋಲಿ ಬರೆದು ಹೊದಲು ಹೂ ‌ಇಟ್ಟು ‌ಮನೆಯ ಯಜಮಾನ ಪಂಚೆ ಉಟ್ಟು ತಿಲಕ ಹಚ್ಚಿ, ದೀಪದ ಆರತಿ ಎತ್ತಿ ಮೇಟಿಕಂಬಕ್ಕೆ ತೆಂಗಿನಕಾಯಿ ಒಡೆದು, ಕೊಡಿ ಬಾಳೆಎಲೆಯಲ್ಲಿ ಹೊದಳು ಪಂಚಕಜ್ಜಾಯ‌ ಮಾಡಿ ಇಟ್ಟು, ಸಳ್ಳೆ ‌ಎಲೆ ಅಥವಾ…

Read More

ಸ್ಥಳೀಯ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಕೆಎಸ್‌ಸಿಎಸ್‌ಟಿ ಪ್ರೋತ್ಸಾಹಿಸುತ್ತಿದೆ. ಮಂಡಳಿಯು 45 ವರ್ಷಗಳಲ್ಲಿ 15,300ಕ್ಕೂ ಅಧಿಕ ವಿದ್ಯಾರ್ಥಿ ಯೋಜನೆಗಳನ್ನು ಗುರುತಿಸಿ ನೆರವು ನೀಡಿದೆ. ಪ್ರಸಕ್ತ 46ನೇ ಸರಣಿಯಲ್ಲಿ ಮಂಡಳಿಯು ರಾಜ್ಯದ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ವಿವಿಧ ವಿಭಾಗಗಳ 5,961 ಯೋಜನೆಗಳನ್ನು ಸ್ವೀಕರಿಸಿದ್ದು 197 ಎಂಜಿನಿಯರಿಂಗ್‌ ಕಾಲೇಜುಗಳ 1,494 ಯೋಜನ ಪ್ರಸ್ತಾವನೆಗಳಿಗೆ ಧನಸಹಾಯ ಮತ್ತು ತಾಂತ್ರಿಕ ನೆರವು ನೀಡಿರುವುದು ಶ್ಲಾಘನೀಯ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಮಿಜಾರಿನಲ್ಲಿರುವ ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ಆ.11, 12ರಂದು ನಡೆಯುವ “46ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನ’ದಲ್ಲಿ ಅವರು ಮಾತನಾಡಿ, ಪರಿಣತರ ಮೌಲ್ಯಮಾಪನದ ಮೂಲಕ 433 ಅತ್ಯುತ್ತಮ ಯೋಜನೆಗಳು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂಬುದು ಉತ್ತಮ ಬೆಳವಣಿಗೆ ಎಂದರು. ದೇಶಕ್ಕೆ ಕೊಡುಗೆ…

Read More

ಕಾಪುವಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯುವ ತುಳುನಾಡಿನ ಏಳು ಜಾತ್ರೆಗಳಲ್ಲಿ ಒಂದಾದ ಕಾಪುವಿನ ಕಾಲಾವಧಿ ಸುಗ್ಗಿಮಾರಿ ಪೂಜೆಯು ಮಾ. 21 ಮತ್ತು 22ರಂದು ನಡೆಯಲಿದೆ ಎಂದು ಮಾರಿಗುಡಿಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಕಾಪು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ ಈ ಬಗ್ಗೆ ಮಾಹಿತಿ ನೀಡಿ, ಐತಿಹಾಸಿಕ ಹಿನ್ನೆಲೆ ಮತ್ತು ಪ್ರಸಿದ್ಧಿ ಪಡೆದಿರುವ ಮೂರು ಮಾರಿಗುಡಿಗಳಲ್ಲಿ 2023 ನೇ ಸಾಲಿನ ಸುಗ್ಗಿ ಮಾರಿಪೂಜೆಗೆ ಪೂರ್ವಭಾವಿಯಾಗಿ ಮಾ. 14 ಮೀನ ಸಂಕ್ರಮಣದಂದು ಕುರಿ ಬಿಡುವ ಸಂಪ್ರದಾಯ ನಡೆಯಲಿದೆ. ಬಳಿಕ ಅದರ ಮುಂದಿನ ಮಂಗಳವಾರ ಮತ್ತು ಬುಧವಾರ (ಮಾ. 21 ಮತ್ತು 22) ದಂದು ಸುಗ್ಗಿ ಮಾರಿಪೂಜೆ ನಡೆಯಲಿದೆ ಎಂದು ತಿಳಿಸಿದರು. ಕಾಪುವಿನ ಮೂರು ಮಾರಿಗುಡಿಗಳಲ್ಲಿ ವರ್ಷಕ್ಕೆ ಮೂರು ಬಾರಿ ಸುಗ್ಗಿ, ಆಟಿ ಮತ್ತು ಜಾರ್ದೆ ಮಾರಿಪೂಜೆ ನಡೆಯುತ್ತದೆ. ಇದರಲ್ಲಿ ಸುಗ್ಗಿ…

Read More

ಪದ್ಮಾವತಿ ಪಿ ಶೆಟ್ಟಿ ಗುರ್ಮೆ ಅವರ 4 ನೇಯ ಪುಣ್ಯತಿಥಿಯ ಸ್ಮರಣಾರ್ಥ ಗುರ್ಮೆ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಗುರ್ಮೆ ಗೋ ವಿಹಾರ ಕೇಂದ್ರದ ಲೋಕಾರ್ಪಣೆ ಯನ್ನು ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರ್ಮೆಯಲ್ಲಿ ಉದ್ಘಾಟಿಸಿದರು. ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಗೌರಿಗದ್ದೆ ಸ್ವರ್ಣ ಪೀಠಿಕಾಪುರದ ಅವದೂತ ವಿನಯ್ ಗುರೂಜಿ ಅವರು ಆಶೀರ್ವಚಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್ ಈಶ್ವರಪ್ಪ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಸಂಸದರಾದ ಬಿ.ವೈ ರಾಘವೇಂದ್ರ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಘುಪತಿ ಭಟ್, ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ, ಬೆಂಗಳೂರು ಎಂ.ಆರ್.ಜಿ ಗ್ರೂಪ್ಸ್ ಚೇರ್ಮನ್…

Read More

ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡಲು ಬಹುತೇಕ ಚಿತ್ರತಂಡಗಳು ಹೆದರುತ್ತವೆ. ಕೋಟಿಗಟ್ಟಲೇ ಬಂಡವಾಳ ಹೂಡುವ ಸಿನಿಮಾದಲ್ಲಿ “ಪ್ರಯೋಗ’ ಮಾಡಲು ಹೋಗಿ ಹೆಚ್ಚುಕಮ್ಮಿಯಾದರೆ ಕೈ ಸುಟ್ಟುಕೊಳ್ಳಬೇಕಾದಿತ್ತು ಎಂಬ ಭಯದಿಂದ ಹೆಚ್ಚಿನ ಸಿನಿಮಾಗಳು ‘ರೆಗ್ಯುಲರ್‌’ ಪ್ಯಾಟರ್ನ್ ಗೆ ಖುಷಿಪಡುತ್ತವೆ. ಈ ನಿಟ್ಟಿನಲ್ಲಿ ‘ಟೋಬಿ’ ತಂಡದ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು. ಅದರಲ್ಲೂ ಸಿನಿಮಾದ ಮುಖ್ಯಪಾತ್ರವಾದ ನಾಯಕನ ವಿಚಾರದಲ್ಲಿ ‘ಟೋಬಿ’ ತಂಡದ ಪ್ರಯೋಗ ಇದೆಯಲ್ಲ, ಅದನ್ನು ಮಾಡಲ ಒಂದು ಗಟ್ಟಿ ಧೈರ್ಯ ಬೇಕು. ಆ ಧೈರ್ಯದೊಂದಿಗೆ ಮೂಡಿಬಂದಿರುವ ‘ಟೋಬಿ’ ಪ್ರೇಕ್ಷಕರನ್ನು ತಣ್ಣಗೆ ಕಾಡುತ್ತಾ, ‘ಇವ ಯಾಕ್‌ ಹಿಂಗೆ’ ಎಂಬ ಪ್ರಶ್ನೆಯನ್ನು ಮುಂದಿಡುತ್ತಲೇ ಸಾಗುತ್ತದೆ. ಮೊದಲೇ ಹೇಳಿದಂತೆ ಟೋಬಿ ಒಂದು ಹೊಸ ಪ್ರಯೋಗದ ಸಿನಿಮಾ. ಸಿನಿಮಾಗಳ ಹಳೆಯ ಸಿದ್ಧಸೂತ್ರಗಳನ್ನು ಪಕ್ಕಕ್ಕಿಟ್ಟು ತನ್ನದೇ ದಾರಿಯಲ್ಲಿ ಸಾಗುವುದು ಟೋಬಿ ವೈಶಿಷ್ಟ್ಯ. ಈ ಹಾದಿಯಲ್ಲಿ ಟೋಬಿ ಬದುಕಿನ ಕರಾಳತೆ, ಕ್ರೂರತೆ, ನೀರವ ಮೌನ, ಸಂಕಟ, ಗೊಂದಲ, ಅಸಹಾಯಕತೆ… ಎಲ್ಲವೂ ಧಕ್ಕುತ್ತದೆ. ಟೋಬಿ ಯಾರು, ಆತ ಯಾಕೆ ಹೀಗಾದ, ಆತನ ಮುಂದಿನ ಹಾದಿ ಏನು… ಇಂತಹ…

Read More

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಹೆಬ್ರಿ ಹಾಗೂ ಕಾರ್ಕಳ ಬಂಟರ ಸಂಘ ಹಾಗೂ ಕಾರ್ಕಳ ಮಹಿಳಾ ಬಂಟರ ಸಂಘ ಇವರುಗಳ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ಬಂಟ ಕೂಟ ಕಾರ್ಯಕ್ರಮವನ್ನು ದಿನಾಂಕ 13 -08-2023 ರಂದು ಆದಿತ್ಯವಾರ ಕಾರ್ಕಳದ ಬಂಟ್ಸ್ ಹಾಸ್ಟೆಲ್ ಅನಂತ ಶಯನ, ತೆಳ್ಳಾರು ರಸ್ತೆ ಇಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ 9 ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಉದ್ಘಾಟನೆಯ ನಂತರ ಬಂಟರ ಸಾಂಸ್ಕೃತಿಕ ತರಬೇತುದಾರರಾದ ಸುಧೀಂದ್ರ ಜೆ. ಶಾಂತಿ ಇವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಇದೆ. ಬೆಳಗ್ಗಿನ ಉಪಹಾರದ ನಂತರ ಪುರುಷರಿಗೆ ವಾಲಿಬಾಲ್, ಹಗ್ಗ ಜಗ್ಗಾಟ ಹಾಗೂ ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ ಇತ್ಯಾದಿ ಹೊರಾಂಗಣ ಕ್ರೀಡೆಗಳು ಇವೆ. ಎಲ್ಲಾ ವಯೋಮಾನದ ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಳಾಂಗಣ, ಮನೋರಂಜನ ಕ್ರೀಡೆಗಳಿವೆ. ಸ್ಥಳೀಯರಿಗೆ ಸಮುದಾಯ ಬಾಂಧವರಿಗೆ ಎಲ್ಲರಿಗೂ ಶ್ರೀ…

Read More

ಪ್ರಸ್ತುತ ಮಧುಮೇಹ ಹಾಗೂ ಅಧಿಕ, ಕಡಿಮೆ ರಕ್ತದೊ ತ್ತಡ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ದೈಹಿಕ ವ್ಯಾಯಮದ ಕೊರತೆ, ಅನಿಯಮಿತ ಆಹಾರ ಪದ್ಧತಿ, ಒತ್ತಡ, ಆತಂಕ, ಖನ್ನತೆ ಪ್ರಮುಖ ಕಾರಣಗಳಾಗಿವೆ. ಯೋಗ ಅಭ್ಯಾಸ ಮಾಡುವುದರಿಂದ ಖನ್ನತೆ, ಒತ್ತಡ ನಿವಾರಣೆಯಾಗಿ, ದೇಹದ ತೂಕ ಇಳಿಕೆಯಾಗುವುದರಿಂದ ಮಧುಮೇಹ ನಿಯಂತ್ರಣ ಬರುತ್ತದೆ. ಮಧುಮೇಹ ಹೊಂದಿರುವವರು ಯೋಗ ಮಾಡುವುದರಿಂದ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಯೋಗ ಒತ್ತಡವನ್ನು ನಿರ್ವಹಣೆ ಮಾಡುತ್ತದೆ. ಯೋಗ ಮಾಡುವುದರಿಂದ ಮೆದುಳಿನಲ್ಲಿ ನಿರ್ದಿಷ್ಟ ರಾಸಾಯನಿಕ ಸಮತೋಲನವನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. ಯೋಗ, ಪ್ರಾಣಾಯಾಮ, ಧ್ಯಾನ ಅಭ್ಯಾಸವನ್ನು ನಿರಂತರ ವಾಗಿ ಮಾಡುವುದರಿಂದ ಮಧುಮೇಹಿಗಳು ಮಾತ್ರೆಯಲ್ಲಿಯೇ ಸಕ್ಕರೆ ಮಟ್ಟ ನಿಯಂತ್ರಣ ಮಾಡಿಕೊಳ್ಳ ಬಹುದಾಗಿದ್ದು, ಕೃತಕ ಇನ್ಸುಲಿನ್‌ ಪಡೆದುಕೊಳ್ಳುವ ಆವಶ್ಯಕತೆ ಬರುವುದಿಲ್ಲ. ಮಾತ್ರೆಗ‌ಳ ಅತೀಯಾಗಿ ಸೇವಿ ಸುವ ಅಗತ್ಯವೂ ಇರುವುದಿಲ್ಲ. ಪ್ರಮುಖವಾಗಿ ಮಾನಸಿಕ ಒತ್ತಡ, ಖನ್ನತೆ, ತೂಕ ಇಳಿಯು ವಿಕೆ, ಬೊಜ್ಜು ಕರಗುವುದು, ಮೊಣಕಾಲು ನೋವು, ಮೊಣಕಾಲು ಚಿಪ್ಪು ಬದಲಾವಣೆಯಂತ ಸಮಸ್ಯೆಗಳು ನಿವಾರಣೆಯಾಗಲಿವೆ. ಮಧುಮೇಹಕ್ಕೆ ಸ್ಥೂಲಕಾಯ ಕೂಡ ಪ್ರಮುಖ…

Read More

ಹಚ್ಚ ಹಸುರಿನಿಂದ ಕಂಗೊಳಿಸುವ, ಕಣ್ಮನ ಸೆಳೆಯುವ ಪೆರುವಾಯಿಯ ನದಿಗೆ ಸಮೀಪವೇ ಇರುವ ಅರಮನೆಯಂತೆ ಕಂಗೊಳಿಸುವ ಸುಂದರ,ಸುಸಜ್ಜಿತ, ಕಣ್ಮನ ಸೆಳೆಯುವ ಬಂಟರ ಸಂಘ, ಮುಂಬಯಿ ಸಂಚಾಲಿತ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆ ಬಂಟರ ಹೆಮ್ಮೆಯೂ ಹೌದು. ಈ ಶಿಕ್ಷಣ ಸಂಕುಲಕ್ಕೆ ಈಗ ಇಪ್ಪತ್ತೈದರ ಹರೆಯ. ದಿನಾಂಕ 22/1/23ರ ಆದಿತ್ಯವಾರ ಸಂಜೆ 5.30ರಿಂದ ಎಸ್.ಎಂ.ಶ್‍ಟ್ಟಿ ಶಿಕ್ಷಣ ಸಂಸ್ಥೆ ರಜತ ಸಂಭ್ರಮವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾಣಿ ಅಬ್ಬಕ್ಕನ ಕುರಿತ ಬ್ಯಾಲೆಟ್, ಕಿರು ಚಿತ್ರ, ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಹೀಗೆ ಭಿನ್ನ ರೀತಿಯ ಕಾರ್ಯಕ್ರಮದೊಂದಿಗೆ ಈ ಸಮಾರಂಭ ಅರ್ಥಪೂರ್ಣವಾಗಿ ನಡೆಯಲಿದೆ. ಆ ಪ್ರಯುಕ್ತ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆಯು ನಡೆದು ಬಂದ ಹಾದಿಯ ಅವಲೋಕನ ಈ ಕಿರು ಲೇಖನದಲ್ಲಿದೆ. ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಮಿನಿ ಭಾರತವೆಂದೇ ಜನಜನಿತವಾಗಿರುವ ಮುಂಬಯಿ ಮಹಾನಗರ ಭಾರತದ ಭಾಗ್ಯ ನಗರಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಮುಂಬೈ ನಮ್ಮ ದೇಶದ ಆರ್ಥಿಕ ರಾಜಧಾನಿ. ಈ ಮಹಾನಗರದಲ್ಲಿ ಜನರ…

Read More

ಮುಂಬಯಿ (RBI), ಜು.26: ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಉನ್ನತ ವ್ಯಾಸಂಗದ ಬಳಿಕ ಈ ಮಕ್ಕಳು ಕುಟುಂಬ, ಬಂಟ ಸಮಾಜ ಮತ್ತು ಸಂಘದ ಆಶೋತ್ತರಗಳೊಂದಿಗೆ ಕೈಮಿಲಾಯಿಸಬೇಕು. ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಇಂತಹ ಸಂಘಗಳ ವ್ಯವಸ್ಥೆ ಹಾಳು ಮಾಡುವ ಮಂದಿಯ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಶ್ರೀ ವಜ್ರದೇಹಿ ಮಠ ಗುರುಪುರ ಇದರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ವಾಮಂಜೂರು ಇಲ್ಲಿನ ಚರ್ಚ್ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾದ ಗುರುಪುರ ಬಂಟರ ಮಾತೃ ಸಂಘ (ರಿ.) ಇದರ ವಾರ್ಷಿಕ ಮಹಾಸಭೆ, ವಾರ್ಷಿಕ ಸಮಾವೇಶ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿದರು. ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ದೀಪ ಪ್ರಜ್ವಲನೆಗೈದು ಮಾತನಾಡಿ ಎಲ್ಲ ಸ್ಥಳೀಯ ಬಂಟ ಸಂಘಗಳಿಗೆ ಮೂಲ ಮಂಗಳೂರಿನ ಮಾತೃ ಸಂಘ. ಮಾತೃ ಸಂಘಕ್ಕೆ…

Read More

ಯಕ್ಷಗಾನವನ್ನು ದೂರದಿಂದ ನೋಡುವಾಗ ಸುಲಭ ಎನಿಸುತ್ತದೆ. ಆದರೆ ಅದನ್ನು ಆರಾಧಿಸಿಕೊಂಡು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು. ಅವರು ಶನಿವಾರ ಯಕ್ಷಧ್ರವ ಪಟ್ಲ ಫೌಂಡೆಶನ್ ಟ್ರಸ್ಟ್ ವತಿಯಿಂದ ನಡೆದ ಟ್ರಸ್ಟ್‌ಗೆ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾನು ಘಟ್ಟ ಪ್ರದೇಶದವನಾಗಿದ್ದರೂ ನಮ್ಮ ಪ್ರದೇಶದಲ್ಲಿ ಯಕ್ಷಗಾನವನ್ನು ದೈವಗಳಿಗೆ ಹರಿಕೆಯನ್ನು ಹೊತ್ತು ಅದನ್ನು ತೀರಿಸಲು ನಡೆಸಲಾಗುತ್ತದೆ. ಅದನ್ನು ಕೇವಲ ದೈವಾರಾಧನೆಗೆ ಎಂಬುವುದನ್ನು ಬಯಸುವ ಬದಲು ಅದರಲ್ಲಿನ ಕಲೆಯನ್ನು ಗುರುತಿಸಿ, ಅದರಲ್ಲಿನ ಶ್ರಮವನ್ನು ನಾವು ಗೌರವಿಸಬೇಕು ಎಂದರು. ದೇಶದಲ್ಲಿ ಕರ್ನಾಟಕವನ್ನು ಗುರುತಿಸುವಾಗ ಕಲೆಯಲ್ಲಿ ಮೊದಲು ಬರುವುದು ಯಕ್ಷಗಾನ ಎಂದ ಅವರು ತನ್ನ ಐಎಎಸ್ ತರಬೇತಿಯ ಸಂದರ್ಭದಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿದ್ದನ್ನು ನೆನೆಸಿಕೊಂಡರು. ಪಟ್ಲ ಯಕ್ಷಗಾನದ ಲಿಟಲ್ ಮಾಸ್ಟರ್ : ಸದಾಶಿವ ಶೆಟ್ಟಿ ಕನ್ಯಾನ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ತಮ್ಮ…

Read More