ಇಂಡಿಯನ್ ಕ್ಲಬ್ ಬಹರೈನ್ ನ ಹೊರಾಂಗಣದಲ್ಲಿ ಕನ್ನಡ ವೈಭವ ಕಾರ್ಯಕ್ರಮವು ನವೆಂಬರ್ 8 ರಂದು ಅದ್ದೂರಿಯಾಗಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಭಾರತೀಯ ದೂತವಾಸದ ಭಾರತದ ರಾಯಭಾರಿ ಘನವೆತ್ತ ವಿನೋದ್ ಕೆ.ಜಾಕೋಬ್, ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಆದರಣೀಯ ಅತಿಥಿಗಳಾಗಿ ಮಿಥುನ್ ರೈ, ಡಾ. ಯು.ಟಿ. ಇಫ್ತೀಕರ್ ಫರೀದ್, ಹೈದರಾಬಾದ್ ನ ಮಲ್ಲ ರೆಡ್ಡಿ ಹೆಲ್ತ್ ಸಿಟಿಯ ಉಪಕುಲಪತಿ ಡಾ. ಬಾಲಕೃಷ್ಣ ಶೆಟ್ಟಿ, ನಮ್ಮ ಟಿವಿಯ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಚಿತ್ರನಟ ನೆನಪಿರಲಿ ಪ್ರೇಮ್, ನಾಯಕಿ ನಟಿ ಅಮೃತಾ ಪ್ರೇಮ್, ಅಭ್ಯಾಗತರಾಗಿ ಉದ್ಯಮಿ ಪ್ರವೀಣ್ ಶೆಟ್ಟಿ ವಕ್ವಾಡಿ, ಸೌರಭ್ ಶೆಟ್ಟಿ ಗುರ್ಮೆ ಮೊದಲಾದವರು ಪಾಲ್ಗೊಂಡು ಸಮಾರಂಭಕ್ಕೆ ಮೆರುಗನ್ನು ನೀಡಿದರು.
ಕನ್ನಡ ಸಂಘದ ಅಧ್ಯಕ್ಷ ಅಮರನಾಥ್ ರೈ, ಉಪಾಧ್ಯಕ್ಷ ಮಹೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಹಾಗೂ ಸಂಘದ ಪದಾಧಿಕಾರಿಗಳು ಬಹರೈನ್ ದ್ವೀಪ ದೇಶದ ಸಮಸ್ತ ಕನ್ನಡಿಗರ ಪರವಾಗಿ ಭಾಗವಹಿಸಿದ ಅತಿಥಿ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಸಂಘದ ವಾರ್ಷಿಕ ಸ್ಮರಣ ಸಂಚಿಕೆ “ಕಾವೇರಿ 2024” ಬಿಡುಗಡೆಗೊಂಡಿತು. ಸಂಘದ ಕಲಾವಿದರಿಂದ ಮೂಡಿ ಬಂದ ಸಾಂಸ್ಕೃತಿಕ ಕಾರ್ಯಕ್ರಮವು ಸುಮಾರು 800 ಕ್ಕೂ ಮಿಕ್ಕಿ ನೆರೆದಿದ್ದ ಕನ್ನಡಿಗರ ಮನರಂಜಿಸಿತು. ಇದೇ ವೇಳೆ ಸಂಸದ ಬ್ರಜೇಶ್ ಚೌಟರನ್ನು ಗೌರವಿಸಿ ಸನ್ಮಾನಿಸಿದರು.