Author: admin

ಲೆಬನಾನ್‌ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಕೆಡೆಟ್ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ, ಸತಾರಾದ ಟೇಕ್ವಾಂಡೋ ಆಟಗಾರ್ತಿ ಪ್ರಿಶಾ ಶೆಟ್ಟಿ ಐತಿಹಾಸಿಕ ಪ್ರದರ್ಶನವನ್ನು ದಾಖಲಿಸಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಹೆಣ್ಣು ಮಕ್ಕಳ ವಿಭಾಗದಲ್ಲಿ ಮಹಾರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ಪದಕ ಗೆದ್ದ ಮೊದಲ ಅಥ್ಲೀಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪ್ರಿಶಾ ಪಾತ್ರರಾಗಿದ್ದಾರೆ. ಪ್ರಿಶಾ ಶೆಟ್ಟಿ ಕಳೆದ 8-9 ವರ್ಷಗಳಿಂದ ಕರಾಡಿನ ಎ. ಅಗಶಿವನಗರ ಕ್ರೀಡಾ ಅಕಾಡೆಮಿಯಲ್ಲಿ ಪಿ.ಟೇಕ್ವಾಂಡೋ ತರಬೇತಿ ಪಡೆಯುತ್ತಿದ್ದು ಪ್ರಿಶಾಗೆ ಕೋಚ್‌ಗಳಾದ ಅಕ್ಷಯ್ ಖೇತ್ಮಾರ್ ಮತ್ತು ಅಮೋಲ್ ಪಾಲೇಕರ್ ಮಾರ್ಗದರ್ಶನ ನೀಡುತ್ತಿದ್ದಾರೆ. ಅಂತರಾಷ್ಟ್ರೀಯ ಸ್ಪರ್ಧೆ ಮುಗಿದ ನಂತರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ರಾಜ್ಯದ ಅನೇಕ ಟೇಕ್ವಾಂಡೋ ತರಬೇತುದಾರರು ಮತ್ತು ಕ್ರೀಡಾಪಟುಗಳು ಪ್ರಿಶಾ ಅವರನ್ನು ಅಭಿನಂದಿಸಿ ಸ್ವಾಗತಿಸಿದರು. ಮುಂಬೈನಿಂದ ಸತಾರಾಗೆ ಪ್ರಯಾಣ ಬೆಳೆಸಿದ ಪ್ರಿಶಾ ಶೆಟ್ಟಿ ಅವರನ್ನು ಮುಂಬೈ, ರಾಯಗಡ, ಪನ್ವೇಲ್, ಪುಣೆ, ಲೋನಾವಾಲ, ಕರಾಡ್, ಸತಾರಾದಲ್ಲಿ ಸ್ವಾಗತಿಸಿ ಗೌರವಿಸಲಾಯಿತು. ಭಾರತದ ಟೇಕ್ವಾಂಡೋ ಅಧ್ಯಕ್ಷ ನಾಮದೇವ್ ಶಿರಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಭಾರತ…

Read More

ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಅರಿವನ್ನು ಮೂಡಿಸುವುದರೊಂದಿಗೆ ಆಟಿ ತಿಂಗಳಲ್ಲಿ ಹಿಂದಿನ ಕಾಲದಲ್ಲಿ ತುಳುನಾಡಿನಲ್ಲಿ ಹೇಗೆ ಬದುಕುತ್ತಿದ್ದರು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ತುಳುನಾಡಿನ ಮಹಿಳೆಯರು ಎಲ್ಲ ಕಷ್ಟಗಳನ್ನು ನಿಭಾಯಿಸಿ ಸಂಸಾರವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು ಎಂದು ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಮಾಜಿ ಉಪ ಕಾರ್ಯಧ್ಯಕ್ಷೆ ಮನೋರಮಾ ಎನ್. ಬಿ. ಶೆಟ್ಟಿ ಅವರು ನುಡಿದರು. ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್ ಇದರ ಮಹಿಳಾ ವಿಭಾಗದ ವತಿಯಿಂದ ಸಂಘದ ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್ ಸಭಾಗೃಹದಲ್ಲಿ ಜರಗಿದ ಜನ್ಮಭೂಮಿಡ್ ಆನಿದ ಆಟಿ ಕರ್ಮ ಭೂಮಿಡ್ ಇನಿ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಜಲಾ ಎ. ಶೆಟ್ಟಿ ಅವರ ನೇತೃತ್ವದಲ್ಲಿ ಇಂತಹ ವಿಶಿಷ್ಟವಾದ ಕಾರ್ಯಕ್ರಮಗಳೊಂದಿಗೆ ಮಹಿಳೆಯರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು. ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದ ಉಪ…

Read More

ಬೇಸಗೆ ರಜೆ ಮುಗಿದು ಶಾಲೆಗಳು ಪುನರಾರಂಭಗೊಂಡು ತಿಂಗಳು ಕಳೆದಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯಾರ್ಥಿಗಳು ಹೇಗೆ ಹೆಚ್ಚಿನ ಅಂಕಗಳನ್ನು ಗಳಿಸುವುದು ಎಂದು ಮನದಲ್ಲಿಯೇ ಯೋಚಿಸುತ್ತಿದ್ದರೆ, ತಮ್ಮ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡುವುದು ಹೇಗೆ? ಎಂಬ ಚಿಂತನೆಯಲ್ಲಿ ಮುಳುಗಿದ್ದಾರೆ ಶಿಕ್ಷಕರು. ಅಂತೂ ಇಂದಿನ ಶಿಕ್ಷಣ ಪದ್ಧತಿ ಅಂಕ ಆಧಾರಿತವಾಗಿದ್ದು ಹೆಚ್ಚು ಅಂಕ ಗಳಿಸುವವನು ತ್ರಿವಿಕ್ರಮ, ಗಳಿಸದವನು ಮಂಕುತಿಮ್ಮ ಎನ್ನುವಂತಾಗಿದೆ. ಅಂಕಪಟ್ಟಿಯೇ ವಿದ್ಯಾರ್ಥಿಯೋರ್ವನ ಬುದ್ಧಿಮತ್ತೆ, ಸೃಜನಶೀಲತೆ, ಸೌಜನ್ಯ, ಕೌಶಲಗಳ ಪುರಾವೆಯೆಂದು ಪರಿಗಣಿಸಲ್ಪಟ್ಟಿದೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಚಟುವಟಿಕೆಗಳು ಅಂಕ ಕೇಂದ್ರಿತವಾಗಿರುತ್ತವೆ. ಅಂಕ ವ್ಯವಸ್ಥೆ ಇರಬೇಕು ನಿಜ. ಆದರೆ ಎಲ್ಲವನ್ನೂ ಅಂಕಗಳಿಂದಲೇ ಅಳೆಯಲಾಗದು. ಅಷ್ಟೇ ಅಲ್ಲದೆ ನಿರ್ದಿಷ್ಟ ಅಂಕಗಳನ್ನು ಕೊಡಲಾಗದ ಕೆಲವು ವಿದ್ಯೆಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಸ್ವಾವಲಂಬನೆ, ಸ್ವೋದ್ಯೋಗಗಳ ಬಗ್ಗೆ ಆಸಕ್ತಿ ಕಡಿಮೆಯಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರಿದರೆ ಸಮಾಜಕ್ಕೆ ಮಂಕುಕವಿದೇ ಕವಿಯುತ್ತದೆ. ಹಾಗಾದರೆ ಇದನ್ನು ಪರಿಹರಿಸುವ ಮಾರ್ಗವೇನು? ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಾರಥ್ಯದಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ-2023” ಇದರ ಸಮಾರೋಪ ಸಮಾರಂಭ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಆಶೀರ್ವಚನದ ಮಾತನ್ನಾಡಿದ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಅವರು, “ಪಟ್ಲರು ತಮ್ಮ ಕಂಠಸಿರಿಯ ಮೂಲಕ ಮಾತ್ರ ಸಮಾಜವನ್ನು ರಂಜಿಸಿದ್ದಲ್ಲ. ಸಾಮಾಜಿಕ ಸಂಘಟನೆಯನ್ನು ಸ್ಥಾಪಿಸಿ ಆ ಮೂಲಕ ಸಮಾಜದಲ್ಲಿನ ನೊಂದವರ ಕಣ್ಣೀರು ಒರೆಸುತ್ತಿದ್ದಾರೆ. ಕೆಲವರಿಗೆ ದಾನ ಮಾಡುವ ಸಾಮರ್ಥ್ಯ ಇರುತ್ತದೆ. ಇನ್ನೂ ಕೆಲವರಿಗೆ ತಮಗೆ ದಾನ ಮಾಡುವ ಸಾಮರ್ಥ್ಯ ಇಲ್ಲದಿದ್ದರೂ ಹತ್ತು ಮಂದಿಯಿಂದ ದಾನ ಕೊಡಿಸುತ್ತಾರೆ. ಮತ್ತೂ ಕೆಲವರು ತಾವೂ ದಾನ ಮಾಡುತ್ತಾರೆ ಇತರರಿಂದಲೂ ಕೊಡಿಸುತ್ತಾರೆ. ಇನ್ನೂ ಕೆಲವರಿಗೆ ಈ ಎಲ್ಲಾ ಸಾಮರ್ಥ್ಯವಿರುತ್ತದೆ. ಅಂತಹ ವಿಶೇಷ ಗುಣ ಪಟ್ಲ ಸತೀಶ್ ಶೆಟ್ಟಿ ಅವರಲ್ಲಿದೆ. ಅವರ ಸಮಾಜಮುಖಿ ಕಾರ್ಯ ನಿರಂತರ ಮುಂದುವರಿಯಲಿ” ಎಂದರು. ವೇದಿಕೆಯಲ್ಲಿ ಯಕ್ಷಗಾನ ರಂಗದ ಐದು ದಶಕಗಳ ಹಿರಿಯ ಸಾಧಕ ಪ್ರೊ. ಎಂ.ಎಲ್. ಸಾಮಗ-ಪ್ರತಿಭಾ ಸಾಮಗ ದಂಪತಿಗೆ “ಪಟ್ಲ ಪ್ರಶಸ್ತಿ-2023” ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು,…

Read More

ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ. ಭುಜಂಗ ಶೆಟ್ಟಿ (69) ಅವರು ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರಿಗೆ ಸಂಜೆ ಮನೆಯಲ್ಲಿ ತೀವ್ರ ಹೃದಯಾಘಾತವಾಗಿದೆ. ಕೂಡಲೇ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಡಾ.ಭುಜಂಗ ಶೆಟ್ಟಿ ನಿಪುಣ ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. 1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ ಅವರು 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ರೆಸಿಡೆನ್ಸಿ ಮಾಡಿದ್ದರು. ಅವರು ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್‌ನಲ್ಲಿ ನೇತ್ರಶಾಸ್ತ್ರವನ್ನು ಪ್ರಾರಂಭಿಸಿದರು. ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಿದ್ದರು.

Read More

ಪುರಾತನ ಜನಪದ ಕ್ರೀಡೆಯಾದ ಕಂಬಳವು ತುಳುನಾಡಿನಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಕಂಬಳವು ಸಾಂಪ್ರದಾಯಿಕ ಕಂಬಳವಾಗಿದ್ದು ಆಧುನಿಕ ವ್ಯವಸ್ಥೆಗಳನ್ನು ಸಾರಿಸಿಕೊಂಡರೂ ಸಂಪ್ರದಾಯವನ್ನು ಉಳಿಸಿಕೊಂಡೇ ಬರುತ್ತಿದೆ. ಕಹಳೆ, ವಾಲಗದೊಂದಿಗೆ ಓಟಕ್ಕಿಳಿಯುವ ಕೋಣಗಳು, ಅಷ್ಟೇ ವೇಗವಾಗಿ ಹಿಡಿತ ಸಾಧಿಸಿಕೊಂಡು ಓಟಕ್ಕಿಳಿಯುವ ಓಟಗಾರನ ವೇಗ ಎಂತವರನ್ನೂ ಮೈ ರೋಮಾಂಚನಗೊಳಿಸುತ್ತದೆ‌. ಇಂತಹ ವಿಶಿಷ್ಟ ಜನಪದ ಕ್ರೀಡೆ ಕಂಬಳದಲ್ಲಿ ತಮ್ಮ ಮಿಂಚಿನ ಓಟದಿಂದ ದಾಖಲೆಯ ವೀರನೆಂದೇ ಹೆಸರು ಗಳಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.ಎಮ್ ಶೆಟ್ಟಿಯವರು. 24-03-1986 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಕ್ಕಾಡಿಗೋಳಿ ಹಕ್ಕೇರಿಯಲ್ಲಿ ಮಧು ಶೆಟ್ಟಿ ಹಾಗೂ ಶಾರದ ಶೆಟ್ಟಿ ದಂಪತಿಗಳ ಪುತ್ರನಾಗಿ ಜನಿಸಿದ ಸುರೇಶ್ ಶೆಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಬೋಡಿಯಲ್ಲಿ ಪೂರ್ಣಗೊಳಿಸಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಸಿದ್ಧಕಟ್ಟೆ ಬಂಟ್ವಾಳದಲ್ಲಿ ಪೂರ್ಣಗೊಳಿಸಿದರು.ಶಾಲಾ ದಿನಗಳಲ್ಲೇ ಆಟೋಟಗಳಲ್ಲಿ ಮುಂಚೂಣಿಯಲ್ಲಿದ್ದ ಸುರೇಶ್ ಓಟದಲ್ಲಿ ಜಿಲ್ಲಾಮಟ್ಟವನ್ನು ಪ್ರತಿನಿಧಿಸಿದ್ದರು. ಬಾಲ್ಯದಲ್ಲಿ ತಮ್ಮ ಮನೆಯಲ್ಲಿದ್ದ ಕಂಬಳದ ಕೋಣಗಳನ್ನು ನೋಡಿ ಕಂಬಳಾಸಕ್ತಿ ಬೆಳೆದು ಇಪ್ಪತ್ತರ ಹರೆಯದಲ್ಲೇ…

Read More

ಪುತ್ತೂರು ದೇವತಾ ಸಮಿತಿ ವತಿಯಿಂದ ಕಿಲ್ಲೆ ಮೈದಾನದಲ್ಲಿ ನಡೆಯಲಿರುವ 66 ನೇ ವರ್ಷದ ಸಾರ್ವಜನಿಕ ಮಹಾಗಣೇಶೋತ್ಸವದ ವಿಗ್ರಹ ರಚನೆಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಪೈ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ವೇದಮೂರ್ತಿ ಸುಬ್ರಮಣ್ಯ ಹೊಳ್ಳರವರ ನೇತೃತ್ವದಲ್ಲಿ ದೇವತಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ವಿಗ್ರಹ ರಚನೆಗೆ ಮುಹೂರ್ತ ನಡೆಸಲಾಯಿತು. ಮೂರ್ತಿ ರಚನೆ ಮಾಡುವ ರಮೇಶ್ ಪೂಜಾರಿಯವರು ಶ್ರೀ ಗಣೇಶನ ವಿಗ್ರಹ ರಚಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರತೀ ವರ್ಷ ನಾಗರ ಪಂಚಮಿಯ ದಿನದಂದು ಕಿಲ್ಲೆ ಮೈದಾನದ ಗಣೇಶೋತ್ಸವಕ್ಕೆ ವಿಗ್ರಹ ಮುಹೂರ್ತ ಮಾಡಲಾಗುತ್ತಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ : ಶ್ರೀಮಹಾ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ್ ಶೆಟ್ಟಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಇದು ಗಣೇಶನ ಸಂಕಲ್ಪದಂತೆ ನಡೆಯುವ ಉತ್ಸವವಾಗಿದೆ. ಕಳೆದ 65 ವರ್ಷಗಳಿಂದ…

Read More

ತುಳುನಾಡ ಸಂಸ್ಕೃತಿ, ಆಚಾರ- ವಿಚಾರ, ನಡೆ-ನುಡಿ, ಜೀವನ ಪದ್ಧತಿ, ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರಸಿಕೊಂಡು ಕುತೂಹಲ ಹುಟ್ಟಿಸಿ ಸುಂದರವಾಗಿ ಮೂಡಿಬಂದಿರುವ ತುಳು ಸಿನಿಮಾ “ಕೊರಮ್ಮ”, ಇಂದಿನ ಯುವ ಜನತೆಯನ್ನು ಬೆರಗುಗೊಳಿಸುವಂತೆ ಮಾಡಿದೆ. ಈ ಸಿನಿಮಾವನ್ನು ತುಳು ನಾಡಿನ ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಶಿವಧ್ವಜ್ ಶೆಟ್ಟಿ ತಿಳಿಸಿದರು. ಸುರತ್ಕಲ್ ನಲ್ಲಿರುವ ಸಿನಿಗ್ಯಾಲಕ್ಸಿ ಚಿತ್ರಮಂದಿರದಲ್ಲಿ ಕೊರಮ್ಮ ತುಳು ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ನಿರ್ಮಾಪಕ ಅಡ್ಯಾರ್ ಮಾಧವ ನಾಯ್ಕ್, ಸಿನಿಗ್ಯಾಲಕ್ಸಿ ಸಂಸ್ಥೆಯ ನಿರ್ದೇಶಕ ಶಶಿಕುಮಾರ್, ಕೃಷ್ಣ ಅಡ್ಯಂತಾಯ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ವೆಂಕಟರಮಣ, ದಿನೇಶ್ ಫರಂಗಿಪೇಟೆ, ಮಧು ಸುರತ್ಕಲ್, ನಟ ಮೋಹನ್ ಶೇಣಿ, ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಸರೋಜ ಟಿ ಶೆಟ್ಟಿ, ಸರಾಯು ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಸಿನಿಗ್ಯಾಲಕ್ಸಿಯ ದೀಪಕ್ ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ, ಮುಂತಾದ ಕಡೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ ಎಂದು ನಿರ್ಮಾಪಕ ಅಡ್ಯಾರ್ ಮಾಧವ ನಾಯ್ಕ್…

Read More

ಭಾರತದ ಯುವ ಬ್ಯಾಡ್ಮಿಂಟನ್ ಪಟುಗಳಾದ ಸಾತ್ವಿಕ್‌ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇತಿಹಾಸವನ್ನು ಬರೆದಿದ್ದಾರೆ. ಜಕಾರ್ತಾದಲ್ಲಿ ನಡೆದ ಬ್ಯಾಡ್ಮಿಂಟನ್ ಸೂಪರ್ 1000 ಫೈನಲ್ ನಲ್ಲಿ ಪ್ರಶಸ್ತಿಯನ್ನು ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿ ಚಿನ್ನದ ಪದಕ ಮತ್ತು ಕಳೆದ ವರ್ಷ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಕಂಚು ಗೆದ್ದಿದ್ದ ವಿಶ್ವದ ನಂ.6 ಜೋಡಿ, ಜಕಾರ್ತದಲ್ಲಿ ನಡೆದ 2 ಗೇಮ್‌ ಗಳ ಅದ್ಭುತ ಹೋರಾಟದಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕಾ ಅವರನ್ನು ಸೋಲಿಸಿದರು. ಇಂಡೋನೇಷ್ಯಾ ಓಪನ್‌ ನ ಪುರುಷರ ಡಬಲ್ಸ್ ಫೈನಲ್‌ ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಅವರನ್ನು 21-17, 21-18 ರಿಂದ ಸೋಲಿಸಿದರು. ನಿಧಾನಗತಿಯ ಆರಂಭವನ್ನು ಪಡೆದರೂ ಭಾರತೀಯ ಜೋಡಿ ನೇರ ಗೇಮ್‌ ಗಳಲ್ಲಿ ಪಂದ್ಯವನ್ನು ಗೆದ್ದರು. ಭಾರತದ ಜೋಡಿ…

Read More

ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿà ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ. 9ರಿಂದ ವರ್ಷಾವಧಿ ಉತ್ಸವ ಮೊದಲ್ಗೊಂಡು ಎ.14ರ ತನಕ ವಿವಿಧ ವಿಧಿ ವಿಧಾನಗಳ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ. 12ರಂದು ಶ್ರೀ ಮನ್ಮಹಾರಥೋತ್ಸವ ಜರಗಲಿದೆ. ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಮನ್ಮಹಾರಥೋತ್ಸವ ಅಂಗವಾಗಿ ಎ. 9ರ ರವಿವಾರ ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಕೌತುಕ ಬಂಧನ, ಶಿಬಿಕಾಯನೋತ್ಸವ ಜರಗಿತು. ಎ. 10ರಂದು ಸಿಂಹವಾಹನೋತ್ಸವ, ಎ. 11ರಂದು ಪುಷ್ಪಕ ವಾಹನೋತ್ಸವ, ಎ. 12 ರಂದು ಶ್ರೀ ಮನ್ಮಹಾರಥೋತ್ಸವ. ಎ. 13ರಂದು ಚೂರ್ಣೋತ್ಸವ ಹಾಗೂ ತುಲಾಭಾರ ಸೇವೆ, ಎ. 14ರಂದು ಅವಭೃಥ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾರೋಹಣ, ಕುಂಭಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ. . 13ರಂದು ನಡೆಯುವ ತುಲಾಭಾರ ಸೇವೆ ಮಾಡಲಿಚ್ಛಿಸುವವರು ಎ. 12ರ ಸಂಜೆ ಒಳಗೆ ತಿಳಿಸಬೇಕು. ಭಕ್ತರಿಗೆ ಮಧ್ಯಾಹ್ನದ ಊಟ ಮತ್ತು ರಾತ್ರಿಯ ವಸತಿ ವ್ಯವಸ್ಥೆ ಇದೆ ಎಂದು ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.

Read More