ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಮಧ್ಯೇಯ ಹೊಂದಿರುವ ಡಾ. ವೇಮಗಲ್ ನಾರಾಯಣ ಸ್ವಾಮಿಯವರ ಒತ್ತಾಸೆಯಿಂದ ಆರಂಭವಾದ ‘ಡಾ. ವೇಮಗಲ್ ನಾರಾಯಣ ಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ’ ವತಿಯಿಂದ ಪ್ರತಿ ವರ್ಷ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ, ಗೌರವಿಸಿ ”ಸಂಸ್ಕೃತಿ ಸಿರಿ’ ಪ್ರಶಸ್ತಿಯೊಂದಿಗೆ 25000 ರೂಪಾಯಿ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡ ಪ್ರಶಸ್ತಿಯನ್ನು ಬಂಟರ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ, ಖ್ಯಾತ ಆರ್ಥಿಕ ಸಲಹೆಗಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, 2024 ರ ಸಾಲಿನ ಬಂಟರತ್ನ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್. ಕೆ. ಶೆಟ್ಟಿಯವರಿಗೆ ಪ್ರಧಾನಿಸಿ ಗೌರವಿಸಲಾಯಿತು.
ನವೆಂಬರ್ 8 ರಂದು ರಂದು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಬಸವಲಿಂಗಯ್ಯ, ಎಸ್. ಜಿ. ಸಿದ್ದರಾಮಯ್ಯ, ಮಲ್ಲೇಶ್ವರಪುರಂ ಜಿ, ವೆಂಕಟೇಶ್, ದೊಡ್ಡರಂಗೇಗೌಡ, ಯಲ್ಲಪ್ಪ ರೆಡ್ಡಿ, ಜಯಶ್ರೀ ಅರವಿಂದ್, ತಿಮ್ಮೇಶ್, ಬಿ.ಕೆ. ಶಿವರಾಂ, ವೇಮಗಲ್ ನಾರಾಯಣ ಸ್ವಾಮಿ, ಗೊಲ್ಲಹಳ್ಳಿ ಶಿವಪ್ರಸಾದ್, ಹಂಪನಾ, ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಹಿ.ಚಿ. ಬೋರಲಿಂಗಯ್ಯ, ಆನಂದ ಮಾದಲಗೆರೆ, ಆನಂದಕುಮಾರ್ ಇವರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿಸಿ ಗೌರವಿಸಲಾಯಿತು.
ಡಾ. ಆರ್.ಕೆ ಶೆಟ್ಟಿ : ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ| ಆರ್ ಕೆ ಶೆಟ್ಟಿಯವರು ಜೀವ ವಿಮಾ ಕ್ಷೇತ್ರದ ಸಲಹೆಗಾರರಾಗಿ ಮುಂಬಯಿ ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪರಿಚಿತರು. ಹಲವಾರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿರಿಸಿಕೊಂಡವರು. ಮಹಾರಾಷ್ಟ್ರ ಸರಕಾರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ರಾಜಭವನದಲ್ಲಿ ಆರ್ ಕೆ ಶೆಟ್ಟಿಯವರನ್ನು ಗೌರವಿಸಿದ್ದಾರೆ. ಎಂ.ಡಿ.ಆರ್.ಟಿ ರೀಜನಲ್ ಛೇರ್ಮನ್ ಆಗಿ ನಿಯುಕ್ತಿಗೊಂಡ ಪ್ರಥಮ ಭಾರತೀಯ ಇವರು ಎಂ.ಡಿ.ಆರ್.ಟಿಯ 17 ಸದಸ್ಯರ ತಂಡದ ಮ್ಯಾನೇಜ್ಮೆಂಟ್ ಕೌನ್ಸಿಲ್ ನ ಸದಸ್ಯರಾಗಿಯೂ ಕಾರ್ಯನಿರ್ವಹಣೆಗೈದವರು. ಗ್ಲೋಬಲ್ ಇಂಡಿಯನ್ ಅಚೀವರ್ ಪ್ರಶಸ್ತಿ, ಸಮಾಜ ರತ್ನ, ಸಮಾಜ ದೇವಾ ಧುರೀಣ, ಸರ್ವಕಾಲಿಕ ಉತ್ತೇಜಕ, ಹೀಗೆ ವಿವಿಧ ಸಂಘಟನೆಗಳಿಂದ ಅನೇಕ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ಪಡೆದಿರುವರು. ಅರ್ಥಶಾಸ್ತ್ರದಲ್ಲಿ ಬಿ.ಕಾಂ ಮತ್ತು ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ನಲ್ಲಿ ವಿಶೇಷ ಡಿಪ್ಲೋಮಾ ಪಡೆದಿದ್ದಾರೆ. ಅಮೆರಿಕಾದ ಇನ್ಸೂರೆನ್ಸ್ ಕಾಲೇಜಿನಿಂದ ಎಲ್.ಟಿ.ಯು.ಸಿ, ಎಲ್.ಎಲ್.ಬಿ ಹಾಗೂ ಎಂ.ಬಿ.ಎ ಪದವಿ, ಶ್ರೀಲಂಕಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಇವರು ಎಂ.ಡಿ.ಆರ್.ಟಿ ವಾರ್ಷಿಕ ಸಮಾವೇಶದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ತನ್ನ ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ. ತನ್ನ ಆರ್ಥಿಕ ಸಂಸ್ಥೆಯ ಮೂಲಕ ಬಂಟ ಸಮಾಜದ ಬಂಧುಗಳಿಗೆ ಮತ್ತು ವಿಶೇಷ ಆರ್ಥಿಕ ಸಂಸ್ಥೆಯ ಮೂಲಕ ಬಂಟ ಸಮಾಜದ ಬಂಧುಗಳಿಗೆ ಮತ್ತು ವಿಶೇಷ ಆರ್ಥಿಕ ನೆರವು ನೀಡುವ ಯೋಜನೆಯೊಂದನ್ನು ರೂಪಿಸಿಕೊಂಡಿದ್ದಾರೆ. ಈಗಾಗಲೇ ಬಹಳಷ್ಟು ಬಂಟ ಸಮಾಜದ ಬಂಧುಗಳಿಗೆ ಲಕ್ಷಾಂತರ ರೂಪಾಯಿಯನ್ನು ನೀಡಿ ಅವರ ಸಂಕಷ್ಟಗಳಿಗೆ ಸ್ಪಂದಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ, ಮಾತೃಭೂಮಿ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಉಪ ಕಾರ್ಯಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.