Author: admin
ಮೂಡುಬಿದಿರೆ: ಉಡುಪಿಯ ಎಂಜಿಎಂ ಸಂಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳೆಯರ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಉಜಿರೆಯ ಎಸ್ಡಿಎಂ ಕಾಲೇಜನ್ನು 25-17 ಅಂಕಗಳ ಅಂತರದೊಂದಿಗೆ ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಆಳ್ವಾಸ್ನ ದಿವ್ಯ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.
ಮೂಡುಬಿದಿರೆ: ಬೆಂಗಳೂರಿನ ಆದಿತ್ಯ ಕಾಲೇಜ್ ಆಫ್ ಫಾರ್ಮಸಿಯಲ್ಲಿ ನಡೆದ ರಾಜೀವ ಗಾಂಧಿ ವಿಜ್ಞಾನ ವಿವಿಗಳ ಅಂತರ್ ವಲಯ ಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ನ ನ್ಯಾಚುರೋಪಥಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು ತನ್ನಲ್ಲಿರುವ 20 ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ ಫಾರ್ಮಸಿ ಪದವಿ ಕಾಲೇಜನ್ನು ಈ ವರ್ಷವೇ ನೂತನವಾಗಿ ಪ್ರಾರಂಭಿಸುತ್ತಿದೆ. ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ 4 ವರ್ಷಗಳ ಪದವಿ ಶಿಕ್ಷಣ ಇದಾಗಿದ್ದು ಈ ವರ್ಷದಿಂದಲೇ ಅಂದರೆ, 2024-25ನೇ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ನೀಡಿದ್ದು, ಇದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಿನಿAದ ಸಂಯೋಜಿಸಲ್ಪಟ್ಟಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಸಂಸ್ಥೆಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸುವ ಈ ಕೋರ್ಸ್ಗಾಗಿ ಈಗಾಗಲೇ ವಿಶೇಷ ಮುತುವರ್ಜಿವಹಿಸಿದ್ದು ಅನುಭವಿ ಶಿಕ್ಷಕರು, ವಿಶೇಷ ತರಗತಿ ಕೊಠಡಿಗಳು, ಆಧುನಿಕ ಪ್ರಯೋಗಾಲಯ, ನವೀನ ಗ್ರಂಥಾಲಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ವಿಶೇಷ ಸವಲತ್ತುಗಳುಳ್ಳ ವಸತಿ ನಿಲಯಗಳನ್ನು ರೂಪಿಸಲಾಗಿದೆ ಎಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ನಮ್ಮ ಜೀವನದಲ್ಲಿ ಔಷಧಿ ಕ್ಷೇತ್ರವು ಅತ್ಯಂತ ಮಹತ್ವದ್ದಾಗಿದ್ದು ಆರೋಗ್ಯ ರಕ್ಷಣೆ ಮತ್ತು…
ಸನಾತನ ಭಾರತೀಯ ಸಂಸ್ಕ್ರತಿ, ಹಿಂದುತ್ವದ ತತ್ವದ ಮೇಲೆ ಧಾರ್ಮಿಕ ಆಚರಣೆ ಆಚರಿಸುವುದು ಪ್ರತಿಯೋರ್ವನ ಕರ್ತವ್ಯವಾಗಿದೆ. ಶಿಕ್ಷಣದ ಜೊತೆಯಲ್ಲಿ ನಮ್ಮ ಸಂಸ್ಕ್ರತಿ ಕಲೆ, ನಡೆ ನುಡಿ, ಅಚಾರ ವಿಚಾರಗಳು ಕೂಡಾ ಕೂಡಿಕೊಂಡು ಜೀವನ ಸಾಗಿದರೆ ಉತ್ತಮ ಪ್ರಜೆಯಾಗಲು ಸಾದ್ಯ. ಈ ಸಂಸ್ಕಾರ ಎಂಬುದು ಮೊದಲಾಗಿ ಮನೆಯಲ್ಲಿ ತಾಯಿಯಿಂದ ಕಲಿತು ಬರುತ್ತೇವೆ. ಮಾತೃ ದೇವೋ ಭವ, ಪಿತೃ ದೇವೋ ಭವ, ಗುರು ದೇವೋ ಭವ, ಅತಿಥಿ ದೇವೋ ಭವ ಎಂಬಂತೆ ನಮಗೆ ತಾಯಿಯೇ ಮೊದಲ ಗುರು. ಬಹು ದೊಡ್ಡ ಸಂಘಟನೆ ಮಾಡುವಲ್ಲಿ ನಮ್ಮ ಬಂಟರ ಸಾಂಘಿಕ ಶಕ್ತಿಯಿಂದ ಸಾಧ್ಯವಾಗಿದೆ ಎಂಬುದನ್ನು ಅರಿತಿದ್ದೇವೆ. ಯಾವ ಸಂಸ್ಥೆಯಲ್ಲಿ ಮಹಿಳೆಯರಿಗೆ ಕೂಡಾ ಪ್ರಾಮುಖ್ಯತೆಯನ್ನು ನೀಡುತ್ತೆವೆಯೋ ಅ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತದೆ. ಪ್ರೀತಿ ವಾತ್ಸಲ್ಯದಿಂದ ಬದುಕುವ ಮೂಲಕ ಪರೋಪಕಾರ ಮನೋಭಾವ ನಮ್ಮದಾಗಲಿ. ಬರುವಾಗ ಶೂನ್ಯ ಹೋಗುವಾಗ ಶೂನ್ಯ. ಇದರ ಮದ್ಯೆ ಸ್ವಸಾಮರ್ಥ್ಯ ಸಾಧನೆಯಿಂದ ಸಮಾಜದಲ್ಲಿ ಗುರುತಿಸಿಕೊಂಡು ಮಾಡುವ ಸೇವಾ ಕಾರ್ಯದಿಂದ ಗೌರವವನ್ನು ಪಡೆಯಬಹುದು. ಬಂಟರ ಸಂಸ್ಕ್ರತಿಯನ್ನು ಮೇಲೈಸುವ ನಮ್ಮ ತುಳುನಾಡ…
ಎಲ್ಲರಿಗೂ ಶರನ್ನವರಾತ್ರಿ ಹಬ್ಬದ ಹಾರ್ದಿಕವಾದ ಶುಭಾಶಯಗಳು. ಈಗಾಗಲೇ ನಾವೆಲ್ಲರೂ ಭಕ್ತಿ ಶ್ರಧ್ದೆಯಿಂದ ಆಚರಿಸುವ ಮಹಾನ್ ಹಬ್ಬ ನವರಾತ್ರಿ ಫ್ರಾರಂಭವಾಗಿದೆ. ನಿರಂತರ ಹತ್ತು ದಿನಗಳ ಕಾಲ ಆಚರಿಸುವ ಧೀರ್ಘವಾದ ಈ ದಸರಾ ಹಬ್ಬವು ದೇಶದೆಲ್ಲೆಡೆ ವಿಶೇಷ ಕಳೆ ಕಟ್ಟಿದೆ. ಹಬ್ಬವೆಂಬುದು ಕೇವಲ ಭಗವಧಾರಾಧನೆಗೆ ಮಾತ್ರ ಸೀಮಿತವಾಗಿರದೆ, ಅದು ಹಲವಾರು ವೈಚಾರಿಕ, ವೈಜ್ಞಾನಿಕ, ಧಾರ್ಮಿಕ ನಂಬಿಕೆಗಳನ್ನು ಒಳಗೊಂಡಿದೆ ಎಂಬುದು ಸತ್ಯ. ಕಾಣದ ಭಗವಂತನ ಕಲ್ಪನೆಯೊಂದಿಗೆ ಸನಾತನವಾದ ಮೂಲ ನಂಬಿಕೆಯೊಂದಿಗೆ ಕಾಣುವ ವ್ಯಕ್ತಿಗಳ ಅಂದರೆ ಮನುಷ್ಯ ಮನುಷ್ಯನ ಸಂಬಂಧಗಳ ಕೊಂಡಿಯನ್ನು ಬೆಸೆಯುತ್ತವೆ ಈ ಹಬ್ಬಗಳು. ಇದು ಮುಖ್ಯವಾಗಿ ಆಗಬೇಕಾದುದು ಕೂಡಾ. ನಮ್ಮ ಇಂದಿನ ಮಕ್ಕಳಿಗೆ ಅನಿಸಬಹುದು ಏನು ಕರ್ಮ ದಿನವೂ ಹಬ್ಬ ಎಂದು!. ಅದಕ್ಕೆ ಕಾರಣ ನಾವೇ. ನಮ್ಮ ದಿನನಿತ್ಯದ ಬದುಕಲ್ಲಿ ಬರುವ ಹಬ್ಬ ಹುಣ್ಣಿಮೆಗಳು ಏನದರ ಅರ್ಥ? ಆ ಧರ್ಮದ ಮರ್ಮ ನಮಗೆ ಅಗತ್ಯವೇ ಇಲ್ಲ ಎಂಬಂತಾಗಿದೆ!. ಯಾಕೆ ಹೀಗೆ ಎಂದು ಕೇಳಿದರೆ, ಈಗಿನ ಹೆಚ್ಚಿನ ಎಲ್ಲರ ಮನೆಯಲ್ಲಿನ ಮಕ್ಕಳಿಗೆ ನಾವು ಕಳುಹಿಸುವ ಶಾಲೆ.…
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಮತ್ತು ಯನಪೋಯ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ದೇರಳಕಟ್ಟೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ 5 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಒಟ್ಟು 9 ಪದಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಹುಡುಗಿಯರ ವಿಭಾಗದಲ್ಲಿ 5 ಚಿನ್ನ, 3 ಬೆಳ್ಳಿ ಹಾಗೂ 2 ಕಂಚು ಒಟ್ಟು 10 ಪದಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.
ಮೂಡುಬಿದಿರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೈಸೂರು ವಿಭಾಗ ಮಟ್ಟವನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಅಥ್ಲೆಟಿಕ್ಸ್, ಬಾಲ್ ಬ್ಯಾಡ್ಮಿಂಟನ್, ವೇಯ್ಟ್ ಲಿಫ್ಟಿಂಗ್, ಕಬಡ್ಡಿ, ಕುಸ್ತಿ, ಯೋಗ ಸ್ಪರ್ಧೆಯಲ್ಲಿ ಪಾರಮ್ಯ ಮೆರೆಯಿತು. ಅಥ್ಲೆಟಿಕ್ಸ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 08 ಚಿನ್ನ, 06 ಬೆಳ್ಳಿ, 05 ಕಂಚಿನ ಪದಕಗಳೊಂದಿಗೆ ಒಟ್ಟು 19 ಪದಕ ಪಡೆಯಿತು. ಮಹಿಳೆಯರ ವಿಭಾಗದಲ್ಲಿ: ದೀಪಾಶ್ರೀ-4*100ರಿಲೇ (ಪ್ರಥಮ), 4*400ರಿಲೇ (ಪ್ರಥಮ), ಪ್ರಿಯಾಂಕ- 4*100ರಿಲೇ (ಪ್ರಥಮ), ಪ್ರಜ್ಞಾ 4*100ರಿಲೇ (ಪ್ರಥಮ), 4*400ರಿಲೇ (ಪ್ರಥಮ), ರೀತುಶ್ರೀ 4*100ರಿಲೇ (ಪ್ರಥಮ), 4*400ರಿಲೇ (ಪ್ರಥಮ), ಗೀತಾ- 4*400ರಿಲೇ (ಪ್ರಥಮ) ಹಾಗೂ ಎರಡೂ ರಿಲೇಯಲ್ಲಿ ಹೊಸ ಕೂಟ ದಾಖಲೆಯನ್ನು ನಿರ್ಮಿಸಿರುತ್ತಾರೆ. ಸುಷ್ಮಾ-ಚಕ್ರ ಎಸೆತ (ದ್ವಿತೀಯ), ಸಿಂಚನಾ-ಜಾವೆಲಿನ್ ಎಸೆತ(ತೃತೀಯ), ರೇಖಾ ಬಸಪ್ಪ-800ಮೀ (ತೃತೀಯ), ರೂಪಾಶ್ರೀ-3000ಮೀ(ತೃತೀಯ), 1500ಮೀ(ತೃತೀಯ), ಪ್ರಿಯಾಂಕ-ಉದ್ದ ಜಿಗಿತ(ತೃತೀಯ) ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗದಲ್ಲಿ: ದಯಾನಂದ- 400ಮೀ(ದ್ವಿತೀಯ) 4*400ಮೀ ರಿಲೇ(ದ್ವಿತೀಯ), ರಾಮು-…
ತ್ಯಾಗ ಮತ್ತು ಸೇವೆಯ ಆಚರಣೆ ಶಿವಾಯ ಫೌಂಡೇಶನ್ ನಿಂದ ಆಗುತ್ತಿದೆ. ಕೆಲವರು ತೋರಿಕೆಗೆ ಸೇವೆ ಮಾಡುವವರಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಸೇವೆ ಸಲ್ಲಿಸುವವರು ಬಹಳ ವಿರಳ. ಆದರೆ ಶಿವಾಯ ಫೌಂಡೇಶನ್ ಹಾಗಲ್ಲ. ಅರ್ಹರನ್ನು, ಅಶಕ್ತರನ್ನು ಗುರುತಿಸಿ ಮಾಡುವ ಅವರ ಸೇವೆಯು ಎಲ್ಲರಿಗೂ ಮಾದರಿ. ಬಡವರ ಕಣ್ಣೀರು ಒರೆಸುವ ಸೇವೆಯೇ ಭಗವಂತನ ಸೇವೆ. ಅಂತಹ ಸೇವೆಯ ಮುಖಾಂತರ ಶಿವಾಯ ಫೌಂಡೇಶನ್ ಯುವ ಜನಾಂಗಕ್ಕೆ ಸಂಸ್ಕಾರದ ಪಾಠವನ್ನು ಕಲಿಸುತ್ತಿದೆ. ಸಂಸ್ಕಾರಯುತವಾಗಿ ಬದುಕುವ ತಿಳುವಳಿಕೆ ಮನೋಭಾವನೆ ನಮ್ಮಲ್ಲಿ ಬೆಳೆದಲ್ಲಿ ನಾವು ಇತರರಿಗೆ ಆದರ್ಶ ವ್ಯಕ್ತಿ ಶಕ್ತಿಯಾಗ ಬಲ್ಲೆವು. ಇದನ್ನು ಶಿವಾಯ ಫೌಂಡೇಶನ್ ತಮ್ಮ ಸಮಾಜ ಪರ ಕಾರ್ಯ ವೈಖರಿಯನ್ನು ತೋರಿಸಿಕೊಟ್ಟಿದೆ. ನಮ್ಮ ಸೇವೆಯೇ ಸಾಧನೆಯಾಗಬೇಕು ಎಂದು ಒಡಿಯೂರು ಮಹಾ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಆಗಸ್ಟ್ 02 ಬುಧವಾರದಂದು ಜೂಹಿನಗರ ಬಾಂಬೆ ಬಂಟ್ಸ್ ಅಸೋಸಿಯೇಷನ್, ಬಂಟ್ಸ್ ಸೆಂಟರ್ ನಲ್ಲಿ ಶಿವಾಾಯ ಪೌಂಡೇಶನ್ (ರಿ.) ಮುಂಬೈನ ಆರನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದಲ್ಲಿ ದೀಪವನ್ನು ಪ್ರಜ್ವಲಿಸಿ,…
ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವ ಆಗಸ್ಟ್ 3ರಂದು ಆರಂಭಗೊಂಡಿದ್ದು, ಅಕ್ಷರ ಯಜ್ಞ ಸೇವೆಗಾಗಿ ನೀಡಲಾಗುವ ಪುಸ್ತಕದ ಕುರಿತು ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈಯವರ ಪುಸ್ತಕದ ಪ್ರಾಯೋಜಕತ್ವ ವಹಿಸಿದ್ದರು ಭಾಗ್ಯೇಶ್ ರೈಯವರ ಪುತ್ರಿ ದೇವಿದ್ಯಾ ಮಕ್ಕಳಿಗೆ ಪುಸ್ತಕ ನೀಡುವ ಮೂಲಕ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಈ ಪುಸ್ತಕದಲ್ಲಿ ಮಕ್ಕಳಿಂದ ‘ಶ್ರೀ ಶಾರದಾಂಬೆಯೈ ನಮಃ’ ಎಂದು 108 ಬಾರಿ ಬರೆಸಿ ಆಗಸ್ಟ್ 8ರ ಶಾರದಾ ದೇವಿಯ ಪ್ರತಿಷ್ಠೆ ದಿನದಂದು ಶ್ರೀ ದೇವಿಗೆ ಸಮರ್ಪಿಸಿ ಸರಸ್ವತಿ ಪೂಜೆ ನಡೆದ ಬಳಿಕ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುವುದು. ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿ ಗುತ್ತು ಸೀತಾರಾಮ ರೈ, ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರಾನಾಥ್ ಹೆಚ್, ಉಪಾಧ್ಯಕ್ಷ ಯಶವಂತ ಆಚಾರ್ಯ, ರಾಜೇಶ್ ಬನ್ನೂರು, ಐತ್ತಪ್ಪ ನಾಯ್ಕ್ ಯೋಗಾನಂದ ರಾವ್, ಪುಷ್ಪರಾಜ್ ಉರ್ಲಾಂಡಿ,…
ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹವರ್ತಿ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ತನ್ನ ಸದಸ್ಯರಿಗಾಗಿ ಮೊದಲ ಬಾರಿಗೆ “ದಂತ ಆರೋಗ್ಯ ಜಾಗೃತಿ ಶಿಬಿರ” ವನ್ನು ಆಯೋಜಿಸಿತು. ಈ ಕಾರ್ಯಕ್ರಮವನ್ನು 2024 ರ ಸೆಪ್ಟೆಂಬರ್ 27 ರಂದು ದೋಹಾದ ವೈಬ್ರೆಂಟ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ “ಎಲ್ಲರೂ ಮನಸಾರೆ ನಕ್ಕುಬಿಡಿ” ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ನಡೆಸಲಾಯಿತು. ದಂತ ಜಾಗೃತಿ ಶಿಬಿರವು ಬಾಯಿಯ ನೈರ್ಮಲ್ಯ, ಹಲ್ಲಿನ ಖಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿಯಮಿತ ದಂತ ತಪಾಸಣೆಯ ಪ್ರಾಮುಖ್ಯತೆಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿತ್ತು. ದೋಹಾದ ಪ್ರಮುಖ ದಂತ ಆರೋಗ್ಯ ಕೇಂದ್ರಗಳಲ್ಲಿ ಒಂದಾದ “ಕಿಂಗ್ಸ್ ಡೆಂಟಲ್ ಸೆಂಟರ್” ನ ವೈದ್ಯರು ಸ್ವಯಂಪ್ರೇರಿತರಾಗಿ ಶಿಬಿರದಲ್ಲಿ ಭಾಗವಹಿಸಿದರು. ಕರ್ನಾಟಕ ಸಂಘ ಕತಾರ್ ನ ಸುಮಾರು 100 ಸದಸ್ಯರು ನೋಂದಾಯಿಸಿಕೊಂಡರು ಮತ್ತು ಜಾಗೃತಿ ಶಿಬಿರದಿಂದ ಪ್ರಯೋಜನ ಪಡೆದರು. ಡಾ.ಸಫೀರಾ ಮೊಯಿದ್ದೀನ್ ಕುಟ್ಟಿ, ಡಾ.ರಾಜು ನಾಗರದ ಜಯಣ್ಣ, ಡಾ.ರುಕ್ಶನ್ ಅಂಜುಮ್…















