Author: admin

ವಿಜಯಾ ಬ್ಯಾಂಕ್‌ ನಿವೃತ್ತ ಸೀನಿಯರ್ ಮ್ಯಾನೇಜರ್ ಮುಂಡಾಳಗುತ್ತು ರಾಮಕೃಷ್ಣ ರೈಯವರ ಉತ್ತರಕ್ರಿಯೆಯು ಜು. ೧೯ ರಂದು ಪುತ್ತೂರು ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿತು. ಈ ಸಂಧರ್ಭದಲ್ಲಿ ಶ್ರದ್ಧಾಂಜಲಿ ಸಭೆ ಜರಗಿತು. ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಚಿಲ್ಮೆತ್ತಾರು ಜಗಜೀವನ್‌ದಾಸ್‌ ರೈ ಮತ್ತು ವಿಜಯಾ ಬ್ಯಾಂಕ್‌ ನಿವೃತ್ತ ಅಧಿಕಾರಿ ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆರವರುಗಳು ನುಡಿನಮನ ಸಲ್ಲಿಸಿದರು. ಮುಂಡಾಳಗುತ್ತು ರಾಮಕೃಷ್ಣ ರೈಯವರ ಪತ್ನಿ ಅರಿಯಡ್ಕ ಸುಚೇತಾ ಆರ್‌ ರೈ, ಮಕ್ಕಳಾದ ಪ್ರೀತಿ ಶೆಟ್ಟಿ, ಸುಪ್ರಿಯ ಶೆಟ್ಟಿ, ಅಳಿಯ ಪವನ್‌ ಶೆಟ್ಟಿ, ಮೊಮ್ಮಗಳು ಕಿಶಾ ಶೆಟ್ಟಿ, ಸಹೋದರಿ ಮುಂಡಾಳಗುತ್ತು ಲಕ್ಷ್ಮೀ ರಾಮಯ್ಯ ರೈ, ಸಹೋದರ ಮುಂಡಾಳಗುತ್ತು ಮನೋಹರ್‌ ರೈ, ಮುಂಡಾಳಗುತ್ತು ಹರಿಪ್ರಸಾದ್‌ ರೈ , ಅನಿತಾ ಹೇಮನಾಥ ಶೆಟ್ಟಿ, ವನಿತಾ ಸುಧಾಕರ ಶೆಟ್ಟಿ, ಸರಿತಾ ಸಂದೀಪ್‌ ರೈ, ಶಿಲ್ಪ ಹರಿಪ್ರಸಾದ್‌ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಭಾರತೀಯ…

Read More

ಬಹುನಿರೀಕ್ಷಿತ “ಸರ್ಕಸ್” ತುಳು ಸಿನಿಮಾ ಬಿಡುಗಡೆ ಜೂನ್ 23 ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಬಿಗ್ ಬಾಸ್ ಒಟಿಟಿ ಹಾಗೂ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತಾಡಿದ ಯಶ್ ಶೆಟ್ಟಿ ಅವರು, “ಸರ್ಕಸ್ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಬರುತ್ತಿದ್ದೇನೆ. ತುಳು ರಂಗಭೂಮಿಯ ಹಿರಿಯ ಕಲಾವಿದರ ಜೊತೆ ನಟಿಸಿರುವುದು ತುಂಬಾ ಖುಷಿ ಕೊಟ್ಟಿದೆ. ಬಾಲ್ಯದಲ್ಲಿ ಅವರ ನಾಟಕಗಳನ್ನು ನೋಡಲು ಕಿಲೋ ಮೀಟರ್ ಗಟ್ಟಲೆ ನಡೆಯುತ್ತಿದ್ದೆ, ಇಂದು ಅವರ ಜೊತೆ ನಟಿಸಿದ್ದೇನೆ” ಎಂದರು. ಕುಸೇಲ್ದರಸೆ ನವೀನ್ ಡಿ. ಪಡೀಲ್ ಮಾತನಾಡಿ, “ಸರ್ಕಸ್ ತುಳು ಚಿತ್ರದಲ್ಲಿ ಹಾಸ್ಯಕ್ಕೆ ಬಹಳಷ್ಟು ಪ್ರಾಧಾನ್ಯತೆಯಿದೆ. ಇದು ತುಳುನಾಡು ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಸದ್ದು ಮಾಡಲಿದೆ. ರೂಪೇಶ್ ಶೆಟ್ಟಿ ಅವರು ಈ ಚಿತ್ರದಲ್ಲಿ ಕಷ್ಟಪಟ್ಟು ದುಡಿದಿದ್ದಾರೆ. ಅವರ ಶ್ರಮ ಸಾರ್ಥಕವಾಗಲು ನೀವೆಲ್ಲರೂ ಸಿನಿಮಾ ನೋಡಬೇಕು” ಎಂದರು. ಅರವಿಂದ್ ಬೋಳಾರ್ ಮಾತಾಡುತ್ತಾ, “ಸರ್ಕಸ್ ಸಿನಿಮಾದಲ್ಲಿ ಹಾಸ್ಯದ ಜೊತೆ ಫ್ಯಾಮಿಲಿ ಕುಳಿತು ನೋಡುವಂತಹ ಚಂದದ…

Read More

ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿ ಹೈಕಮಾಂಡ್ ಬುಧವಾರ ತಡರಾತ್ರಿ 23 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಬೈಂದೂರು ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿದ್ದು ಆರೆಸ್ಸೆಸ್ ತೆಕ್ಕೆಗೆ ಬಂದಿದೆ. ಬೈಂದೂರು ತಾಲೂಕಿನ ಬಿಜೂರಿನ ಗಂಟಿಹೊಳೆಯ ಗುರುರಾಜ್ ಶೆಟ್ಟಿ ಬೈಂದೂರು ಬಿಜೆಪಿಯ ಟಿಕೆಟ್ ಘೋಷಣೆಯಾಗುವ ಮೂಲಕ ಅಧಿಕೃತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗುರುರಾಜ್ ಗಂಟಿಹೊಳೆ ಅರೆಸ್ಸೆಸ್ ಸ್ವಯಂ ಸೇವಕರಾಗಿದ್ದಾರೆ. ಹಲವಾರು ವರ್ಷಗಳ ಕಾಲ ತನ್ನ ಕುಟುಂಬವನ್ನೇ ತೊರೆದು ಸಂಘಕ್ಕಾಗಿ ಸೇವೆ ಸಲ್ಲಿಸಿದ ಅವರು ಸುಳ್ಯ, ಪುತ್ತೂರು ಭಾಗಗಳಲ್ಲಿ ಪ್ರಚಾರಕರಾಗಿದ್ದವರು. ಪ್ರಸ್ತುತ ಶಿಕ್ಷಣ ಸಂಸ್ಥೆಯೊಂದರ ವಿಶ್ವಾಸ್ಥರಾಗಿರುವ ಗುರುರಾಜ್ ಸಾಲ ಮಾಡಿ ಹಲವಾರು ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ.

Read More

ದೇಹವೆಂದರೆ ಮೂಳೆ ಮಾಂಸಗಳ ತುಡಿಕೆ, ಮನಸ್ಸಲ್ಲಿ ಆಸೆ ತುಂಬಿದ ಕಣಜ, ಮೋಹದಿಂದ ದುಃಖವು ಸಹಜ, ನಶ್ವರ ಕಾಯ ನಂಬದಿರಯ್ಯ, ತ್ಯಾಗದಿ ಪಡೆವ ಸುಖ ಶಾಶ್ವತ. ಅನ್ಯರಿಗೆ ಅಹಿತವಾಗದಂತೆ ನಮ್ಮ ಆಸೆಗಳನ್ನು ಪೂರೈಸಿಕೊಂಡರೆ ಅದು ಸಂಸ್ಕಾರ, ತಮ್ಮ ಹಿತವನ್ನು ಸಾಧಿಸುತ್ತಾ ಅನ್ಯರ ಹಿತವನ್ನೂ ಸಾಧಿಸುತ್ತಾ ಬಯಸಿ ಸಾಧಿಸಿದರೆ ಅದು ಸಾಧನೆ, ತಮ್ಮ ಹಿತವನ್ನು ಬದಿಗೊತ್ತಿ ಪರರ ಹಿತವನ್ನೂ ಸಾಧಿಸುವುದು ತ್ಯಾಗ. ಈ ವಾಣಿ ಉದ್ಗರಿಸಲೋಸುಗ. ಏಕೆಂದರೆ ಕುಡುಂಬೂರು ಎಂದಾಗ ನಮ್ಮೆಲ್ಲರ ಜ್ಞಾನಕ್ಕೆ ನಿಲುಕುವಂತ ತ್ಯಾಗದ ಅಮರ ಚೇತನ ಕೀರ್ತಿಶೇಷ ಪಂಜ ನಲ್ಯಗುತ್ತು ಗುತ್ತಿನಾರ್ ಕುಡುಂಬೂರು ಭೋಜ ಶೆಟ್ಟರು. ತುಳುನಾಡಿನ ಕೃಷಿ ಕ್ಷೇತ್ರಗಳಲ್ಲೊಂದು ಹೆಸರುವಾಸಿಯಾದ ಹಚ್ಚಹಸುರಿನ ಪ್ರದೇಶ ಕುಡುಂಬೂರು. 1960 -70ರ ದಶಕದಲ್ಲಿ ಈ ಕುಡುಂಬೂರು ಪ್ರದೇಶವು ಕರ್ನಾಟಕ ಸರ್ಕಾರದ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ಕೈಗಾರಿಕೆಯ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟು ಪ್ರದೇಶದ ಜನರಿಗೆ ಪರಿಹಾರ ಬಿಡುಗಡೆಗೊಂಡು ಕೃಷ್ಣಾಪುರ ಕಾಟಿಪಳ್ಳ ಪ್ರದೇಶದಲ್ಲಿ ಪುನರ್ವಸತಿಗೆ ಜಾಗ ಮಂಜೂರಾದರೂ ನಂತರದ ದಿನಗಳಲ್ಲಿ ಸುಮಾರು ಇಪ್ಪತ್ತು ವರುಷಗಳ…

Read More

ರೂಪೇಶ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ತುಳು ಚಿತ್ರ “ಸರ್ಕಸ್” ಇದರ ಮೊದಲ ಹಾಡು ಹೊಸ ರೀತಿಯಲ್ಲಿ ಚಿತ್ರ ಬಿಡುಗಡೆಯ ರೀತಿಯಲ್ಲೇ ಭಾರತ್ ಸಿನಿಮಾಸ್ ಥೀಯೇಟರ್ ನಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಚಿತ್ರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು, “ಮೊದಲ ಬಾರಿಗೆ ತುಳು ಚಿತ್ರದ ಹಾಡೊಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ತುಳು ಸಿನಿಮಾಕ್ಕೆ ಸಣ್ಣ ಮಾರುಕಟ್ಟೆ ಇದ್ದರೂ ಇಷ್ಟು ದೊಡ್ಡ ರೀತಿಯಲ್ಲಿ ತುಳುವರು ಪ್ರೋತ್ಸಾಹ ನೀಡುತ್ತಿರುವುದು ಖುಷಿಯ ವಿಚಾರ. ಇಂದು ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ರೀತಿಯಲ್ಲೇ ಜೂ.23ರಂದು ಬಿಡುಗಡೆಯಾಗಲಿರುವ ಸಿನಿಮಾವನ್ನು ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿ” ಎಂದರು. ಬಳಿಕ ಮಾತಾಡಿದ ಹಾಸ್ಯನಟ ಅರವಿಂದ್ ಬೋಳಾರ್ ಅವರು, “ಗಿರಿಗಿಟ್ ಚಿತ್ರದ ಬಳಿಕ ಮತ್ತೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಇದಾಗಿದೆ. ಇದರಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರು ಖಂಡಿತಾ ಇಷ್ಟಪಡಲಿದ್ದಾರೆ. ತುಳುವರು ತುಳು ಚಿತ್ರಗಳನ್ನು ಇಷ್ಟಪಟ್ಟು ನೋಡಿದರೆ ಸಿನಿಮಾ ಮಾಡಲು ಧೈರ್ಯ, ಉತ್ಸಾಹ…

Read More

ಇತಿಹಾಸ ಪ್ರಸಿದ್ದ ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾ‌ನ ಸಮೀಪದ ಕಳಿಯೂರು ಶ್ರೀ ರಕ್ತೇಶ್ವರೀ ಸಾನಿಧ್ಯ ಪರಿಸರದಲ್ಲಿ ಬಂಟ ಸಮುದಾಯದ ಕಳಿಯೂರು ದೇವಸ್ಯ ಗುತ್ತು ಮನೆಯ ಸಾನಿಧ್ಯ ಶಕ್ತಿಗಳ ಬ್ರಹ್ಮಕಲಶೋತ್ಸವ ಮೇ 3 ರಂದು ನಡೆಯಲಿದ್ದು ಇದರ ಯಶಸ್ವಿಗಾಗಿ ಸಮಾಲೋಚನ ಸಭೆ ದೈವಸ್ಥಾನದ ಪರಿಸರದಲ್ಲಿ ಜರಗಿತು. ಕಳಿಯೂರು ದೇವಸ್ಯಗುತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕಳಿಯೂರು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಿಶೋರ್ ರೈ ದೇಲಂಪಾಡಿ ಅಧ್ಯಕ್ಷತೆವಹಿಸಿದ್ದರು. ಧಾರ್ಮಿಕ ಮುಂದಾಳು, ಜ್ಯೋತಿಷ್ಯ ಅನುವಾದಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಮಾರ್ಗದರ್ಶನದಲ್ಲಿ ವಿವಿಧ ಸಮಿತಿ ರಚಿಸಿ ಕೆಲಸ ಕಾರ್ಯಗಳ ಬಗ್ಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಸಾರಂಗಪಾಣಿ ಶ್ರೀಮಹಾವಿಷ್ಣು ಶ್ರೀದುರ್ಗಾ ಕ್ಷೇತ್ರದ ಶಶಿಧರ ನಾಯ್ಕ್ , ಕೊರಗಜ್ಜ ಸೇವಾ ಸಮಿತಿಯ ರಘುರಾಮ ಮಂದ್ರಬೈಲ್, ಧ.ಗ್ರಾ. ಯೋಜನೆಯ ಒಕ್ಕೂಟಗಳ ಅಧ್ಯಕ್ಷ ದಿನೇಶ್ ರೆಂಜಪಡ್ಪು, ಶ್ರೀರಕ್ತೇಶ್ವರಿ ಭಜನಾ ಮಂದಿರದ ಮಾಜಿ ಅಧ್ಯಕ್ಷ ಮೋನಪ್ಪ ಪೂಜಾರಿ, ಸತ್ಯಪ್ರಭಾ ಮೊದಲಾದವರು ಉಪಸ್ಥಿತರಿದ್ದರು. ಜಿಶಾಲಿ ಜೆ.ಶೆಟ್ಟಿ ಪ್ರಾರ್ಥನೆ…

Read More

ಪುಣೆಯಲ್ಲಿ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿಯವರ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯು ಕಳೆದ ೭ ವರ್ಷಗಳಿಂದ ನಿಸ್ವಾರ್ಥವಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡು ಪುಣೆಯಲ್ಲಿ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಮಾಡಿರುವ ಸಾಧನೆ ಅಪಾರವಾಗಿದೆ. ಯಕ್ಷಾಗಾನವೆಂಬುದು ನಾವೆಲ್ಲ ಆರಾಧಿಸಿಕೊಂಡು ಬಂದಿರುವ  ಜೀವನವನ್ನು ಸಮೃದ್ಧಗೊಳಿಸುವ ನವರಸಭರಿತವಾದ ಪರಿಪೂರ್ಣವಾದ ಕಲೆಯಾಗಿದ್ದು  ಇಲ್ಲಿರುವ ಕಲಾವಿದರಿಗೆ ಯಕ್ಷಗಾನ ತರಬೇತಿಯನ್ನು ನೀಡಿರುವುದಲ್ಲದೇ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಟ್ಟು ಯಕ್ಷಗಾನವನ್ನು ಪುಣೆಯಲ್ಲಿ ಬೆಳೆಸುವಲ್ಲಿ ಸಂಘ ವಿಶೇಷವಾದ ಶ್ರಮವಹಿಸಿದ್ದು  ನಿಸ್ವಾರ್ಥವಾದ ಸಮಾಜಸೇವೆಗೆ ಉನ್ನತಮಟ್ಟದ ಯಶಸ್ಸು ದೊರಕುತ್ತದೆ ಎಂಬುದಕ್ಕೆ  ಈ ಮಂಡಳಿ ಉತ್ತಮ ಉದಾಹರಣೆಯಾಗಿದೆ. ಅದಕ್ಕಾಗಿ ಈ ಸಂಸ್ಥೆಯು ಅಭಿನಂದನಾರ್ಹವಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು. ಅವರು  ಪುಣೆ ಕನ್ನಡ ಸಂಘದ ದಿ. ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದ ಡಿ. ವಾಸು ಕುಲಾಲ್ ವಿಟ್ಲ ವೇದಿಕೆಯಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ 7ನೇ   ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಇಂದಿನ…

Read More

ಕ್ರೀಡೆಗಾಗಿ ಬದುಕು ಮೀಸಲಿರಿಸಿದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ, ಸಮಾಜ ಸೇವಕ, ಯುವ ಉದ್ಯಮಿ ಗೌತಮ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಬಂಟ ಸಮಾಜದ ಸಮಗ್ರ ಸುದ್ದಿಗಾಗಿ ನಮ್ಮ ಬಂಟ್ಸ್ ನೌ ಪೇಜ್ ಲೈಕ್ ಮಾಡಿ.https://www.facebook.com/buntsnow/

Read More

ನಾವು ಒಂದಾಗಿ ಬಾಳಬೇಕು. ಇದ್ದಾಗ ಮಹತ್ವ, ಮೌಲ್ಯ ಇರುತ್ತದೆ. ಕಳಕೊಂಡಾಗ ದುಃಖ, ದುಮ್ಮಾನ. ನಾವು ಯಾವುದನ್ನು ನೆನಸದೇ ಬರುತ್ತದೋ ಅವಾಗ ಅತಿಯಾದ ನೋವು ಯಾತನೆ ಆಗುತ್ತದೆ. ಅನುಭವ ಎಂಬುವುದು ಬಹಳ ಮಹತ್ತರವಾದದ್ದು. ಹಾಗೆಯೇ ಅನುಕಂಪ ಎಂಬುವುದು ಕೂಡ ಅಷ್ಟೇ ಘನತ್ತರವಾದುದು. ಹ್ಞಾಂ.. ಅಂದ್ಹಾಗೆ ಅಗಲುವಿಕೆ ಮತ್ತು ಯಾತನೆ ಎಂಬುವುದು ನಾವು ಪಡುವ ತುಮುಲತೆ, ದುಗುಡತೆ… ಅಲ್ಲದೇ ವ್ಯಾಕುಲತೆ, ನೊಂದುವಿಕೆ ಇತ್ಯಾದಿ ಇವುಗಳಲ್ಲಿ ಅವ್ಯಕ್ತವಾಗಿರುತ್ತದೆ. ಒಂದು ವಿಚಾರ ಏನಪ್ಪಾಂದ್ರೆ? ನಮ್ಮಿಂದ ಯಾರು ಅಗಲಿದ್ದಾರೆ..? ಅವರ ಅಸ್ತಿತ್ವ, ಮನೆಯ ಗೋಚರವಾಗುತ್ತದೆ. ಏಕತನ ಕಾಡುತ್ತದೆ. ಅಂಥವರ ಪ್ರಾಧ್ಯಾನತೆ ಎಷ್ಟು? ಅವರ ಒಡನಾಟ ಎಷ್ಟು? ಪ್ರಭಾವ ಎಷ್ಟು? ಪ್ರೀತಿ ಎಷ್ಟು? ಹೊಂದಾಣಿಕೆ ಯಾವ ತರಹದು..? ಬಂಧುತ್ವ ಎಷ್ಟು? ಕಾರ್ಯಪ್ರವರ್ತನೆ ಎಷ್ಟು ಇತ್ಯಾದಿ… ಒಟ್ಟಾರೆ ಒಂದರ್ಥ ಹೇಳುವುದಾದರೆ ಅಸ್ತಿತ್ವ ಎಷ್ಟು? ಎಂದು ಆವಾಗ ಕಣ್ಣೀರು ಬರುತ್ತದೆ. ಖೇದ ಕೂಡವು ಆಗುತ್ತೆ, ಅಘಾತವಾಗುತ್ತೆ. ಹ್ಞಾಂ… ಅಂದ್ಹಾಗೆ… ಅಗಲುವಿಕೆಯಲ್ಲಿ ನೋವು ಇದೆ. ಇರುವಿಕೆ ಸಹ ಅಷ್ಟೇ ಪ್ರಮುಖವಾಗಿರುತ್ತದೆ. ಅಂಥವರು ಬಳಸಿದ್ದ ವಸ್ತು,…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಅಕ್ಟೋಬರ್ 28 ಮತ್ತು 29 ರಂದು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಕಾರ್ಯಕ್ರಮ ನಿರೂಪಕರ ಜವಾಬ್ದಾರಿಯನ್ನು ತಿಳಿಸುವ ಉದ್ದೇಶದಿಂದ ದಿನಾಂಕ 16.10.2023 ರಂದು ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ 5ನೇ ಮಹಡಿಯ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಿರೂಪಕರ ಸಭೆ ಜರಗಿತು. ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿ, ಸಹ ಸಂಚಾಲಕರಾದ ಶ್ರೀ ಕರ್ನೂರು ಮೋಹನ್ ರೈ, ಪೋಷಕ ಸದಸ್ಯರಾದ ಶ್ರೀ ಸುಧಾಕರ್ ಪೂಂಜ ಸುರತ್ಕಲ್, ಶ್ರೀ ಕದ್ರಿ ನವನೀತ ಶೆಟ್ಟಿ, ಶ್ರೀ ಪುರುಷೋತ್ತಮ ಕೆ ಭಂಡಾರಿ, ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ, ಮಾಧ್ಯಮ‌ ಸಮಿತಿಯ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಶ್ರೀ ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಶ್ರೀ…

Read More