ಕರ್ನಾಟಕ ಕುಸ್ತಿ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಪ್ರಸಾದ್ ಶೆಟ್ಟಿಯವರನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರಾದಂತಹ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಮತ್ತು ಅವರ ಶ್ರೀಮತಿಯಾದ ಶಿಲ್ಪ ಜಗದೀಶ್ ಶೆಟ್ಟರ್ ರವರು ಸನ್ಮಾನಿಸಿದರು. ಪ್ರಸಾದ್ ಶೆಟ್ಟಿಯವರು ಯುವ ಉದ್ಯಮಿಯಾಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ನೆಟ್ಟಾಳ ಮುತ್ತಪ್ಪ ರೈ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಶೆಟ್ಟರು ಪ್ರಸ್ತುತ ಗುಣರಂಜನ್ ಶೆಟ್ಟಿಯವರ ಜಯಕರ್ನಾಟಕ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತನ್ನ ಬಳಿ ಕಷ್ಟ ಹೇಳಿಕೊಂಡು ಸಹಾಯ ಕೇಳಲು ಬಂದವರಿಗೆ ಯಾವುದೇ ಪ್ರಚಾರ ಬಯಸದೆ ಸಮಾಜಸೇವೆ ಮಾಡುತ್ತಾ ಬರುತ್ತಿದ್ದಾರೆ.