ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೈಲ್ ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಉಡುಪಿ ಜಿಲ್ಲಾಧಿಕಾರಿ ಕುಮಾರ್ ರಾವ್ ಎಂ .ಭೇಟಿ ನೀಡಿದರು. ಇತ್ತೀಚಿಗೆ ಜಿಲ್ಲಾಧಿಕಾರಿಯವರು ಜಿಲ್ಲಾಧಿಕಾರಿಗಳ ನಡೆಯ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಹಾರ್ದಳ್ಳಿ -ಮಂಡಳಿ ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಕೈಲ್ ಕೆರೆ- ಮಾವಿನಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರ ವಿ. ಅಡಪ ಅವರ ಕ್ಷೇತ್ರಗಳಿಗೆ ಭೇಟಿ ನೀಡಿ ಹೈನು ಉದ್ಯಮ ಮತ್ತು ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧನೆಯನ್ನು ಪರಿಚಯಿಸಿಕೊಂಡರು. ಶ್ರೀಮತಿ ಚೈತ್ರ ವಿ.ಅಡಪ ಹೈನು ಉದ್ಯಮದ ಬಗ್ಗೆ ಹಾಗೂ ಹೈನು ಉದ್ಯಮದಲ್ಲಿ ಮಹಿಳೆಯಾಗಿ ಸಮಾಜ ಸೇವೆಯನ್ನ ಗುರುತಿಸಿಕೊಂಡು ತನ್ನದೇ ಆದಂತಹ ಕಾರ್ಯ ವ್ಯಾಪ್ತಿ ಗುರುತಿಸಿಕೊಂಡು, ಗ್ರಾಮದ ಮಹಿಳೆಯರಿಗೆ ಮಾದರಿಯಾದ ಬಗ್ಗೆ ಹಾಗೂ ಮಹಿಳೆಯಾಗಿ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿ ಇತರರಿಗೂ ಮಾದರಿಯಾಗಿದ್ದ ಬಗ್ಗೆ, ಜಿಲ್ಲಾಧಿಕಾರಿ ಕುಮಾರ್ ರಾವ್.ಎಂ ಅಭಿನಂದಿಸಿದರು. ತೋಟಗಾರಿಕೆ ಹೈನುಗಾರಿಕೆ ಹಾಗೂ ಹಾಲು ಉತ್ಪಾದನೆಯ ಸಹಕಾರಿ ಸಂಘದ ಕಾರ್ಯ ಚಟುವಟಿ ಬಗ್ಗೆ ಮಾಹಿತಿ ತೆಗೆದುಕೊಂಡರು. ಜಿಲ್ಲಾಧಿಕಾರಿಯವರು ವಿಶೇಷವಾಗಿ ಆಗಮಿಸಿ, ಮಹಿಳೆಯ ಸಾಧನೆ ಬಗ್ಗೆ ಅರಿತುಕೊಂಡರು, ಗ್ರಾಮ ಮಟ್ಟದಲ್ಲಿ ಇಂತಹ ಸಾಧನೆ ಮಾಡಿರುವುದು ಬಹಳ ವಿಶೇಷವಾಗಿದೆ ಎಂದರು. ಅದೇ ರೀತಿ ನೀವು ದೂರದ ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ಇಂತಹ ಸಾಧನೆ ಸಮಾಜಕ್ಕೆ ಪ್ರಸ್ತುತವಾಗಿದೆ ಎಂದು ಪ್ರಶಾಂಶ ನುಡಿ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶ್ರೀಮತಿ ಸುಲೇಖ ಶೇಖರ್ ಶೆಟ್ಟಿ, ಕುಂದಾಪುರ ತಾಲೂಕು ತಹಶೀಲ್ದಾರ್ ಹಾಗೂ ಮೊಳಹಳ್ಳಿ ಗ್ರಾಮ ಪಂಚಾಯತ್ ನ ಲೆಕ್ಕ ಪರಿಶೋಧಕರು, ಹಾಗೆ ಜಿಲ್ಲಾ ಪಂಚಾಯತಿಗೆ ಸಂಬಂಧಪಟ್ಟಂತ ಅಧಿಕಾರಿಗಳು ಉಪಸ್ಥಿತರಿದ್ದರು. ಚೈತ್ರ ವಿ ಅಡಪ್ಪ ಅವರ ನಿವಾಸದಲ್ಲಿ ವಿಶೇಷವಾದಂತಹ ವಿವಿಧ ತಳಿಯ ಜಾನುವಾರುಗಳನ್ನು ಗಮನಿಸಿದರು, ಕೃಷಿ ತೋಟ ಹಾಗೂ ಇನ್ನಿತರ ಪರಿಕರಗಳನ್ನು ವಿಶೇಷವಾಗಿ ಗಮನಿಸಿದರು. ಅದಲ್ಲದೆ ಸುಮಾರು ಒಂದು ಗಂಟೆಗಳ ಕಾಲ ವಿಶೇಷವಾಗಿ ವೀಕ್ಷಿಸಿ ಚರ್ಚಿಸಿದರು. ಮಹಿಳೆಯ ಸಾಧನೆ ಗ್ರಾಮೀಣ ಮಟ್ಟದಲ್ಲಿ ಇತರಿಗೂ ಮಾದರಿಯಾಗಲಿದೆ ಅದಲ್ಲದೆ ಪ್ರಸ್ತುತವಾಗಿ ಇವರ ಹೈನೋದ್ಯಮ ಬೃಹದ್ದಾಕಾರವಾಗಿ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ನುಡಿಯನ್ನು ವ್ಯಕ್ತಪಡಿಸಿದರು.
– ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ ಕುಂದಾಪುರ