ಬಂಟರ ಸಂಘ ಮುಂಬಯಿ ಸಂಚಾಲಿತ ಎಸ್.ಎಮ್. ಶೆಟ್ಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಗೌರವ್ ಜಗನ್ನಾಥ ಶೆಟ್ಟಿ ಐ.ಪಿ.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಉನ್ನತ ವಿದ್ಯಾಭ್ಯಾಸವನ್ನು ನೆರೂಲ್ ನ ಡಿ.ವೈ.ಪಾಟೀಲ್ ವಿದ್ಯಾ ಸಂಕುಲದಲ್ಲಿ ಪೂರೈಸಿದ್ದರು.
ಈತ ಮೂಲತಃ ಪೆರ್ನ ದೊಡ್ಡಮನೆ ಸುಬ್ಬಯ್ಯ ಶೆಟ್ಟಿಯವರ ಮೊಮ್ಮಗ, ಎರ್ಮಾಳು ಲೋಕನಾಡು ಮನೆ ಸುರೇಶ ಚೌಟ ಅವರ ಅಳಿಯ, ಬಾಂಡುಪ್ ನ ಹನುಮಾನ್ ಹೊಟೇಲಿನ ಮಾಲೀಕ ಸಿದ್ಧಕಟ್ಟೆ ಕೊನರೆ ಗುತ್ತು ಜಗನ್ನಾಥ ಸೀತಾರಾಮ ಶೆಟ್ಟಿ ಹಾಗೂ ಎರ್ಮಾಳು ಲೋಕನಾಡು ಮನೆ ಆಶಾ ಜಗನ್ನಾಥ ಶೆಟ್ಟಿ ದಂಪತಿಯ ಪುತ್ರ ಹಾಗೂ ಸ್ವಾತಿ ಜೆ ಶೆಟ್ಟಿಯ ಸಹೋದರ.
ಬಂಟ ಸಮುದಾಯದ ಕೀರ್ತಿ ಕಲಶಕ್ಕೆ ಗರಿಯ ತೊಡಿಸುವಂತಹ ಯಶಸ್ವೀ ವೃತ್ತಿ ಬದುಕು ತಮ್ಮದಾಗಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.
